Loading...
Larger font
Smaller font
Copy
Print
Contents
ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ 11. - ಸುವಿನ ಆರೋಹಣ

    ಯೇಸುವು ಪರಲೋಕದ ತಂದೆಯ ಬಳಿಗೆ ಗೆಲುವಿನೋತ್ಸಾಹದಿಂದ ಬರುವ ಗಳಿಗೆಗಾಗಿ ಇಡೀ ಪರಲೋಕವೇ ಎದುರುನೋಡುತ್ತಿತ್ತು. ಪ್ರಭಾವವುಳ್ಳ ಅರಸನಿಗೆ ಬೆಂಗಾವಲಾಗಿದ್ದು ವಿಜಯಾನಂದದಿಂದ ಕರೆದುಕೊಂಡು ಹೋಗಲು ದೇವದೂತರು ಇಳಿದು ಬಂದರು ,ಯೇಸುವು ಶಿಷ್ಯರನ್ನು ಆಶೀರ್ವದಿಸಿದ ಮೇಲೆ ಅವರಿಂದ ಬೇರ್ಪಟ್ಟು ಎತ್ತಲ್ಪಟ್ಟನು. ಅತನು ಮೇಲಕ್ಕೆ ಏರಿಹೋಗುತ್ತಾ ಇರುವಾಗ, ಪುನರುತ್ಥಾನದ ಸಮಯದಲ್ಲಿ ಎಬ್ಬಿಸಲ್ಪಟ್ಟೆವರೆಲ್ಲಾ ಆತನನ್ನು ಹಿಂಬಾಲಿಸಿದರು. ಪರಲೋಕದ ಮಹಾತಂಡವೂ ಹಾಜರಾಗಿದ್ದವು; ಅದೇ ಸಮಯದಲ್ಲಿ ಅಸಂಖ್ಯಾತ ದೂತಗಣವು ಆತನನ್ನು ಸ್ವಾಗತಿಸಲು ಪರಲೋಕದಲ್ಲಿ ಕಾದಿದ್ದರು. ಇವರೆಲ್ಲಾ ಪರಿಶುದ್ದ ಪಟ್ಟಣಕ್ಕೆ ಏರುತ್ತಿರುವಾಗ, ಯೇಸುವಿನ ಬೆಂಗಾವಲಾಗಿದ್ದ ದೂತರು ಮಹಾಧ್ವನಿಯಿಂದ ,ದ್ವಾರಗಳೇ ,ಉನ್ನತವಾಗಿರ್ರಿ ;ಪುರಾತನ ಕದಗಳೇ, ತೆರೆದುಕೊಂಡಿರ್ರಿ .ಮಹಾಪ್ರಭಾವವುಳ್ಳ ಅರಸುನು ಆಗಮಿಸತ್ತಾನೆ ಎಂದು ಕೂಗುತ್ತಿದ್ದರು. ಪರಲೋಕದಲ್ಲಿ ಕಾಯುತ್ತಿದ್ದ ದೂತರು ಭಾವಾವೇಶದಿಂದ- ಮಹಾಪ್ರಭಾವವುಳ್ಳ ಈ ಅರಸನು ಯಾರು? ಎಂದು ಗಟ್ಟಿಯಾಗಿ ಕೂಗುತ್ತಿದ್ದರು. ಬೆಂಗಾವಲಾಗಿದ್ದ ದೂತರು ಉತ್ತರಿಸುತ್ತಾ ಪ್ರಬಲನು ಮತ್ತು ಪ್ರಭಾವವುಳ್ಳ ಸ್ವಾಮಿ ಈತನೇ! ಸೇನಾಧೀಶ್ವರನಾದ ಕರ್ತನು! ದ್ವಾರಗಗೇ ತೆರೆದುಕೊಂಡಿರ್ರಿ! ನಿರಂತವಾದ ಕದಗಳೇ ತೆರೆದುಕೊಂಡಿರ್ರಿ! ಮಹಾಪ್ರಭಾವವುಳ್ಳ ಅರಸನು ಬಂದನು ಎಂದು ಘೋಷಿಸಿದರು , ಮತ್ತೆ ಪರಲೋಕದಲ್ಲಿದ್ದ ದೂತರು ಕೂಗುತ್ತಾ, ಈ ಮಹಾಪ್ರಭಾವವುಳ್ಳ ಅರಸನು ಯಾರು? ಎಂದು ಕೇಳಲು , ಬೆಂಗಾವಲಾಗಿದ್ದ ದೂತರು ಮಧುರವಾದ ಸ್ವರದಿಂದ ಸೇನಾಧೀಶ್ವರನಾದ ಕರ್ತನು ! ಮಹಾಪ್ರಭಾವವುಳ್ಳ ಅರಸು ! ಎಂದು ಉತ್ತರಿಸುತ್ತಿದ್ದರು. ಈ ಪರಲೋಕದ ಸಮೂಹವು ಪಟ್ಟಣವನ್ನು ಪ್ರವೇಶಿಸಿತು. ದೂತಗಣಗಳೆಲ್ಲಾ ದೇವಕುಮಾರನನ್ನು ಸುತುಗಟ್ಟಿತು. ತಮ್ಮ ಮಹಾಧಿಪತಿಯ ಪಾದದಲ್ಲಿ ಹೊಳೆಯುವ ಕಿರೀಟ್ಟವನ್ನಿಟ್ಟ್ಟು ಮಹಾಘನಗೌರವದಿಂದ ತಲೆ ಬಾಗಿದರು , ನಂತರ ಕೊಲ್ಲಿಲ್ಪಟ್ಟ ಕುರಿಮರಿಯು, ಮಹಾಪ್ರಭಾವ ಮಹಿಮೆಯಿಂದ ಜೀವಿತನಾಗಿ ಬಂದನೆಂದು ತಮ್ಮ ಸುವರ್ಣ ತಂತಿವಾದ್ಯಗಳನ್ನು ಸುಮಧುರವಾಗಿ ಮಿಟಿ ಸ್ವರಗಳನ್ನು ಹೊರಡಿಸಲು , ಅದು ಪರಲೋಕದಲ್ಲೆಲ್ಲಾ ಝೇಂಕಾರವನ್ನೆಬ್ಬಿಸಿತು.GCKn 102.1

