Loading...
Larger font
Smaller font
Copy
Print
Contents
ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ 09. - ಯೇಸುವನ್ನು ಶಿಲುಬೆಗೆ ಹಾಕಿದ್ದು

    ದೇವಕುಮಾರನನ್ನು ಶಿಲುಬೆಗೆ ಹಾಕಿಸಲು ಜನರ ಕೈಗೆ ಒಪ್ಪಿಸಲಾಯಿತು. ಅವರ ಪ್ರಿಯ ರಕ್ಷಕನನ್ನು ಮುನ್ನಡೆಸಿದರು. ಚಾವಟಿಯ ಪ್ರಹಾರದಂದಲೂ, ಹೊಡೆತದಿಂದಲೂ ಆತನು ನೋವು ಸಂಕಟದಿಂದ ಬಹು ನಿತ್ರಾಣನಾಗಿದ್ದನು, ಆದರೂ ಆತನನ್ನ ಜಡಿಯಬೇಕಾದ ಭಾರವಾದ ಶಿಲುಬೆಯನ್ನು ಬೆನ್ನೆಮೇಲೆ ಹೊರಿಸಿದರು. ಆದರೆ ಯೇಸುವಿನ ಭಾರ ಹೊರಲಾರದೆ ಬವಳಿ ಬರುವಂತಾಯಿತು. ಮೂರುಬಾರಿ ಶಿಲುಬೆಯನ್ನು ಹೊರಿಸಿದಾಗ ಮೂರುಬಾರಿಯೂ ಮೂರ್ಛೆ ಹೋದನು. ಬಳಿಕ ಆತನ ಹಿಂಬಾಲಕರಲ್ಲಿ ಒಬ್ಬನಾದ, ಕ್ರಿಸ್ತನ ಮೇಲ್ಲಿಟ್ಟಿದ ನಂಬಿಕೆಯನ್ನು ಹೊರೆತೋರ್ಪಡಿಸದಿದ್ದವನನ್ನು ಹಿಡಿದು ಶಿಲುಬೆಗೆ ಹಾಕುವ ಸ್ಥಳವನ್ನು ಸೇರುವರೆಗೂ ಅವನ ಮೇಲೆ ಶಿಲುಬೆ ಹೊರಿಸಿದರು. ಆ ಸ್ಥಳದ ಮೇಲೆ ಸುತ್ತಲೂ ದೂತರು ದಂಡು ಮೇಲ್ವಿಚಾರಿಸುತ್ತಿದ್ದರು. ಆತನ ಆನೇಕ ಶಿಷ್ಯರು ಬಹುದುಃಖದಿಂದ ಗೋಳಡುತ್ತಾ ಕಲ್ವಾರಿಯವರೆಗೂ ಹಿಂಬಾಲಿಸಿದರು. ಅವರು ಯೆರುಸಲೇಮಿಗೆ ಹೋಗುವಾಗ ‘ಮಹೋನತನಿಗೆ ಹೊಸನ್ನ’ ಎಂಬ ಜಯಕಾರದೊಂದಿಗೆ ಸವಾರಿ ಮಾಡಿಕೊಂಡು ಬಂದ ಯೇಸುವಿನೊಂದಿಗೆ ಬಂದಿದ್ದರು. ಆತನು ಬರುವ ದಾರಿಯಲ್ಲಿ ತಮ್ಮ ಬಟ್ಟೆಗಳನ್ನೂ ಸುಂದರವಾದ ತಾಳೆಯ ರೆಂಬೆಗಳನ್ನು ಹರಡಿದುದನ್ನು ನನಪುಮಾಡಿಕೊಂಡರು. ಆ ಸಮಯದಲ್ಲಿ ಅವರು ಭಾವಿಸಿದ್ದೇನೆಂದರೆ ಈತನು ಇಸ್ರಾಯೇಲ್ ಅರಸನಾಗಿ ಈ ಲೌಕಿಕ ರಾಜ್ಯವನ್ನು ಸ್ಥಾಪಿಸುವನು ಎಂದು. ಈಗೆ ಹೇಗೆ ದೃಶ್ಯವು ಬದಲಾಯಿತು! ಅವರ ನೋಟ ಎಷು ಅಲ್ಪವಾಗಿತ್ತು! ಅವರು ಯೇಸುವನ್ನು ಹಿಂಬಾಲಿಸುತ್ತಾ ಹೋದರು; ಉಲ್ಲಾಸದಿಂದಲ್ಲ; ತುಡಿಯುವ ಹೃದಯ ಅಥವಾ ಪ್ರಸನ್ನ ನಿರೀಕ್ಷೆಯಿಂದಲ್ಲ; ಆದರೆ ಭಯ ತಂಬಿದ ಹೃದಯದಿಂದ, ನಿರಾಶೆಯಿಂದ ಧೀನವಾಗಿ ಯಾವ ಗೌರವವಿಲ್ಲದೆ ಕೆಲವೇ ಸಮಯದಲ್ಲಿ ಸಾಯಲಿಕ್ಕಿರುವವನ ಹಿಂದೆ ನಿಧಾನವಾಗಿ ಬಹು ದುಃಖದಿಂದ ನೆಡೆದರು.GCKn 76.1

