Loading...
Larger font
Smaller font
Copy
Print
Contents
ಪರ್ವತ ಪ್ರಸಂಗ - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  “ಕರುಣೆಯುಳ್ಳವರು ಧನ್ಯರು; ಅವರು ಕರುಣೆ ಹೊಂದುವರು.”

  ಸ್ವಭಾವತಃ ಮನುಷ್ಯನ ಹೃದಯವು ವಿಶ್ವಾಸಹೀನ, ದಿಷ್ಟತನ ಮತ್ತು ಮಮತೆ ಹೀನವಾದದ್ದು; ಎಂದಾದರೂ ಒಬ್ಬನು ಕರುಣೆಯ ಆತ್ಮವನ್ನು ಮತ್ತು ಕ್ಷಮಾಗುಣವನ್ನು ಪ್ರದರ್ಶಿಸುವಾಗ, ತನ್ನ ಸ್ವಯಿಚ್ಛೆಯಿಂದ ಮಾಡುವುದಿಲ್ಲ, ಆದರೆ ಅವನ ಹೃದಯದಲ್ಲಿ ಚಲಿಸುತ್ತಿರುವ ದೈವಾತ್ಮನ ಪ್ರಭಾವದಿಂದಲೇ ಮಾಡುತ್ತಾನೆ. “ದೇವರು ನಮ್ಮನ್ನು ಮೊದಲು ಪ್ರೀತಿಸಿದ್ದರಿಂದ ನಾವು ಪ್ರೀತಿಸುತ್ತೇವೆ” 1 ಯೋಹಾನ 4:19.MBK 27.1

  ದೇವರು ತಾನೇ ಎಲ್ಲಾ ಕರುಣೆಯ ಉತ್ಪತ್ತಿಸ್ಥಾನವಾಗಿದ್ದಾನೆ; “ಕನಿಕರವೂ ದಯೆಯೂ ಉಳ್ಳ ದೇವರು” ವಿಮೋಚನಕಾಂಡ 34:6, ಎಂಬುದು ಆತನ ನಾಮಧೇಯ. ಆತನು ನಮ್ಮ ಅರ್ಹತೆಗನುಸಾರವಾಗಿ ನಮ್ಮನ್ನು ಸತ್ಕರಿಸುವುದಿಲ್ಲ. ಆತನ ಪ್ರೀತಿಗೆ ನಾವು ಅರ್ಹರೇ ಎಂದು ಕೇಳದೆ ನಾವು ಅರ್ಹರಾಗುವಂತೆ ತನ್ನ ಪ್ರೀತಿಯ ಐಸ್ವರ್ಯವನ್ನು ಧಾರಾಳವಾಗಿ ನಮ್ಮ ಮೇಲೆ ಸುರಿಸುತ್ತಾನೆ. ಆತನು ಛಲ ಸಾಧಿಸುವವನಲ್ಲ. ಶಿಕ್ಷಿಸಲು ಪ್ರಯತ್ನಿಸದೆ ನಮ್ಮನ್ನು ರಕ್ಷಿಸಲೋಸುಗವೇ ಯತ್ನಿಸುತ್ತಾನೆ. ತನ್ನ ಅನುಗ್ರಹದಿಂದ ಆತನು ಕೆಲವು ವೇಳೆ ನಮ್ಮಲ್ಲಿ ತೋರುವ ನಿಷ್ಠುರತೆಯು ಹಟಮಾರಿಗಳ ರಕ್ಷಣಾರ್ಥವಾಗಿಯೇ. ಮನುಷ್ಯರ ತೀವ್ರ ವ್ಯಥೆಯನ್ನು ನೀಗಿಸಿ ಅವರ ಗಾಯಗಳಿಗೆ ತನ್ನ ಮುಲಾಮನ್ನು ಹಚ್ಚಲು ತೀವ್ರ ಅಭಿಲಾಷೆಯಿಂದ ಹಂಬಲಿಸುವವನಾಗಿದ್ದಾನೆ. ದೇವರು ನಿಜವಾಗಿಯೂ [ಅಪರಾಧಗಳನ್ನು] ಶಿಕ್ಷಿಸದೆ ಬಿಡದವನು; ಆತನು ಅಪರಾಧಗಳನ್ನು ನಿವಾರಿಸುವವನು. MBK 27.2

