Go to full page →

ಸ್ವಾರ್ಥ ತ್ಯಾಗ ಮತ್ತು ಮಿತ ಸಂಯಮ ಬೆಳೆಸಿಕೊಳ್ಳಬೇಕು KanCCh 148

ಸೃಷ್ಟಿ ಕರ್ತನಾದ ದೇವರಿಗೆ ಸಂಪೂರ್ಣ ಸೇವೆ ಮಾಡುವುದಕ್ಕಾಗಿ ತಮ್ಮ ಮಾನಸಿಕ ಮತ್ತು ಶಾರೀರಿಕ ವ್ಯವಸ್ಥೆಯನ್ನು ಅತ್ಯುತ್ತಮ ಸ್ಥಿತಿಯಲ್ಲಿರಿಸಿಕೊಳ್ಳುವುದು ತಮ್ಮ ಆದ್ಯಕರ್ತವ್ಯವಾಗಿದೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಕ್ರೈಸ್ತಳಾದ ಹೆಂಡತಿಯು ತನ್ನ ಗಂಡನ ಮೃಗೀಯ ಕಾಮುಕ ಭಾವನೆಗಳನ್ನು ಪ್ರಚೋದಿಸದಂತೆತನ್ನ ಮಾತು ಮತ್ತು ಕ್ರಿಯೆಗಳನ್ನು ಹತೋಟಿಯಲ್ಲಿಡಬೇಕು. ಕೆಲವರಿಗೆ ಇಂತಹ ಮನೋಬಲವಿರುವುದಿಲ್ಲ. ಕೆಲವರು ತಮ್ಮ ಯೌವನದಿಂದ ಇಂತಹ ಮೃಗೀಯ ವರ್ತನೆಗಳನ್ನು ತೃಪ್ತಿ ಪಡಿಸಿಕೊಂಡು ತಮ್ಮ ಶಾರೀರಿಕ ಮತ್ತು ಮೆದುಳಿನ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ. ಕ್ರೈಸ್ತರ ವೈವಾಹಿಕ ಜೀವನದಲ್ಲಿ ಸ್ವಾರ್ಥತ್ಯಾಗ ಮಾಡುವುದು ಮತ್ತು ನಡೆನುಡಿಗಳಲ್ಲಿ ಮಿತ ಸಂಯಮ ಕಾಪಾಡಿಕೊಳ್ಳುವುದು ಬಹಳ ಪ್ರಾಮುಖ್ಯವಾಗಿದೆ ಮತ್ತು ಅದು ಅವರ ಜೀವನದ ತತ್ವವಾಗಿರಬೇಕು. KanCCh 148.3

ಮಾನವರಿಗೆ ಪ್ರಯೋಜನಕರವಾಗಿಯೂ ಮತ್ತು ದೇವರಿಗೆ ಪರಿಪೂರ್ಣ ಸೇವೆ ಮಾಡುವುದಕ್ಕಾಗಿ ಇರುವಂತೆ ನಾವು ಆತನಿಗಾಗಿ ನಮ್ಮ ಆಲೋಚನೆಗಳನ್ನು ಪರಿಶುದ್ಧವಾಗಿಯೂ ಮತ್ತು ಶರೀರವನ್ನು ಆರೋಗ್ಯಕರವಾಗಿಯೂ ಇಟ್ಟುಕೊಳ್ಳಬೇಕಾದ ಗಂಭೀರ ಕರ್ತವ್ಯ ನಮಗಿದೆ. ಅಪೋಸ್ತಲನಾದ ಪೌಲನು ಈ ವಿಷಯವಾಗಿ “ಸಾಯತಕ್ಕ ನಿಮ್ಮ ದೇಹದ ಮೇಲೆ ಪಾಪವನ್ನು ಆಳಗೊಡಿಸಿ ನೀವು ದೇಹದ ದುರಾಶೆಗಳಿಗೆ ಒಳಪಡಬೇಡಿರಿ” (ರೋಮಾಯ 6:12), “ಅದರಂತೆ ನೀವೂ ಬಿರುದನ್ನು ಪಡಕೊಳ್ಳಬೇಕಂತಲೇ ಓಡಿರಿ. ಅದರಲ್ಲಿ ಹೊರಾಡುವವರೆಲ್ಲರು ಎಲ್ಲಾ ವಿಷಯಗಳಲ್ಲಿ ಮಿತವಾಗಿರುತ್ತಾರೆ” (1 ಕೊರಿಂಥ 9:25). ಅಲ್ಲದೆ ಕ್ರೈಸ್ತರೆನಿಸಿಕೊಳ್ಳುವವರು ತಮ್ಮ “ದೇಹಗಳನ್ನು ದೇವರಿಗೆ ಮೀಸಲಾಗಿಯೂ, ಮೆಚ್ಚುಗೆಯಾಗಿಯೂ ಇರುವ ಸಜೀವ ಯಜ್ಞವಾಗಿ ಅರ್ಪಿಸಿರಿ” ಎಂದು ಎಚ್ಚರಿಸುತ್ತಾನೆ (ರೋಮಾಯ 12:1). ಪೌಲನು ತನ್ನ ಉದಾಹರಣೆಯನ್ನು ಕೊಡುತ್ತಾ “ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿ ಕೊಂಡೇನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನ ಪಡಿಸಿಕೊಳ್ಳುತ್ತೇನೆ” ಎಂದೂ ಸಹ ಹೇಳಿದ್ದಾನೆ (1 ಕೊರಿಂಥ 9:27). KanCCh 149.1

