Loading...
Larger font
Smaller font
Copy
Print
Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಜೀವಮಾನವೂ ಅದರ ಕರ್ತವ್ಯವೂ

    ವಿಶ್ವದ ಜೀವನಕ್ಕೂ ಬೆಳಕಿಗೂ ಮತ್ತು ಸಂತೋÀಕ್ಕೂ ದೇವರು ಮೂಲನಾಗಿದ್ದಾನರ. ಸೂರ್ಯನ ಬೆಳಕಿನಿಂದ ಹೊರಡುವ ಕಿರಣಗಳಂತೆಯೂ, ಒಣಗಿದ ಬುಗ್ಗೆಯಿಂದ ಹೊರಡುವ ಹೊಳೆಯುವಂತೆಯೂ, ದೇವರಿಂದ ಸಕಲ ಜೀವರಾಶಿಗಳಿಗೂ ಆತನ ಆಶೀರ್ವಾದವು ಬರುತ್ತದೆ. ಯಾರಲ್ಲಿ ದೈನಜೀವಮಾನವಿರುತ್ತದೋ ಅವರಿಂದ ಇತರರಿಗೆ ಅದು ಪ್ರೀತಿಯ ರೂಪದಲ್ಲಿ ಹರಿದುಬರುತ್ತದೆ.LI 68.1

    ನಮ್ಮ ರಕ್ಷಕನ ಸಂತೋÀವು ಬಿದ್ದವರನ್ನು ಎತ್ತುವುದರಲ್ಲಿಯೂ ರಕ್ಷಿಸುವುದರಲ್ಲಿಯೂ ಇದ್ದಿತು. ಇದಕ್ಕೋಸ್ಕರ ತನ್ನ ಜೀವವನ್ನು ಅಲ್ಲಗಳೆದು, ಅವಮಾನವನ್ನು ಲಕ್ಷಿಸಿದೆ ಶಿಲುಬೆಯನ್ನು ಸಹಿಸಿದನು. ದೇವದೂತರು ಸದಾ ಇತರರಿಗೆ ಸಂತೋÀವನ್ನುಂಟುಮಾಡುವ ಕೆಲಸದಲ್ಲಿ ನಿರತರಾಗಿತ್ತಾರೆ. ಇದೇ ಅವರ ಸಂತೋÀ. ಗುಣದಲ್ಲೂ ಸ್ಥಿತಿಯಲ್ಲೂ ಕಮ್ಮಿಯಾದವರಿಗೂ, ಕÀ್ಟಜೀವಮಾನದಲ್ಲಿರುವವರಿಗೂ ಸೇವೆ ಮಾಡುವುದು ಬಹು ಕನಿÀ್ಟವೆಂದು ಸ್ವಾರ್ಥಪರರು ಭಾವಿಸುತ್ತಾರೆ. ಆದರೆ ಆ ಕೆಲಸವನ್ನೇ ಪಾಪರಹಿತರಾದ ದೇವದೂತರು ಮಾಡುತ್ತಾರೆ. ಕ್ರೈಸ್ತರಲ್ಲಿ ಇರಬೇಕಾದ ಲಕ್ಷಣವು ಇದೇ ಆಗಿದೆ. ಅವರು ಮಾಡಬೇಕಾದ ಕರ್ತವ್ಯವೂ ಸಹ ಇದೆ. ಕ್ರಿಸ್ತನ ಪ್ರೀತಿಯು ಹೃದಯದಲ್ಲಿ ನೆಲಸಿದರೆ ಸುವಾಸನೆಯನ್ನು ಮುಚ್ಚಲು ಸಾಧ್ಯವಿಲ್ಲದಂತೆ ಅದನ್ನೂ ಮುಚ್ಚಲು ಸಾಧ್ಯವಿಲ್ಲ. ಅದರ ಪರಿಶುದ್ಧ ಶಕಿಯು ನಮ್ಮ ಸಹವಾಸಕ್ಕೆ ಸೇರುವವರೆಲ್ಲರಲ್ಲೂ ತನ್ನ ಕೆಲಸವನ್ನು ನಡಿಸುತ್ತದೆ. ಕ್ರಿಸ್ತನ ಆತ್ಮವು ಮರಳುಕಾಡಿನ ಬುಗ್ಗೆಯಂತಿರುತ್ತದೆ. ಅದು ಎಲ್ಲರ ನೀರಡಿಕೆಯನ್ನು ನೀಗಿಸಿ ಅವರಲ್ಲಿ ಜೀವದ ಕಳೆಯನ್ನು ತುಂಬಿಸುತ್ತದೆ. ನಾಶನದ ಸ್ಥಿತಿಯಲ್ಲಿರುವವರಿಗೆ ಈ ಜೀವದ ನೀರನ್ನು ಕುಡಿಯುವಂತೆ ಆಶೆಯನ್ನು ಹುಟ್ಟಿಸುತ್ತದೆ.LI 68.2