  ಕರುಣೆಯುಳ್ಳವರು “ದೈವಸ್ವಭಾವದಲ್ಲಿ ಭಾಗಿಗಲಾಗಿದ್ದಾರೆ,” ಮತ್ತು ಅವರಲ್ಲಿ ದೇವರು ಸಹಾನುಭೂತಿಯಿಂದ ಕೂಡಿದ ಪ್ರೀತಿಯು ವ್ಯಕ್ತಪಡುತ್ತದೆ. ದೇವರ ಅಪಾರ ಪ್ರೀತಿಯ ಹೃದಯದೊಡನೆ ಸಹಾನುಭೂತಿಯುಳ್ಳವರ ಹೃದಯಗಳೆಲ್ಲವೂ ಮಾನವರನ್ನು ಸನ್ಮಾರ್ಗಕ್ಕೆ ತರಲು ಪ್ರಯತ್ನಿಸುವುದೇ ಹೊರತು ದೋಷಾರೋಪಣೆ ಮಾಡುವುದಕ್ಕಲ್ಲ. ಆತ್ಮದಲ್ಲಿ ವಾಸಿಸುವ ಕ್ರಿಸ್ತನು ಎಂದಿಗೂ ಬತ್ತಿಹೋಗದ ಬುಗ್ಗೆಯಾಗಿದ್ದಾನೆ. ಆತನು ನೆಲಸಿರುವಲ್ಲಿ ಉಪಕಾರ ಗುಣವು ಒರತೆಯಿಂದಲೋ ಎಂಬಂತೆ ಪ್ರವಹಿಸುತ್ತದೆ.MBK 27.3

  ಅಕ್ರಮ ಪ್ರವರ್ತಕರ, ಶೋಧಿಸಲ್ಪಟ್ಟವರ ನಿರ್ಭಾಗ್ಯಕ್ಕೂ ಮತ್ತು ಪಾಪಕ್ಕೂ ಆಹುತಿಯಾದವರ ಮನವಿಗೆ—ಮೊರೆಗೆ ಕ್ರೈಸ್ತನು ಅವರು ಸಹಾಯ ಹೊಂದಲು ಯೋಗ್ಯರೇ? ಎಂದು ಕೇಳುವುದಿಲ್ಲ, ಆದರೆ, ನಾನು ಅವರಿಗೆ ಯಾವ ರೀತಿಯಲ್ಲಿ ಪ್ರಯೋಜನವಾಗಬಹುದು? ಎಂದು ತನ್ನಲ್ಲೇ ಯೋಚಿಸುವನು. ಅತಿ ದೌರ್ಭಾಗ್ಯರೂ ಮತ್ತು ಹೀನಯಿಸಲ್ಪಟ್ಟವರೂ ಆದವರಲ್ಲಿ ಕ್ರಿಸ್ತನು ರಕ್ಷಿಸಲು ಪ್ರಾಣವನ್ನು ಕೊಟ್ಟ ಆತ್ಮಗಳನ್ನೂ ಮತ್ತು ನಾವು ಆತನೊಡನೆ ಸಮನ್ವಯ ಮಾಡಬೇಕಾದ ಆತ್ಮಗಳನ್ನೂ ಕಾಣುತ್ತಾನೆ.MBK 27.4