    ಯೇಸುವಿನ ತಾಯಿ ಅಲ್ಲಿದ್ದಳು. ಒಬ್ಬ ಮಮತಾಮಯಿ ತಾಯಿಯ ಹೃದಯದಂತೆ ಆವಳು ಹೃದಯ ಸಂತಾಪದಿಂದ ಛಿದ್ರವಾಗಿತ್ತು. ಇತರ ಶಿಷ್ಯರಂತೆ ಈಕೆಯೂ ಸಹ , ತನ್ನ ಮಗನು ಯಾವುದಾದರೂ ಪವಾಡ ಸಾಧಿಸಿ ಕೊಲೆಗಾರರ ಕೈಯಿಂದ ಬಿಡಿಸಿಕೊಳ್ಳುವನು ಎಂದುಕೊಂಡಳು. ಆತನು, ತನ್ನನ್ನೇ ಶಿಲುಬೆಯ ಮರಣಕ್ಕೆ ಒಳಗಾಗಿಸಿಕೊಳ್ಳುವನೆಂಬುದನ್ನು ಅವಳು ಸಹಿಸಲಾಗಲಿಲ್ಲ ಆದರೆ ಎಲ್ಲವೂ ಸಿದ್ದಗೊಳ್ಳಿಸಲ್ಪಟ್ಟು, ಆತನನ್ನು ಶಿಲುಬೆಯ ಮೇಲೆ ಇಟ್ಟರು. ಸುತ್ತಿ ಮೊಳೆಗಳನ್ನು ತಂದರು. ಶಿಷ್ಯರು ಹೃದಯ ತಲ್ಲಣಿಸಿತು . ಇದನ್ನು ಕಂಡು ಯೇಸುವಿನ ತಾಯಿಗೆ ಸಹಿಸಲಸಾಧ್ಯವಾದ ಸಂಕಟವಾಯಿತು; ಯೇಸುವನ್ನು ಶಿಲುಬೆಯ ಮೇಲೆಳೆದು ಆತನ ಕೈಗಳನ್ನು ಮರದ ಶಿಲುಬೆಗೆ ಸೇರಿಸಿ ಮೊಳೆಹೊಡೆಯುವ ಸಮಯದಲ್ಲಿ ತಾಯಿಯು ಈ ದೃಶ್ಯವನ್ನು ನೋಡದಿರಲಿ; ಮೊಳೆ ಹೊಡೆಯುವ ಶಬ್ದ; ಆತನ ಕೈಕಾಲುಗಳು ಮೂಳೆ ಮಾಂಸಗಳುನ್ನು ತೂರಿಕೊಂಡು ಹೋಗುವುದನ್ನು ಕಾಣಬಾರದೆಂದು ಶಿಷ್ಯರು ತಾಯಿಯನ್ನು ಬೇರೆಡೆಗೆ ಕರೆದುಕೊಂದು ಹೋದರು. ಯೇಸು ಗುಣಗುಟ್ಟಲಿಲ್ಲ; ಆದರೆ ನೋವಿನಿಂದ ನರಳಿದನು, ಆತನ ಮುಖವು ಬಿಳಿಚಿಕೊಂಡಿತು; ಬೆವರಿನ ದೊಡ್ಡ ಹನಿಗಳು ಹಣೆಯ ಮೇಲೆ ಹರಿದವು. ಸೈತಾನನು ದೇವಕುಮಾರನ ಯಾತನೆಯಲ್ಲಿ ಆಹ್ಲಾದಗೊಂಡರೂ ಇನ್ನು ತನ್ನ ರಾಜ್ಯ ನಾಶವಾಗಿ ಸಾಯುವೆನೆಂದು ಭಯಪಟ್ಟನು.GCKn 77.1