    ಕ್ರಿಸ್ತನನ್ನು ಪ್ರೀತಿಸುವವರು ಆತನಂತೆ ಕೆಲಸಮಾಡಿ ಮಾನವರ ಆಶೀರ್ವಾದಕ್ಕೋಸ್ಕರವು ಅವರನ್ನು ಉತ್ತಮಸ್ಥಿತಿಗೆ ತರುವುದಕ್ಕೋಸ್ಕರವೂ ತಮ್ಮಲ್ಲಿರುವ ಆಶೆಯ ಮೂಲಕ ಆ ಗುಣವನ್ನು ಇತರರಿಗೆ ಪ್ರದರ್ಶಿಸುತ್ತಾರೆ. ಅದು ದೇವರ ಮತ್ತು ಇತರ ಜೀವಿಗಳ ವಿಚಾರದಲ್ಲಿ ಪ್ರೀತಿ, ಕರುಣೆ, ದಯೆಯುಳ್ಳವರಾಗಿ ವರ್ತಿಸುವಂತೆ ಮಾಡುತ್ತದೆ. ರಕ್ಷಕನ ಭೂಲೋಕದ ಜೀವಮಾನವು ತನ್ನ ದೇಹದ ಹಿತಚಿಂತನೆಯಿಂದಲೂ ಸುಖದಿಂದಲೂ ಕೂಡಿದ್ದಾಗಿರದೆ ತಪ್ಪಿಹೋದವರನ್ನು ಉದ್ಧರಿಸಲು ಸದಾ ಆಸಕ್ತಿಯಿಂದ ದುಡಿಯುವುದಾಗಿದ್ದಿತು. ತಾನು ಹುಟ್ಟಿದ ಗೋದಲಿಯಿಂದ ತಾನು ಸತ್ತ ಕಲ್ವಾರಿ ಗುಡ್ಡದವರೆಗೂ ಸ್ವಾರ್ಥತ್ಯಾಗದ ದಾರಿಯನ್ನು ಅನುಸರಿಸಿ ಕÀ್ಟಕರವಾದ ಕೆಲಸಗಳಿಂದಲೂ ಆಯಾಸಕರವಾದ ಪ್ರಯಾಣಗಳಿಂದಲೂ ದುಡಿತ ಮತ್ತು ಎಚ್ಚರಿಕೆಗಳಿಂದಲೂ ತುಂಬಿದ್ದಾಗಿದ್ದಿತು. ಆತನು ಹೀಗೆ ಹೇಳಿದ್ದಾನರ - “ಮನುÀ್ಯ ಕುಮಾರನು ಸೇವೆಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ. ಸೇವೆ ಮಾಡುವುದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವುದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವುದಕ್ಕೂ ಬಂದನು.” ಆತನ ಜೀವಮಾನದ ಘನತರವಾದ ಕೆಲಸವು ಇದೇ ಆಗಿತ್ತು. ಉಳಿದ ಕೆಲಸಗಳು ಈ ಕೆಲಸಕ್ಕೆ ನಡೆದು ಆತನ ಕೆಲಸಗಳನ್ನು ಪೂರೈಸುವುದೇ ಆತನ ಆಹಾರವಾಗಿದ್ದಿತು. ಸ್ವಾರ್ಥವಾಗಲಿ ಸ್ವಾರ್ಥಹಿತಚಿಂತನೆಯಾಗಲಿ ಆತನ ಕೆಲಸದಲ್ಲಿ ತಲೆಹಾಕುವ ಸಂಭವವೇ ಇರಲಿಲ್ಲ.LI 69.1

    ಇತರರು ಸ್ವರ್ಗದ ವರವನ್ನು ಹೊಂದಲು ಕ್ರಿಸ್ತನು ಸತ್ತು ಸರ್ವವನ್ನೂ ಇತರರಿಗಾಗಿ ತ್ಯಾಗ ಮಾಡಿದಂತೆ ಕ್ರಿಸ್ತನ ಕರುಣೆಯಲ್ಲಿ ಪಾಲುಗಾರರಾಗುವವರು ಯಾವ ತ್ಯಾಗವನ್ನು ಮಾಡಬೇಕಾದರೂ ಸಿದ್ಧರಾಗಿರುವರು. ತಮ್ಮ ವಾಸಕ್ಕಾಗಿ ಭೂಲೋಕವನ್ನು ಉತ್ತಮವನ್ನಾಗಿ ಮಾಡಲು ತಮ್ಮ ಕೈಲಾದುದನ್ನೆಲ್ಲಾ ಮಾಡುವರು. ನಿಜವಾಗಿ ಮಾರ್ಪಾಟಾದವರ ಆತ್ಮನಿಂದ ಹೊರಸೂಸುವ ಲಕ್ಷಣವು ಇದೇ. ಒಬ್ಬನು ಕ್ರಿಸ್ತನ ಬಳಿಗೆ ಬಂದ ಕೂಡಲೇ ತನಗೆ ಕ್ರಿಸ್ತನೆಂಬ ಬೆಲೆಯುಳ್ಳ ಸ್ನೇಹಿತನು ದೊರಕಿದ್ದಾನೆಂಬುದನ್ನು ಇತರಿಗೆ ತಿಳಿಸಬೇಕೆಂಬ ಆಶೆಯು ಹುಟ್ಟುತ್ತದೆ. ಆತನನ್ನು