Loading...
Larger font
Smaller font
Copy
Print
Contents
ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ 28. - ಮೂರನೆ ದೂತನ ಸಂದೇಶ

    ಪರಿಶುದ್ದ ಸ್ಥಳದಲ್ಲಿ ಯೇಸುವಿನ ಯಾಜಕಸೇವೆ ಮುಗಿದ ನಂತರ ಮಹಾಪರಿಶುದ್ದ ಸ್ಥಳಕ್ಕೆ ಹೋಗಿ ಆಜ್ಞಾಶಾಸನಗಳಿದ್ದ ಮಂಜೂಷದ ಮುಂದೆ ನಿಂತನು. ಆತನು ಪ್ರಬಲನಾದ ಓರ್ವದೂತನ ಕೈಯಲ್ಲಿ ಮೂರನೆ ಸಂದೇಶವಿದ್ದ ಚರ್ಮದ ಸುರುಳಿಯನ್ನು ಕೊಟ್ಟು ಭೂಲೋಕಕ್ಕೆ ಕಳುಹಿಸಲು ಅವನು ಗಾಂಭೀರ್ಯದಿಂದಲೂ ಅಧಿಕಾರದಿಂದಲೂ ಇಳಿದು ಬಂದು ಭಯಂಕರವಾದ ಎಚ್ಚರಿಕೆಯನ್ನು ಪ್ರಕಟಿಸಿದನು. ಅದು ಇವರೆಗೂ ಬಂದಿರದ ಸಂದೇಶವಾಗಿತ್ತು. ಈ ಸಂದೇಶವು ,ದೇವರಮಕ್ಕಳನ್ನು ತಮ್ಮ ಕಾವಲಿನಲ್ಲಿ ಇಟ್ಟುಕೊಂಡು ಅವರ ಮುಂದಿರುವ ಶೋಧನಾ ಕಾಲವನ್ನು ಮತ್ತು ಯಾತನೆಯನ್ನು ತೋರಿಸಲು ವಿನ್ಯಾಸಗೊಳ್ಳಿಸಲ್ಪಟ್ಟಿದೆ. ಅವರು ಮೃಗಕ್ಕೂ ಅತನ ವಿಗ್ರಹಕ್ಕೂ ಎದುರುಬದುರಾಗಿ ಹೋರಾಡಬೇಕಾಗುತ್ತದೆ, ಅವರ ಜೀವವು ಪಣಕ್ಕೆ ಒಡ್ಡಿದಾಗ್ಯೂ ಸತ್ಯವನ್ನು ಬಿಡದೆ ಹಿಡಿದುಕೊಂಡಿರಬೇಕಾಗುತ್ತದೆ. ದೃಡವಾಗಿ ನಿಲ್ಲುವುದು ನಿತ್ಯಜೀವದ ಒಂದೇ ನಿರೀಕ್ಷೆಯಾಗಿದೆ ಎಂಬುದರಲ್ಲಿ ಮೂರನೆಯ ದೂತನ ವರ್ತಮಾನ ಕೊನೆಗೊಳ್ಳುತದೆ; ಇದರಲ್ಲಿ ದೇವರ ಆಜ್ಞೆಗಳನ್ನೂ ಯೇಸುವಿನ ಮೇಲನ ನಂಬಿಕೆಯನ್ನು ಕೈಗೊಂಡು ನಡೆಯುತ್ತಿರುವ ದೇವ ಜನರ ತಾಳ್ಮೆಯು ತೋರಿಬರುತ್ತದೆ ಈ ಮಾತುಗಳನ್ನು ಹೇಳುತಲೇ ಪರಲೋಕದ ಪರ್ಣಶಾಲೆ ಕಡೆಗೆ ದೂತನು ನನ್ನ ಗಮನವನ್ನು ಸೆಳೆದನು. ಈ ಸಂದೇಶವನ್ನು ಸ್ವೀಕರಿಸಿಕೊಂಡುವರ ಮನಸ್ಸನ್ನು ಮಂಜೂಷದ ಮುಂದೆ ನಿಂತಿರುವ ಮಹಾಪರಿಶುದ್ಧ ಸ್ಥಳದ ಕಡೆಗೆ ನಿರ್ದೇಶಿಸಲಾಯಿತು. ಅಲ್ಲಿ ಯಾರ ಯಾರ ಮೇಲೆ ಇನ್ನೂ ಕೃಪೆಯು ನೆಲೆನಿಂತಿದೆಯೋ ಅಲ್ಲದೆ ಅರಿವಿಲ್ಲದೆ ದೇವರ ಆಜ್ಞೆಗಳನ್ನು ಉಲ್ಲಂಘಿಸಿದ್ದಾರೋ ಅವರಿಗೋಸ್ಕರ ಯೇಸು ಅಂತಿಮ ಮದ್ಯೆಸ್ಥಿಕೆ ಮಾಡುತ್ತಿದ್ದನು. ಈ ಪ್ರಾಯಶ್ಚಿತ್ತವನ್ನು ಸತ್ತಿರುವವರಿಗೆ ಮಾತ್ರವಲ್ಲದೆ ಜೀವಂತ ನೀತಿವಂತರಿಗಾಗಿಯೂ, ಅಜ್ಞಾನಿಗಳಾಗಿ ಪಾಪಮಾಡಿದವರಿಗಾಗಿಯೂ ಯೇಸು ಮಾಡುವನು.GCKn 222.1

    ಯೇಸುವು ಮಹಾಪರಿಶುದ್ದ ಸ್ಥಳದ ಕದವನ್ನು ತೆರೆದು ನಂತರ ಸಬ್ಬತ್ತಿನ ಬೆಳಕು ಕಾಣಿಸಿತು. ಪೂರ್ವದಲ್ಲಿ ಹೇಗೆ ಇಸ್ರಾಯೇಲರು ಆಜ್ಞೆಗಳನ್ನು ಕೈಕೊಂಡು ನಡೆಯುವರೋ ಅಥವಾ ಇಲ್ಲವೋ ಎಂದು ಪರೀಕ್ಷಿಸಲ್ಪಟ್ಟು ಪ್ರಮಾಣೀಕರಿಸಿಕೊಂಡ ಹಾಗೇಯೆ ದೇವರ ಮಕ್ಕಳು ಪರೀಕ್ಷೆಗೆ ಒಳಗಾಗಿ ಸಾಬೀತು ಪಡಿಸಿಕೊಳ್ಳಬೇಕು. ಮೂರನೆಯ ದೂತನು ನಿರಾಶೆಗೊಂಡವರಿಗೂ ಮಹಾಪರಿಶುದ್ಧಸ್ಥಳವನ್ನು ತೋರಿಸಲು ಅಂತ್ಯರಿಕ್ಷದೆಡೆಗೆ ಭೊಟ್ಟುಮಾಡಿದನು. ಅವರು ನಂಬಿಕೆಯಿಂದ ಅಲ್ಲಿ ಹೋಗಿ ಯೇಸುವನ್ನು ಕಂಡಾಗ ಅವರ ಆನಂದ ನಿರೀಕ್ಷೆಗಳು ಪುಟಿದೆದ್ದವು. ಹಿಂದೆ ಏನೆಲ್ಲಾ ನಡೆಯಿತೆಂದ ಪುನರ್ವಿಮರ್ಶೆಮಾಡಿಕೊಂಡು ಯೇಸುವಿನ ಎರಡನೆಯ ಬರುವಣದ ಪ್ರಕಟಣೆಯಿಂದ ಹಿಡಿದು 1844ರ ವರೆಗೂ ಅವರ ಪ್ರಮಾಣವು ಮುಂದುವರೆದ ಪರಿಯನ್ನು ಪರಿಶೀಲನೆ ಮಾಡಿದ್ದನ್ನು ನಾನು ಕಂಡೆನು .ಇವರ ನಿರಾಶೆಯ ವಿವರಣೆ ತಿಳಿದಾಗ ಆನಂದ, ನಿಸ್ಸಂದೇಹವಾದ ನಂಬಿಕೆ ನನ್ನಲ್ಲಿ ಚೇತನಗೊಂಡಿತು. ಮೂರನೆಯ ದೂತನು ಭೂತ, ವರ್ತಮಾನ, ಭವಿಷ್ಯಕ್ಕೆ ಬೆಳಕನ್ನು ಬೀರಿದಾಗ ದೇವರು ತಮ್ಮನ್ನು ಎಷ್ಟು ರಹಸ್ಯವಾಗಿ ಅದ್ಬುತವಾಗಿ ಮುನ್ನೆಚ್ಚರಿಕೆಯಿಂದ ನಡೆಸಿದ್ದಾನೆಂದು ಅವರು ಅರ್ಥಮಾಡಿಕೊಂಡರು.GCKn 223.1

