Go to full page →

ಮದುವೆಯು ಒಂದು ಸರಳ, ಸುಂದರ ಹಾಗೂ ಸಂಭ್ರಮದಸಮಯವಾಗಿರಬೇಕು KanCCh 136

ಕ್ರಿಸ್ತನಿಂದ ಹೊರಹೊಮ್ಮುವ- ದೈವೀಕ ಪ್ರೀತಿ ಮಾನವ ಪ್ರೀತಿಯನ್ನು ಎಂದಿಗೂ ನಾಶ ಮಾಡುವುದಿಲ್ಲ, ಬದಲಾಗಿ ಅದನ್ನು ಒಳಗೊಂಡಿರುತ್ತದೆ. KanCCh 136.4

ಇದರಿಂದ ಮಾನವ ಪ್ರೀತಿ ಸಂಸ್ಕರಿಸಲ್ಪಟ್ಟು ಪರಿಶುದ್ಧಗೊಳ್ಳುತ್ತದೆ ಹಾಗೂ ಉನ್ನತವಾಗಿ ಶ್ರೇಷ್ಠಗೊಳ್ಳುತ್ತದೆ. ಮಾನವ ಪ್ರೀತಿಯು ದೈವೀಕ ಸ್ವಭಾವದೊಂದಿಗೆಒಂದಾಗುವವರೆಗೆ ತನ್ನ ಅಮೂಲ್ಯ ಫಲವನ್ನು ಕೊಡುವುದಿಲ್ಲ. ಸಂತೋಷ ಹಾಗೂ ಸಂತೃಪ್ತಿಕರವಾದ ಮದುವೆ ಹಾಗೂ ಮನೆಗಳನ್ನು ನೋಡಲು ಕ್ರಿಸ್ತನು ಬಯಸುತ್ತಾನೆ. KanCCh 136.5

ಕಾನಾ ಊರಿನಲ್ಲಿ ನಡೆದ ಮದುವೆಗೆ ಯೇಸುವನ್ನು ಹಾಗೂ ಆತನ ಶಿಷ್ಯರನ್ನು ಆಹ್ವಾನಿಸಿದರೆಂದು ಸತ್ಯವೇದವು ತಿಳಿಸುತ್ತದೆ. ಮದುವೆಗೆ ನಮ್ಮನ್ನು ಯಾರಾದರೂ ಆಹ್ವಾನಿಸಿದಾಗ, ಅಂತಹ ಸಂಭ್ರಮದ ಉತ್ಸವದಲ್ಲಿ ನಾವು ಭಾಗಿಯಾಗಬಾರದೆಂದು ಕ್ರೈಸ್ತರಿಗೆ ಕ್ರಿಸ್ತನು ಹೇಳುತ್ತಿಲ್ಲ. ಕಾನಾ ಊರಿನ ಮದುವೆಯಲ್ಲಿ ಕ್ರಿಸ್ತನು ಭಾಗವಹಿಸುವ ಮೂಲಕ, ಆತನ ಆಜ್ಞೆಗಳನ್ನು ಅನುಸರಿಸುವುದರಲ್ಲಿ ಸಂತೋಷಿಸುವವರೊಂದಿಗೆ, ನಾವು ಸಂಭ್ರಮಿಸಬೇಕೆಂದು ಮಾದರಿ ತೋರಿಸಿದ್ದಾನೆ. ಪರಲೋಕ ನಿಯಮಗಳ ಪ್ರಕಾರ ನಡೆಯುವ ಪರಿಶುದ್ಧವಾದ ಹಾಗೂ ನಿಷ್ಕಪಟವಾದ ಉತ್ಸವಗಳಲ್ಲಿ ಕ್ರೈಸ್ತರಾದ ನಾವು ಭಾಗವಹಿಸುವುದನ್ನು ಕ್ರಿಸ್ತನು ಎಂದಿಗೂ ಬೇಡವೆನ್ನುವುದಿಲ್ಲ. ತನ್ನ ಪ್ರಸನ್ನತೆಯ ಮೂಲಕ ಕ್ರಿಸ್ತನು ಗೌರವಿಸುವ ಯಾವುದೇ ಕೂಟದಲ್ಲಿ, ಆತನ ಹಿಂಬಾಲಕರು ಭಾಗವಹಿಸುವುದು ಯುಕ್ತವಾಗಿದೆ. ಕಾನಾ ಊರಿನ ಮದುವೆಯ ನಂತರ, ಕ್ರಿಸ್ತನ ಇನ್ನೂ ಅನೇಕ ಉತ್ಸವಗಳಲ್ಲಿ ಸ್ವತಃ ನಾನು ಭಾಗವಹಿಸಿ ಸಲಹೆ ಕೊಡುವುದರ ಮೂಲಕ ಅವುಗಳನ್ನು ಸಮರ್ಥಿಸಿದನು. ನಡೆಯುವಂತ ಉತ್ಸವಗಳು ಪರಿಪೂರ್ಣವಾಗಿ ಎಲ್ಲರ ಅಭಿರುಚಿಗೆ ತಕ್ಕಂತೆ ಇರಬೇಕು ಅದನ್ನು ಆಡಂಬರದ ಪ್ರದರ್ಶನವನ್ನಾಗಿ ಮಾಡಬಾರದು. KanCCh 137.1

ಮದುವೆಯ ಸಂಸ್ಕಾರವು ಒಂದು ಸಂಭ್ರಮದ ಕೋಲಾಹಲ ಅಥವಾ ತೋರಿಕೆಯ ಉತ್ಸವವಾಗಬಾರದು. ಇದು ದೇವರಿಂದಲೇ ಪವಿತ್ರಗೊಳಿಸಲ್ಪಟ್ಟ ಒಂದು ಪರಿಶುದ್ಧ ಸಂಸ್ಕಾರವಾಗಿದ್ದು, ಅತ್ಯಂತ ಗೌರವದಿಂದಲೂ, ಗಾಂಭೀರ್ಯದಿಂದಲೂ ಕೂಡಿರಬೇಕು. ಈ ಲೋಕದಲ್ಲಿ ಎರಡು ಕುಟುಂಬಗಳ ಸಂಬಂಧವು ಬೆಸೆಯುವಾಗ, ಪರಲೋಕದಲ್ಲಿರುವ ಕುಟುಂಬವು ಹೇಗಿರುವುದೋ, ಅಂತಹ ಮಾದರಿಯು ಇಲ್ಲಿ ತೋರಿಬರಬೇಕು. ದೇವರ ಮಹಿಮೆಗೆ ಆದ್ಯತೆ ಕೊಡಬೇಕು. KanCCh 137.2