Loading...
Larger font
Smaller font
Copy
Print
Contents
ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ 25. - ಪುನರಾಗಮನದ ಚಳುವಳಿ ಸ್ಪಷ್ಟಪಡಿಸಿದ್ದು

    ಒಂದೇ ಪಾಶದಿಂದ ಕಟ್ಟಿಲ್ಪಟ್ಟಿರುವ ಅಸಂಖ್ಯಾತ ತಂಡಗಳನ್ನು ನಾನು ಕಂಡೆನು. ಇವುಗಳಲ್ಲಿ ಬಹು ತಂಡಗಳು ಪರಿಪೂರ್ಣ ಕತ್ತಲಿನಲ್ಲಿತ್ತು ಅವರ ಕಣ್ಣುಗಳು ಭೂಲೋಕದ ಕಡೆಗೆ ನೋಡುತ್ತಿದ್ದವು. ಅವರಿಗೂ ಯೇಸುವಿಗೂ ಯವುದೇ ಸಂಬಂಧವಿಲ್ಲದಿರುವಂತೆ ಕಂಡಿತು. ಈ ತಂಡದಲ್ಲಿದ್ದೆ ಚದುರಿಹೋಗಿರುವ ಜನರ ಮುಖವು ಬಾಡಿಹೋಗಿದ್ದು ಅವರ ಕಣ್ಣುಗಳು ಪರಲೋಕದ ಕಡೆಗೆ ದೃಷ್ಟಿಸುತ್ತಿದ್ದುದನ್ನು ನಾನು ಕಂಡೆನು. ಸೂರ್ಯನ ಕಿರಣಗಳಂತಿರುವ ಬೆಳಕು ಯೇಸುವಿನಿಂದ ಬಂದ ಜೋತಿಷ್ಕಿರಣವಾಗಿ ಅವರಿಗೆ ಕೊಡಲ್ಪಟ್ಟಿತು. ಒರ್ವ ದೂತನು, ಅವರೆಡೆಗೆ ಗಮನವಿಟ್ಟು ನೋಡು ಎಂದು ನನಗೆ ಹೇಳಿದನು. ಬೆಳಕಿನ ಕಿರಣಗಳನ್ನು ಬೀರುತ್ತಿದ್ದ ಒಬ್ಬೊಬ್ಬರ ಮುಖವನ್ನು ದೂತನು ಗಮನಿಸುತ್ತಿರುವುದನ್ನು ನಾನು ಕಂಡೆನು, ಕತ್ತಲಲ್ಲಿದ್ದವರನ್ನು ದುಷ್ಟ ದೂತರು ಸುತ್ತುವರಿದಿದ್ದರು. ಒರ್ವ ದೂತನು - ನೀವೆಲ್ಲರೂ ಭಯಪಟ್ಟು ಆತನನ್ನು ಘನಪಡಿಸಿರಿ, ಆತನು ನ್ಯಾಯತೀರ್ಪು ಮಾಡುವ ಗಳಿಗೆಯು ಬಂದಿದೆ ಎಂದು ಕೂಗುವುದನ್ನು ಕೇಳಿದೆನು. GCKn 196.1

    ಮಹಾಪ್ರಭೆಯಿಂದ ಕೂಡಿದ ಬೆಳಕು ಎಲ್ಲಾ ತಂಡಗಳ ಮೇಲೂ ನೆಲೆಗೊಂಡು ಅಂಗೀಕರಿಸಿದವರಿಗೆ ಜ್ಞಾನೋದಯ ಉಂಟುಮಾಡಲು ಹರಿಯಿತು. ಕತ್ತಲಲ್ಲಿದ್ದ ಕೆಲವರು ಈ ಬೆಳಕನ್ನು ಅಂಗೀಕರಿಸಿ ಹರ್ಷಗೊಂಡರು; ಮತ್ತೆ ಕೆಲವರು ಅಂಗೀಕರಿಸದೆ, ಇದು ತಮ್ಮನ್ನು ದಾರಿತಪ್ಪಿಸುವ ವಂಚನೆ ಎಂದು ಹೇಳಿದರು. ಬೆಳಕು ಅವರನ್ನು ಹಾದುಹೋಯಿತು ಹಾಗೂ ಕತ್ತಲೆಯು ಅವರಲ್ಲಿ ನೆಲೆಗೊಂಡಿತು. ಯೇಸುವಿನಿಂದ ಬೆಳಕನ್ನು ಸ್ವೀಕರಿಸಿಕೊಂಡವರು, ಅವರ ಮೇಲೆ ಪಸರಿಸಿದ ಅಮೂಲ್ಯ ಬೆಳಕಿನಲ್ಲಿ ಉಲ್ಲಾಸಗೊಂಡರು. ಅವರ ಮುಖ ಪ್ರಜ್ವಲಿಸಿತು ಗಾಢವಾದ ಆಸಕ್ತಿಯಿಂದ ಯೇಸುವಿನ ಮೇಲೆ ದೃಷ್ಟಿ ನೆಟ್ಟಾಗ ಪವಿತ್ರಾನಂದದಿಂದ ಬೆಳಗುತ್ತಾ ಆ ದೂತನ ಕೂಗಿನೊಂದಿಗೆ ಧ್ವನಿಸೇರಿಸುತ್ತಾ — ನೀವೆಲ್ಲರೂ ಭಯಪಟ್ಟು ಆತನನ್ನು ಘನಪಡಿಸಿರಿ ಆತನು ನ್ಯಾಯತೀರ್ಪು ಮಾಡುವ ಗಳಿಗೆಯು ಬಂದಿದೆ ಎಂದರು, ಇವರು ಉಚ್ಚಕಂಠದಿಂದ ಕೂಗುತ್ತಿರುವಾಗ ಕತ್ತಲೆಯಲ್ಲಿದ್ದವರು ತಮ್ಮ ಭುಜಗಳಿಂದ ಒತ್ತರಿಸುತ್ತಾ ತಳ್ಳುತ್ತಿದ್ದರು. ಬಳಿಕ ಪರಿಶುದ್ದ ಬೆಳಕನ್ನು ಆದರಿಸಿದವರು ತಂಡದವರೊಂದಿಗೆ ತಮ್ಮನು ಕಟ್ಟಲ್ಪಟ್ಟಿದ್ದ ಪಾಶವನ್ನು ಕಿತ್ತೆಸೆದು ಅವರಿಂದ ಬೇರ್ಪಟ್ಟು ನಿಂತರು. ಹೀಗೆ ತಮ್ಮ ಕಟ್ಟುಗಳನ್ನು ಕಿತ್ತೆಸೆದಾಗ ಬೇರೆ ಬೇರೆಗುಂಪಿನಲ್ಲಿದ್ದ ಗೌರವಿಸಲ್ಪಡುತ್ತಿದ್ದವರಲ್ಲಿ ಕೆಲವರು, ಇವರ ಮದ್ಯೆ ಹಾದುಹೋಗುವಾಗ ಮೆಚ್ಚಿಗೆಯ ಮಾತುಗಳನ್ನಾಡಿದರು. ಮತ್ತೆ ಕೆಲವರು ಕೋಪದಿಂದ ದಿಟ್ಟಿಸುತ್ತಾ ಬೆಧರಿಕೆಯ ಚಲನವಲನವನ್ನು ತೋರಿದರು. ಬಲಹೀನವಾದ ಕಟ್ಟುಗಳನ್ನು ಬಿಗಿಗೊಳಿಸುತ್ತಿದ್ದು, ದೇವರು ನಮ್ಮೊಂದಿಗಿದ್ದಾನೆ ನಾವು ಬೆಳಕಿನಲ್ಲಿದ್ದೇವೆ ನಮ್ಮಲ್ಲಿ ಸತ್ಯವಿದೆ ಎನ್ನುತ್ತಿದ್ದರು ಇವೆರೆಲ್ಲಾ ಯಾರು ಎಂದು ನಾನು ಕೇಳಿದಾಗ, ಅವರೆಲ್ಲಾ ಧರ್ಮಬೋಧಕರು, ನಾಯಕರು, ಬೆಳಕನ್ನು ತಾವಾಗಿಯೇ ತಿರಸ್ಕರಿಸಿದವರು ಮತ್ತು ಇತರರೂ ಬೆಳಕನ್ನು ಹೊಂದಲು ಇಚ್ಛಿಸದವರೆಂದು ನನಗೆ ವಿವರಿಸಲಾಯಿತು. ಯಾರೆಲ್ಲಾ ಬೆಳಕಿನಲ್ಲಿ ನೆಲೆನಿಂತಿದ್ದರೋ ಅವರು ಅತೀವ ಆಸಕ್ತಿ ಮತ್ತು ಆಕಾಂಕ್ಷೆಯಿಂದ ಮೇಲೆ ನೋಡುತ್ತಾ, ಯೇಸುವು ಬಂದು ತಮ್ಮನ್ನು