  ದೀನ ದರಿದ್ರರಿಗೂ, ಸಂಕಟದಲ್ಲಿರುವವರಿಗೂ ಮತ್ತು ಹಿಂಸೆಗೊಳಗಾದವರಿಗೂ ಮರುಕವನ್ನು ತೋರಿಸುವವರೇ ಕರುಣೆಯುಳ್ಳವರು. ಯೋಬನು ಹೇಳುವುದೇನಂದರೆ: “ಏಕಂದರೆ ಅಂಗಲಾಚುವ ಬಡವನನ್ನೂ ಸಹಾಯಕನಿಲ್ಲದ ಅನಾಥನನ್ನೂ ರಕ್ಷಿಸುವವನಾಗಿದ್ದೆನು. ಗತಿಯಿಲ್ಲದವನು ನನ್ನನ್ನು ಹರಸುತ್ತಿದ್ದನು, ವಿಧವೆಯ ಹೃದಯವನ್ನು ಉತ್ಸಾಹಗೊಳಿಸುತ್ತಿದ್ದೆನು. ನಾನು ಧರ್ಮವನ್ನು ಧರಿಸಿಕೊಂಡೆನು, ಧರ್ಮವು ನನ್ನನ್ನು ಧರಿಸಿತು, ನನ್ನ ನ್ಯಾಯವೇ ನನಗೆ ನಿಲುವಂಗಿಯೂ ಮುಂಡಾಸವೂ ಆಗಿತ್ತು. ನಾನು ಕುರುಡರಿಗೆ ಕಣ್ಣಾಗಿಯೂ, ಕುಂಟರಿಗೆ ಕಾಲಾಗಿಯೂ ಇದ್ದೆನು. ದರಿದ್ರರಿಗೆ ತಂದೆಯಾಗಿ ಪರಿಚಯವಿಲ್ಲದವನ ವ್ಯಾಜ್ಯವನ್ನೂ ವಿಚಾರಿಸುತ್ತಿದ್ದೆನು.” ಯೋಬ 29:12-16.MBK 28.1

  ಅನೀಕರಿಗೆ ಜೀವನವು ಪ್ರಯಾಸವಾಗಿದೆ; ತಮ್ಮ ಕೊರತೆಗಳನ್ನು ಗ್ರಹಿಸಿ, ದುಃಖಾರ್ತರೂ ನಂಬಕೆಹೀನರೂ ಆಗಿದ್ದಾರೆ; ತಾವು ಯಾವುದಕ್ಕೂ ಕೃತಜ್ಞತರಾಗಿರಲವಶ್ಯವೇ ಇಲ್ಲವೆಂದು ನೆನಸುತ್ತಾರೆ. ಜೀವನದಲ್ಲಿ ಹೆಣಗಾಡುವವರಿಗೂ ಏಕಾಂಗಿಯಾದವರಿಗೂ ಅಂದರೆ ಹಿತೈಷಿಗಳಾದರೂ ಇಲ್ಲದವರಿಗೆ ಮೃದುನುಡಿ, ದಯಾಪೂರಿತ ನೋಟ, ಮತ್ತು ಮೆಚ್ಚಿಗೆಯ ಮಾತುಗಳು ದಾಹಗೊಂಡವರಿಗೆ ಒಂದು ತಂಬಿಗೆ ತಣ್ಣೀರು ಹೇಗೋ ಹಾಗಿರುತ್ತದೆ. ಒಂದು ಮರುಕದ ನುಡಿಯೂ ಒಂದು ಧರ್ಮಕಾರ್ಯವು ಉತ್ಸಾಹಗುಂದಿದ ಹೆಗಲುಗಳ ಮೇಲೆ ಭಾರವಾಗಿ ಹೊರಿಸಲ್ಪಟ್ಟಿರುವ ಒಂದು ಹೊರೆಯನ್ನು ಇಳುಹಿದಂತಿರುವುದು. ಮತ್ತು ಅಸ್ವಾರ್ಥಪರ ನಲ್ಮೆಯ ನಡೆನುಡಿಯೂ ಕ್ರಿಸ್ತನು ತಪ್ಪಿಹೋದ ಮಾನವರಿಗೆ ತೋರಿದ ಪ್ರೀತಿಯ ಸಾದೃಶ್ಯವಾಗಿದೆ.MBK 28.2

  ಕರುಣೆಯುಳ್ಳವರು “ಕರುಣೇಯನ್ನು ಹೊಂದುವರು” ಉದಾರಿಯು ಪುಷ್ಟನಾಗುವನು; ನೀರು ಹಾಯಿಸುವವನಿಗೆ ನೀರು ಸಿಕ್ಕುವುದು ಜ್ಞಾನೋಕ್ತಿ 11:25.MBK 28.3

