Loading...
Larger font
Smaller font
Copy
Print
Contents
ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ 16. - ಪೌಲನು ಯೆರುಸಲೇಮಿಗೆ ಭೇಟಿಕೊಟ್ಟದ್ದು

    ಪೌಲನು ಪರಿವರ್ತನೆಗೊಂಡ ಅಲ್ಪಕಾಲದಲ್ಲೇ ಯೆರುಸಲೇಮಿಗೆ ಭೇಟಿ ಕೊಟ್ಟು, ಯೇಸುವಿನ ವಿಷಯವಾಗಿಯೂ, ಆತನ ಕೃಪೆಯ ಅದ್ಬುತಗಳನ್ನೂ ಬೋಧಿಸಿದನು. ಅವನು ತನ್ನ ಅದ್ಬುತ ಪರಿವರ್ತನೆ ಬಗೆಗೆ ವಿವರಿಸುವಾಗ ಯಾಜಕರು ಅಧಿಪತಿಗಳೂ ರೊಚ್ಚಿಗೆದ್ದು ಆತನ ಜೀವತೆಗೆಯಲು ನೋಡಿದರು. ಆದರೆ ಪೌಲನು ಪ್ರಾರ್ಥನೆ ಮಾಡುತ್ತಿದ ಸಮಯದಲ್ಲಿ ಧ್ಯಾನಪರವಶನಾದನು, ಯೇಸುವು ಅವನ ಜೀವ ಉಳಿಸಬೇಕೆಂದು ದರ್ಶನಕೊಟ್ಟು ಯೆರುಸಲೇಮಿನಿಂದ ನೀನು ತ್ವರೆಪಟ್ಟು ಹೋಗು; ಏಕೆಂದರೆ ನನ್ನ ಬಗೆಗಿನ ನಿನ್ನ ಸಾಕ್ಷಿಯನ್ನು ಇಲ್ಲಿನವರು ಅಂಗೀಕರಿಸುವುದಿಲ್ಲ ಎಂದನು. ಪೌಲನು ಬಹು ವಿನೀತನಾಗಿ ಯೇಸುವನ್ನು ಬೇಡುತ್ತಾ, ಸ್ವಾಮಿ ನಿನ್ನಲ್ಲಿ ಯಾರಾರು ನಂಬಿಕೆಯಿಟ್ಟಿದ್ದಾರೋ ಅವರನ್ನೆಲ್ಲಾ ನಾನು ಸಭಾಮಂದಿರ ಥಳಿಸಿ ಸೆರೆಗೆ ಹಾಕಿಸಿದನ್ನು ಅವರು ಬಲ್ಲರು. ಮತ್ತು ಧರ್ಮಬಲಿಯಾಗಿ ಸಾಕ್ಷಿಯಾದ ಸ್ತೆಫೆನನ ರಕ್ತವು ಚೆಲ್ಲಿದಾಗ ನಾನು ಅಲ್ಲೇ ನಿಂತಿದ್ದು ಮರಣಕ್ಕೆ ಸಮ್ಮತಿಸಿದೆನು. ಅವವ್ನನ್ನು ಕೊಂದವರ ವಸ್ತ್ರಗಳನ್ನು ಕಾಯುತ್ತಿದ್ದೆನು. ಯರುಸಲೇಮಿನ ಯಹೂದ್ಯರು ನನ್ನ ಸಾಕ್ಷಿಯನ್ನು ತಳ್ಳಿಹಾಕುವುದಿಲ್ಲ; ನನ್ನಲ್ಲಾದ ಮಹಾ ಪರಿವರ್ತನೆಯು ದೇವರ ಬಲದಿಂದೆ ಆದದ್ದೇ ಎಂದು ಅರ್ಥಮಾಡಿಕೊಳ್ಳುವರು ಎಂದು ಹೇಳಿದನು. ಆದರೆ ಯೇಸುವು, ಇಲ್ಲಿಂದ ಹೋಗು ನಾನು ನಿನ್ನನ್ನು ದೂರಕ್ಕೆ ಅನ್ಯಜನರ ಬಳಿಗೆ ಕಳಿಹಿಸುತ್ತೇನೆಂದು ಹೇಳಿದನು .GCKn 130.1

