Loading...
Larger font
Smaller font
Copy
Print
Contents
ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ 04. - ಕ್ರಿಸ್ತನ ಮೊದಲನೆ ಬರುವಣ

    ಆನಂತರ ನನ್ನನ್ನು, ಯೇಸು ಮಾನವಾವತಾರ ತಾಳುವ, ಮಾನವನಷ್ಟು ದೀನನಾಗುವ, ಸೈತಾನನ ಶೋದನೆಗೆ ಒಳಗಾಗುವ ಕಾಲಾವಧಿಗೆ ತೆಗೆದುಕೊಂಡು ಹೋಗಲಾಯಿತು,GCKn 36.1

    ಆತನ ಜನನವು ಕರುಹಟ್ಟಿಯಲ್ಲಿ ಸಂಭವಿಸಿ, ಗೋದಲಿಯಲ್ಲಿ ಪೋಪಿಸಲ್ಪಟ್ಟು, ಈ ಲೋಕದ ಯಾವ ವೈಭವವಿಲ್ಲದಿದ್ದರೂ ಇತರ ಮಾನವಪುತ್ರರಿಗಿಂತ ಮಿಗಿಲಾದದ್ದೆಂದು ಎಣಿಸಲ್ಪಟ್ಟಿತು. ಪರಲೋಕದ ದೂತರು ಯೇಸುವಿನ ಬರುವಣವನ್ನು ಕುರುಬರಿಗೆ ತಿಳಿಸುವಾಗ ದೇವರ ಪ್ರಭೆ ಮತ್ತು ಮಹಿಮೆ ಅವರನ್ನು ಸುತ್ತುವರೆದಿತ್ತು. ಪರಲೋಕ ಗಣವು ತಮ್ಮ ತಂತಿವಾದ್ಯಗಳಿಂದ ದೇವರನ್ನು ಸ್ತುತಿಸಿದರು. ಯೇಸುವಿನ ಜನನದಿಂದ ಪಾಪಕ್ಕೆ ಬಿದ್ದ ಈ ಲೋಕದ ವಿಮೋಚನಾ ಕಾರ್ಯವನ್ನೂ, ಆತನ ಮರಣದಿಂದ ಸಮಾಧಾನ, ಸಂತೋಷ ಮತ್ತು ಮನುಷ್ಯರಿಗೆ ನಿತ್ಯಜೀವ ಉಂಟಾಗುವುದನ್ನು ವಿಜಯೋತ್ಸಾಹದಿಂದ ಘೋಷಿಸಿದರು. ಈ ಪುತ್ರನ ಜನನವನ್ನು ತಂದೆ ಮಾನ್ಯಮಾಡಿದರು. ದೂತಗಣಗಳು ಆರಾಧಿಸಿದರು.GCKn 36.2

    ಯೇಸವಿನ ದೀಕ್ಷಾಸ್ನಾನದ ಘಟನೆಯ ಸಂರ್ದಭದಲ್ಲಿ ದೂತಗಣಗಳು ಹಾರಡುತ್ತಿದ್ದರು. ಪವಿತ್ರಾತ್ಮನು ಪಾರಿವಾಳದ ದೇಹಕಾರವಾಗಿ ಆತನ ಮೇಲೆ ಇಳಿದನು. ದೇವಪ್ರಭೆ ಆತನ ಮೇಲೆ ಸುರಿಯಿತು ಸುತ್ತಲಿದ್ದ ಜನಸಮೂಹವು ಆತನನ್ನೇ ದಿಟ್ಟಿಸುತ್ತಾ ಅತ್ಯಾಶ್ಚರ್ಯಗೊಂಡರು. “ನೀನು ಪ್ರಿಯನಾಗಿರುವ ತನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ’ಎಂಬ ದೇವವಾಣಿಯು ಜನಸಮೂಹಕ್ಕೆ ಕೇಳಿಸಿತು.GCKn 36.3

    ಯೋರ್ದನಿನಲ್ಲಿ ಸ್ನಾನಮಾಡಿಸಿಕೊಂಡವನು ರಕ್ಷಕನೇ ಎಂಬುದು ಯೋಹಾನನಿಗೆ ತಿಳಿದಿರಲಿಲ್ಲ ಆದರೆ ದೇವರ ಕುರಿಮರಿಯು ಈತನೇ ಎಂದು ಅರ್ಥಮಾಡಿಕೊಳ್ಳುವ ಸೂಚನೆಯನ್ನು ದೇವರು ವಾಗ್ದಾನ ಮಾಡಿದ್ದರು. ವಾಗ್ದಾನದ ಮೇರೆಗೆ ಪಾರಿವಾಳದಂತೆ ಇಳಿದು ಬಂದು ದಿವ್ಯಪ್ರಭೆ ಸುತ್ತ ಮುಸುಕಿತು. ಯೋಹಾನನು ಕೈಚಾಚಿ ಯೇಸುವಿನ ಕಡೆಗೆ ಬೊಟ್ಟುಮಾಡಿ ದೊಡ್ಡ ಸ್ವರದಿಂದ ‘ಅಗೋ, ದೇವರ ಕುರಿಮರಿ, ಲೋಕದ ಪಾಪವನ್ನು ನಿವಾರಣೆಮಾಡುವವನು” ಎಂದನು.GCKn 37.1

    ಯೋಹಾನನು ತನ ಶಿಷ್ಯರಿಗೆ, ಈತನೇ ವಾಗ್ದಾನ ಮಾಡಿರುವ ಮೆಸ್ಸೀಯನು. ಈ ಲೋಕದ ರಕ್ಷಕನು ಎಂದು ಸೂಚಿಸಿದನು. ಈ ತನ್ನ ಕಾರ್ಯವು ಮುಗಿಯುತ್ತಾ ಬರಲು ಶಿಷ್ಯರಿಗೆ, ಮಹಾಬೋದಕನಾದ ಯೇಸುವನ್ನು ಹಿಂಭಾಲಿಸಿರಿ ಎಂದನು. ಯೋಹಾನನ ಜೀವನವು ಸುಖವಾಗಿರಲಿಲ್ಲ. ಅದರಲ್ಲಿ ಬಹು ಸಂಕಟವೂ, ತ್ಯಾಗವು ತುಂಬಿತ್ತು. ಕ್ರಿಸ್ತನ ಮೊದಲ ಬರುವಣವನ್ನು ಪ್ರಕಟಪಡಿಸುವ ಕಾರ್ಯವನ್ನು ಮಾಡಿದನು. ಅತನ [ ಕ್ರಿಸ್ತನ] ಯಾವ ಅದ್ಬುತಾಕರ್ಯವನ್ನು.GCKn 37.2

    ಇಲ್ಲವೆ ದಿವ್ಯಬಲ ಪ್ರದರ್ಶನವನ್ನು ಕಾಣುವ ಅನುಮತಿ ಅವನಿಗಿರಲ್ಲಿಲ್ಲ. ಯೇಸುವು ಪ್ರಬೋಧಕನಾಗಿ ನಿಲ್ಲುವಾಗ ತಾನು ಮರಣಿಸುವೆನೆಂದು ಆತನಿಗೆ ತಿಳಿದಿತ್ತು. ಅವನ ಸ್ವರವು ಅರಣ್ಯದಲ್ಲಿ ಮಾತ್ರವೇ ಹೊರೆತು ಬೇರೆಲ್ಲಿಯೂ ಕೇಳಿಸಲಿಲ್ಲ. ತಂದೆಯ ಕುಟುಂಬದವರೊಡನೆ ಅಥವಾ ಸಮಾಜದಲ್ಲಿ ಬೆರೆತು ಸಂತೋಷ ಪಡೆದೆ, ತನಗೆ ನೇಮಿಸಲ್ಪಟ್ಟ ಕಾರ್ಯವನ್ನು ಪೂರ್ಣಗೊಳಿಸಲು ಏಕಾಂಗಿಯಾಗಿ ಜೀವಿಸಿದನು. ಈ ಅದ್ಬುತ ಪ್ರವಾದಿಯ ಸ್ವರವನ್ನು ಕೇಳಲು ಜನಸಮೂಹವು ನಗರ ಹಳ್ಳಿಗಳ್ಳಿಂದ ಅರಣ್ಯಕ್ಕೆ ಹೋಗುತ್ತಿತ್ತು. ಯೋಹಾನನು ಮರದ ಬುಡಕ್ಕೆ ಕೊಡಲಿ ಹಾಕಿದನು. ಯಾವ ಪರಿಣಾಮದ ಬಗೆಗೂ ಭಯಪಡದೆ ಪಾಪವನ್ನು ಆಕ್ಷೇಪಿಸಿ ದೇವಕುರಿಮರಿಯ ದಾರಿಯನ್ನು ಸಿದ್ದಪಡಿಸಿದನು.GCKn 37.3

    ಯೋಹಾನನ ಪ್ರಬಲವಾದ ಮನಚುಚ್ಚುವ ಸಾಕ್ಷಿಯ ಬಗೆಗೆ ಕೇಳಿದ ಹೆರೋದನಿಗೆ ಆಸಕ್ತಿಯುಂಟಾಗಿ, ಆತನ ಶಿಷ್ಯನಾಗಲು ತಾನು ಏನುಮಾಡಬೇಕು ಎಂದು ತಿಳಿಯಲಪೇಕ್ಷಿಸಿದನು. ಈ ಹೆರೋದನು ತನ್ನ ಸಹೋದರ ಜೀವಂತನಾಗಿರುವಾಗಲೇ ಅವನ ಹೆಂಡತಿಯನ್ನು ವಿವಾಹವಾಗಬೇಕೆಂದಿರುವ ವಿಷಯವು ಯೋಹಾನಿಗೆ ತಿಳಿದುಬಂದಿದ್ದಿತು. ಇದು ಅನ್ಯಾಯವೆಂದು ಪ್ರಾಮಾಣಿಕವಾಗಿ ತಿಳಿಸಿದನು. ಆದರೆ ಈ ತ್ಯಾಗಮಾಡಲು ಹೆರೋದನಿಗೆ ಮನಸ್ಸಿಲ್ಲದೆ ಸಹೋದರನ ಪತ್ನಿಯನು ವಿವಾಹವಾಗಿ, ಅವಳ ಆಗ್ರಹಕ್ಕೆ ಮಣಿದು ಯೋಹಾನನನ್ನು ಹಿಡಿಸಿ ಸೆರೆಯಲ್ಲಿಟ್ಟನು.ಅಲ್ಲದೆ ಮತ್ತೆ ಅವನನು ಬಿಡುಗದೆ ಮದಡಬೇಕೆಂದು ಹೆರೋದನು ಸಂಕಲ್ಪಿಸಿದನು.ಈ ಹದ್ದುಬಸ್ತಿನಲ್ಲಿರುವ ಸಮಯದಲ್ಲಿಯೇ ಯೋಹಾನನು ತನ್ನ ಶಿಷ್ಯರ ಮೂಲಕ ಯೇಸುವಿನ ಮಹಾಕಾರ್ಯ, ಕೃಪಾಪೂರ್ಣ ಬೋಧನೆಗಳ ಬಗೆಗೆ ತಿಳಿದುಕೊಂಡನು. ಶಿಷ್ಯರು ತಾವು ಕಂಡು ಕೇಳಿದುದನ್ನು ತಿಳಿಸಿ ಅವನನ್ನು ಸಂತೈಸುತ್ತಿದರು. ಹೆರೋದನ ಪತ್ನಿಯ ಪ್ರಭಾವದಿಂದ ಯೋಹಾನನ ಶಿರಚ್ಛೇದನವಾಯಿತು.GCKn 38.1

    ಯೇಸುವನು ಹಿಂಬಾಲಿಸಿದ ಶಿಷ್ಯರಾದರೋ ಅತನ ಅದ್ಬುತ ಕಾರ್ಯಗಳನ್ನು ಕಾಣುವುದರಲ್ಲಿ, ಅತನ ತುಟಿಗಳಿಂದ ಬರುವ ಸಂತೈಕೆಯ ವಾಕ್ಯಗಳನ್ನು ಕೇಳುವುದರಲ್ಲಿ ಕನಿಷ್ಠ ಸಾಕ್ಷಿಗಳಾಗಿದ್ದು ಸ್ನಾನಿಕನಾದ ಯೋಹಾನಗಿಂತ ಭಾಗ್ಯವಂತರಾದರು. ಅಂದರೆ ಅವರು ಧನ್ಯರೂ, ಮಾನ್ಯರಾಗಿ ತಮ್ಮ ಜೀವಿತಕಾಲದಲ್ಲಿ ಹೆಚ್ಚಾಗಿ ಉಲ್ಲಾಸಗೊಂಡರು.GCKn 39.1