ಆತನ ಜೊತೆಗೆ ಕರೆದುಕೊಂಡು ಹೋಗುವನೆಂದುಕೊಂಡರು. ಕೂಡಲೆ ಆನಂದಭರಿತರಾಗಿ ಕಾದಿದ್ದವರ ಮೇಲೆ ಮೋಡದ ತೆರೆ ಮುಸುಕಿತು, ಅವರು ದುಃಖಿತರಾದರು. ಈ ಮೋಡದ ಕಾರಣವೇನು? ಎಂದು ನಾನು ಕೇಳಿದೆನು. ಇದು ಅವರಿಗಾದ ನಿರಾಶೆ ಎಂದು ನನಗೆ ತೋರಿಸಲಾಯಿತು. ಅವರು ಯಾವ ಸಮಯದಲ್ಲಿ ಯೇಸು ಬರುವನೆಂದುಕೊಂಡರೋ ಆ ಸಮಯ ಸರಿದು ಹೋಯಿತು. ನಿರಾಶೆ ಅವರನ್ನು ಮುಸುಕಿತು. ಈ ಮೂದಲೇ ನಾನು ಕಂಡಿದ ಧರ್ಮಬೋದಕರೂ ನಾಯಕರು ಹಿಗ್ಗಿದರು, ಬೆಳಕನ್ನು ತಿರಸ್ಕರಿಸಿದವರು ಬಹುವಾಗಿ ವಿಜಯೋತ್ಸಾಹಗೊಂಡರು ಸೈತಾನನು ಅವನ ದೂತರೂ ಅವರೊಂದಿಗೆ ಸೇರಿ ಉತ್ಸಾಹಗೊಂಡರು.GCKn 196.2

    ಆ ಬಳಿಕ ನಾನು ಮತ್ತೊಬ್ಬ ದೂತನ ಕೂಗನ್ನು ಕೇಳಿದೆನು, ಅವನು —ಬಿದ್ದಳು, ಬಿದ್ದಳು ಬಾಬೆಲೆಂಬ ಮಹಾನಗರಿಯು ಬಿದ್ದಳು ಎಂದು ಹೇಳಿದಾಗ ಮಂಕಾಗಿ ವಿಷಣ್ಣವದನರಾಗಿದ್ದವರ ಮುಖಗಳು ಕಳೆಗೊಂಡವು. ಆತನ ಬರುವಣದಲ್ಲಿ ಉಜ್ವಲ ಅಪೇಕ್ಷೆಯಿದ್ದವರು ಯೇಸುವಿನ ಮೇಲೆ ಮತ್ತೆ ನೋಟವನ್ನು ನೆಟ್ಟರು. ಆನಂತರ ಈ ಎರಡನೆಯ ದೂತನೊಂದಿಗೆ ಅಸಂಖ್ಯಾತ ದೂತರು ಸಂಭಾಷಿಸುವುದನ್ನು ನಾನು ಕಂಡೆನು. ಅವರೂ ಸಹ ಬಿದ್ದಳು, ಬಿದ್ದಳು ಬಾಬೆಲೆಂಬ ಮಹಾನಗರಿಯು ಬಿದ್ದಳೆಂದು ಆತನೊಂದಿಗೆ ಧ್ವನಿಗೂಡಿಸಿದರು. ಇಗೋ, ಮದಲಿಂಗನು, ಅವನನ್ನು ಎದುರುಗೊಳ್ಳುವುದಕ್ಕೆ ಹೊರಡಿರಿ! ಎಂದು ಕೂಗುವಾಗ, ಅವರ ಮಧುರ ಸಂಗೀತ ದ್ವನಿಯು ಎಲ್ಲಾಕಡೆ ಪಸರಿಸಿತು. ಬೆಳಕಿನ ಅನುಗ್ರಹವಾಗಿ ಯಾರಾರು ಅಂಗೀಕರಿಸಿದರೋ ಅವರ ಸುತ್ತಲೂ ಉಜ್ವಲ ಪ್ರಭೆಯಿಂದ ತುಂಬಿದ್ದ ಬೆಳಕು ಆವರಿಸಿತು ಇವರು ಸಹ ತಮ್ಮಮಹಾ ಪ್ರಭೆ ತುಂಬಿದ ಮುಖದಿಂದ ದೂತರೊಂದಿಗೆ ಸೇರಿ - ಇಗೋ ಮದಲಿಂಗನು ಅವನನ್ನು ಎದುರುಗೊಳ್ಳುವುದಕ್ಕೆ ಹೊರಡಿರಿ ಎಂದು