Go to full page →

ಮದ್ಯವು ಮನುಷ್ಯನನ್ನು ಗುಲಾಮರನ್ನಾಗಿ ಮಾಡುತ್ತದೆ KanCCh 101

ಆಲ್ಕೊಹಾಲ್ ಅಂದರೆ ಮದ್ಯಸಾರ ಪ್ರಬಲವಾಗಿರುವ ಪಾನೀಯವನ್ನು ಕುಡಿದರೆ ಚಪಲ ತೀರಿಸಿಕೊಳ್ಳಬೇಕೆಂಬ ಆಸೆ ಮನುಷ್ಯರಲ್ಲಿ ಉಂಟಾದಾಗ, ದೇವರ ಸ್ವರೂಪದಲ್ಲಿ ಉಂಟುಮಾಡಲ್ಪಟ್ಟ ಅವರ ವೈಚಾರಿಕಶಕ್ತಿ ಮಂಕಾಗುವುದು ಮತ್ತು ಒಳ್ಳೆಯದು, ಕೆಟ್ಟದ್ದು ಯಾವುದು ಎಂಬ ಆಲೋಚನೆ ನಿಷ್ಕ್ರಿಯವಾಗುವುದು. ಅವರು ಪ್ರಾಣಿಗಳಂತೆ ವರ್ತಿಸುವವರು ಅಲ್ಲದೆ ಅವರ ಮನೋಭಾವವು ತೀವ್ರವಾಗಿ ಪ್ರಚೋದಿಸಲ್ಪಟ್ಟು ನೀಚವಾದ ಅಪರಾಧ ಕೃತ್ಯ ನಡೆಸುವುದಕ್ಕೆ ಕಾರಣವಾಗುವುದು. ಕುಡುಕರು ಮದ್ಯವೆಂಬ ದ್ರವರೂಪದ ವಿಷದ ಪ್ರಭಾವದಲ್ಲಿರುವಾಗ, ಸೈತಾನನ ಹತೋಟಿಯಲ್ಲಿರುವರು. ಅವನು ಅವರನ್ನು ನಿಯಂತ್ರಿಸುವನು ಹಾಗೂ ಅವರು ಸೈತಾನನಿಗೆ ಎಲ್ಲಾ ವಿಧದಲ್ಲಿಯೂ ಸಹಕರಿಸಿದರು. KanCCh 101.4

ಸೈತಾನನು ಈ ರೀತಿಯಾಗಿ ಮದ್ಯಕ್ಕಾಗಿ ಮನುಷ್ಯರು ತಮ್ಮನ್ನು ಮಾರಿಕೊಳ್ಳಲು ಮರಳು ಮಾಡುವನು. ಆಗ ಅವನು ಅವರ ಶರೀರ, ಮನಸ್ಸು ಹಾಗೂ ಪ್ರಾಣವನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳುವನು. ಮದುವೆಯ ಸಮಯದಲ್ಲಿ ಮರಣವು ನಮ್ಮನ್ನು ಅಗಲಿಸುವ ತನಕ ನಿನ್ನನ್ನು ಪ್ರೀತಿಸಿ, ಸಲಹುವೆನು, ಸಂರಕ್ಷಿಸುವೆನು ಎಂದು ಸಭೆಯ ಹಾಗೂ ದೇವರ ಮುಂದೆ ವಾಗ್ದಾನ ಮಾಡಿದ ವ್ಯಕ್ತಿಯು ಕುಡಿತದಿಂದ ಅಮಲೇರಿದಾಗ ತನ್ನ ಪತ್ನಿಯನ್ನು ಹೊಡೆಯಲು ಕೈಯೆತ್ತುವನು. ಸೈತಾನನ ಕ್ರೂರತೆಯು ಈ ವಿಧವಾಗಿ ವ್ಯಕ್ತವಾಗುವುದು. ಕುಡುಕರು ಮಾಡುವ ಕಾರ್ಯಗಳು ಸೈತಾನನ ಹಿಂಸೆಯನ್ನು ಪ್ರಕಟಪಡಿಸುತ್ತವೆ. KanCCh 102.1

ಮದ್ಯಪಾನ ಮಾಡುವವರು ತಮ್ಮನ್ನು ತಾವೇ ಸೈತಾನನಿಗೆ ಗುಲಾಮರನ್ನಾಗಿ ಮಾಡಿಕೊಳ್ಳುವರು. ಸೈತಾನನು ರೈಲುಗಳು, ಹಡಗುಗಳು, ದೋಣಿಗಳ ಮೇಲ್ವಿಚಾರಕರನ್ನು ಶೋಧನೆಗೆ ಒಳಪಡಿಸಿ, ವಿಗ್ರಹಾರಾಧನೆಯಂತಹ ಮನರಂಜನೆಯಲ್ಲಿ ತೊಡಗುವಂತೆ ಮಾಡುವನು. ಈ ವಿಧವಾಗಿ ಅವರು ದೇವರನ್ನು ಹಾಗೂ ಆತನ ಆಜ್ಞೆಗಳನ್ನು ಮರೆಯುವರು. KanCCh 102.2

ತಾವು ಏನು ಮಾಡುತ್ತಿದ್ದೇವೆಂದು ಅವರಿಗೆ ತಿಳಿಯದು. ಹಡಗು, ರೈಲುಗಳಲ್ಲಿ ತಪ್ಪಾದ ಸಿಗ್ನಲ್ ಅಂದರೆ ಸಂಕೇತಗಳು ಕೊಡಲ್ಪಡುವವು. ಇದರಿಂದಾಗಿ ಇವು ಒಂದಕ್ಕೊಂದು ಡಿಕ್ಕಿಹೊಡೆದು ಭಯಾನಕ ಅಪಘಾತಗಳು ಸಂಭವಿಸಿದ ಅಂಗ ವೈಕಲ್ಯ, ಸಾವು ನೋವು ಸಂಭವಿಸುವವು. ಇಂತಹ ಪರಿಸ್ಥಿತಿಯು ಇನ್ನು ಮುಂದೆ ಹೆಚ್ಚೆಚ್ಚಾಗಿ ನಡೆಯುವವು. ಕುಡುಕರ ಭ್ರಷ್ಟತೆಯು ಅವರ ಮಕ್ಕಳು, ಮೊಮ್ಮಕ್ಕಳಲ್ಲಿ ಮುಂದುವರಿಯುವುದು. KanCCh 102.3