ರಕ್ಷಿಸಿದ ಮತ್ತು ಪರಿಶುದ್ಧಗೊಳಿಸಿದ ಈ ಸತ್ಯಾಂಶವನ್ನು ಆತನು ಬಚ್ಚಿಡಲು ಸಾಧ್ಯವಿಲ್ಲ. ನಾವು ಕ್ರಿಸ್ತನ ನೀತಿಯಿಂದ ಹೊದಿಸಲ್ಪಟ್ಟರೆÉ ಆತನ ಆತ್ಮವು ನಮ್ಮಲ್ಲಿ ನೆಲಸಿ ನಮಗೆ ಆನಂದವನ್ನುಂಟು ಮಾಡಿದರೆ ನಾವು ಸುಮ್ಮನಿರಲು ಸಾಧ್ಯವೇ ಇಲ್ಲ. ಕ್ರಿಸ್ತನು ಒಳ್ಳೆಯವನೆಂಬುದು ನಮಗೆ ಮನನವಾದರೆ ನಾವು ಆತನ ವಿಚಾರ ಏನನ್ನಾದರೂ ಹೇಳಲೇಬೇಕಾಗುತ್ತದೆ. ಕ್ರಿಸ್ತನನ್ನು ಕಂಡುಕೊಂಡ ಪಿಲಿಪ್ಪನಂತೆ ನಾವೂ ಇತರರನ್ನು ಆತನ ಬಳಿಗೆ ಆಹ್ವಾನಿಸುತ್ತೇವೆ. ಕ್ರಿಸ್ತನ ಆಕರ್Àಣೀಯವಾದ ಗುಣಗಳನ್ನೂ, ಮುಂದಣ ಲೋಕದ ಅದೃÀ್ಟವಾದ ಸತ್ಯಾಂಶಗಳನ್ನು ಜನರೆದುರಿಗೆ ಇಡಲು ಬಯಸುವೆವು. ಕ್ರಿಸ್ತನು ನಡೆದ ಹೆಜ್ಜೆ ಜಾಡಿನಲ್ಲೇ ನಡೆಯಲು ನಾವೂ ಅಧಿಕವಾಗಿ ಆಶಿಸುವೆವು. “ಲೋಕದ ಪಾಪವನ್ನು ಹೊತ್ತುಕೊಂಡು ಹೋಗುವ ದೈವಕುರಿಮರಿ” ಯನ್ನು ನಮ್ಮ ಸುತ್ತಲು ಇರುವ ಜನರಿಗೆ ತೋರಿಸಲು ಅತ್ಯಾಶಿಸುವೆವು.LI 69.2

    ಇತರರಿಗೆ ಆಶೀರ್ವಾದವನ್ನು ತರಲು ನಾವು ಯತ್ನಿಸುವಾಗ ಆ ಆಶೀರ್ವಾದಗಳೇ ನಮ್ಮನ್ನು ಆಶೀರ್ವದಿಸುವವು. ರಕ್ಷಣೆಯ ಕೆಲಸದಲ್ಲಿ ನಮಗೂ ಒಂದು ಭಾಗವನ್ನು ಕೊಡಬೇಕೆನ್ನುವುದು ಆತನ ಹಂಚಿಕೆಯಾಗಿತ್ತು. ತನ್ನ ಸ್ವಭಾವದಲ್ಲಿ ಭಾಗವಹಿಸುವ ಹಕ್ಕನ್ನು ನಮಗೆ ಕೊಟ್ಟು ಅದಕ್ಕೆ ಬದಲು ತನ್ಮೂಲಕ ನಮ್ಮ ಜೊತೆಯವರಿಗೂ ಆ ಆಶೀರ್ವಾದವನ್ನು ಹರಡಲೆಂದು ಆತನು ಇಚ್ಛಿಸುತ್ತಾನೆ. ದೇವರು ಮನುÀ್ಯರಿಗೆ ಕೊಡಬಹುದಾದ ಅತ್ಯಂತ ಹೆಚ್ಚಿನ ಗೌರವು ಮತ್ತು ಹೆಚ್ಚಿನ ಸಂತೋÀಗಳು ಇವುಗಳೇ. ಯಾರು ಪ್ರೀತಿಯ ಕೃತ್ಯಗಳಲ್ಲಿ ಭಾಗವಹಿಸುತ್ತಾರೋ ಅಂಥವರು ದೇವರಿಗೆ ಅತ್ಯಂತ ಹತಿರ ಬರುತ್ತಾರೆ. ದೇವರು ಸುವಾರ್ತೆಯ ಸತ್ಯಾಂಶಗಳನ್ನು ತಿಳಿಸಲೂ, ಪ್ರೀತಿಯ ಸೇವೆಯನ್ನು ಮಾಡಲು ತನ್ನ ದೂತರಿಗೆ ಅವಕಾಶ ಕೊಟ್ಟಿರಬಹುದು. ತನ್ನ ಉದ್ದೇಶಗಳನ್ನು ನೆರವೇತಿಸಲು ಅವರನ್ನು ಉಪಯೋಗಿಸಿರಬಹುದು. ಆದರೆ ಕರುಣಾನಿಧಿಯಾದ ದೇವರು ನಮ್ಮನ್ನು ತನ್ನಕೆಲಸದಲ್ಲೂ ಕಿಸ್ತನ ಕೆಲಸದಲ್ಲೂ ದೇವದೂತರ ಕೆಲಸದಲ್ಲೂ ಭಾಗಿಗಳಾಗುವಂತೆ ಮಾಡಿ ಈ ಅಸ್ವಾರ್ಥತೆಯ ಫಲದಿಂದ ದೊರಕುವ ಆಶೀರ್ವಾದ ಸಂತೋÀಗಳನ್ನು ಹೊಂದಿರುವಂತೆಯೂ ಮತ್ತು ಇತರರ ಆತ್ಮಗಳನ್ನು ಉದ್ಧರಿಸುವಂತೆಯೂ ಮಾಡಿದ್ದಾನೆ.LI 70.1