  ಕನಿಕರದಿಂದ ಕೂಡಿದ ಆತ್ಮಕ್ಕೆ ಇನಿದಾದ ಸಮಾಧಾನವಿರುವುದು, ಮತ್ತು ಇತರರ ಹಿತಕ್ಕಾಗಿ ಸ್ವಾರ್ಥವಿಸ್ಮೃತಿಯಿಂದ ದುಡಿಯುವವರ ಜೀವ್ಯದಲ್ಲಿ ದಿವ್ಯತೃಪ್ತಿಯು ನೆಲೆಗೊಂಡಿರುವುದು. ಆತ್ಮದಲ್ಲಿ ನೆಲಸಿ ಜೀವನದಲ್ಲಿ ಪ್ರಕಟವಾ ಗುವ ಪರಿಶುದ್ಧಾತ್ಮನು ಕಠಿಣ ಹೃದಯಗಳನ್ನು ಮೃದುವಾಗಿಸಿ ಮರುಕವನ್ನೂ ದಯೆಯನ್ನೂ ಉದ್ರೇಕಿಸುತ್ತಾನೆ. ನೀವು ಬಿತ್ತುವುದನ್ನೇ ಕೊಯ್ಯುವಿರಿ. “ದಿಕ್ಕಿಲ್ಲದವರನ್ನು ಪರಾಂಬರಿಸುವವನು ಧನ್ಯನು; ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು. ಯೆಹೋವನು ಅವನ ಪ್ರಾಣವನ್ನು ಕಾಪಾಡಿ ಉಳಿಸುವನು; ಅವನು ದೇಶದಲ್ಲಿ ಧನ್ಯನೆನಿಸಿಕೊಳ್ಳುವನು; ಯೆಹೋವನೇ ಅವನನ್ನು ಶತ್ರುಗಳ ಅಧೀನಕ್ಕೆ ಕೊಡಬೇಡ! ಅವನು ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ ಯೆಹೋವನು ಅವನನ್ನು ಉದ್ಧರಿಸುವನು; ಅವನ ರೋಗವನ್ನೆಲ್ಲಾ ಪರಿಹರಿಸಿ ಆರೋಗ್ಯವನ್ನುಂಟುಮಾಡಿದೆಯಲ್ಲಾ ಸ್ವಾಮಿ.” ಕೀರ್ತನೆ 41: 1-3.MBK 28.4

  ದೇವರ ಮಕ್ಕಳ ಸೇವಾರ್ಥವಾಗಿ ತಮ್ಮ ಜೀವವನ್ನು ಆತನಿಗೆ ಒಪ್ಪಿಸಿಕೊಟ್ಟಿರುವವರು ಪ್ರಪಂಚದ ಎಲ್ಲಾ ಮೂಲಸಂಪತ್ತಿಗೂ ನಿಯಾಮಕನಾದ ದೇವರೊಡನೆ ಭಾಗಿಗಳಾಗಿದ್ದಾರೆ. ಅವರ ಜೀವ್ಯವು ದೇವರ ಜೀವ್ಯದೊಡನೆ ನಿರ್ವಿಕಲ್ಪವಾಗದ ವಾಗ್ದಾನಗಳೆಂಬ ಅಪರಂಜಿಯ ಸರಪಣಿಯಿಂದ ಬಂಧಿತವಾಗಿದೆ. ಯೆಹೋವನು ಅವರನ್ನು ಆಪತ್ಕಾಲದಲ್ಲಿಯೂ ಸಹಾಯ ಶನ್ಯರಾಗರುವಾಗಲೂ ಕೈ ಬಡನು. “ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನೂ ನೀಗಿಸುವನು.” ಫಿಲಿಪ್ಪಿಯ 4:19. ಮತ್ತು ಅಂತ್ಯದಿನಗಳಲ್ಲಿ ಕರುಣೆಯುಳ್ಳವರು ಕನಿಕರವುಳ್ಳ ರಕ್ಷಕನ ಕರುಣೆಯಲ್ಲಿ ಆಶ್ರಯ ಹೊಂದಿ ನಿತ್ಯನಿವಾಸಕ್ಕೆ ಸೇರಿಸಲ್ಪಡವರು.MBK 29.1