ಅಬ್ಬರಿಸಿದರು. ವಿವಿದ ತಂಡಗಳ ಮದ್ಯೆ ಇವರು ಕೂಗುತ್ತಿದ್ದಾಗ ಬೆಳಕನ್ನು ನಿರ್ಲಕ್ಷಿಸಿದವರು,ಅವರನ್ನು ಕೋಪದಿಂದ ತಳ್ಳುತ್ತಾ ಕುಚೋದ್ಯವಾಡುತ್ತಾ ಧಿಕ್ಕರಿಸಿದರು. ಆದರೆ ದೇವದೂತರು ಹಿಂಸೆಗೊಳಗಾದವರ ಮೇಲೆ ತಮ್ಮ ರೆಕ್ಕೆಗಳನ್ನು ಹರಡಿ ಹಗುರವಾಗಿ ಸಾಗಿಸಿದರು, ಸೈತಾನನು ಮತ್ತು ದೂತರು ಇವರ ಸುತ್ತಲೂ ತಮ್ಮ ಅಂಧಕಾರವನ್ನು ಹೊದಿಸಿ ಪರಲೋಕದಿಂದ ಬರುವ ಬೆಳಕನ್ನು ನಿರಾಕರಿಸುವ ಒತ್ತಡ ಹೇರಲು ಪ್ರಯತ್ನಿಸಿದರು .GCKn 198.1

    ಈ ಕುಚೋದ್ಯಗೊಳಿಸಲ್ಪಟ್ಟು ಒತ್ತರಿಸಿದವರಿಗೆ, ಅವರಿಂದ ಹೊರಗೆ ಬನ್ನಿರಿ, ಅಶುದ್ಧವಾದದನ್ನು ಸ್ಪರ್ಶಿಸಬೇಡಿರಿ ಎನ್ನುವ ದ್ವನಿ ನನಗೆ ಕೇಳಿಸಿತು. ಅಸಂಖ್ಯಾತ ಜನರು ಅವರನ್ನು ಬಂಧಿಸಿದ್ದ ಪಾಶಗಳನ್ನು ಕಿತ್ತೊಗೆದು, ಧ್ವನಿ ಓಗೊಟ್ಟು, ಕತ್ತಲೆಯಲ್ಲಿದ್ದವರನ್ನು ಬಿಟ್ಟು, ಈಗಾಗಲೇ ಬಂಧನದಿಂದ ಮುಕ್ತರಾದವರ ಜೊತೆಗೆ ಸೇರಿ ಅವರೊಂದಿಗೆ ತಮ್ಮ ಧ್ವನಿಗೂಡಿಸಿದರು. ಅಂಧಕಾರದ ಗೊಂಪಿನವರಲ್ಲಿ ಇನ್ನೂ ಇದ್ದು ಅಕ್ಕರೆಯಿಂದ ಯಾತನೆಯ ಪ್ರಾರ್ಥನೆಮಾಡುತ್ತಿದ್ದವರ ಧ್ವನಿಯನ್ನು ಕೇಳಿದೆನು. ಈ ವಿವಿದ ಗುಂಪುಗಳ ನಡುವೆ ಧರ್ಮಬೋದಕರು ಮತ್ತು ನಾಯಕರು ಒಡಾಡುತ್ತಾ ತಮ್ಮ ಪಾಶವನ್ನು ಬಿಗಿಮಾಡುತ್ತಿದ್ದರು ಆದರೂ ಅಕ್ಕರೆಯಿಂದ ಪ್ರಾರ್ಥಿಸುತ್ತಿದ್ದವರ ಸ್ವರಗಳನ್ನು ನಾನು ಕೇಳಿದೆನು. ಇವರು ತಮ್ಮ ಕೈಗಳನ್ನು ಚಾಚಿ ಈಗಾಗಲೇ ದೇವರಲ್ಲಿ ಉಲ್ಲಾಸಿಸುತ್ತಾ ಸ್ವತಂತ್ರರಾಗಿದ್ದವರೊಂದಿಗೆ ಸೇರಿಕೊಳ್ಳಲು ಸಹಾಯ ಬೇಡುತ್ತಿದ್ದರೂ ಶ್ರದ್ದೆಯಿಂದ ಆಕಾಶದ ಕಡೆಗೆ ದೃಷ್ಟಿಸುತ್ತಿದ್ದವರಿಗೆ — ಅವರಿಂದ ಹೊರಗೆ ಬನ್ನಿರಿ, ಬೇರ್ಪಡಿರಿ ಎಂಬ ಉತ್ತರವು ಸಿಕ್ಕಿತು, ಜನರು ಸ್ವತಂತ್ರರಾಗಲು ಒದ್ದಾಡುತ್ತಿದ್ದುದನ್ನು