    ಯೆರುಸಲೇಮಿನಿಂದ ಹೊರಟ ನಂತರ , ಪೌಲನು ವಿವಿಧ ಸ್ಥಳಗಳಿಗೆ ಪತ್ರ ಬರೆದು, ತನ್ನ ಅನುಭವವನ್ನು ವಿವರಿಸಿ ಬಲವಾದ ಸಾಕ್ಷಿ ಕೊಡುತ್ತಿದ್ದನು. ಆದರೆ ಕೆಲವರು ಆ ಪತ್ರಗಳು ಪರಿಣಾಮ ಬೀರದ ಹಾಗೆ ಹಾಳುಮಾಡಲು ಶ್ರಮಿಸುತ್ತಿದ್ದರು. ಅವನಪತ್ರಗಳು ಬಹು ಮೌಲ್ಯವುಳ್ಳದ್ದೂ ಮತ್ತು ಶಕ್ತಿಯುತವಾಗಿದೆ ಎಂದು ಅವರು ಒಪ್ಪಿಕೊಳ್ಳಬೇಕಾಗಿತ್ತು; ಆದರೆ ಆ ಭೌತಿಕಅಸ್ತಿತ್ವವು ಬಹು ಬಲಹೀನವಾಗಿದೆ ಮತ್ತು ಉಪದೇಶವು ತಿರಸ್ಕಾರಕ್ಕೆ ಯೋಗ್ಯವಾಗಿದೆ ಎಂದು ಪ್ರಚುರಪಡಿಸಿದರು.GCKn 131.1

    ಪೌಲನು ಬಹು ಪಾಂಡಿತ್ಯವುಳ್ಳವನಾಗಿದ್ದು, ಆತನ ಕೇಳುಗರನ್ನು ತನ್ನ ಜ್ಞಾನ ಮತ್ತು ನಡವಳಿಕೆಯಿಂದ ಮೋಡಿಮಾಡುತ್ತಿದ್ದುದನ್ನು ನಾನು ಕಂಡೆನು. ಘನಪಂಡಿತರೆಲ್ಲಾ ಅವನ ಬುದ್ದಿಮತ್ತೆಗೆ ಮೆಚ್ಚುಗೆ ತೋರುಸುತ್ತಾ ಯೇಸುವಿನಲ್ಲಿ ನಂಬಿಕೆಯಿಟ್ಟರು. ಅರಸರ ಮುಂದೆ ಮತ್ತು ಬಹು ದೊಡ್ಡ ಸಭೆಗಳಲ್ಲಿ ನಿರರ್ಗಳವಾಗಿ ವಾಧಿಸುವುದು ಅವನ ಮುಂದೆ ಎಲ್ಲರೂ ಬಾಗುವಂತೆ ಮಾಡುತ್ತಿತ್ತು. ಇದು ಯಾಜಕರನ್ನೂ ಹಿರಿಯರನ್ನೂ ಉರಿಗೊಳಿಸುತ್ತಿತ್ತು. ಪೌಲನು ಬಹು ಸುಲಭವಾಗಿ ವಾಗ್ವಾದಕ್ಕೆ ಎಳೆಯುತ್ತಾ ಕೆದಕುತ್ತಾ ತನೊಂದಿಗೆ ಜನರನ್ನು ತನ್ನ ಯೋಚನೆಯ ಜಾಡಿನಲ್ಲೇ ಎಳೆದುಕೊಂಡು ಬಂಧಿಸಿ ದೇವರ ಕೃಪೆಯ ಮಹಾ ಸಂಪತ್ತನ್ನು ದರ್ಶಿಸಲು, ಕ್ರಿಸ್ತನ ಪರಮಾದ್ಬುತವಾದ ಪ್ರೀತಿಯನ್ನು ಅವರ ಮುಂದೆ ಚಿತ್ರೀಕರಿಸುತ್ತಿದ್ದನು. ಬಳಿಕ ಸಾಮನ್ಯ ಜನರಿಗೆ ಬಹು ಸರಳವಾಗಿ ಅವರ ತಿಳುವಳಿಕೆಯ ಸ್ಥಾನಕ್ಕೆ ಇಳಿಯುತ್ತಿದ್ದನು. ಮತ್ತು ಮಹಾ ಪ್ರಭಾಲವಾಗಿ ಅನುಭವವನ್ನು ವಿವರಿಸಲು, ಅದು ಕ್ರಿಸ್ತನ ಶಿಷ್ಯರಾಗಲು ಅವರಲ್ಲಿ ಅತೀವ ಹುರುಪನ್ನು ಎಬ್ಬಿಸುತ್ತಿತ್ತು.GCKn 131.2

