Loading...
Larger font
Smaller font
Copy
Print
Contents
ಪರ್ವತ ಪ್ರಸಂಗ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    “ಚಿಂತೆ ಮಾಡಬೇಡಿರಿ.”

    ನಿಮಗೆ ಪ್ರಾಣಕೊಟ್ಟವನು ಅದರ ಸಂರಕ್ಷಣೆಗೆ ಆಹಾರದ ಅವಶ್ಯಕತೆಯನ್ನೂ ಅರಿತಿದ್ದಾನೆ. ದೇಹವನ್ನು ಸೃಷ್ಟಿಸಿದಾತನು ನಿಮ್ಮ ಉಡುಪಿನ ಅವಶ್ಯಕತೆಯನ್ನು ಅರಿಯದವನಾಗಿಲ್ಲ. ಎಷ್ಟೋ ದೊಡ್ಡ ವರದಾನಗಳನ್ನು ದಯಪಾಲಿಸಿರುವಾತನು ಅದರ ಪರಿಪೂರ್ಣತೆಗೆ ಅವಶ್ಯಕವಾದುದನ್ನು ದಯಪಾಲಿಸದೆ ಇರುವನೇ?MBK 97.3

    ಯೇಸುವು ತನ್ನ ಉಪದೇಶವನ್ನು ಕೇಳುತ್ತಿದ್ದವರಿಗೆ ತಮ್ಮ ಪೋಷಣೆಯ ಹೊರೆಯ ಯೋಚನೆಯೇ ಇಲ್ಲದೆ ಸ್ತುತಿಗೀತೆಗಳನ್ನು ಇಂಚರದಿಂದ ಹಾಡುತ್ತಿದ್ದ ಪಕ್ಷಿಗಳನ್ನು ತೋರಿಸಿ “ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜದಲ್ಲಿ ತೊಂಬಿಟ್ಟುಕೊಳ್ಳುವುದಿಲ್ಲ; ಆದಾಗ್ಯೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗ ಳನ್ನು ಸಾಕಿ ಸಲಹುತ್ತಾನೆ.” ಎಂದು ಹೇಳಿ “ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ?” ಎಂದು ಕೇಳುತ್ತಾನೆ.MBK 97.4

    ಪರ್ವತದ ತಪ್ಪಲುಗಳೂ ಮತ್ತು ಬೈಲುಗಳೂ ಸುಗಂಧಪುರಿತ ಕುಸುಮಗಳಿಂದ ಶೋಭಿಸುತ್ತಿದ್ದುವು, ಪ್ರಾತಃಕಾಲದಲ್ಲಿ ಅವುಗಳ ಕೋಮಲತೆಯನ್ನು ಅವರಿಗೆ ತೋರಿಸುತ್ತಾ ಆತನು ಹೇಳಿದ್ದೇನಂದರೆ, “ಅಡವಿಯ ಹೂಗಳು ಬೆಳೆಯುವ ರೀತಿಯನ್ನು ಯೋಚಿಚಿ ತಿಳಿಯಿರಿ.” ಗಿದಗಳ ಮತ್ತು ಹೂವುಗಳ ಅಲಂಕಾರಯುತವಾದ ರೀತಿಯನ್ನೂ ಮತ್ತು ಕೋಮಲ ವರ್ಣಗಳನ್ನೂ ಮಾನವನ ಚಾತುರ್ಯದಿಮ್ದ ಚಿತ್ರಿಸಬಹುದು; ಆದರೆ ಒಂದು ಹೂವಿಗಾದರೂ ಅಥವಾ ಹುಲ್ಲಿನ ಒಂದು ಎಸಳಿಗಾದರೂ ಯಾವ ಕಲೆಯು ತಾನೆ ಜೀವವನ್ನು ಕೊಡಲಾದೀತು? ಮಾರ್ಗಗಳ ಇರ್ಕಡೆಗಳಲ್ಲೂ ಅರಳಿ ನಿಂತಿರುವ ಹೂಗಳೆಲ್ಲಾ ಉನ್ನತದಲ್ಲಿ ನಕ್ಷತ್ರಮಂಡಲವನ್ನು ಸ್ಥಾಪಿಸಿದ ಆ ಶಕ್ತಿಗೇ ಶರಣು ಹೋಗುತ್ತವೆ. ಸೃಷ್ಟಿಯ ಎಲ್ಲಾ ವಸ್ತುಗಳಲ್ಲೂ ಒಂದೇ ಜೀವನಾಡಿಯು ದೇವರ ಮಹಾ ಹೃದಯದಿಂದಲೇ ಚಲಿಸುತ್ತದೆ. ಅಡವಿಯ ಹೂಗಳೆಲ್ಲಾ ಆತನ ಸ್ವಹಸ್ತದಿಂದಲೇ ಭೂಲೋಕದ ಅರಸರಿಗೂ ಇಲ್ಲದ ವೈಭವದಿಂದ ತೊಡಿಸಲ್ಪಟ್ಟಿವೆ. “ಎಲೈ ಅಲ್ಪವಿಶ್ವಾಸಿಗಲೇ ಈ ಹೊತ್ತು ಇದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವವನಲ್ಲವೇ?” MBK 98.1

