ಕ್ರೈಸ್ತ ಧರ್ಮದ ಸಿದ್ಧಾಂತಗಳ ನ್ಯಾಯಸಮ್ಮತತೆಯನ್ನು ಪರೀಕ್ಷೆಗೆ ಒಳಪಡಿಸಬೇಕಾದಂತ ಸಂದರ್ಭ ಬಂದಾಗ ಪ್ರತಿಯೊಬ್ಬ ಕ್ರೈಸ್ತನು ಏನು ಮಾಡಬೇಕು? ಅನುಸರಿಸಲು ಯೋಗ್ಯವಾದ ದೃಢವಿಶ್ವಾಸದೊಡನೆ ಅವನು ಧೈರ್ಯದಿಂದ ಅವಿಶ್ವಾಸಿಗೆ ಹೀಗೆ ಹೇಳಬೇಕು : “ನಾನು ಮನಸ್ಸಾಕ್ಷಿ ಗೆ ತಕ್ಕಂತೆ ಧರ್ಮಪ್ರಜ್ಞಾನಿಷ್ಠೆಯಿಂದ ನಡೆಯುವ ಕ್ರೈಸ್ತನಾಗಿದ್ದೇನೆ. ವಾರದ ಏಳನೇದಿನವು ಸತ್ಯವೇದದಲ್ಲಿ ತಿಳಿಸಿರುವ ಸಬ್ಬತ್ದಿನವಾಗಿದೆ ಎಂದು ನಾನು ನಂಬುತ್ತೇನೆ. ನಮ್ಮಿಬ್ಬರ ನಂಬಿಕೆ ಹಾಗೂ ಸಿದ್ಧಾಂತಗಳು ಪರಸ್ಪರ ವಿರುದ್ಧವಾಗಿವೆ. ದೇವರ ಚಿತ್ತ ಜ್ಞಾನವನ್ನು ಹೆಚ್ಚಾಗಿ ತಿಳಿದುಕೊಳ್ಳಬೇಕೆಂದು ನಾನು ಅದರಂತೆ ನಡೆದಾಗ, ನಾನು ಲೌಕಿಕತೆಯಿಂದ ದೂರವಾಗಿ ಕ್ರಿಸ್ತನ ಸಾರೂಪ್ಯ ಹೊಂದಿಕೊಳ್ಳುವುದರಿಂದ, ನಾವಿಬ್ಬರೂ ಮದುವೆಯಾದರೂ ಸಂತೋಷವಾಗಿರುವುದಿಲ್ಲ. ಕ್ರಿಸ್ತನಲ್ಲಿ ಹಾಗೂ ಆತನ ಸತ್ಯದಲ್ಲಿ ನಿನಗೆ ಯಾವುದೇ ಆಸಕ್ತಿಯಿಲ್ಲ ದಿದ್ದಲ್ಲಿ, ನೀನು ಲೋಕವನ್ನು ಪ್ರೀತಿಸುವಿ. ಆದರೆ ನಾನು ಅಲೌಕಿಕತೆಯನ್ನು ಪ್ರೀತಿಸಲಾರೆ, ನಾನು ದೇವರನ್ನು ಪ್ರೀತಿಸುವೆ. ಆದರೆ ನೀನು ಆತನನ್ನು ಪ್ರೀತಿಸುವುದಿಲ್ಲ. ಆತ್ಮೀಕ ವಿಷಯಗಳನ್ನು ಆತ್ಮೀಯವಾಗಿಯೇ ಗ್ರಹಿಸಿಕೊಳ್ಳಬೇಕು. ಆತ್ಮೀಕವಾದ ಈ ಗ್ರಹಿಕೆ ಇಲ್ಲದಿದ್ದಲ್ಲಿ, ಅವಿಶ್ವಾಸಿಯಾದ ನೀನು, ನಾನು ಆರಾಧಿಸುವ ದೇವರ ಬಗ್ಗೆ ನನ್ನ ಕರ್ತವ್ಯಗಳೇನೆಂದು ತಿಳಿದುಕೊಳ್ಳಲಾಗದು. ಆಗ ನನ್ನ ಸಂಗಾತಿಯು ತನ್ನ ಧರ್ಮದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿ ನನ್ನನ್ನು ನಿರ್ಲಕ್ಷಿಸುತ್ತಾನೆಂಬ ಭಾವನೆ ನಿನ್ನಲ್ಲಿ ಬರಲಿದೆ. ನೀನು ಸಂತೋಷವಾಗಿರಲಾರೆ. ದೇವರಿಗೆ ನಾನು ಕೊಡುವ ಆದ್ಯತೆಯು ನಿನ್ನಲ್ಲಿ ಹೊಟ್ಟೆಕಿಚ್ಚಿಗೆ ಕಾರಣವಾಗುವುದು. ಅವಿಶ್ವಾಸಿಯಾದ ನೀನು ದೇವರ ಕರೆಗೆ ಓಗೊಟ್ಟಾಗ ಹಾಗೂ ನನ್ನ ರಕ್ಷಕನನ್ನು ನೀನು ಪ್ರೀತಿಸಬೇಕೆಂದು ತಿಳಿದುಕೊಂಡಾಗ, ನಮ್ಮಿಬ್ಬರ ನಡುವೆ ಮದುವೆಯ ಸಾಧ್ಯತೆಯಿದೆ”, ಕ್ರೈಸ್ತರಾದ ವಿಶ್ವಾಸಿಗಳು ಕ್ರೈಸ್ತರಲ್ಲದವರು ತಮ್ಮನ್ನು ಮದುವೆಯಾಗಬೇಕೆಂದು ಕೇಳಿಕೊಂಡಾಗ, ಹೇಳಬೇಕಾದ ಉತ್ತರವಿದು. KanCCh 133.2
ಇಂತಹ ಉತ್ತರದ ಮೂಲಕ ಕ್ರೈಸ್ತವಿಶ್ವಾಸಿಯು ಕ್ರಿಸ್ತನಿಗಾಗಿ ತ್ಯಾಗ ಮಾಡಿದರೆ, ಅವನ ಮನಸ್ಸಾಕ್ಷಿಯು ಇದಕ್ಕೆ ಸಮ್ಮತಿಸುತ್ತದೆ ಹಾಗೂ ಅವನು ಇತರೆಲ್ಲದಕ್ಕಿಂತಲೂ ನಿತ್ಯಜೀವ ಅತ್ಯಮೂಲ್ಯವಾದದ್ದೆಂದು ಎಣಿಸುತ್ತಾನೆ. ಕ್ರಿಸ್ತನಿಗೆ ಬದಲಾಗಿ ಲೋಕದ ಢಂಬಾಚಾರವನ್ನು ಪ್ರೀತಿಸಿ, ಕ್ರಿಸ್ತನ ಶಿಲುಬೆಯಿಂದ ದೂರ ಮಾಡುವ ಸಂಗಾತಿಯನ್ನು ಮದುವೆಯಾಗುವುದಕ್ಕಿಂತ, ಅವಿವಾಹಿತರಾಗಿ ಉಳಿಯುವುದು ಬಹಳ ಉತ್ತಮ. KanCCh 134.1