    ಪೌಲನು ಮತ್ತೆ ಯೆರುಸಲೇಮಿಗೆ ಹೋಗಿ, ಬಂದಿಸಲ್ಪಟ್ಟ ಹಿಂಸೆಗೆ ಒಳಗಾಗಬೇಕೆಂದು ಕರ್ತನು ಪ್ರಕಟಿಸಿದನು. ಬಹು ಕಾಲದವರೆಗೂ ಅವನು ಸೆರೆಯಾವನಾಗಿದ್ದವನು; ಆದರೂ ಕರ್ತನು ಅತನ ಮೂಲಕ ವಿಶೇಷಕಾರ್ಯವನ್ನು ಮಾಡಿಸುತ್ತಿದ್ದನು. ಕ್ರಿಸ್ತನ ಬಗೆಗಿನ ತಿಳುವಳಿಕೆ ಸಾರುವುದು ಮತ್ತು ದೇವರನ್ನು ಮಹಿಮೆ ಪಡಿಸುವುದೇ ಪೌಲನ ಸಂಕೋಲೆಯಾಗಿತ್ತು. ವಿಚಾರಣೆಗಾಗಿ ಪಟ್ಟಣದಿಂದ ಪಟ್ಟಣ್ಣಕ್ಕೆ ಕಳುಹಿಸಲ್ಪಟ್ಟಾಗ ಯೇಸುವಿನ ವಿಷಯವಾಗಿ ಸಾಕ್ಷಿ ನೀಡುತ್ತಾ ರಾಜರು ಅಧಿಪತಿಗಳ ಮುಂದೆ ಅತ್ಯಾಸಕ್ತಿಕರವಾದ ತನ್ನ ಪರಿವರ್ತನೆಯ ಘಟನೆಯನ್ನು ವಿವರಿಸುತ್ತಿದ್ದನು. ಏಕೆಂದರೆ ಈ ಸಾಕ್ಷಿಕೇಳುವಲ್ಲಿ ಅವರೂ ವಂಚಿತರಾಗಬಾರದು ಎಂಬುದೇ. ಸಾವಿರರು ಜನರು ಅವನನ್ನು ನಂಬಿ ಹರ್ಷಗೊಂಡರು. ಪೌಲನು ಜಲಪ್ರಯಣ ಮಾಡುವಾಗ ದೇವರ ವಿಶೇಷ ಉದ್ದೇಶವು ಗುರಿಮುಟ್ಟಿದ್ದು, ಪೌಲನ ಮೂಲಕ ಹಡಗಿನ ನೌಕರರು ದೇವರ ಶಕ್ತಿಗೆ ಸಾಕ್ಷಿಯಾದರು; ಮತ್ತು ಅನ್ಯಜನರೂ ಸಹ ಯೇಸುವಿನ ನಾಮವನ್ನು ಕೇಳಿ, ಅತನ ಬೋಧನೆಯನ್ನು ಕೇಳಿ ಅದ್ಬುತಕಾರ್ಯಗಳಿಗೆ ಸಾಕ್ಷಿಯಾಗಿ ಪರಿವರ್ತನೆಗೊಳಗಾದರು. ಇವನ ವದ ಪ್ರತಿವಾದದಲ್ಲಿ ಅರಸರೂ ಅಧಿಪತಿಗಳೂ ಮಂತ್ರಮುಗ್ದರಾದರು, ಅವನು ಉತ್ಸುಕತೆಯಿಂದ ಪವಿತ್ರತ್ಮಾಭರಿತನಾಗಿ ಯೇಸುವನ್ನು ಬೋಧಿಸಿ, ತನ್ನ ಅನುಭವದ ಘಟನೆಯನ್ನು ವಿವರಿಸುವಾಗ ಯೇಸು ದೇವರ ಮಗನೇ ಹೌದು! ಎಂಬ ಮನಸಾಕ್ಷಿ ಅವರಲ್ಲಿ ಸ್ಪುರಿಸಿತು; ಪೌಲ ವಾದಕೇಳುತ್ತಾ ಆಶ್ಚರ್ಯಭರಿತನಾಗಿ ಒರ್ವನು ಕ್ರೈಸ್ತನಾಗುವುದಕ್ಕೆ ಬಹುಮಟ್ಟಿಗೆ ಒಡಂಬಡಿಸುತ್ತಿಯೂ ಎಂದುಹೇಳಿದನು. ಬಹುಷಃ ಭವಿಷ್ಯದಲ್ಲಿ ಅವರು ಕೇಳಿರುವ ವಿಷಯದ ಬಗ್ಗೆ ಪರ್ಯಾಲೋಚಿಸಬಹುದೆಂದು ಭಾವಿಸಿದನು. ಅದರೆ ಅವರು ಉದಾಸೀನಮಾಡುತ್ತಾ ತಡೆಮಾಡುತ್ತಿರುವಾಗ ಸೈತಾನನು ಅದನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡುನು. ಹೃದಯವು ಮೃದುವಾಗಿರುವಾಗ ಬಂದ ಅವಕಾಶವನ್ನು ನಿರ್ಲಕ್ಷಿಸಿದರು ಇವರಿಂದ ಅವಕಾಶವನ್ನು ನಿರಂತವಾಗಿ ಉದಾಸೀನ ಮಾಡಿದಂತಾಯಿತು .ಹೃದಯಗಳು ಕಠಿಣವಾದವು.GCKn 132.1

    ಪ್ರಥಮವಾಗಿ ಯೇಸುವನ್ನು ರಕ್ಷಕನನ್ನಾಗಿ ಅಂಗೀಕರಿಸಿಕೊಳ್ಳಬಾರದೆಂದು ಸೈತಾನನು ಯಹೂದ್ಯರ ಕಣ್ಣುಗಳನ್ನು ಕುರುಡಾಗಿಸಿದನು; ನಂತರ ಆತನ ಘನಕಾರ್ಯಗಳನ್ನು ನೋಡಿ ಮತ್ಸರದಿಂದ ಅವನ ಪ್ರಾಣವನ್ನು ಅಪೇಕ್ಷಿಸುವುದರಲ್ಲಿ ಸೈತಾನನ ನಡುಸುವಿಕೆಯನ್ನು ನಾನು ಕಂಡೆನು. ಸೈತಾನನು ಯೇಸುವಿನ ಸ್ವಂತ ಶಿಷ್ಯರಲ್ಲಿ ಒಬ್ಬನೊಳ್ಳಗೆ ಸೇರಿ ಯೇಸುವನ್ನು ಅವರ ಕೈಗೆ ಹಿಡುಕೊಟ್ಟನು, ಮತ್ತೆ ಜೀವದಾಯಕನೂ ಮಹಿಮೆಯ ಕರ್ತನನ್ನು ಅವರು ಶಿಲುಬೆಗೆ ಹಾಕಿದರು. ಯೇಸುವಿನ ಪುನರುತ್ಥಾನವಾದ ಮೇಲೆ ಈ ಸತ್ಯವನ್ನು ಮರೆಮಾಡಿ ಸುಳ್ಳುಸಾಕ್ಷಿಹೇಳುವ ರೋಮನ್ ಪಹರೆಯವರನ್ನು ಹಣಕ್ಕೆ ಕೊಂಡುಕೊಂಡರು. ಆದರೆ ಯೇಸುವಿನ ಪುನರುತ್ಥಾನಕ್ಕೆ ಸಾಕ್ಷಿಕೊಡಲು ಬಹು ಜನರು ಪುನರುತ್ಥಾನ ಹೊಂದಿ ಎರಡರಷ್ಟು ಸ್ಪಷ್ಟಪಡಿಸಿದರು. ಯೇಸು ತನ್ನ ಶಿಷ್ಯರಿಗೂ ಮತ್ತು ಐದುನೂರಕ್ಕೂ ಹೆಚ್ಚು ಮಂದಿಗೆ ಪ್ರತ್ಯಕ್ಷನಾದನು ಆತನೊಂದಿಗೆ ಎಬ್ಬಿಸಲ್ಪಟ್ಟ ಇತರರು ಬಹು ಜನರಿಗೆ ಕಾಣಿಸಿಕೊಂಡು, ಯೇಸು ಎದ್ದಿದ್ದಾನೆ ಎಂದು ಸಾರಿದರು .GCKn 133.1

    ಸೈತಾನನು, ದೇವರ ವಿರುದ್ಧವಾಗಿ ಯಹೂದ್ಯರನ್ನು ಎತ್ತಿಕಟ್ಟಿದನು ಅವರು ಆತನ ಮಗನನ್ನು ಅಂಗೀಕರಿಸದೆ ಕ್ರೂಜೆಗೆ ಜಡಿದು ತಮ್ಮ ಕೈಗಳನ್ನು ಆತನ ರಕ್ತದಿಂದ ಮಲಿನಮಾಡಿಕೊಂಡರು. ಯೇಸುವೇ ದೇವಕುಮಾರನೆಂದೂ, ಲೋಕವಿಮೋಚಕನೆಂದೂ ಎಷ್ಟೇ ಬಲವಾದ ಗುರುತು ಸಿದ್ದಾಂತಗಳನ್ನು ಕೊಟ್ಟಾಗ್ಯೂ ಅವರು ಆತನನ್ನು ಕೊಲೆಗೈದರು, ಆತನ ಬಗೆಗಿನ ಯಾವ ಪುರಾವೆಗಳನ್ನೂ ಸ್ವಿಕರಿಸಲಿಲ್ಲ. ಸೈತಾನನು ಬೀಳುವಿಕೆಯ ನಂತರ ಇದ್ದಂತೆ ಅವರೂ ದೇವಕುಮಾರನ ವಿರುದ್ಧವಾಗಿರುವುದೇ ಅವರ ನಿರೀಕ್ಷೆಯೂ ಸಂತೃಪ್ತಿಯೂ ಆಗಿತ್ತು. ಶಿಷ್ಯರನ್ನು ಹಿಂಸಿಸಿ ಕೊಲ್ಲುವುದರಲ್ಲಿ ಅವರ ದಂಗೆಯನ್ನು ಮುಂದುವರಿಸಿದರು. ತಾವೇ ಕ್ರೂಜೆಗೆ ಹಾಕಿದ ಯೇಸುವಿನ ಹೆಸರಿನಷ್ಟು ಕಿವಿಗೆ ಕರ್ಕಶವಾದದ್ದು ಬೇರಾವುದೂ ಇರಲಿಲ್ಲ. ಆದ್ದರಿಂದ ಆತನ ಪರವಾದ ಯಾವ ಸಿದ್ಧಾಂತಕ್ಕೂ ಕಿವಿಗೊಡಭಾರದೆಂದು ತೀರ್ಮಾನಿಸಿದರು. ಸ್ತೆಫೆನನ ವಿಷಯದಲ್ಲಿದ್ದಂತೆ, ಅವನ ಮೂಲಕ ಪವಿತ್ರಾತ್ಮನು ದೇವಕುಮಾರನ ಆಸ್ತಿತ್ವದ ಬಗ್ಗೆ ಪ್ರಕಟಿಸಿದಾಗ ಎಲ್ಲಿ ಮಂದಟ್ಟು ಮಾಡಿಕೊಳ್ಳುವವೋ ಎಂದು ಕಿವಿಗಳನ್ನು ಮುಚ್ಚಿಕೊಂಡರು. ದೇವರ ಪ್ರಕಾಶದಲ್ಲಿ ಸ್ತೆಫೆನನು ಸುತ್ತುವರಿದಾಗ ಅವನನ್ನು ಕಲ್ಲೆಸೆದು ಕೊಂದರು. ಸೈತಾನನು ಯೇಸುವಿನ ಕೊಲೆಗಾರರನ್ನು ತನ್ನ ಹಿಡಿತದಲ್ಲಿ ಭದ್ರವಾಗಿ ಹಿಡಿದಿದ್ದನು. ದಷ್ಟಕಾರ್ಯ ಮಾಡುವುದರಲ್ಲಿ ಆತನ ಪ್ರಜೆಗಳಾಗಿರಲು ಅವರು ಸಮ್ಮತಿಸಿದರು, ಇವರ ಮೂಲಕ ಕ್ರಿಸ್ತನಲ್ಲಿ ನಂಬಿಕೆಯಿಟ್ಟವರನ್ನು ತೊಂದರೆಗೆ ಸಿಲುಕಿಸಿ ಬೇಸರ ಪಡಿಸಿದರು. ಯೇಸುವಿನ ಹೆಸರಿನ ವಿರುದ್ಧವಾಗೂ ಮತ್ತು ಆತನ್ನು ನಂಬಿ ಹಿಂಬಾಲಿಸಿದವರ ವಿರುದ್ದ ಅನ್ಯರನ್ನು ಪ್ರಚೋಧಿಸುವುದರಲ್ಲಿ ಯಹೂದ್ಯರ ಮೂಲಕ ಕಾರ್ಯಪ್ರವೃತನಾದನು. ಆದರೆ ಶಿಷ್ಯರನ್ನು, ಅವರು ಕೆಲಸದಲ್ಲಿ ಬಲಗೊಳಿಸಿ, ಕಂಡು ಕೇಳಿದುದರ ವಿಷಯವನ್ನು ಸಾಕ್ಷಿ ಹೇಳಲು ಮತ್ತು ಅಂತ್ಯದಲ್ಲಿ ತಮ್ಮ ರಕ್ತದಿಂದ ಸಾಕ್ಷಿಗೆ ಮುದ್ರೆಹಾಕಿ ದೃಡವಾಗಿ ನಿಲ್ಲುವಂತೆ ಬಲಗೊಳಿಸಲು ದೇವರು ತನ್ನ ದೂತರನ್ನು ಅವನ ಬಳಿಗೆ ಕಳುಹಿಸಿದನು.GCKn 134.1