    ಯೇಸುವಿನ ಮೊದಲನೇ ಬರುವಣವನ್ನು ಸಾರಲು ಯೋಹಾನನು ಎಲೀಯನ ತೆರದಿ ಬಲದಿಂದಲೂ ಆತ್ಮದಿಂದಲೂ ತುಂಬಿದವನಾಗಿ ಬಂದನು. ಇದೇ ರೀತಿ ಕೊನೆಯ ಕಾಲದಲ್ಲಿ ಎಲೀಯನಂತಹ ಆತ್ಮವನ್ನು ಬಲವನ್ನೂ ಪಡೆದು ಬಂದ ಯೋಹಾನನ್ನು ಪ್ರತಿನಿಧಿಸುತ್ತಾ ಯೇಸುವಿನ ಎರಡನೇ ಬರುವಣವನ್ನು ಮಹಾರೌದ್ರದ ದಿನಗಳಲ್ಲಿ ಪ್ರಕಟಿಸುವವರನ್ನು ನನಗೆ ತೋರಿಸಲಾಯಿತು.GCKn 39.2

    ಸ್ನಾನಿಕನಾದ ಯೋಹಾನನಿಂದ ಯೋರ್ದನ್ ಹೊಳೆಯಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡ ಯೇಸುವನ್ನು ಪಿಶಾಚನಿಂದ ಶೋದನೆ ಗೊಳಗಾಗುವಂತೆ ಆತ್ಮವು ಅಡವಿಗೆ ನೆಡೆಸಿತು. ವಿಶೇಷವಾದ ಆ ಘೋರ ಶೋಧನೆಯ ದೃಶ್ಯಕ್ಕೆ ಪವಿತ್ರಾತ್ಮನು ಆತನನ್ನು ಸಿಲುಕಿಸಿದನು. ಆ ನಲವತ್ತು ದಿವಸ ಅಡವಿಯಲ್ಲಿ ನಡಿಸಲ್ಪಡುತ್ತಾ ಸೈತಾನನಿಂದ ಶೋಧಿಸಲ್ಪಟ್ಟನು. ಆ ದಿವಸಗಳಲ್ಲಿ ಆತನು ಏನೂ ತಿನ್ನಲಿಲ್ಲ. ಯೇಸುವಿನ ಮಾನವ ಪ್ರಕೃತಿ ಮುದುಡಿಹೋಗುವಷ್ಟು ಅಹಿತಕರ ಪರಿಸ್ಥಿತಿ ಅತನನು ಆವರಿಸಿತು. ನಿರ್ಜನ ಸ್ಥಳದಲ್ಲಿ ಏಕಾಂಗಿಯಾಗಿ ಕಾಡುಮೃಗಗಳೂಂದಿಗೊ ಮತ್ತು ಪಿಶಾಚನೊಂದಿಗೂ ಜೀವಿಸಿದನು. ದೇವಕುಮಾರನು ಉಪವಾಸ ಸಂಕಟಗಳಿಂದ ಬಿಳಿಚಿಕೊಂಡು ಕೃಶವಾಗಿದ್ದುದನ್ನು ನಾನು ಕಂಡೆನು. ಆದರೆ ಆತನು ಬಂದ ಕಾರ್ಯವನ್ನು ಪರಿಪೂರ್ಣಗೊಳಿಸವ ಅವಧಿ ನಿಶ್ಚಿತವಾಗಿತ್ತು.GCKn 39.3