    ಯೇಸುವನ್ನು ಶಿಲುಬೆಗೆ ಜಡಿದಮೇಲೆ ,ಅದನ್ನು ಬಹು ರಭಸದಿಂದ ನೆಲದಲ್ಲಿ ನೆಟ್ಟರು. ಆಗ ಮಾಂಸಖಂಡಗಳು ಸೀಳಿಹೋಗಿ ಅತ್ಯಂತ ನೋವನ್ನುಂಟುಮಾಡಿತು. ಆತನ ಮರಣವನ್ನು ಆದಷ್ಟೂ ನಾಚಿಕೆಗೆ ಒಳಗಾಗುವಂತೆ ಅವರು ಈಡುಮಾಡಿದರು. ಯೇಸುವಿನೊಂದಿಗೆ ಇಬ್ಬರು ಕಳ್ಳರನ್ನು ಬಲವಂತದಿಂದ ಅವರು ನಿರಾಕರಿಸುತ್ತಿದ್ದರೂ ಬಿಡದೆ ಅವರ ಕೈಗಳನ್ನು ಎಳೆದು ಶಿಲುಬೆಗೆ ಜಡಿದರು. ಯೇಸುವಾದರೋ ನಮ್ರವಾಗಿ ಒಪ್ಪಿಸಿಕೊಟ್ಟನು. ಆತನ ಕೈಗಳುನ್ನು ಶಿಲುಬೆಗೆ ಚಾಚಲು ಯಾರು ಒತ್ತಾಯ ಮಾಡಬೇಕಿರಲಿಲ್ಲ. ಆದರೆ ಕಳ್ಳರಾದರೊ ಶಪಿಸುತ್ತಿದ್ದರು. ಯೇಸು ಈ ನೋವಿನಲ್ಲೂ ಶತೃಗಳಿಗಾಗಿ ಪ್ರಾರ್ಥಿಸಿದನು “ತಂದೆಯೇ ಅವರೇನು ಮಾಡುತ್ತಿರುವರೆಂದು ಅರಿಯರು. ಅವರನ್ನು ಕ್ಷಮಿಸು” ಎಂದನು .ಆತನು ದೈಹಿಕ ಹಿಂಸಿಯನ್ನು ಮಾತ್ರವೇ ಅಲ್ಲ. ಇಡೀ ಲೋಕದ ಪಾಪಭಾರವನ್ನು ಸಹಿಸಬೇಕಾಯಿತು.GCKn 78.1

    ಯೇಸುವು ಶಿಲುಬೆಯಲ್ಲಿ ತೂಗುತ್ತಿರುವಾಗ ಅಲ್ಲಿ ಹಾದು ಹೋಗುವವರು ದೂಷಿಸಿದರು. ರಾಜ್ಯನ ಮುಂದೆ ತಲೆಬಾಗುವ ರೀತಿ ಬಾಗಿಸಿ, ದೇವಾಲಯವನ್ನು ಕೆಡವಿ ಮೂರು ದಿನದಲ್ಲಿ ಕಟ್ಟುವವನೇ ನಿನ್ನನ್ನು ರಕ್ಷಿಸಿಕೋ ಎಂದರು. ದೇವಮಗನಾಗಿದ್ದರೆ ಶಿಲುಬೆಯಿಂದ ಇಳಿದು ಬಾ ಎಂದರು. ‘ನೀನು ದೇವ ಮಗನಾಗಿದ್ದರೆ’ ಎಂಬ ಮಾತನ್ನು ಸೈತಾನನು ಸಹ ಅಡವಿಯಲ್ಲಿ ನುಡಿದಿದ್ದನು. ಮಹಾಯಾಜಕರೂ, ಶಾಸ್ತ್ರಿಗಳೂ, ಹಿರಿಯರೂ — ಅವನು ಮತ್ತೊಬ್ಬರನ್ನು ರಕ್ಷಿಸಿದನು, ತನ್ನನ್ನು ರಕ್ಷಿಸಿಕೊಳ್ಳಲಾರನು ಎಂದು ವ್ಯಂಗ್ಯವಾಡಿದರು. ಇವನು ಇಸ್ರಾಯೇಲಿನ ಅರಸನಾಗಿದ್ದರೆ ಶಿಲುಬೆಯಿಂದ ಇಳಿದು ಬರಲಿ ನಾವು ನಂಬುತೇವೆ ಎಂದರು. ಅಧಿಕಾರಿಗಳೆಲ್ಲಾ ‘ನೀನು ದೇವರ ಮಗನಾಗಿದ್ದರೆ ನಿನ್ನನ್ನು ನೀನು ರಕ್ಷಿಸಿಕೋ’ ಎಂದು ಹಿಯ್ಯಾಳಿಸುತ್ತಿರುವಾಗ ಯೇಸುವಿನ ಶಿಲುಬೆಯ ಪ್ರಕರಣವನ್ನು ವೀಕ್ಷಿಸುತ್ತಾ ಹಾರಡುತ್ತಿದ್ದ ದೂತಗಣವು ರೋಷಗೊಂಡಿತು. ಅವರು ಯೇಸುವನ್ನು ಬಿಡಿಸಲು ಕಾತುರರಾದರು. ಆದರೆ ಅವರಿಗೆ ಅನುಮತಿ ಸಿಕ್ಕಿರಲಿಲ್ಲ. ಆತನ ಸೇವೆಯು ಹೆಚ್ಚು ಕಡಿಮೆ ಗುರಿಮುಟ್ಟಿತು ಆ ಮಹಾ ನೋವಿನಿಂದ ಶಿಲುಬೆಯಲ್ಲಿ ತೂಗಾಡುತ್ತಿದ್ದರು ಯೇಸು ತಾಯಿಯನ್ನು ಮರೆಯಲಿಲ್ಲ ಎಂಬುದು. ಯೇಸುವಿನ ಕಡೆಯ ಪಾಠವಾಗಿತ್ತು. ಈ ದುಃಖ ತಪ್ತ ದೃಶ್ಯವನ್ನು ಕಾಣಲು ಈ ತಾಯಿಗಾಗಲಿಲ್ಲ ಆತನ ನೋವಿನಿಂದ ಹೃದಯವು ಛಿದ್ರವಾಗಿದ್ದ ತಾಯಿಯನ್ನು, ತನ್ನ ಪ್ರಿಯ ಶಿಷ್ಯ ಯೋಹಾನನ್ನೂ ನೋಡಿದನು. ತಾಯಿಗೆ — ಇಗೋ ನಿನ್ನ ಮಗನು ,ಶಿಷ್ಯನಿಗೆ — ಇಗೋ ನಿನ್ನ ತಾಯಿ ಎಂದು ಒಪ್ಪಿಸಿದನು. ಅಂದಿನಿಂದ ಯೋಹಾನನು ಅವಳನು ತನ್ನ ಮನೆಗೆ ಕರೆದುಕೊಂಡು ಹೋದನು.GCKn 78.2

    ಯೇಸು ಯಾತನೆಯಲ್ಲಿ ನೀರಡಿಕೆಕೊಂಡನು; ಅವರು ಮತ್ತಷ್ಟು ಅವಮಾನಿಸಲು ಹುಳಿ ಮತ್ತು ಕಡುಕಹಿ ರಸವನ್ನು ಕೊಟ್ಟರು. ದೇವದೂತರು, ತಮ್ಮ ಅಧಿಪತಿಯು ಅನುಭವಿಸುತ್ತಿದ್ದ ಭಯಂಕರ ಶಿಲುಬೆಯ ನೋವನ್ನು ನೋಡಲಾಗದೆ ತಮ್ಮ ಮುಖವನ್ನು ಮುಚ್ಚಿಕೊಂಡರು. ಸೂರ್ಯನೂ ಸಹ ಈ ಭಯಂಕರ ದೃಶ್ಯವನ್ನು ನೋಡಲಾಗದೆ ಮಂಕಾದನು. ಯೇಸು ಮಹಾಧ್ವನಿಯಿಂದ ‘ತೀರಿತು’ ಎಂದಾಗ ಆ ಕೊಲೆಗಡುಕರು ಭಯದಿಂದ ತಲ್ಲಣಿಸಿದರು. ದೇವಾಲಯದ ತೆರೆಯ ಮೇಲಿನಿಂದ ಕೆಳಗಿನವರೆಗೂ ಹರಿದುಹೋಯಿತು, ಭೂಕಂಪವಾಯಿತು, ಬಂಡೆಗಳು ಸೀಳಿಹೋದವು, ಮಹಾಕತ್ತಲೆಯು ಭೂಮಿಯನ್ನು ಮುಚ್ಚಿಕೊಂಡಿತು. ಯೇಸು ಮರಣಿಸಿದಾಗ ಶಿಷ್ಯರಿಗಿದ್ದ ಕೊನೆಯ ನಿರೀಕ್ಷಯೂ ಕುಂದಿಹೋಯಿತು. ಈ ಸಂಕಟ ಹಿಂಸೆ ಮತ್ತು ಮರಣವನ್ನು ಆತನ ಹಿಂಬಾಲಕರಲ್ಲಿ ಅನೇಕರು ವೀಕ್ಷಿಸಿದರು. ಅವರ ದುಃಖದ ಬಟ್ಟಲು ತುಂಬಿಹೋಯಿತು. GCKn 80.1

    ಸೈತಾನನು ಹಿಂದಿನಂತೆ ಈಗ ಉಲ್ಲಾಸಗೊಳ್ಳಲಾಗಲಿಲ್ಲ, ರಕ್ಷಣಾಯೋಜನೆಯನ್ನು ಹಾಳುಮಾಡಬೇಕೆಂದಿದ್ದನು. ಆದರೆ ಅದರ ಬೇರು ಆಳವಾಗಿ ಊರಿಹೋಗಿತು. ಯೇಸುವಿನ ಮರಣಾನಂತರ ಅಂತಿಮವಾಗಿ ತಾನು ಸಾಯಲೇಬೇಕಾಗಿದೆ ಮತ್ತು ತನ್ನರಾಜ್ಯವು ಯೇಸುವಿಗೆ ಕೊಡಲ್ಪಡುತ್ತದೆ ಎಂಬುದರ ಅರಿವಾಯಿತು. ಆತನು ತನ್ನ ದೂತರೂಂದಿಗೆ ಸಮಾಲೋಚನೆ ನಡೆಸಿದನು. ದೇವಕುಮಾರನ ವಿರುದ್ಧವಾಗಿ ಏನುಮಾಡಲಾಗಲಿಲ್ಲ. ಈಗ ಆತನ ಹಿಂಬಾಲಾಕರ ಮೇಲೆ ತನ್ನ ಕುತಂತ್ರ ಹಾಗೂ ಬಲಪ್ರಯೋಗವನ್ನು ಹೆಚ್ಚುಮಾಡಲು ಹವಣಿಸಿದನು. ಯೇಸುವಿನಿಂದ ಕ್ರಯಕ್ಕೆ ಕೊಳ್ಳಲ್ಪಟ್ಟು ರಕ್ಷಣೆಯನ್ನು ಹೊಂದಿಕೊಳ್ಳುವುದನ್ನು ಹತ್ತಿಕ್ಕೆಬೇಕು ಎಂದುಕೊಂಡನು. ಹೀಗೆ ಮಾಡುವಲ್ಲಿ ದೇವರ ಅಧಿಪತ್ಯಕ್ಕೆ ವಿರುದ್ಧವಾಗಿ ಇನ್ನೊ ಕಾರ್ಯಮಾಡಬಹುದು, ಯೇಸುವಿನಿಂದ ದೂರವಿಡಲು ತನ್ನಿಂದಾಗುವುದನ್ನೆಲ್ಲಾ ಮಾಡಬೇಕೆಂದು ಯೋಚಿಸಿದನು. ಏಕೆಂದರೆ ಕ್ರಿಸ್ತನ ರಕ್ತದಿಂದ ವಿಮೋಚನೆಗೊಂಡವರ ಪಾಪವು ಕೊನೆಯಲ್ಲಿ, ಪಾಪದ ಉತ್ಪತ್ತಿಗೆ ಕಾರಣನಾದ ಪಿಶಾಚಾನ ಮೇಲೆ ಉರುಳುವುದು. ಅವನು ಪಾಪವನ್ನೆಲ್ಲಾ ಹೊರಬೇಕಾಗುವುದು, ಯೇಸುವಿನ ಮೂಲಕ ಬಂದ ರಕ್ಷಣೆಯನ್ನು ನಿರಾಕರಿಸಿದವರ ಪಾಪವು ಅವನ ಮೇಲೆಯೇ ಹೊರಿಸಲ್ಪಡುವುದು.GCKn 80.2

    ಯೇಸುವಿನ ಜೀವನವು ಈ ಲೋಕದ ಯಾವ ವೈಭವ ಅಥವಾ ಹೊರತೋರಿಕೆಯದ್ದಾಗಿರಲಿಲ್ಲ. ಆತನ ಸ್ವತ್ಯಾಗದ, ವಿನೀತಿ ಜೀವನವು ಯಾಜಕರು ಹಾಗೂ ಹಿರಿಯರಿಗೂ ಅತಿ ವಿರುದ್ಧವಾದದ್ದಾಗಿತು. ಅವರ ಈ ಲೋಕದ ಗೌರವ ಭರಿತ, ಸಲೀಸಾದ ಪಾಪತುಂಬಿದ ಜೀವನ ಪ್ರೀತಿಗೆ, ಯೇಸುವಿನ ಪರಿಶುದ್ದ ಶಿಸ್ತಿನ ಜೀವನವು ಎಡಬಿಡದೆ ಖಂಡನೆಯಾಗಿತ್ತು. ಆತನ ಶುದ್ದ ವಿನಮ್ರತೆಯನ್ನು ಇವರು ಕೇವಲವಾಗಿ ಕಂಡರು. ಒಂದು ದಿನ ಯೇಸುವು ತನ್ನ ತಂದೆಯ ಅನುಪಮ ಮಹಿಮೆಹೊಂದಿದವನಾಗಿ ಪರಲೋಕದ ವೈಭವದಿಂದ ಬರುವುದನ್ನು ಇವರು ಕಾಣುವರು. ವಿಚಾರಣ ಅಂಗಳದಲ್ಲಿ ಶತೃಗಳಿಂದ ಸುತ್ತುಗಟ್ಟಲ್ಪಟ್ಟು, ಆತನ ರಕ್ತಕ್ಕೆ ಬಾಯಾರುತ್ತಾ ಕಠಿಣವಾಗಿ, ಆ ರಕ್ತವು ತಮ್ಮ ಹಾಗೂ ತಮ್ಮ ಮಕ್ಕಳ ಮೇಲಿರಲಿ ಎಂದವರೂ ಸಹ ಘನಗೌರವವುಳ್ಳ ಅರಸನಾದ ಯೇಸುವನ್ನು ಕಾಣುವರು.GCKn 81.1