    ಅಡವಿಯ ಹೂಗಳನ್ನು ಸೃಜಿಸಿ, ಆಕಾಶದ ಪಕ್ಷಿಗಳಿಗೆ ಇಂಪಾದ ಗನವನ್ನು ಅನುಗ್ರಹಿಸಿದಾತನೇ “ಅಡವಿಯ ಹೂವುಗಳನ್ನು ಯೋಚಿಸಿ ತಿಳಿಯಿರಿ,” “ಹಕ್ಕಿಗಳನ್ನು ನೋಡಿರಿ” ಎಂದು ಹೇಳುತ್ತಾನೆ. ಪ್ರಕೃತಿಯ ಸೊಬಗಿನಿಂದ ದೇವರ ಜ್ಞಾನವನ್ನು ಶಾಲೆಉಅ ಮಹಾ ಪಂಡಿತರಿಗಿಂತಲೂ ಹೆಚ್ಚಾಗಿ ಕಲಿಯಬಹುದು. ಹೂವುಗಳ ಒಂದೊಂದು ಎಸಳಿನ ಮೇಲೂ ದೇವರು ಒಂದು ಸುವಿಶೇಷವನ್ನು ನಿಮಗಾಗಿ ಬರೆದಿದ್ದಾನೆ,- ಹೃದಯವು ಅಪನಂಬಿಕೆ, ಸ್ವಾರ್ಥತೆ ಮತ್ತು ಕ್ರಮೇಣ ಸವೆದು ಹೋಗುವ ಚಿಂತೆಗಳನ್ನು ತ್ಯಜಿಸಿದಾಗ ಮಾತ್ರವೇ ಓದಲು ಸಾಧ್ಯವಾದ ಭಾಷೆಯಲ್ಲಿ ಬರೆಯಲ್ಪಟ್ತಿದೆ. ಇಂಪಾಗಿ ಹಾಡುವ ಪಕ್ಷಿಗಳನ್ನೂ, ಮತ್ತು ಕೋಮಲ ಪುಷ್ಪಗಳನ್ನೂ ಯಾಕೆ ಕೊಟ್ಟಿದ್ದಾನೆ, ನಿಮ್ಮ ಜೀವನದ ಹಾದಿಯನ್ನು ಪ್ರಕಾಶಗೊಳಿಸಿ ಉಲ್ಲಾಸಭರಿತವಾಗಿರುವಂತಯೇ ತಂದೆಯ ಎದೆಯಿಂದ ತುಂಬಿ ಹೊರಸೂಸುವ ಪ್ರೀತಿಯಿಂದಲೇ ಅಲ್ಲವೇ? ಹೂವುಗಳೂ ಪಕ್ಷಿಗಳೂ ಇಲ್ಲದೆ ನಿಮ್ಮ ಜೀವನಕ್ಕೆ ಬೇಕಾದುವೆಲ್ಲಾ ಇರಬಹುದಿತ್ತು. ಆದರೆ ಬರೇ ಜೀವನಕ್ಕೆ ಮಾತ್ರ ಸಾಕಾಗುವುದರಲ್ಲಿ ದೇವರು ತೃಪ್ತಹೊಂದಲಿಲ್ಲ, ಆತನು ಭೂಮಿಯನ್ನೂ, ವಾಯು ಮಂಡಲವನ್ನೂ ಮತ್ತು ಆಕಾಶವನ್ನು ಸೌಂದರ್ಯದ ಬೀಡಾಗಿಸಿ ಅವುಗಳ ಮೂಲಕ ನಿಮಗೆ ಆತನ ಪ್ರೀತಿಯ ಸಂರಕ್ಷಣೆಯನ್ನು ಪ್ರಚುರಪಡಿಸಲಿಕ್ಕಾಗಿಯೇ ಉಂಟುಮಾಡಿದನು. ಸೃಷ್ಟಿಯ ವಸ್ತುಗಳ ಸೊಬಗೆಲ್ಲಾ ಆತನ ಮಹಿಮೆಯಿಂದ ಪ್ರಕಾಶಿಸುವ ಒಂದು ಕಿರಣವಾಗಿದೆಯಷ್ಟೆ. ನಿಮ್ಮ ಆನಂದ, ಉಲ್ಲಾಸಕ್ಕಾಗಿ ಪ್ರಕೃತಿಯ ವಸ್ತುಗಳಲ್ಲಿ ತನ್ನ ಅಸಮಾನ ಚಾತುರ್ಯವನ್ನು ವಿನಿಯೋಗಿಸಿರಲು, ನಿಮಗೆ ಅವಶ್ಯವಾದ ಬೇರೆಲ್ಲಾ ಆಶೀರ್ವಾದಗಳನ್ನೂ ಅನುಗ್ರಹಿಸುವನೆಂಬುದನ್ನು ನೀವು ಸಂದೇಹಿಸಬಹುದೇ?MBK 98.2