    ಕ್ರಿಸ್ತನ ಶ್ರಮಾನುಭವನೂ ನಮಗೆ ಗೊತ್ತಾದ ಹಾಗೆಲ್ಲಾ ನಾವು ಆತನ ಕೆÀಲಸಗ¼ಲಿ ಸಹತಾಪದಿಂದ ಕೈಹಾಕಿ ಆತನೊಂದಿಗೆ ಏಕೀಕರಿಸಲು ಇÀ್ಟವಾಗುತ್ತದೆ. ಇತರರಿಗಾಗಿ ನಾವು ಮಾಡುವ ತ್ಯಾಗದ ಒಂದೊಂದು ಕೃತ್ಯವು ನಮ್ಮ ಧರ್ಮಬುದ್ದಿಯನ್ನು ಹೆಚ್ಚಿಸುತ್ತದೆ. ಮತ್ತು “ನಾವು ಐಶ್ವರ್ಯವಂತರಾಗಲು ನಾನು ಬಡವನಾದ.” ನಮ್ಮ ರಕ್ಷಕನ ಸಂಗಡ ಬಹು ಹತ್ತಿದ ಮಿತ್ರಸಂಬಂಧವನ್ನು ಬೆಳೆಸಲು ಅನುಕೂಲವಾಗುತ್ತದೆ. ದೈವಸೃಷ್ಟಿಯಲ್ಲಿ ಅಡಗಿರುವ ಈ ಉದ್ದೇಶವನ್ನು ನಾವು ಈ ರೀತಿ ನೆರವೇರಿಸುವುದರ ಮೂಲಕವೇ ನಮ್ಮ ಜೀವಮಾನವು ತಮಗೆ ಆಶೀರ್ವಾದವಾಗಿ ಪರಿಣಮಿಸುವುದು.LI 70.2

    ಕ್ರಿಸ್ತನು ತನ್ನ ಶಿÀ್ಯರಿಗೆ ಕೆಲಸದ ವಿಚಾರ ಹಂಚಿಕೆ ಹಾಕಿಕೊಟ್ಟಂತೆ ನೀನು ಕೆಲಸ ಮಾಡಿದರೆ ಮತ್ತು ಅನೇಕ ಆತ್ಮಗಳನ್ನು ಕ್ರಿಸ್ತನ ಬಳಿಗೆ ತಂದರೆ ಹೆಚ್ಚಿನ ಅನುಭವ ಮತ್ತು ಪಾರಮಾರ್ಥ ವಿಚಾರಗಳ ಹೆಚ್ಚಿನ ಜ್ಞಾನದ ಅವಶ್ಯಕತೆಯು ಮಂದಟ್ಟಾಗಿ ನೀನು ನೀತಿಗೋಸ್ಕರ ಹಸಿದು ಬಾಯಾರುವಿ. ನೀನು ದೇವರಲ್ಲಿ ಹೋರಾಡುವುದರಿಂದ ನಿನ್ನ ನಂಬಿಕೆಯು ಬಲಪಡಿಸಲ್ಪಟ್ಟು ನಿನ್ನ ಆತ್ಮವು ರಕ್ಷಣಾ ಪಾತ್ರಯಲ್ಲಿ ಕುಡಿದು ತೃಪ್ತಿಯಾಗುವುದು. ಪ್ರಾಪ್ತವಾಗುವ ಪ್ರತಿಭಟನೆಗಳೂ ಶೋಧನೆಗಳೂ ನಿನ್ನನ್ನು ಸತ್ಯವೇದದ ಕಡೆಗೂ ಪ್ರಾರ್ಥನೆಯ ಕಡೆಗೆ ಸೆಳೆಯುವವು. ನೀನು ಕ್ರಿಸ್ತನ ಕರುಣೆ ಮತ್ತು ಜ್ಞಾನದಲ್ಲಿ ಬೆಳೆದು, ನಿನ್ನ ಅನುಭವವನ್ನು ಹೆಚ್ಚು ಮಾಡಿಕೊಳ್ಳುವಿ.LI 71.1

    ಇತರರಿಗಾಗಿ ಸ್ವಾರ್ಥತ್ಯಾಗ ಮಾಡಿ ದುಡಿಯುವ ಲಕ್ಷಣವು ನಮ್ಮ ಗುಣಕ್ಕೆ ಗಂಬೀರತೆಯನ್ನೂ ಸ್ಥಿರತ್ವವನ್ನು ಕ್ರಿಸ್ತನ ಗುಣದ ಮನೋಹರತೆಯನ್ನೂ ಕೊಡುತ್ತದೆ. ಮತ್ತು ಇಂಥಾ ಗುಣವನ್ನು ಹೊಂದಿದವರಿಗೆ ಶಾಂತಿಯನ್ನೂ ಸಂತೋÀವನ್ನೂ ನೀಡುತ್ತದೆ. ಉತ್ತಮಸ್ಥಿತಿಗೆ ಬರಬೇಕೆಂಬ ಆಶೆಯು ನಮ್ಮಲ್ಲಿ ಹೆಚ್ಚುತ್ತದೆ. ಸೋಮಾರಿತನಕ್ಕಾಗಲಿ ಸ್ವಾರ್ಥಕ್ಕಾಗಲಿ ಸ್ಥಳವಿರುವುದಿಲ್ಲ. ಈ ಕ್ರೈಸ್ತ ಸದ್ಗುಣವನ್ನು ಅಭ್ಯಾಸಿಸುವವರು ದೇವರ ಕೆಲಸಗಳನ್ನು ಮಾಡಲು ಸಮರ್ಥರಾಗುವರು. ಅವರು ಸ್ಪÀ್ಟವಾದ ಆತ್ಮಗ್ರಹಿಕೆಯನ್ನೂ ಹೊಂದುವರು. ದೇವರ ಆತ್ಮನು ಅವರ ಆತ್ಮಗಳಲ್ಲಿ ತನ್ನ ಕೆಲಸವÀನ್ನು ನಡೆಸಿ ದೈವಕರೆಯುವಿಕೆಗೆ ಅವು ಸಮನ್ವಯವಾಗುವಂತೆ ಮಾಡುವವು. ಯಾಗು ಸ್ವಾvಥವನ್ನು ತ್ಯಜಿಸಿ ಇತರರಿಗೆ ಸೇವೆಯನ್ನು ಮಾಡಲು ತಮ್ಮನ್ನು ಮೀಸಲು ಮಾಡುವವರೋ ಅವರು ತಮ್ಮ ರಕ್ಷಣೆಗೆ ತಾವೇ ದುಡಿಯುತ್ತಿರುವರು ಮತ್ತು ಬಾಧ್ಯರಾಗುವರು.LI 71.2

    ಇತರರಿಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯವನ್ನು ಮಾಡುವುದು ಅವರನ್ನು ಆರ್ಶಿರ್ವಾದಕ್ಕೆ ಪಾತ್ರರನ್ನಾಗಿ ಮಾಡುವುದು ಕ್ರಿಸ್ತನು ನಮಗೆ ವಿಧಿಸಿರುವ ಕೆಲಸವಾಗಿರುತ್ತದೆ. ಈ ರೀತಿ ಅಸ್ವಾರ್ಥತೆಯ ಕೆಲಸವನ್ನು ಪರರಿರಾಗಿ ಮಾಡು ವುದೇ ರಕ್ಷಣೆಯ ದಾರಿಯಲ್ಲಿ ನಾವು ಬೆಳೆಯಲು ಮಾರ್ಗವಾಗಿದೆ. ಅಭ್ಯಾಶದಿಂದ ಶಕ್ತಿಯು ಬರುತ್ತದೆ. ಚಟುವಟಿಕೆಯು ಜೀವದ ಸತ್ವವಾಗಿದೆ. ಕೆಲವರು ಕ್ರಿಸ್ತನ ಕರುಣೆಯಿಂದ ದೊರಕಿದ ಆಶೀರ್ವಾದಗಳನ್ನು ಸ್ವೀಕರಿಸಿ ಕ್ರೈಸ್ತ ಬಾಳ್ವೆಯಲ್ಲಿ ಜೀವಿಸುತ್ತಾ ಇತರರಿಗೆ ಈ ಸತ್ಯಾರ್ಥದ ಅಂಶಗಳನ್ನು ತಿಳಿಸದೆ ಹೋಗುತ್ತಾರೆ. ಮತ್ತು ಕ್ರಿಸ್ತನಿಗಾಗಿ ಏನನ್ನು ಮಾಡುವುದಿಲ್ಲ. ಇಂಥವರು ಕೆಲಸ ಮಾಡದೆ ಊಟ ಮಾಡಿಕೊಂಡು ಜೀವಿಸಿಕೊಂಡಿರುವವರಿಗೆ ಸಮಾನರಾಗಿದ್ದಾರೆ. ಈ ರೀತಿ ವರ್ತಿಸಿದರೆ ಕ್ಷಯಕ್ಕೂ ಅಧಮ ಸ್ಥಿತಿಯಗೂ ಲೌಕಿಕ ಜೀವನವು ಬರುವಂತೆ ಪಾರಮಾರ್ಥಿಕ ಜೀವನವೂ ಬರುವುದು. ಕೈಕಾಲುಗಳಿಗೆ ಅಂಗಸಾಧನೆಯನ್ನು ಕೊಡದಿದ್ದರೆ ಅವುಗಳ ಶಕ್ತಿಯು ಕಡಿಮೆಯಾಗುವುದು. ತದ್ರೀತಿ ದೇವರು ಕೊಟ್ಟ ಶಕ್ತಿಗಳನ್ನು ಯಾವ ಕ್ರೈಸ್ತನು ಉಪಯೋಗಿಸಿವುದಿಲ್ಲವೋ ಅಂಥವರು ಕ್ರಿಸ್ತನ ಪ್ರಮಾಣಕ್ಕೆ ಬೆಳೆಯುವುದಿಲ್ಲ. ಮತ್ತು ತನಗೆ ದೊರಕಿದ್ದ ಶಕ್ತಿಯನ್ನು ಕಳೆದುಕೊಳ್ಳವವನು.LI 71.3