    ಆನಂತರ ನನಗೆ ತೋರಿಸಲ್ಪಟ್ಟದ್ದೇನೆಂದರೆ —ಆರೋಹಣವಾಗುತ್ತಿರುವ ಸ್ವಾಮಿಯ ಕಡೆಯ ದರ್ಶನ ಮಾಡಲು ಶಿಷ್ಯರು ಪರಲೋಕದೆಡೆಗೆ ತಲೆ ಎತ್ತಿ ದುಃಖದಿಂದ ದೃಷ್ಟಿಸುತ್ತಿದ್ದರು ಶುಭ್ರವಸ್ತ್ರಧಾರಿಗಳಾದ ಇಬ್ಬರ ದೂತರು ಅವರ ಹತ್ತಿರ ನಿಂತು , ಗಲಿಲಾಯದವರೇ, ನೀವು ಯಾಕೆ ಆಕಾಶದ ಕಡೆಗೆ ನೋಡುತ್ತಾ ನಿಂತಿದ್ದೀರಿ? ನಿಮ್ಮ ಬಳಿಯಿಂದ ಆಕಾಶದೊಳಕ್ಕೆ ಏರಿಹೋದ ಈ ಯೇಸು ಯಾವರೀತಿಯಲ್ಲಿ ಆಕಾಶದೊಳಕ್ಕೆ ಹೋಗಿರುವುದನ್ನು ಕಂಡಿರೋ ಅದೇ ರೀತಿಯಲ್ಲಿ ಬರುವನು ಎಂದು ಹೇಳಿದರು. ದೇವಕುಮಾರನ ಆರೋಹಣವನ್ನು ಕಣ್ಣಾರೆ ಕಂಡ ಶಿಷ್ಯವೃಂದದವರೂ, ಯೇಸುವನ ತಾಯಿಯು ಆ ರಾತ್ರಿಯೆಲ್ಲಾ ಆತನ ಅದ್ಬುತಕಾರ್ಯಗಳನ್ನು,ಕೆಲವು ವೇಳೆ ಸಂಭವಿಸದ ಅದ್ಭುತವೂ ಅತಿಶಯವೂ ಆದ ಸಂಗತಿಗಳ ಬಗೆಗೆ ಮಾತನಾಡುತ್ತಾ ಸಮಯ ಕಳೆದರು.GCKn 103.1

    ದೇವರಾಜ್ಯಾದಿಕಾರದ ಎಡೆಗೆ ಕಹಿಹಗೆಯನ್ನು ಉಗುಳುತ್ತಾ ಸೈತಾನನು ದೂತರೊಂದಿಗೆ ಸಮಾಲೋಚನೆ ನಡೆಸಿ -ಅವನು ಈ ಲೋಕದ ಮೇಲೆ ತನ್ನ ಬಲ ಪ್ರಭಾವವನ್ನು ಹೊಂದಿರುವಾಗ ತನ್ನ ಕಾರ್ಯಗಳು ಯೇಸುವಿನ ಅನುಯಾಯಿಗಳ ಮೇಲೆ ಹತ್ತು ಪಟ್ಟು ಹೆಚ್ಚಾಗಿರಬೇಕು ಎಂದು ಹೇಳಿದನು .ಯೇಸುವಿಗೆ ವಿರೋದವಾಗಿದೆ ಏನೂ ಅಸಿತ್ವಕ್ಕೆ ಬರಲಿಲ್ಲ; ಸಾದ್ಯವಾದರೆ ಆತನ ಹಿಂಬಾಲಕರನ್ನು ಜಯಿಸಲೇಬೇಕು, ಪ್ರತಿ ಸಂತತಿಯಲ್ಲೂ ತಮ್ಮ ಕಾರ್ಯ ಸಾಧಿಸಬೇಕು; ಯೇಸುವನ್ನು ನಂಬಿ ಆತನ ಪುನರುತ್ಥಾನ ಆರೋಹಣದಲ್ಲಿ ಭರವಸವಿಟ್ಟವರನ್ನು ಬಲೆಹಾಕಿ ಹಿಡಿಯಬೇಕು ಎಂದನು. ಯೇಸುವು ಆತನ ಶಿಷ್ಯರಿಗೆ ಸೈತಾನನ ಹಿಡಿತದಲ್ಲಿರುವವರನ್ನು ಬಿಡಿಸುವ, ಖಂಡಿಸುವ, ಗುಣಪಡಿಸುವ ಅಧಿಕಾರವನ್ನು ನೀಡಿದ್ದಾನೆಂದು ಆತನ ದೂತರಿಗೆ ಸ್ಪಷ್ಟಪಡಿಸಿದನು ಅವರು ಅಬ್ಬರಿಸುವ ಸಿಂಹದ ಹಾಗೆ ಯೇಸುವಿನ ಹಿಂಬಾಲಕರನ್ನು ನಾಶಪಡಿಸಲು ಹೊರಟರು,GCKn 104.1

    ಓದಿ; ಕೀರ್ತನೆ 24;7-10; ಅಪೋಸ್ತಲರ ಕೃತ್ಯ 1:1-11 GCKn 104.2

    Larger font
    Smaller font
    Copy
    Print
    Contents