    “ಹೂವುಗಳನ್ನು ಯೋಚಿಸಿ ತಿಳಿಯಿರಿ.” ಸುರ್ಯನ ಹೊಳಪಿಗೆ ತನ್ನ ಎಸಳುಗಳನ್ನು ತೆರೆಯುವ ಪ್ರತಿಯೊಂದು ಪುಷ್ಪವೂ, ನಕ್ಷತ್ರಗಳಿಗೂ ಮಾರ್ಗದರ್ಶಕವಾದ ಅದೇ ಮಹಾ ಆಜ್ಞೆಗೆ ವಿಧೇಯವಾಗುತ್ತವೆ, ಅವುಗಳ ಜೀವಮಾನವು ಎಷ್ಟು ಸಾಧಾರಣವೂ, ಸೌಂದರ್ಯವು ಮತ್ತು ಇನಿದಾಗಿಯೂ ಇದೆ ನೋಡಿರಿ! ಈ ಹೂವುಗಳ ಮೂಲಕವಾಗಿ, ದೇವರು ನಮ್ಮ ಗಮನವನ್ನು ಕ್ರಿಸ್ತನಂಥ ಸ್ವಭಾವದ ಸೊಬಗಿಗೆ ತಿರುಗಿಸುವವನಾಗಿದ್ದಾನೆ. ಪುಷ್ಪಗಳಿಗೆ ಇಂಥಾ ಸೌಂದರ್ಯವನ್ನು ತೊಡಿಸಿರುವಾತನು ಆತ್ಮವನ್ನು ಕ್ರಿಸ್ತನ ಸೌಜನ್ಯವೆಂಬ ಉಡುಪಿನಿಂದ ತೊಡಿಸಲು ಎಷ್ಟೋ ಕಾತುರನಾಗಿರುವನಲ್ಲವೆ.MBK 99.1

    ಅಡವಿಯ ಹೂಗಳು ಬೆಳೆಯುವುದನ್ನು ಯೋಚಿಸಿ ತಿಳಿಯಿರಿ ಎಂದು ಕ್ರಿಸ್ತನು ಹೇಳಿದನು; ಗಿಡಗಳು ಸೌಂದರ್ಯದಿಮ್ದಲು ಸುವಾಸನೆಯಿಂದಲೂ ಕೂಡಿ ಶೀತವೂ ಕಪ್ಪೂ ಆದ ಭೂಮಿಯಿಂದ, ಅಥವಾ ನದಿಯ ದಡದಲ್ಲಿರುವ ಮಣ್ಣಿನಿಂದ ಹೇಗೆ ಮೊಳೆಯುತ್ತವೆ ಎಂದು ಯೋಚಿಸಿರಿ. ಕರಡಾದ ಕಂದು ಬಣ್ಣದ ತಾವರೆಯ ಗೆಡ್ಡೆಯ ಸೌಂದರ್ಯಗಳನ್ನು ಯಾರು ತಾನೆ ಕನಸ್ಸಿನಲ್ಲಾದರೂ ಎಣಿಸಿದ್ದರ್? ಆದರೆ ಅದರಲ್ಲಿ ಹುದುಗಿರುವ ದೇವರ ಜೀವವು ಆತನ ಧ್ವನಿಗೆ ಮಳೆಯಲ್ಲಿಯೂ ಸೂರ್ಯರಶ್ಮಿಯಲ್ಲಿಯೂ ವಿಕಸಿಸುತ್ತದೆ. ಈ ಸೊಬಗನ್ನೂ ಲಾವಣ್ಯವನ್ನೂ ನೋಡಿ ಮನುಷ್ಯರು ಆಶ್ಚರ್ಯ ಪಡುತ್ತಾರೆ. ಹೀಗೆಯೇ, ಮಳೆ ಮತ್ತು ಸೂರ್ಯ ಪ್ರಭೆಯಂತೆ ಉಚಿತ ವರವಾದ ಆತನ ಕೃಪೆಯ ಪ್ರೇರಣೆಗೆ ಅಧೀನವಾಗುವ ಮಾನವನ ಆತ್ಮದಲ್ಲಿಯೂ ದೇವರ ಜೀವವು ಪ್ರಕಟವಾಗಿ, ಎಲ್ಲರಿಗೂ ಆಶೀರ್ವಾದವಾಗಿ ಪರಿಣಮಿಸುವುದು. ಹೂವುಗಳನ್ನು ಸೃಷ್ಟಿಸಿದ್ದು ದೇವರ ವಾಕ್ಯವೇ, ಅದೇ ವಾಕ್ಯವು ನಿಮ್ಮಲ್ಲಿ ಆತನ ಆತ್ಮದ ರಮ್ಯತೆಯನ್ನುಂಟುಮಾಡುತ್ತದೆ.MBK 99.2

    ದೇವರ ಆಜ್ಞೆಯು ಪ್ರೀತಿಯ ಆಜ್ಞೆಯಾಗಿದೆ. ಸ್ವಾರ್ಥಸಾಧನೆಗಾಗಿ ಅಗೆಯುತ್ತಲೂ, ಕಟ್ಟುತ್ತಲೂ, ದುಡಿಯುತ್ತಲೂ ನೂಲುತ್ತಲೂ ಇರಬೇಕೆಂದಲ್ಲ, ಆದರೆ ಹೂವಿನಂತೆ ಪ್ರೀತಿಯ ಸೇವೆಯಿಂದ ಇತರರ ಜೀವನವನ್ನು ಆನಂದಪಡಿಸಲಿಕ್ಕಾಗಿಯೇ ನಿಮ್ಮನ್ನು ಭೂಮಿಯ ಮೇಲಿರಿಸಿದ್ದಾನೆಂಬುದನ್ನು ನಿಮಗೆ ಕಲಿಸಲು ತನ್ನ ಸೊಬಗಿನಿಂದ ನಿಮ್ಮನ್ನು ಆವರಿಸಿದ್ದಾನೆ.MBK 99.3