    ಸಭೆಯು ಮನುÀ್ಯರಿಗೆ ದೇವರು ನೇಮಿಸಿರುವ ರಕ್ಷಣಾಸ್ಥಾನವಾಗಿದೆ. ಅದರ ಕೆಲಸವು ಸುವಾರ್ತೆಯನ್ನು ಪ್ರಪಂಚದಲ್ಲಿ ಹರಡುವುದಾಗಿದೆ. ಕ್ರೈಸ್ತರೆಲ್ಲರ ಮೇಲೂ ಈ ಹಂಗು ಬಿದ್ದಿದೆ. ಪ್ರತಿಯೊಬ್ಬನೂ ತನ್ನ ಕೈಲಾದ ಮಟ್ಟಿಗೆ ದೇವರು ಕೊಡ್ಡ ವರಗಳ ಪ್ರಮಾಣದಕ್ಕೆ ತಕ್ಕ ಹಾಗೆ ಕ್ರಿಸ್ತನ ಕೆಲಸಗಳನ್ನು ನೆರೆವೇರಿಸಬೇಕು. ಕ್ರಿಸ್ತನನ್ನು ತಿಳಿದ ನಾವು ತಿಳಿಯದವರಿಗೆ ತಿಳಿಸುವ ಋಣದಲ್ಲಿದ್ದೇವೆ. ನಮಗೆ ಸಿಕ್ಕಿರುವ ಬೆಳಕು ನಮಗೆ ಮಾತ್ರವಲ್ಲ. ಇತರರಿಗೂ ಹರಡಬೇಕೆಂದು ದೇವರ ಸಂಕಲ್ಪವಾಗಿದೆ. ಕ್ರಿಸ್ತನ ಕೆಲಸದ ವಿಚಾರದಲ್ಲಿ ಕ್ರೈಸ್ತರು ಎಚ್ಚರದಿಂದಿದ್ದರೆ ಒಬ್ಬನು ನಿಂತು ಸೇವೆ ಮಾಡುವ ಸ್ಥಳದಲ್ಲಿ ಸಾವಿರಾರು ಜನರು ನಿಂತು ಸುವಾರ್ತೆಯನ್ನು ಅಜ್ಞಾನಿಗಳ ದೇಶದಲ್ಲಿ ಸಾರುತ್ತಿದ್ದರು. ತಾವೇ ಸಾಕ್ಷಾತ್ತಾಗಿ ನಿಂತು ಕೆಲಸ ಮಾಡಲು ಸಾಧ್ಯವಿಲ್ಲದವರು ತಮ್ಮ ಹಣ ಮತ್ತು ಪ್ರಾರ್ಥನೆಗಳಿಂದ ಸಹಾಯ ಮಾಡುವವರು. ಹೆಚ್ಚಿನ ಆಸಕ್ತಿಯ ಕೆಲಸವು ಜರುಗಲು ಅನುಕೂಲವಾಗುವುದು. ಕ್ರಿಸ್ತನ ಸೇವೆ ನಮಗೆ ಯಾವುದಾದರೂ ಗೊತ್ತಾದ ಜಾಗದಲ್ಲಿ ನೇಮಿತವಾದ ಪಕ್ಷದಲ್ಲಿ ನಮ್ಮ ಮನೆ ಮಠಗಳನ್ನು ಬಿಟ್ಟು ಪರದೇಶಗಳಲ್ಲೂ ಸಭೆಯಲ್ಲಿ ನಮ್ಮ ಸಂಗಾತಿಗಳಲ್ಲೂ ಲೌಕಿಕರಲ್ಲೂ ಮಾಡಬಹುದು. ಕ್ರಿಸ್ತನು ತನ್ನ ಭೂಲೋಕದ ಹೆಚ್ಚಿನ ಜೀವಮಾನವನ್ನು ನಜರೇತಿನ ಬಡಗಿಯ ಅಂಗಡಿಯಲ್ಲಿ ಶ್ರಮರೀತಿಯಲ್ಲಿ ತಾಳ್ಮೆಯಿಂದ ಕಳೆದನು. ಆತನ ಮಹಿಮೆಯನ್ನು ತಿಳಿ ಯದ ಮತ್ತು ಗೌರವನ್ನು ಕೊಡದ ಸಾಮಾನ್ಯರಾದ ರೈತರ ಸಂಗಡಲೂ ಕೂಲಿಗಾರರೊಂದಿಗೂ ಸಮ್ಮಿಳಿತವಾಗುತ್ತಿದ್ದಾಗ ಜೀವದ ಪ್ರಭುವಾದಾತನನ್ನು ಊಳಿಗದ ದೂತರು ಉಪಚರಿಸುತ್ತಿದ್ದರು. ಕಾಯಿಲೆಯಾದವರನ್ನು ವಾಸಿಮಾಡುತ್ತಿದ್ದಾಗಲೂ ಗಲಿಲಾಯದ ಸಮುದ್ರದ ಮೇಲೆ ನಡೆದಾಗಲೂ ಯವ ವಿಧವಾದ ನಂಬಿಕೆಯ ಸೇವೆಯನ್ನು ಮಾಡುತ್ತಿದ್ದನೋ ಅದೇ ರೀತಿ ನಜರೇóಶಿನ ಬಡಗಿಯ ಅಂಗಡಿಯಲ್ಲೂ ದೈನ್ಯತೆಯಿಂದ ಸೇವೆ ಮಾಡುತ್ತಿದ್ದನು. ನಮ್ಮ ಜೀವಮಾನದ ಕರ್ತವ್ಯವೂ ಅಂತಸ್ತು ಬಹು ಕನಿÀ್ಟವಾಗಿರಬಹುದು. ಹೀಗಿದ್ದರೂ ನಾವು ಕ್ರಿಸ್ತನ ಜೊತೆಯಲ್ಲಿ ನಡೆದು ಆತನೊಡನೆ ಸೇವೆ ಮಾಡಬೇಕು.LI 72.1