    ದೇವಕುಮಾರನು ಮಾನವನಾಗಿ ಧೀನಾವಸ್ಥೆಗಿಳಿದಿರುವ ಸಮಯವನ್ನು ಉಪಯೋಗಿಸಿಕೊಂಡು ಸೈತಾನನು ಆಕ್ರಮಣ ಮಾಡಿ ಪರಿಪರಿಯಾದ ಶೋಧನೆಗೆ ಒಳಗಾಗಿಸಿ ಜಯಹೊಂದಲು ಸಿದ್ದನಾದನು. “ನೀನು ದೇವರ ಮಗನಾಗಿದ್ದರೆ ಈ ಕಲ್ಲುರೊಟ್ಟಿಯಾಗುವಂತೆ ಅಪ್ಪಣೆಕೊಡು” ಎನ್ನುತ್ತಾ, ಯೇಸುವು ತನ್ನ ದೈವಬಲ ಪ್ರಯೋಗಿಸಿ ತಾನೇ ಮೆಸ್ಸೀಯನೆಂದುಸಾಬೀತು ಪಡಿಸಿಕೊಳ್ಳಲು ತಗ್ಗಿ ನಡೆಯಲಿ ಎಂದು ಶೋಧಿಸಿದನು. ಯೇಸುವು ಮೃದವಾಗಿ “ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವುದಿಲ್ಲ ಎಂದು ಬರೆದದೆ” ಎಂದು ಉತ್ತರ ಕೊಟ್ಟನು. ಯೇಸುವು ದೇವಕುಮಾರನಾಗಿದ್ದುದರ ಬಗ್ಗೆ ಸೈತಾನನು ಕಲಹಕ್ಕಾಗಿ ಹೊಂಚುಹಾಕುತ್ತಿದನು.ಆತನ ನಿರ್ಬಲಾವಸ್ಥೆಯನ್ನು ಸಂಕಟವನ್ನು ಹೋಲಿಸಿ ತಾನು ಯೇಸುವಿಗಿಂತ ಪ್ರಬಲನೆಂದು ಕೊಚ್ಚಿಕೊಂಡನು, “ನೀನು ಪ್ರಿಯನಾಗಿರುವ ನನ್ನ ಮಗನು , ನಿನ್ನನ್ನು ನಾನು ಮೆಚ್ಚಿದ್ದೇನೆ ” ಎಂಬ ದೇವವಾಣಿಯೇ ಈ ಸಂಕಟದ ಸಮಯದಲ್ಲಿ ಕುಸಿದು ಬೀಳದಂತೆ ತಡೆಯಲು ಸಾಕಾಗಿಯಿತ್ತು. ಯೇಸುವು ತನ್ನ ಸುವಾರ್ತೆಸೇವಾ ಕಾಲದಲೆಲ್ಲಾ ತನ್ನ ಬಲವನ್ನೂ, ತಾನೇ ಈ ಲೋಕರಕ್ಷಕನೆಂದೂ ಸೈತಾನನಿಗೆ ಮಂದಟ್ಟು ಮಾಡಿಕೊಡುವ ಅವಶ್ಯಕತೆ ಏನೂ ಅತನಿಗೆ ಇರಲಿಲ್ಲ. ಆತನ ಘನತೆ, ಅಧಿಕಾರದ ವಿಷಯದ ಅರಿವು ಸೈತಾನನಿಗಿತ್ತು.ಅತನ ಅಧಿಕಾರಕ್ಕೆ ಒಳಪಡಲು ಒಪ್ಪಿಕೊಳ್ಳದಿರುವುದೇ ಪರಲೋಕದಿಂದ ದೊಬ್ಬಲ್ಪಡಲು ಕಾರಣವಾಯಿತು.GCKn 40.1

    ಸೈತಾನನು ತನ್ನ ಶಕ್ತಿಯನ್ನು ತೋರಿಸಲು ಯೇಸುವನ್ನು ಯೆರುಸಲೇಮಿನ ಶಿಖರಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸಿ. ನೀನು ದೇವರ ಮಗನಾಗಿದ್ದರೆ ಅದನ್ನು ಸಾಬೀತುಪಡಿಸಲು ತತ್ತರಿಸುವ ಎತ್ತರದಿಂದ ಕೆಳಕ್ಕೆ ಧುಮುಕು ಎಂದು ಶೋಧಿಸಿದನು. ದೇವರ ಸತ್ಯವಾಕ್ಯವನ್ನು ಉಪಯೋಗಿಸುತ್ತಾ “ಆತನು ನಿನ್ನ ವಿಷಯವಾಗಿ ದೂತರಿಗೆ ಅಪ್ಪಣೆಕೊಡುವನು : ನಿನ್ನ ಕಾಲು ಕಲ್ಲಿಗೆ ತಗಲೀತೆಂದು ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು” ಎಂದು ಬರೆದಿದೆ ಎಂದನು, ಅದಕ್ಕೆ ಯೇಸು “ನಿನ್ನ ದೇವರಾದ ಕರ್ತನನ್ನು ಪರೀಕ್ಷಿಸಬಾರದು ಎಂದು ಬರೆದಿದೆ ” ಎಂದು ಉತ್ತರಿಸಿದನು. ಯೇಸುವಿನ ಸುವಾರ್ತಸೇವಾಕಾರ್ಯವು ಮುಗಿಯುವ ಮುನ್ನ ತನ್ನ ಪ್ರಾಣವನ್ನು ಪಣಕ್ಕೊಡ್ಡಿ ದೇವರ ಕೃಪಾಬಲವನ್ನು ಪೂರ್ವಭಾವಿಯಾಗಿಯೇ ಬಳಸಿಕೊಳ್ಳುವಂತೆ ಮಾಡುವುದೇ ಸೈತಾನನ ಉದ್ದೇಶವಾಗಿತ್ತು. ಆತನು ರಕ್ಷಣಾಯೋಜನೆಯನ್ನು ವಿಫಲಗೊಳಿಸಬೇಕೆಂದು ನಿರೀಕ್ಷಿಸಿದನು. ಆದರೆ ರಕ್ಷಣಾಯೋಜನೆಯು ಸೈತಾನನಿಂದ ಕಿತ್ತು ಎಸಯಲಾಗದಷ್ಟು ಆಳವಾಗಿ ಬೇರೂರಿಕೊಂಡಿರುವುದನ್ನು ನಾನು ಕಂಡೆನು.GCKn 41.1