ಪುರುಷನಿಗೆ ತನ್ನ ಪತ್ನಿಯು ತನ್ನ ಸಂಯಮವಿಲ್ಲದ ಕಾಮಾತುರತೆಯನ್ನು ಪೂರೈಸುವ ಸಾಧನವನ್ನಾಗಿ ಮಾಡಿಕೊಳ್ಳಬೇಕೆಂಬ ಪ್ರಚೋದನೆಯು ಪರಿಶುದ್ಧವಾದ ಪ್ರೀತಿಯಲ್ಲ. ಇದು ಮೃಗೀಯ ವರ್ತನೆಯಾಗಿದೆ. ಅಪೋಸ್ತಲನಾದ ಪೌಲನು ತಿಳಿಸಿದಂತ ಪರಿಶುದ್ಧ ಪ್ರೀತಿಯನ್ನು ಬಹಳ ಕಡಿಮೆ ಪುರುಷರು ತಮ್ಮ ಹೆಂಡತಿಯರ ಬಗ್ಗೆ ತೋರಿಸುತ್ತಾರಲ್ಲವೇ! “ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿ. ಆತನು ಇದನ್ನು ಪ್ರತಿಷ್ಠೆ ಪಡಿಸುವುದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು... ಅದು ಪರಿಶುದ್ಧವೂ, ನಿರ್ದೋಷವೂ, ಮಹಿಮೆಯುಳ್ಳದ್ದು ಆಗಿರಬೇಕೆಂದು.... ಶುದ್ಧ ಮಾಡಿದನು“. (ಎಫೆಸ 5:25-27). ಮದುವೆಯ ಸಂಬಂಧದಲ್ಲಿ ಇಂತಹ ಉತ್ತಮ ಗುಣಮಟ್ಟದ ಪ್ರೀತಿಯನ್ನು ದೇವರು ಪರಿಶುದ್ಧವೆಂದು ಎಣಿಸುತ್ತಾನೆ. ಪ್ರೀತಿಯು ನಿರ್ಮಲವೂ ಮತ್ತು ಪರಿಶುದ್ಧವೂ ಆದ ತತ್ವವಾಗಿದೆ. ಆದರೆ ಸಂಯಮವಿಲ್ಲದ ಕಾಮಾತುರತೆಯು ವಿಮೋಚನಯುಕ್ತವಾಗಿ ಹತೋಟಿಗೆ ಬರುವುದಿಲ್ಲ ಅಥವಾ ಸಂಯಮಕ್ಕೆ ಒಳಗಾಗುವುದೂಇಲ್ಲ. ಇದು ಮುಂದಾಗುವ ಪರಿಣಾಮಗಳ ಬಗ್ಗೆ ಯೋಚಿಸುವುದಿಲ್ಲ, ಅಲ್ಲದೆ ಕಾರಣಗಳು ಅಥವಾ ಫಲಿತಾಂಶಗಳ ಬಗ್ಗೆ ವಿವೇಕದಿಂದ ವರ್ತಿಸುವುದೂ ಇಲ್ಲ. KanCCh 149.2