    ಅಪೋಸ್ತಲನು ಹೀಗೆ ಹೇಳುತ್ತಾನೆ - “ಪ್ರತಿಯೊಬ್ಬನೂ ಕರೆಯಲ್ಪಟ್ಟಾಗ ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ದೇವರ ಮುಂದೆ ಇದ್ದುಕೊಂಡಿರು.” ಕೆಲಸದಿಂದ (ವ್ಯಾಪಾರ, ಕೂಲಿ ವೊದಲಾದ ವೃತ್ತಿಗಳು) ಜೀವನ ಮಾಡುವವನು ತನ್ನ ಕೆಲಸದಿಂದಲೇ ಕ್ರಿಸ್ತನಿಗೆ ಮಹಿಮೆ ಬರುವ ರೀತಿ ನಂಬಿಕೆಯಿಂದ ವರ್ತಿಸಬಹುದು. ನಮ್ಮ ವೃತ್ತಿಯ ಪ್ರತಿಭಾಗಕ್ಕೂ ಮತದ ಕಳೆಯನ್ನು ಕೊಟ್ಟು ಕ್ರಿಸ್ತನ ಆತ್ಮವನ್ನು ಇತರರಿಗೆ ಪ್ರಕಟಿಸಬೇಕು. (ಕೆಲಸವು ಮತವಾಗಿರಬೇಕು.) ಯಂತ್ರಾದಿಗಳನ್ನು ನಡಿಸುವವನೂ ಸಹ ಗಲಿಲಾಯದ ಬೆಟ್ಟಗುಡ್ಡಗಳ ಬಳಿ ಸಾಮಾನ್ಯವಾದ ಕÀ್ಟದ ಜೀವನವನ್ನು ಜರುಗಿಸಿದ ಕ್ರಿಸ್ತನ ನಂಬಿಕೆಯುಳ್ಳ ಮತ್ತು ಕÀ್ಟಪಟ್ಟು ಕೆಲಸ ಮಾಡುವ ಪ್ರತಿನಿಧಿಯಾಗಿರಬಹುದು. ಕ್ರಿಸ್ತನ ಹೆಸರನ್ನು ಹೇಳುವವರೆಲ್ಲರೂ ತಮ್ಮ ಜೀವಮಾನದ ಕೆಲಸಗಳನ್ನು ನೋಡುವ ಇತರರು ತಮ್ಮ ಸೃಷ್ಟಿಕರ್ತನನ್ನೂ ರಕ್ಷಕನನ್ನೂ ಮಹಿಮೆ ಪಡಿಸುವ ಹಾಗೆ ವರ್ತಿಸಬೇಕು. ಕೆಲವರು ಹೆಚ್ಚಿನ ಬುದ್ಧಿಯನ್ನೂ ಅನುಕೂಲತೆಗಳನ್ನೂ ನೆವಮಾಡಕೊಂಡು ಕ್ರಿಸ್ತನ ಸೇವೆಗೆ ತಮ್ಮ ವರಗಳನ್ನು ಉಪಯೋಗಿಸುವುದಿಲ್ಲ. ಯಾರಿಗೆ ಹೆಚ್ಚಿನ ಬುದ್ಧಿಶಕ್ತಿಗಳಿವೆಯೋ ಅಂಥವರು ಮಾತ್ರ ತಮ್ಮ ಜೀವಮಾನವನ್ನು ದೇವರ ಸೇವೆ ಪ್ರತಿÀ್ಠ ಮಾಡಿಕೊಂಡು ಅವುಗಳನ್ನು ಉಪಯೋಗಿಸಬೇಕಂದು ಅಭಿಪ್ರಾಯ ಪಡುತ್ತಾರೆ. ದೇವರ ಪ್ರೀತಿಗೆ ಒಳಗಾದ ಯಾವುದೋ ಒಂದು ಪಂಗಡದವರಿಗೆ ಮಾತ್ರ ಈ ತರದ ಶಕ್ತಿಯು ಕೊಡಲ್ಪಟ್ಟಿದೆಯೆಂದೂ ಅವರು ಮಾತ್ರ ದೇವರ ಸೇವೆ ಮಾಡಬೇಕೆಂದೂ ಇತರರು ಈ ಸೇವೆಯಲ್ಲಾಗಲಿ ಬಹುಮಾನದಲ್ಲಾಗಲಿ ಭಾಗಿಗಳಾಗಲಾರರೆಂದು ಕೆಲವರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಕರ್ತನು ಹೇಳಿದ ಸಾಮ್ಯದಲ್ಲಿ ಈ ತರದ ಅಭಿಪ್ರಾಯಕ್ಕೆ ಅವಕಾಶವಿಲ್ಲ. ಮನೆಯ ಯಜಮಾನನು ಸೇವಕರನ್ನು ಕರೆದು ಒಬ್ಬೊಬ್ಬನಿಗೂ ಅವನವನ ಕೆಲಸವನ್ನು ನೇಮಿಸಿದನು.LI 73.1