    ಕ್ರೈಸ್ತರು ಶೋಧನೆಗೆ ಒಳಗಾಗುವಾಗ ಅಥವಾ ಹಕ್ಕಿನ ಹೋರಾಟದಲ್ಲಿ ಕ್ರಿಸ್ತನೇ ಮಾದರಿಯಾಗಿರಬೇಕೆಂದು ನಾನು ಕಂಡೆನು. ದೇವರ ಪ್ರತ್ಯಕ್ಷ ಮಾನ್ಯತೆಗೂ ಮಹಿಮೆಗೂ ಕಾರಣವಾಗುವ ಒಂದು ವಿಶೇಷ ದೃಷ್ಟಿ ಇದ್ದು ಅವರು ತಾಳ್ಮೆಯಿಂದ ಸಹಿಸಿಕೊಳ್ಳಬೇಕಾಗಿದೆ. ತಮ್ಮ ಶತೃವಿನ ಮೇಲೆ ಜಯಸಾಧಿಸಿಕೊಳ್ಳಲು ದೇವರನ್ನು ಬೇಡಿ ಆತನ ಶಕ್ತಿಯನ್ನು ಪ್ರಕಟಿಸಲು ಹಕ್ಕಿದೆ ಎಂದು ಯೋಚಿಸಬಾರದು.GCKn 42.1

    ಒಂದುವೇಳೆ ಯೇಸುವು ಶಿಖರದಿಂದ ಧುಮುಕಿದ್ದರೆ ಅದು ತಂದೆಗೆ ಮಹಿಮೆ ತರುತ್ತಿರಲಿಲ್ಲ ಎಂಬುವುದನ್ನು ನಾನು ಕಂಡೆನು. ಅಲ್ಲಿದ್ದ ಸೈತಾನನು ಮತ್ತು ದೇವದೂತರು ಮಾತ್ರ ಈ ಕ್ರಿಯೆಗೆ ಸಾಕ್ಷಿಗಳಾಗಿರುತ್ತಿದ್ದರು. ಇದು ಶತೃವಿನ ಮುಂದೆ ತನ್ನ ಬಲವನ್ನು ಪ್ರದರ್ಶಿಸಿ ಸಾಬೀತುಪಡಿಸಿಕೊಳ್ಳುವುದರಲ್ಲಿ ಯೇಸುವು ಯಾರ ಮೇಲೆ ಜಯಗಳಿಸಿಕೊಳ್ಳಬೇಕೆಂದು ಬಂದನೋ ಅವನಿಗೇ ತಗ್ಗಿನಡೆದಂತಾಗುತ್ತಿತ್ತು.GCKn 42.2