    ತಂದೆತಾಯಿಗಳೇ, ನಿಮ್ಮ ಮಕ್ಕಳು ಹೂವುಗಳಿಂದ ಪಾಠಕಲಿಯುವಂತೆ ಬಿಡಿರಿ, ತೋಟಗಳಿಗೂ ಹೊಲಗಳಿಗೂ ಮತ್ತು ಮರಗಳಡಿಗೂ ಕರೆದೊಯ್ದು, ದೇವರ ಪ್ರೀತಿಯ ಸುವಿಶೆಷವನ್ನು ಅವರು ಅರಿತುಕೊಳ್ಳುವಂತೆ ಕಲಿಸಿರಿ. ಪಕ್ಷಿ, ಹೂ, ಮತಗಳೊಡನೆ ಆತನ ಧ್ಯಾನವನ್ನೂ ಸೇರಿಸಿರಿ. ಪ್ರತಿಯೊಂದು ಲಾವಣ್ಯವೂ, ಸೌಂದರ್ಯವೂ ಆದ ವಸ್ತುಗಳಲ್ಲಿಯೂ ಅವರಿಗೋಸ್ಕರವಾದ ಆತನ ಪ್ರೀತಿಯ ಪ್ರಕಟನೆಯನ್ನು ಮನಗಾಣುವಂತೆ ಕಲಿಸಿರಿ. ನಿಮ್ಮ ಸ್ವಧರ್ಮವನ್ನು ಅದರ ಮನೋಹರತೆಯೊಡನೆ ಅವರಿಗೆ ಸಮರ್ಪಕ ರೀತಿಯಲ್ಲಿ ಸೂಚಿಸಿರಿ. ನಿಮ್ಮ ತುಟಿಗಳಲ್ಲಿ ಕರುಣೆಯ ಆಜ್ಞೆಉ ನೆಲಸಿರಲಿ.MBK 100.1

    ದೇವರ ಮಹಾ ಪ್ರೀತಿಯಿಂದಲೇ ನಮ್ಮ ಸ್ವಭಾವಗಳು ಮಾರ್ಪಟ್ಟು ಆತನ ಸ್ವಭಾವಗಳೊಡನೆ ಹೊಂದಿಕೆಯಾಗುವುವೆಂದು ಮಕ್ಕಳಿಗೆ ಕಲಿಸಿರಿ. ಹೂವುಗಳ ಸೌಂದರ್ಯದಂತೆ ಅವರ ಜೀವನವೂ ಸೌಂದರ್ಯಯುತವಾಗಿರಬೇಕೆಂದು ಆತನು ಇಚ್ಛಿಸುತ್ತಾನೆಂದು ಅವರಿಗೆ ಬೋಧಿಸಿರಿ. ಅವರು ಸುವಾಸನೆಯುಳ್ಳ ಹೂಗಳನ್ನು ಕೂಡಿಸುವಾಗ, ಆಹೂವುಗಳನ್ನು ಉಂಟುಮಾಡಿದಾತನು ಅವುಗಳಿಗಿಂತಲೂ ಮನೋಹರನಾಗಿದ್ದಾನೆಂದು ಬೋಧಿಸಿರಿ. ಹೀಗೆ ಅವರ ಹೃದಯಲತೆಯು ಆತನನ್ನು ಆವರಿಸುವುದು. “ಸರ್ವಾಂಗ ಸುಂದರನಾದ” ಆತನು ಅವರಿಗೆ ಅನುದಿನದ ಒಡನಾಡಿಯೂ ಮತ್ತು ಸಲಿಗೆಯ ಮಿತ್ರನೂ ಆಗುವನು, ಮತ್ತು ಅವರ ಜೀವ್ಯವು ಆತನ ಪರಿಶುದ್ಧತೆಯ ಪುತ್ಥಳಿಗೆ ಮಾರ್ಪಡುವುದು.MBK 100.2