    ಪ್ರೀತಿಯ ಮನದಿಂದ ನಾವು ನಮ್ಮ ಅತ್ಯಂತ ಕನಿÀ್ಟ ಸೇವೆಯನ್ನೂ ಕರ್ತನಿಗೆಂದು ಮಾಡಬೇಕು. (ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುÀ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಮನ:ಪೂರ್ವಕವಾಗಿ ಮಾಡಿರಿ.) ದೇವರ ಪ್ರೀತಿಯು ನಮ್ಮಲ್ಲಿದ್ದರೆ ನಮ್ಮ ಜೀವಮಾನದಲ್ಲಿ ಅದು ತೋರಿಬರುವುದು. ಕ್ರಿಸ್ತನ ಪ್ರೀತಿಯ ಸುವಾಸನೆಯು ನಮ್ಮನ್ನು ಆವರಿಸಿಕೊಂಡು ನಮ್ಮ ಶಕ್ತಿಯನ್ನು ಹೆಚ್ಚಿಸಿ ನಮ್ಮನ್ನು ಆಶೀರ್ವದಿಸುವುದು.LI 74.1

    ದೇವರ ಸೇವೆಯನ್ನು ಮಾಡಲು ನಾವು ಮಹತ್ತರವಾದ ಸಮಯಗಳಿಗಾಗಲಿ ಅಸಾಧಾರಣವಾದ ಶಕ್ತಿಸಾಮಥ್ರ್ಯಗಳಿಗಾಗಲಿ ಕಾಯಬೇಕಾಗಿಲ್ಲ. ಪ್ರಪಂಪದವರು ನಿನ್ನ ವಿಚಾರ ಏನೇನೋ ಯೋಚಿಸಿಬಿಡುವರೆಂಬ ಭಯವೂ ಬೇಕಾಗಿಲ್ಲ. ನಿನ್ನ ಅನುದಿನದ ಜೀವಮಾನವು ನಂಬಿಕೆಯ ಪರಿಶುದ್ಧತೆಗೂ ಸತ್ಯತೆಗೆ ಸಾಕ್ಷಿಯಾಗಿದ್ದರೆ ಇತರರಿಗೆ ಒಳ್ಳೇದನ್ನು ಮಾಡಲು ಆಶೆಪಡುತ್ತೀ ಎಂಬುದು ಅವರಿಗೆ ಮನಗಂಡರೆ ನಿನ್ನ ಪ್ರಯತ್ನಗಳು ಸಫಲಗೊಳ್ಳದಿರಲಾರವು. ಅವರ ಆತ್ಮಗಳು ಕ್ರಿಸ್ತನ ಸಾರೂಪ್ಯಕ್ಕೆ ಬೆಳೆಯುತ್ತಾ ಹೋಗುವುದು. ಅವರು ಈ ಜೀವಮಾನದಲ್ಲಿ ದೇವರ ಜೊತೆ ಕೆಲಸದವರು. ಉತ್ತಮವಾದ ಕೆಲಸಕ್ಕೂ ಮುಂದಿನ ನಿರಂತರವಾದ ಸಂತೋÀಕ್ಕೂ ತಮ್ಮನ್ನು ಪಾತ್ರರನ್ನಾಗಿ ಮಾಡಿಕೊಳ್ಳುತ್ತಾ ಇರುತ್ತಾರೆ.LI 74.2

    ಕ್ರಿಸ್ತನ ಅತ್ಯಂತ ದೈನ್ಯತೆಯ ಮತ್ತು ಬಡತನದ ಶಿÀ್ಯರೂ ಸಹ ಇತರರಿಗೆ ಆಶೀರ್ವಾದ ತರುವವರಾಗಿದ್ದಾರೆ. ಅವರು ಇತರರಿಗೆ ಬಹಳ ಒಳ್ಳೇದನ್ನು ಮಾಡುತ್ತಾರೆಂದು ತಿಳಿಯದಿರಬಹುದು; ಆದರೆ ಅವರಿಗೆ ತಿಳಿಯದ ರೀತಿಯಲ್ಲಿ ಆಶೀರ್ವಾದದ ಅಲೆಗಳು ದೂರವಾಗಿಯೂ ಆಳವಾಗಿಯೂ ವ್ಯಾಪಿಸಬಹುದು. ಮತ್ತು ಅವುಗಳ ಒಳ್ಳೆಯ ಫಲಿತಾಂಶಗಳು ಅವರಿಗೆ ಕಟ್ಟಕಡೆಯ ಬಹುಮಾನದ ದಿನಗಳವರೆಗೂ ಗೊತ್ತಾಗದೆ ಹೋಗಬಹುದು. ತಾವು ಯಾವುದೋ ಒಂದು ದೊಡ್ಡ ಕೆಲಸವನ್ನು ಮಾಡುತ್ತಾ ಇದ್ದೇವೆಂಬ ಅರುಹೇ ಅವರಿಗೆ ಇಲ್ಲದಿರಬಹುದು. ಆದರೆ ಅವರು ಅವುಗಳ ಜಯದ ವಿಚಾರ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಅವರು ನಿಶ್ಯಬ್ದವಾಗಿ ಮುಂದರಿಸುತ್ತಾ ದೇವರು ತಮಗೆ ದಯೆಯಿಂದ ಅನುಗ್ರಹಿಸಿರುವ ಕೆಲಸಗಳನ್ನು ನಂಬಿಕೆಯಿಂದ ಮಾಡುತ್ತಾ ಬಂದರೆ ಅವರ ಜೀವಮಾನವು ನಿರರ್ಥಕವಾಗಲಾರದು.LI 74.3