ನಾನು ಕಂಡೆನು. ಮತ್ತು ಕೊನೆಗೆ ಕಟ್ಟಲ್ಪಟ್ಟಿದ್ದ ಬಂಧನವನ್ನು ಹರಿದು ಅವರು ಹೊರಬಂದರು, ಬಂಧುಪಾಶವನ್ನು ಬಿಗಿಮಾಡುವ ಶ್ರಮದ ವಿರುದ್ದ ತಿರುಗಿ ಬಿದ್ದರು, ದೇವರು ನಮ್ಮೊಂದಿಗಿದ್ದಾನೆ, ನಮ್ಮಲ್ಲಿ ಸತ್ಯವಿದೆ ಎಂದು ಪದೇ ಪದೇ ಉಸಿರಿತ್ತಿದ್ದ ಅವರ ಹೇಳಿಕೆಗೆ ಯಾವ ಮಾನ್ಯತೆ ನೀಡಲಿಲ್ಲ. ಕತ್ತಲಗುಂಪಿನಿಂದ ಜನರು ಸತತವಾಗಿ ಹೊರಬರಲಾರಂಭಿಸಿದರು, ಅವರು ಭೂಲೋಕದಿಂದ ಎತ್ತರದಲ್ಲಿದ್ದು, ಮುಕ್ತ ನೆಲದಲ್ಲಿದ್ದವರಂತೆ ಕಾಣುತ್ತಿದ್ದ ಪ್ರತ್ಯೇಕಿಸಲ್ಪಟ್ಟವರನ್ನು ಸೇರಿಕೊಂಡರು. ಅವರ ನೋಟವು ಮೇಲಿನದಾಗಿತ್ತು, ಮತ್ತು ದೇವರ ಪ್ರಭಾವವು ಅವರ ಮೇಲಿತ್ತು. ಅವರು ದೇವರಿಗೆ ಘನಮಾನವನ್ನು ಘೋಷಿಸುತ್ತಿದ್ದರು. ಅವರೆಲ್ಲಾ ಐಕ್ಯವಾಗಿ ಪರಲೋಕದ ಪ್ರಭೆಯಿಂದ ಆವರಿಸಲ್ಪಟ್ಟಂತೆ ಕಾಣುತ್ತಿದ್ದರು ಆ ಗುಂಪಿನ ಸುತ್ತಲೂ ಬೆಳಕಿನ ಪ್ರಭಾವದೊಳಗೆ ಸೇರಿದ್ದವರಿದ್ದರು, ಆದರೆ ಗುಂಪಿನವರೊಂದಿಗೆ ಅವರು ವಿಶೇಷವಾಗಿ ಸಂಯೋಜಿಸಿದವರಲ್ಲ. ಯಾರ ಮೇಲೆಲ್ಲಾ ಬೆಳಕು ಪ್ರಸರಿಸಿತೊ ಅವರೆಲ್ಲ ಬಹು ಆಸಕ್ತಿಯಿಂದ ಮೇಲೆ ನೋಡುತ್ತಿದ್ದರು. ಯೇಸುವು ಅವರನ್ನು ಬಹು ಮೆಚ್ಚಿಗೆಯಿಂದ ದೃಷ್ಟಿಸಿದನು. ಅವರು ಯೇಸು ಬರುವನೆಂದು ನಿರೀಕ್ಷಿಸಿದರು. ಆತನ ಬರುವಣಕ್ಕೆ ಕಾತುರಗೊಂಡರು. ಅವರು ಭೂಮಿಯ ಕಡೆಗೆ ಒಂದೇಒಂದು ಹುಡುಕುವ ನೋಟವನ್ನಿಡಲಿಲ್ಲ ಮತ್ತೆ ಮೋಡ ವೊಂದು ಕಾದುಕೊಂಡಿದ್ದವರ ಮೇಲೆ ನೆಲೆನಿಂತದ್ದನ್ನು ನಾನು ಕಂಡೆನು, ಆಗ ತಮ್ಮ ಆಯಾಸಗೊಂಡ ದೃಷ್ಟಿಯನ್ನು ಕೆಳಗೆ ತಿರುಗಿಸಿದ್ದನ್ನೂ ನಾನು ಕಂಡೆನು. ಈ ಬದಲಾವಣೆಗೆ ಕಾರಣವನ್ನು ನಾನು ಪ್ರಶ್ನಿಸಿದೆನು. ಆಗ ನನ್ನು ಸಂಗಡಿಗ ದೂತನು, ಅವರು ತಮ್ಮ ನಿರೀಕ್ಷಣೆಯಲ್ಲಿ ಮತ್ತೆ ನಿರಾಶೆಹೊಂದಿದರೆಂದು