Go to full page →

ಹಾಲುಣಿಸುವ ತಾಯಿಯ ಮನೋಭಾವ KanCCh 158

ನಿಸರ್ಗವು ಕೊಡುವ ಆಹಾರವು ಶಿಶುವಿಗೆ ಅತ್ಯುತ್ತಮ ಆಹಾರವಾಗಿದೆ. ಇದನ್ನು ಶಿಶುವಿಗೆ ಅಗತ್ಯವಾಗಿ ಕೊಡಬೇಕು. ತನ್ನ ಸೌಂದರ್ಯ ಹಾಳಾಗುತ್ತದೆ ಅಥವಾ ಸಾಮಾಜಿಕ ಸ್ನೇಹ ಕೂಟಗಳಲ್ಲಿ ಭಾಗವಹಿಸುವುದಕ್ಕೆ ತೊಂದರೆಯಾಗುತ್ತದೋ ಎಂಬ ಕಾರಣದಿಂದ ತಾಯಿ ತನ್ನ ಶಿಶುವಿಗೆ ಎದೆಯ ಹಾಲನ್ನು ಕುಡಿಸದಿರುವುದು ಹೃದಯ ಹೀನತೆಯಾಗಿದೆ. (ಮಗುವಿಗೆ ಹಾಲೂಡಿಸುವುದು ತಾಯಿಗೆ ಜೀವಮಾನದಲ್ಲಿ ದೊರೆಯುವ ಒಂದು ಅಮೂಲ್ಯ ಅವಕಾಶವಾಗಿದೆ). KanCCh 158.3

ಶಿಶುವು ತಾಯಿಯ ಎದೆಯ ಹಾಲಿನಿಂದ ಪೋಷಣೆ ಹೊಂದುವ ಸಮಯವು ಬಹಳ ನಿರ್ಣಾಯಕವಾಗಿದೆ. ಅನೇಕ ತಾಯಂದಿರಿಗೆ ಈ ಸಮಯದಲ್ಲಿ ಸರಿಯಾದವಿಶ್ರಾಂತಿ ದೊರೆಯದೆ ಹೆಚ್ಚಿನ ಕೆಲಸ ಮಾಡುವ ಅನಿವಾರ್ಯತೆ ಉಂಟಾಗುತ್ತದೆ. ಅಲ್ಲದೆ ಅಡಿಗೆಮಾಡುವಾಗ ಅವರ ರಕ್ತವು ಬಿಸಿಯಾಗುತ್ತದೆ. ಇದರಿಂದಾಗಿ ಮಗುವಿಗೆ ಎದೆಹಾಲಿನ ಪೋಷಣೆಯು ಸರಿಯಾಗಿ ದೊರೆಯದೆ ಇದು ತೀವ್ರವಾಗಿ ಬಾಧಿಸಲ್ಪಡುತ್ತದೆ. ಅಲ್ಲದೆ ತಾಯಿಯ ಅನಾರೋಗ್ಯಕರ ಆಹಾರ ಕ್ರಮದಿಂದ ಅವಳ ಶರೀರವ್ಯವಸ್ಥೆಯು ವಿಷಮಗೊಳ್ಳುವುದರಿಂದ ಶಿಶುವಿನ ರಕ್ತವು ಮಲಿನಗೊಳ್ಳುತ್ತದೆ. ಇದರಿಂದಾಗಿ ಅದರ ಆಹಾರದ ಮೇಲೆಯೂ ಪರಿಣಾಮವುಂಟಾಗುವುದು. ಅಲ್ಲದೆ ತಾಯಿಯ ಮನಸ್ಸಿನಸ್ಥಿತಿಯೂ ಸಹ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಆಕೆಯು ಅಸಂತೋಷವುಳ್ಳವಳಾಗಿದ್ದು, ಶೀಘ್ರವಾಗಿ ಕೋಪಗೊಳ್ಳುವವಳೂ, ಕಿರಿಕಿರಿ ಉಂಟುಮಾಡುವವಳೂ ಆಗಿದ್ದು, ತನ್ನ ಭಾವನೆಗಳನ್ನು, ಮನೋವಿಕಾರವನ್ನು ತಕ್ಷಣದಲ್ಲೇ ತೋರಿಸುವವಳಾಗಿದ್ದಲ್ಲಿ, ಆಕೆಯಿಂದ ತನ್ನ ಮಗುವಿಗೆ ದೊರೆಯುವ ಪೋಷಣೆಯು ಉರಿಯೂತಗೊಳ್ಳುತ್ತದೆ. ಇದರಿಂದ ಶಿಶುವಿಗೆ ಹೊಟ್ಟೆಶೂಲೆ, ಸೆಡೆತ ಮಾತ್ರವಲ್ಲದೆ, ಕೆಲವು ಸಂದರ್ಭಗಳಲ್ಲಿ ಮೂರ್ಛೆ ಸಹ ಬರುತ್ತದೆ. KanCCh 158.4

ಮಗುವಿನ ಗುಣಸ್ವಭಾವವೂ ಸಹ, ಅದು ತಾಯಿಯಿಂದ ಪಡೆದುಕೊಳ್ಳುವ ಪೋಷಣೆಯಿಂದ ಹೆಚ್ಚು ಕಡಿಮೆ ರೂಪುಗೊಳ್ಳುತ್ತದೆ. ಅಂದಮೇಲೆ ಮಗುವಿಗೆ ಹಾಲುಣಿಸುತ್ತಿರುವಾಗ ತಾಯಿಯ ಹೃದಯ ಸಂತೋಷದ ಸ್ಥಿತಿಯಲ್ಲಿರುವುದು ಹಾಗೂ ಅವಳು ತನ್ನ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಎಷ್ಟೊಂದು ಪ್ರಾಮುಖ್ಯವಾಗಿದೆಯಲ್ಲವೇ! ಹೀಗೆ ಮಾಡುವುದರಿಂದ ಶಿಶುವಿನ ಆಹಾರವು ಮಲಿನವಾಗುವುದಿಲ್ಲ ಹಾಗೂ ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಶಾಂತ ಮನಸ್ಥಿತಿ ಮತ್ತು ಸ್ವಸ್ಥ ಚಿತ್ತವು ಅದರ ಮನಸ್ಸನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶಿಶುವು ಶೀಘ್ರವಾಗಿ ಕಿರಿಕಿರಿ ಗೊಂಡಲ್ಲಿ ಮತ್ತು ಅಸ್ವಸ್ಥಗೊಂಡಾಗ, ತಾಯಿಯ ಎಚ್ಚರಿಕೆಯ ಹಾಗೂ ನಿಧಾನಸ್ವಭಾವವು ಶಿಶುವಿನ ಮೇಲೆ ಯೋಗ್ಯವಾದ ಮತ್ತು ಉಪಶಮನ ಗೊಳಿಸುವ ಪ್ರಭಾವ ಬೀರುತ್ತದೆ. ಅಲ್ಲದೆ ಅದರ ಆರೋಗ್ಯವೂ ಬಹಳ ಮಟ್ಟಿಗೆ ಸುಧಾರಿಸುತ್ತದೆ. KanCCh 159.1