    ಬಳಿಕ ಸೈತಾನನು ಆತನನ್ನು ಬಹಳ ಎತ್ತರವಾದ ಬೆಟ್ಟಕ್ಕೆ ಕರಕೊಂಡು ಹೋಗಿ ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಕ್ಷಣಮಾತ್ರದಲ್ಲಿ ತೋರಿಸಿದನು. ಆಮೇಲೆ ಸೈತಾನನು, ಈ ಎಲ್ಲಾ ವೈಭವವನ್ನೂ ನನಗೆ ವಹಿಸಲಾಗಿದೆ ನನಗಿಷ್ಟ ಬಂದವರಿಗೆ ನಾನು ಕೊಡಬಲ್ಲೆ ಎನಲು, ಯೇಸು ಅವನಿಗೆ “ಸೈತಾನನೇ ನೀನು ತೋಲಗಿ ಹೋಗು ,ನಿನ್ನ ದೇವರಾದ ಕರ್ತನಿಗೆ ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು ” ಎಂಬುದಾಗಿ ಬರೆದದೆ ಅಂದನು.GCKn 42.3

    ಇಲ್ಲಿ ಸೈತಾನನು ಪ್ರಪಂಚದ ರಾಜ್ಯಗಳನ್ನು ತೋರಿಸಿದನು. ಅವುಗಳನ್ನು ಬಹು ಆಕರ್ಷಕವಾದ ಬೆಳಕಿನಲ್ಲಿ ತೋರಿಸಲಾಯಿತು. ಅವನನ್ನು ಆರಾಧಿಸಿದರೆ ತನ್ನ ಸ್ವಾಧೀನದಲ್ಲಿರುವ ಇವೆಲ್ಲವನ್ನೂ ಯೇಸುವಿಗೆ ಬಿಟ್ಟುಕೊಡುವೆನಂದು ಹೇಳಿದನು. ಆದರೆ ಒಂದು ವೇಳೆ ರಕ್ಷಣಾಯೋಜನೆ ಸಫಲವಾದರೆ ತನ್ನ ಸೀಮಿತ ಶಕ್ತಿಯ ಅಂತ್ಯ ಆಗುವುದೆಂದು ಸೈತಾನನಿಗೆ ತಿಳಿದಿತ್ತು. ಮಾನವನನ್ನು ವಿಮೋಚಿಸಲು ಯೇಸುವು ಮರಣಿಸಿದರೆ ಕ್ಷಣಿಕವಾದ ತನ್ನ ಶಕ್ತಿ ಕ್ಷಣಮಾತ್ರದಲ್ಲೇ ಕ್ಷಯಿಸುವುದು, ತಾನು ನಾಶವಾಗುವೆನೆಂದೂ ಆತನಿಗೆ ತಿಳಿದಿತ್ತು .GCKn 43.1

    ಆದಕಾರಣ ದೇವಕುಮಾರನಿಂದ ಪ್ರಾರಂಭಿಸಲ್ಪಟ್ಟ ಮಹಾಕಾರ್ಯವನ್ನು ಸಾಧ್ಯವಾದರೆ ಅಂತ್ಯಗೊಳ್ಳದಂತೆ ತಡೆಗಟ್ಟುವುದು ಸೈತಾನನ ಯೋಜನೆಯಾಗಿತ್ತು. ಒಂದುವೇಳೆ ರಕ್ಷಣಾಯೋಜನೆ ಕುಸಿದರೆ ತನ್ನದೆಂದು ಹೇಳಿದ ಲೋಕವು ಹಾಗೇ ಉಳಿಯುತ್ತಿತ್ತು. ಸಫಲನಾದರೆ ಪರಲೋಕದ ದೇವರ ವಿರುದ್ದವಾಗಿ ಆಳ್ವಿಕೆ ನಡೆಸುವೆನೆಂದು ಕೊಚ್ಚಿಕಂಡನು.GCKn 43.2