ಹೇಳಿದನು. ಯೇಸುವು ಇನ್ನೂ ಭೂಮಿಗೆ ಬರಲಿಲ್ಲ. ಇವರು ಯೇಸುವಿಗಾಗಿ ಇನ್ನೂ ಬಹು ಸಂಕಟವನ್ನೂ, ಹಿಂಸೆಯನ್ನೂ ಅನುಭವಿಸಬೇಕಾಗಿದೆ, ಮನುಷ್ಯರಿಂದ ಕಲಿತ ಸಂಪ್ರದಾಯ, ತಪ್ಪಾದ ವಿಧಿವಿಧಾನಗಳನ್ನು ಬಿಟ್ಟುಕೊಟ್ಟು ದೇವರಿಗೂ ಆತನ ವಾಕ್ಯಕ್ಕೂ ಸಂಪೂರ್ಣವಾಗಿ ಹಿಂತಿರುಗಬೇಕಾಗಿದೆ. ಇವರು ಪರಿಶುದ್ಧಿಸಲ್ಪಟ್ಟು ಪುಟಕ್ಕೆ ಹಾಕಿ ಶುಭ್ರರಾಗಬೇಕಾಗಿದೆ. ಈ ಕಟ್ಟುವಾದ ಶೋಧನೆ ಸಂಕಟವನ್ನು ತಾಳಿಕೊಂಡವರು ಮಾತ್ರ ನಿತ್ಯಜಯವನ್ನು ಹೊಂದುವರು.GCKn 199.1

    ಕಾದುಕೊಂಡಿದ್ದ ಆನಂದಭರಿತ ಗುಂಪು ತಿಳಿದುಕೊಂಡಂತೆ ದೇವದರ್ಶನ ಗುಡಾರವನ್ನು ಶುದ್ಧಿಕರಿಸಿ ಬೆಂಕಿಯಿಂದ ಭೂಮಿಯನ್ನು ಪರಿಶುದ್ಧಗೊಳಿಸಲು ಯೇಸುವು ಬರಲಿಲ್ಲ. ಅವರು ಪ್ರವಾದನಾ ಕಾಲವನ್ನು ಎಣಿಕೆಮಾಡಿದುದರಲ್ಲಿ ಸರಿಯಾಗಿದ್ದರು 1844ರಲ್ಲಿ ಪ್ರವಾದನಾ ಕಾಲವು ಅಂತ್ಯಗೊಂಡಿತು. ಗುಡಾರ ಹಾಗೂ ಅದರ ಶುದ್ದೀಕರಣೆಯ ವಿಧಾನ ಎಂದರೇನೆಂಬುದನ್ನು ಅರ್ಥಮಾಡಿಕೊಳ್ಳುವುದರಲ್ಲಿ ಅವರು ತಪ್ಪು ಮಾಡಿದ್ದರು. ಅಂತ್ಯಕಾಲದಲ್ಲಿ ಗುಡಾರವನ್ನು ಶುದ್ದೀಕರಿಸಲು ಯೇಸುವು ಮಹಾಪರಿಶುದ್ಧ ಸ್ಥಳವನ್ನು ಪ್ರವೇಶಿಸಿದನು, ನಾನು ಮತ್ತೆ, ನಿರಾಶೆಗೊಂಡು ಕಾಯುತ್ತಿದ್ದ ಗುಂಪನ್ನು ನೋಡಿದೆನು. ಅವರು ದುಃಖದಿಂದದ್ದರು. ಅವರು ತಮ್ಮ ನಂಬುಗೆಯ ಗುರುತನ್ನು ಬಹು ಗಮನವಿಟ್ಟು ಪರೀಕ್ಷಿಸಿದರು, ಪ್ರವಾದನಾ ಕಾಲದ ಎಣಿಕೆಯನ್ನು ಮತ್ತೆ ಪರಿಶೀಲಿಸಿದರು, ಆದರೆ ಯಾವ ತಪ್ಪು ಕಂಡುಬರಲಿಲ್ಲ ಕಾಲವು ಪರಿಪೂರ್ಣವಾಗಿದೆ, ಆದರೆ ರಕ್ಷಕನು ಬರಲಿಲ್ಲ ? ಅವರು ಆತನನ್ನು ಕಳೆದುಕೊಂಡರು .GCKn 201.1