    ಕೊಲ್ಲಲ್ಪಟ್ಟರೂ ರಾಜ್ಯಠೀವಿಯಿಂದ ವಿಜಯಿಯಾಗಿ ಬರುವವನು ಸುತ್ತಲೂ ಪರಲೋಕದೂತರು ಆತನ ಬಲಶಕ್ತಿಯ ಜಯಗೀತವನ್ನು ಹಾಡುವರು. ವೈಭವೋಪೇತ ರಾಜನಾಗಿ ಅತನು ಜೀವಿಸುವನು. ಅವನ್ನನ್ನು ಅವಮಾನಗೊಳಿಸಲು ಹುಚ್ಚೆದ್ದು ಕೂಗುತ್ತಿದ್ದರ ಕ್ರೂರ ಜನಸಮೂಹವು ಕೂಗುವಾಗ ಬಡ ಬಲಹೀನ ದುರವಸ್ಥೆಯ ಮಾನವರು ಮಹಿಮಾರಾಜನ ಮುಖದ ಮೇಲೆ ಉಗುಳಿದರು. ಆ ಮುಖವನ್ನು ತಮ್ಮ ಕ್ರೂರ ಗುದ್ದುಗಳಿಂದ ಹೊಡೆದಾಗ ಪರಲೋಕದಲ್ಲೆಲ್ಲಾ ಆಶ್ಚರ್ಯದ ಉದ್ಗಾರ ತುಂಬಿತು. ಅದೇ ಮುಖವು ಮದ್ಯಾಹ್ನದ ಸೂರ್ಯನಂತೆ ಪ್ರಜ್ವಲಿಸುವುದನ್ನು ಅವರು ಕಂಡು ಓಡಿಹೋಗಲು ಹವಣಿಸುವರು. ಕ್ರೂರಘೋಷಣೆ ಮಾಡುವ ಬದಲು ಭಯದಿಂದ ಗೋಳಿಡುವರು. ಯೇಸುವು ಶಿಲುಬೆಯ ಗುರುತಿರುವ ಕೈಗಳನ್ನು ತೋರಿಸುವನು ಈ ಕ್ರೂರಕ್ರಿಯಗಳಿಂದಾದ ಮಚ್ಚೆಯ ಗುರುತು ಆತನ ಮೇಲೆ ನಿರಂತರವಾಗಿರುತ್ತದೆ. ಮೊಳೆಯ ಪ್ರತಿ ಗುರುತು ವಿಮೋಚನೆ ಮತ್ತು ಕ್ರಯಮಾಡಿದ ಪ್ರಿಯ ಬೆಲೆಯನ್ನು ಹೇಳುವುದು. ಯಾರು ಜೀವಿತ ಕರ್ತನ ಪಕ್ಕೆಗೆ ಚುಚ್ಚಿದ್ದರೋ ಅವರ ಈಟಿಯ ಗಾಯವನ್ನು ಕಂಡು ಅತನ ದೇಹವನ್ನು ಜರ್ಜರಿತಗೊಳಿಸಿದ್ದನ್ನು ನೆನೆದು ಆಳವಾದ ನೋವಿನಿಂದ ಪ್ರಲಾಪಿಸುವರು. ಯಹೂದ್ಯರ ಅರಸನು ಎಂಬ ಬರಹವನ್ನು ಕಂಡು ಸಹಿಸದ ಕೊಲೆಗಾರರು, ಆತನು ಮಹಿಮೆಯಾಡನೆ ರಾಜವೈಭವದಿಂದ ಬರುವುದನ್ನು ಕಾಣುವರು. ಅಲ್ಲದೆ ಅತನ ವಸ್ತ್ರ ಹಾಗೂ ತೊಡೆಯ ಮೇಲೆ ಬರೆದಿರುವ ರಾಜಾಧಿರಾಜ ಮತ್ತು ಕರ್ತಾಧಿಕರ್ತ ಎಂಬುದನ್ನು ಕಾಣುವರು ಕ್ರಿಸ್ತನು ಶಿಲುಬೆಯ ಮೇಲೆ ತೂಗುತ್ತಿದ್ದಾಗ ಇಸ್ರಾಯೇಲರ ಅರಸನಾದ ಕ್ರಿಸ್ತನು ಶಿಲುಬೆಯಿಂದ ಇಳಿದು ಬರಲಿ, ನಾವು ನೋಡಿ ನಂಬುವೆವು ಎಂದು ಗೇಲಿಮಾಡಿವವರು ಆತನು ರಾಜಾಧಿಕಾರದಿಂದಲೂ ವೈಭವದಿಂದಲೂ ಬರುವುದನ್ನು ಕಾಣುವರು. ಆಗ ಇಸ್ರಾಯೇಲರ ಅರಸನ ಯಾವ ಗುರುತನ್ನೂ ಅವರು ಕೇಳುವುದಿಲ್ಲ - ಆತನ ವೈಭವ, ಮಿತಿಮಿರಿದ ಮಹಿಮೆಯಿಂದ ಪ್ರೇರಿತರಾಗಿ “ಕರ್ತನ ಹೆಸರಿನಲ್ಲಿ ಬರುವವನಿಗೆ ಜಯವಾಗಲಿ” ಎಂದು ಒಪ್ಪಿಕೊಳ್ಳಲೇ ಬೇಕಾಗುವುದು.GCKn 82.1