    ಯಹೂದ್ಯರು ತನ್ನ ಬಲೆಯಲ್ಲಿ ಕ್ಷೇಮವಾಗಿದ್ದಾರೆಂದು ಸೈತಾನನು ಆನಂದಪಟ್ಟನು, ಅವರು ಕೆಲಸಕ್ಕೆ ಭಾರದ ಆಚಾರಗಳು, ಬಲಿ ಮತ್ತು ಸಂಸ್ಕಾರಗಳಲ್ಲಿ ನಿರಂತರಾದರು .ಕ್ರಿಸ್ತನು ಶಿಲುಬೆ ಮೇಲೆ ತೂಗುತ್ತಾ ‘ತೀರಿತು’ ಎಂದು ಮಾಶಬ್ದದಿಂದ ಕೂಗಿದಾಗ ದೇವಾಲಯದ ಪರದೆಯು ಮೇಲಿಂದ ಕೆಳಕ್ಕೆ ಹರಿದುಹೋಯಿತು. ಅದು ಇನೋ ಮುಂದೆ ಯಾಜಕರನ್ನು ದೇವರ ದೇವಾಲಯದಲ್ಲಿ ಸಂಧಿಸುವುದಿಲ್ಲವೆಂತಲೂ, ಅವರ ಆಚಾರವಿಧಿಗಳು ಮತ್ತು ಬಲಿಯನ್ನು ಅಂಗೀಕರಿಸುವುದಿಲ್ಲವೆಂತಲೂ; ಮತ್ತು ಯಹೂದ್ಯರಿಗೂ ಅನ್ಯರಿಗೂ ನಡುವಿದ್ದ ಗೋಡೆಯು ಬಿದ್ದುಹೋಗಿದೆ ಎಂದು ತೋರಿಸುವ ಕಾರ್ಯವಾಗಿತ್ತು. ಇಬ್ಬರಿಗೂ ಯೇಸು ತನ್ನನ್ನೇ ಬಲಿಯಾಗಿ ಒಪ್ಪಿಸಿದನು, ಮತ್ತು ಒಂದುವೇಳೆ ರಕ್ಷಿಸಲ್ಪಡುವುದಾದರೆ, ಇಬ್ಬರೂ ಯೇಸುವೇ ಪಾಪಕ್ಕೆ ಬಲಿ ಎಂದೂ, ಲೋಕರಕ್ಷಕನೆಂದೂ ನಂಬಬೇಕಾಯಿತು, GCKn 135.1

    ಯೇಸುವು ಶಿಲುಬೆಯಲ್ಲಿ ತೂಗುತ್ತಿದ್ದಾಗ ಸೈನಿಕರು ಆತನ ಪಕ್ಕೆಯನ್ನು ತಿವಿಯಲು ರಕ್ತವೂ ನೀರೂ ಸುರಿದವು. ಅಂದು ಎರಡು ತೊರೆಯಾಗಿತ್ತು, ಒಂದು ರಕ್ತದ್ದು ಮತ್ತೊಂದು ನೀರಿನದು ಆತನ ನಾಮವನ್ನು ನಂಬಿದವರ ಪಾಪವನ್ನು ತೊಳೆಯಲು ರಕ್ತವೂ, ವಿಶ್ವಾಸಿಗಳಿಗೆ ನೀತ್ಯಜೀವಕೊಂಡುವ ಜೀವಜಲವು ಯೇಸುವಿನಲ್ಲಿ ದೊರೆಯುವುದೆಂಬುದನ್ನು ಸೂಚಿಸಲು ನೀರು ಹರಿಯಿತು’ ಓದಿ: ಮತ್ತಾಯ 27:51; ಯೋಹಾನ 19:34; ಅಪೋಸ್ತಲರ ಕೃತ್ಯ ಅಧ್ಯಾಯ 24 ಮತ್ತು 26GCKn 136.1