    ಆಗ ನನಗೆ ಸಮಾಧಿಸ್ಥಳಕ್ಕೆ ಬಂದು ಯೇಸುವಿನ ಶರೀರವನ್ನು ಕಾಣದೆ ನಿರಾಸೆಗೊಂಡ ಶಿಷ್ಯರನ್ನು ತೋರಿಸಲಾಯಿತು. ಮರಿಯಳು, ಅವರು ನನ್ನ ಸ್ವಾಮಿಯನ್ನು ತೆಗೆದುಕೊಂಡುಹೋಗಿದ್ದಾರೆ ಅವನನ್ನೆಲ್ಲಿಟ್ಟಿದ್ದಾರೋ ನನಗೆ ತಿಳಿಯದು ಎಂದಳು, ದುಃಖಭರಿತರಾಗಿದ್ದ ಶಿಷ್ಯರಿಗೆ ದೂತನು, ಕರ್ತನು ಜೀವಿತನಾಗಿ ಎದ್ದಿದ್ದಾನೆ, ಆತನು ನಮ್ಮ ಮುಂದೆ ಗಲಿಲಾಯಕ್ಕೆ ಹೋಗುತ್ತಾನೆ ಎಂದರು — ಯೇಸುವು ನಿರಾಶೆಗೊಂಡವರನ್ನು ಅನುಕಂಪದಿಂದ ನೋಡಿದನು. ತನ್ನ ದೂತರನ್ನು ಕಳುಹಿಸಿ ಆತನಿರುವೆಡೆಗೆ ಹಿಂಬಾಲಿಸಿ ಕಂಡುಕೊಳ್ಳಲು ಮಾರ್ಗದರ್ಶನ ನೀಡಿದನ್ನು ನಾನು ಕಂಡೆನು; ಯಾಕೆಂದರೆ ಈ ಲೋಕವು ದೇವದರ್ಶನ ಗುಡಾರವಲ್ಲ ಎಂದು ಜನರು ಅರ್ಥಮಾಡಿಕೊಳ್ಳಲಿಲ್ಲ; ಹಾಗೂ ಆತನು ಪರಲೋಕದ ಮಹಾಪರಿಶುದ್ಧ ಸ್ಥಳಕ್ಕೆ ಪ್ರವೇಶಿಸಿ ಶುದ್ಧಮಾಡಬೇಕು ಇಸ್ರಾಯೇಲ್ಯರಿಗಾಗಿ ವಿಶೇಷ ಶುದ್ದೀಕರಣೆ ಮಾಡಿ ತಂದೆಯ ರಾಜ್ಯಕ್ಕೆ ಬಾಧ್ಯನಾಗಿ, ಈ ಈ ಭೂಮಿಗೆ ಬಂದು ತನ್ನೊಂದಿಗೆ ವಾಸಮಾಡಲು ಕರೆದುಕೊಂಡು ಹೋಗುವನು. ಶಿಷ್ಯರ ನಿರಾಶೆಯು, 1844ರಲ್ಲಿ ನಿರಾಶೆಗೊಂಡವರನ್ನು ಪ್ರತಿನಿಧಿಸುತ್ತದೆ ಕ್ರಿಸ್ತನು ಜಯಘೋಷದಿಂದ ಯೆರುಸಲೇಮಿಗೆ ಪ್ರವೇಶಿಸಿದ ಸಮಯಕ್ಕೆ ನನ್ನನ್ನು ಕರೆದೊಯ್ಯಲಾಯಿತು. ಆಗ ಹರ್ಷಗೊಂಡ ಶಿಷ್ಯರು ಆತನು ಈ ರಾಜ್ಯವನ್ನು ಪಡೆದುಕೊಂಡು ಇಹಲೋಕರಾಜನಾಗಿ ಆಳುವನೆಂದುಕೊಂಡರು. ಬಹು ನಿರೀಕ್ಷೆಯಿಂದ ತಮ್ಮ ರಾಜನನ್ನು ಹಿಂಬಾಲಿಸಿದರು. ಅವರು ಈಚಲು ಚಿಗುರನ್ನು ಕಿತ್ತರು, ತಮ್ಮ ಹೊರವಸ್ತ್ರಗಳನ್ನು ತೆಗೆದು ಬಹು ಉತ್ಸುಕರಾಗಿ ಮಾರ್ಗದಲ್ಲಿ ಹರಡಿದರು; ಕೆಲವರು ಆತನ ಮುಂದೆ ಹೊಂದರೆ ಮತ್ತೆ ಕೆಲವರು ಹಿಂಬಾಲಿಸಿ ದಾವೀದಕುಮಾರನಿಗೆ ಜಯ! ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ! ಮೇಲಣಲೋಕದಲ್ಲಿ ಜಯ! ಎಂದರು. ಈ ಉದ್ವೋಷವು ಪರಿಸಾಯರನ್ನು ಗಲಬಿಲಿಗೊಳಿಸಿತು ಯೇಸುವು ಶಿಷ್ಯರನ್ನು ಗದರಿಸುವನು ಎಂದು ಅವರು ಇಚ್ಛಿಸಿದರು, ಆದರೆ ಯೇಸು ಅವರಿಗೆ — ಇವರು ಸುಮ್ಮನಾದರೆ ಈ ಕಲ್ಲುಗಳೇ ಕೂಗುವವು ಎಂದನು — ಜಕರ್ಯ 9:9 ರ ಪ್ರವಾದನೆ ನೆರವೇರಬೇಕು, ಆದರು ಶಿಷ್ಯರು ಗಾಢಾವಾದ ನಿರಾಶೆಗೊಳಗಾದುದನ್ನು ನಾನು ಕಂಡೆನು,- ಕೆಲವೇ ದಿನಗಳಲ್ಲಿ ಅವರು ಕಲ್ವರಿಗೆ ಯೇಸುವನ್ನು ಹಿಂಬಾಲಿಸಿದರು, ಆತನ ರಕ್ತಸುರಿಸುತ್ತಾ ಶಿಲುಬೆಯಲ್ಲಿ ವಿರೂಪಗೊಂಡದ್ದನ್ನು ಕಂಡರು. ಆತನ ಯಾತನೆಯ ಮರಣಕ್ಕೆ ಸಾಕ್ಷಿಗಳಾದರು, ಮತ್ತು ಸಮಾಧಿಯಲ್ಲಿ ಮಲಗಿಸಿದರು. ಅವರ ಹೃದಯ ವೇದನೆಯಲ್ಲಿ ಮುಳುಗಿತು. ಅವರ ಅಪೇಕ್ಷೆ ಒಂದಾದರೂ ನೆರವೇರಲಿಲ್ಲ. ಯೇಸುವಿನ ಜೊತೆಯಲ್ಲಿಯೇ ಅವರ ನಿರೀಕ್ಷೆಯು ಸತ್ತಿತು. ಆದರೆ ಆತನು ಸತ್ತವರೊಳಗಿಂದ ಎದ್ದು ಬಂದು, ದುಃಖಭರಿತ ಶಿಷ್ಯರಿಗೆ ಕಾಣಿಸಿಕೊಳ್ಳಲು, ಅವರ ನಿರೀಕ್ಷೆಯು ಪುನಃ ಉದ್ಭವಿಸಿತು. ಅವರು ರಕ್ಷಕನನ್ನು ಕಳೆದುಕೊಂಡಿದ್ದರು; ಆದರೆ ಮತ್ತೆ ಕಂಡುಕೊಂಡರು. 1844ರಲ್ಲಿ ಕರ್ತನ ಬರುವಣವನ್ನು ನಂಬಿದ್ದವರ ನಿರಾಶೆಯು ಶಿಷ್ಯರ ನಿರಾಶೆಗೆ ಹೊಂದಾಣಿಕೆಯಲ್ಲ ಎಂಬುವುದನ್ನು ನಾನು ಕಂಡೆನು. ಮೊದಲ ಮತ್ತು ಎರಡನೆಯ ದೂತರ ಸಂದೇಶವು ನೆರವೇರುವುದಲ್ಲಿ ಪ್ರವಾದನೆಯು ನೆರವೇರಿತು, ಅವು ಸರಿಯಾದ ಕಾಲದಲ್ಲಿ ಕೊಡಲ್ಪಟ್ಟು ದೇವರಿಂದ ನಿಯೋಜಿಸಲ್ಪಟ್ಟ ಕಾರ್ಯವನ್ನು ಸಾಧಿಸಿಕೊಂಡವು.GCKn 202.1

    ಓದಿ: ದಾನಿಯೇಲ 8:14; ಮತ್ತಾಯ 21:4-16; 25:6; ಮಾರ್ಕ 16:6-7; ಲೂಕ 19:35-40; ಯೋಹಾನ 14:1-3; 20:13; 2ಕೊರಿಂಥ;6:17; ಪ್ರಕಟಣೆ 10:8-11, 14:7-8 GCKn 204.1

    Larger font
    Smaller font
    Copy
    Print
    Contents