    ಭೂಮಿಯು ಕಂಪಿಸುವುದು, ಬಂಡೆಗಳು ಸೀಳುದುದು, ಕತ್ತಲೆ ಭೂಮಿಯನ್ನು ಮುಚ್ಚಿಕೊಂಡದ್ದು, ‘ತೀರಿತು’ ಎಂದು ಪ್ರಾಣಬಿಟ್ಟ ಯೇಸುವಿನ ಮಹಾದ್ವನಿಯು ಶತೃಗಳಲ್ಲಿ ತುಮುಲ ಉಂಟುಮಾಡಿದ್ದಲ್ಲದೆ ಕೊಲೆಗಡುಕರನ್ನು ಥರಥರನೆ ನಡುಗಿಸಿದವು. ಈ ವೈಯಕ್ತಿಕ ಪ್ರಕಟನೆಗೆ ಶಿಷ್ಯರು ಅಶ್ಚರ್ಯಪಟ್ಟರು ಅದರೆ ಅವರ ಎಲ್ಲಾ ನಿರೀಕ್ಷೆಯು ಚದುರಿಹೋಗಿತ್ತು. ತಮ್ಮನ್ನೂ ಯಹೂದ್ಯರು ನಾಶಮಾಡಬಹುದು ಎಂದು ಅವರಿಗೆ ಭಯವಾಯಿತು. ದೇವಕುಮಾರನ ಮೇಲೆರಗಿದ ದ್ವೇಷ ಇಲ್ಲಿಗೆ ನಿಲ್ಲಲಾರದು ಎಂದು ಭಾವಿಸಿದರು. ನಿರಾಶೆಯಲ್ಲಿ ತುಂಬಿದಾವರಾಗಿ ಏಕಾಂಗಿತನವನ್ನು ಅನುಭವಿಸುತ್ತಾ ದುಃಖದಿಂದ ಗೋಳಡಿದರು. ಯೇಸು ಐಹಿಕರಾಜನಾಗುವನು ಎಂದು ಅವರು ಭಾವುಸಿದ್ದರು; ಯೇಸುವಿನ ಮರಣದಲ್ಲಿ ಅವರ ನಿರೀಕ್ಷೆಯೂ ಸತ್ತಿತು. ಯೇಸು ತಮ್ಮನ್ನು ವಂಚಿಸಿದನೇನೋ ಎಂದು ದುಃಖ ಮತ್ತು ನಿರಾಶೆಯಲ್ಲಿ ಅನುಮಾನಪಟ್ಟರು. ತಾಯಿಯು ಕುಂದಿದವಳಾಗಿ ಆತನು ಮೆಸ್ಸೀಯನಲ್ಲವೇನೋ ಎಂಬ ಅನುಮಾನದಿಂದ ಅವಳ ನಂಬಿಕೆಯು ತತ್ತರಿಸಿತು.GCKn 83.1

    ಇಷ್ಟೆಲ್ಲಾ ನಿರಾಶೆಗೊಂಡು. ನಿರೀಕ್ಷೆ ಕಳಕೊಂಡರೂ ಶಿಷ್ಯರು ಆತನನ್ನು ಪ್ರೀತಿಸಿದರು. ಆತನ ದೇಹವನ್ನು ಆದರಿಸಿ ಗೌರವಿಸಿದರು. ಆದರೆ ಅದನ್ನು ಹೇಗೆ ಪಡೆದುಕೊಳ್ಳಬೇಕೆಂದು ತಿಳಿಯಲಿಲ್ಲ ಆಗ ಯೇಸುವಿನ ನಿಜ ಶಿಷ್ಯರಲ್ಲಿ ಒಬ್ಬನಾದ ಅರಿಮತ್ತಾಯದ ಯೋಸೇಫನು, ಹಿರೀಸಭೆಯಲ್ಲಿ ಘನವಂತನಾಗಿದ್ದುದರಿಂದ ಪ್ರಭಾವ ಹೊಂದಿದ್ದು, ದೈರ್ಯವಾಗಿ ಪಿಲಾತನಲ್ಲಿಗೆ ಹೋಗಿ ಯೇಸುವಿನ ಶರೀರವನ್ನು ಬೇಡಿದನು. ಆತನು ಯಹೂದ್ಯರ ಭಯದಿಂದ ಗುಪ್ತವಾಗಿ ಹೋದನು; ಯಹೂದ್ಯರ ಹಗೆ ಬಹುವಾಗಿದ್ದು ಆತನ ಶರೀರಕ್ಕೆ ಗೌರವವುಳ್ಳ ವಿಶ್ರಾಂತಿಸ್ಥಳವು ಸಿಗುವುದೇ ಎಂದು ಶಿಷ್ಯರು ಭಯಪಟ್ಟರು. ಪಿಲಾತನು ಯೋಸೇಫನಿಗೆ ಅಪ್ಪಣೆ ಕೊಟ್ಟನು. ಯೇಸುವಿನ ದೇಹವನ್ನು ಶಿಲುಬೆಯಿಂದ ಇಳಿಸಿದಾಗ ಶಿಷ್ಯರ ದುಃಖ ಮುಗಿಲುಮುಟ್ಟಿದ್ದು ನಿರೀಕ್ಷೆಯ ಮಣ್ಣಾದುದನ್ನು ನೆನೆದು ಗೊಳಾಡಿದರು. ಯೇಸುವಿನ ಶರೀರವನ್ನು ನಾರುಬಟ್ಟೆಯಲ್ಲಿ ಸುತ್ತಿದರು. ತದನಂತರ ಅರಿಮತ್ತಾಯದ ಯೋಸೇಫನ ಸ್ವಂತ ಹಾಗೂ ಹೊಸದಾದ ಸಮಾಧಿಯಲ್ಲಿ ಹೂಳಿಟ್ಟರು. ಯೇಸುವು ಜೀವಿತನಾಗಿದ್ದಾಗ ಸದಾ ಹಿಂಭಾಲಿಸುತ್ತಿದ್ದ ಸ್ತ್ರಿಯರು ಈಗಲೂ ಹಿಂಬಾಲಿಸುತ್ತಿದ್ದು ಆತನ ಪರಿಶುದ್ದ ದೇಹವನ್ನು ಸಮಾಧಿಯಲ್ಲಿ ಹೂಣಿಡುವವರೆವಿಗೂ ಕಾಯುತ್ತಿದ್ದರು. ಆನಂತರ ಶತೃಗಳ ದೇಹವನ್ನು ತೆಗೆದುಕೊಂಡು ಹೋಗಬಾರದೆಂದು ದೊಡ್ಡಭಾರವಾದ ಬಂಡೆಯನ್ನು ಮುಚ್ಚಿದರು; ಆದರೆ ಅವರು ಭಯಪಡಬೇಕಾಗಿರಲಿಲ್ಲ; ಏಕೆಂದರೆ ಯೇಸುವಿನ ವಿಶ್ರಾಂತಿ ಸ್ಥಳವನ್ನು ಬಹು ಆಸಕ್ತಿಯಿಂದ ದೂತಗಣವು ಕಾಯುತ್ತಿದ್ದುದನ್ನು ನಾನು ಕಂಡೆನು. ಅವರು ಸಮಾಧಿಯನ್ನು ಕಾಯುತ್ತಾ ಮಹಾಮಹಿಮೆಯ ರಾಜನನ್ನು ಸೆರೆಮನೆಯಿಂದ ಬಿಡಿಸುವ ಕಾರ್ಯದಲ್ಲಿ ತಮ್ಮ ಪಾತ್ರ ನಿರ್ವಹಿಸಲು ದೇವನ ಅಪ್ಪಣೆಗಾಗಿ ಎದುರು ನೋಡುತ್ತಿದರು.GCKn 84.1

    ಕ್ರಿಸ್ತನ ಕೊಲೆಗಾರರೂ ಈಗಲೂ ಯೇಸು ತಪ್ಪಿಸಿಕೊಂಡು ಜೀವಿತನಾಗಿ ಬರಬಹುದೆಂದು ಭಯಪಟ್ಟುರು. ಮೂರುದಿನದವರೆಗೂ ಕಾವಲನ್ನು ಹಾಕಬೇಕೆಂದು ಪಿಲಾತನನ್ನು ಕೇಳಿಕೊಂಡರು. ಪಿಲಾತನು ಸಮಾಧಿಯನ್ನು ಭದ್ರಪಡಿಸಲು ಸಶಸ್ತ್ರ ಪಡೆಯನ್ನು ಅವರಿಗೆ ಕೊಟ್ಟನು ಶಿಷ್ಯರು ದೇಹವನ್ನು ಕದ್ದುಕೊಂಡು ಹೋಗಿ ಆತನು ಎದ್ದಿದ್ದಾನೆ ಎಂದು ಹೇಳಿಯಾರೆಂದು ಈ ಕಲ್ಲಿಗೆ ಮುದ್ರೆ ಹಾಕಿ ಸಮಾಧಿಯನ್ನು ಭದ್ರಪಡಿಸಿದರು.GCKn 85.1

    ನೋಡಿ: ಮತ್ತಾಯ 21:1-11; 27:32-66; ಮಾರ್ಕ 15:21-47; ಲೂಕ 23:26-56; ಯೋಹಾನ 19:17-42; ಪ್ರಕಟಣೆ 19:11-16 GCKn 85.2