    ಯೇಸುವು ಪರಲೋಕದಲ್ಲಿದ್ದ ತನ್ನೆಲ್ಲಾ ಶಕ್ತಿ ಮಹಿಮೆಯನ್ನು ತೊರೆದಾಗ ಸೈತಾನನು ವಿಜೃಂಭಿಸಿದನು. ದೇವಕುಮಾರನು ತನ್ನ ಶಕ್ತಿಯ ಅಡಿಗೆ ಇಡಲ್ಪಟ್ಟಿದಾನೆ ಎಂದು ಕೊಂಡನು. ಏದೆನಿನಲ್ಲಿದ್ದ ಪವಿತ್ರ ದಂಪತಿಗಳುನ್ನು ಬಹು ಸುಲಭವಾಗಿ ಶೋಧನೆಗೆ ಒಳಗಾಗಿಸಿಕೊಡುದರಿಂದ ತನ್ನ ಕುತಂತ್ರದಿಂದ ದೇವಕುಮಾರನನ್ನೂ ಉಚ್ಚಾಟಿಸಿ ತನ್ನಜೀವ ಮತ್ತು ರಾಜ್ಯವನ್ನು ಉಳಿಸಿಕೊಳ್ಳಬಹುದು, ತಂದೆಯ ಚಿತ್ತದಿಂದ ಯೇಸುವನ್ನು ಬೇರ್ಪಡಿಸಿದರೆ ತನ್ನ ಗುರಿಸಾಧಿಸುವೆ ಎಂದುಕೊಡನು. ಯೇಸುವು ಸೈತಾನನ್ನು ‘ತೊಲಗು’ ಎಂದು ಅಜ್ಣಾಪಿಸಿದನು. ತಾನು ತಂದೆಗೆ ಮಾತ್ರ ತಲೆಭಾಗುವವನಾಗಿದ್ದನು. ತನ್ನ ಪ್ರಾಣಾರ್ಪಣೆಯಿಂದ ಸೈತಾನನ ಸ್ವಾಧೀನದಲ್ಲಿರುವುದೆನೆಲ್ಲಾ ಬಿಡಿಸಿಕೊಳ್ಳುವ ಸಮಯ ಬರಬೇಕಾಗಿದೆ.ಆನಂತರ ಭೂ ಪರಲೋಕವೆಲ್ಲಾ ಆತನ ಅಧೀನದಲ್ಲಿರುವುದು, ಸೈತಾನನು ಪ್ರಪಂಚದ ರಾಜ್ಯವೆಲ್ಲಾ ತನ್ನದೆಂದು ಸಾಧಿಸಿ, ಯೇಸು ಶ್ರಮೆ ಸಂಕಟ ಗಳನ್ನು ತಪ್ಪಿಸಿಕೊಳ್ಳಬಹುದೆಂದೂ ಅಪ್ರತ್ಯಕ್ಷವಾಗಿ ತಿಳಿಸಿದನು. ಈ ಲೋಕವನ್ನು ಪಡೆಯಲು ಮರಣಿಸುವುದು ಬೇಕಿಲ್ಲ. ಆದರೆ ಈ ಭೂಮಿಯಲ್ಲಿರುವುದೆಲ್ಲಾ ಯೇಸುವು ಅಡ್ಡಬಿದ್ದರೆ ಪಡೆದುಕೊಳ್ಳಬಹುದು ಎಂದೂ, ಎಲ್ಲಾವನ್ನೂ ಅಧೀನ ಪಡಿಸಿಕೊಂಡು ಪ್ರಭುತ್ವ ವೈಭವ ಹೊಂದಬಹುದೆಂದನು. ಆದರೆ ಯೇಸು ದೃಡವಾಗಿದ್ದನು. ಭೂಲೋಕ ರಾಜ್ಯಗಳ ಆಸ್ತಿಗೆ ನಿರಂತರ ಹಕ್ಕುದಾರನಾಗಲು ತಂದೆಯಿಂದ ಯೋಜಿಸಲ್ಪಟ್ಟ ಶ್ರಮೆಸಂಕಟದ ಜೀವನವನ್ನು ಅಂಗೀಕರಿಸಿ ಭಯಕರ ಮರಣವನ್ನು ಆತ ಹಾರೈಸಿದನು. ಯೇಸುವನ್ನು ಮತ್ತು ಮಹಿಮೆಯ ಭಕ್ತರನ್ನು ಸೈತಾನನು ಕಾಡಿಸಲಾಗದಂತೆ ಅವನ ನಾಶವನ್ನು ಯೇಸುವಿನ ಹಸ್ತಕ್ಕೆ ಒಪ್ಪಿಸಲಾಗುತ್ತದೆ.GCKn 44.1

    ಓದಿ; ಧರ್ಮೋಪದೇಶಕಾಂಡ 6;16: 8;3,; 2ಅರಸು 17;35-36 ಕೀರ್ತನೆ 91;11-12; ಲೂಕ ಅದ್ಯಾಯ 2-4GCKn 45.1

    Larger font
    Smaller font
    Copy
    Print
    Contents