    ಉಳಿದವರು ಮಹಾಪರಶುದ್ಧ ಸ್ಥಳಕ್ಕೆ ಯೇಸುವನ್ನು ಹಿಂಬಾಲಿಸಿ ಅಲ್ಲಿದ್ದ ಮಂಜೂಷವನ್ನೂ ಮತ್ತು ಕೃಪಾಸನವನ್ನೂ ಕಂಡು ಆದರ ಉಜ್ವಲ ಮಹಾಪ್ರಭೆಗೆ ಮಾರುಹೋದುದನ್ನು ನನಗೆ ತೋರಿಸಲಾಯಿತು. ಯೇಸುವು ಮಂಜೂಷದ ಮೇಲಿನ ಹೊದಿಕೆಯನ್ನು ತೆಗೆದುನು. ಅಗೋ! ಹತ್ತು ಆಜ್ಞೆಗಳು ಲಿಖಿತಗೊಂಡ ಶಾಸನ! ಸಜೀವ ದಿವ್ಯೋಕ್ತಿಯನ್ನು ಅವರು ಗುರುತಿಸಿದರು; ಅದರಲ್ಲಿ ಒಂಬತ್ತು ಆಜ್ಞೆಗಳನ್ನು ಬಿಟ್ಟು ಸಜೀವ ನಾಲ್ಕುನೆಯ ಆಜ್ಞೆಯ ಮೇಲೆ ಮಹಿಮೆಯ ಪ್ರಭಾವಳಿ ಸುತ್ತುವರಿದು ಪ್ರಜ್ವಲಸುತ್ತಿದ್ದುದ್ದನ್ನು ಕಂಡು ದಿಗ್ಬ್ರಮೆಗೊಂಡು ಕಂಪಿಸುತ್ತಾ ಹಿಮ್ಮೆಟ್ಟಿದರು. ಸಬ್ಬತ್ ದಿನವು ರದ್ದುಮಾಡಲ್ಪಟ್ಟು ವಾರದ ಮೊದಲನೆಯ ದಿನಕ್ಕೆ ಅದನ್ನು ವರ್ಗಾಯಿಸಲ್ಪಟ್ಟಿದೆ ಎಂಬ ಯಾವ ಸಂಗತಿಯೂ ಅಲ್ಲಿರಲಿಲ್ಲ. ಸಿನಾಯಿ ಬೆಟ್ಟದ ಮೇಲೆ ಗಂಭೀರವಾಗಿ ದಿಗ್ಬ್ರಮೆಯ ಸಂಭ್ರಮದಿಂದ ದೇವರ ಬಾಯಿಂದ ಬಂದ ಮಾತುಗಳ ಹಾಗೆಯೇ ಕಲ್ಲಿನ ಹಲಗೆಯ ಮೇಲೆ ದೇವರು ತನ್ನ ಕೈಯಿಂದ ಬರೆಯುವಾಗ ಉರುಳುತ್ತಿರುವ ಗುಡುಗು, ಹೊಳೆಯುತ್ತಿದ್ದ ಮಿಂಚಿನ ಹಾಗೆಯೇ “ಆರು ದಿವಸಗಳಲ್ಲಿ ನೀನು ದುಡಿದು ನಿನ್ನ ಕೆಲಸವನ್ನೆಲ್ಲಾ ಮಾಡಬೇಕು, ಏಳನೆಯ ದಿನವು ನಿನ್ನ ದೇವರಾದ ಕರ್ತನಿಗೆ ಮಿಸಲಾದದ್ದು” ಎಂದಿತ್ತು ಹತ್ತು ಅಜ್ಞೆಗಳು ಕೊಟ್ಟಿರುವ ಪ್ರಾಶಸ್ತ್ಯವನ್ನು ಕಂಡು ಮೂಕ ವಿಸ್ಮಿತರಾದರು. ಅದು ಯೆಹೋವನ ಬಹು ಹತ್ತಿರ ಇಡಲ್ಪಟ್ಟಿದು ಆತನ ಪಾವಿತ್ರತೆಯು ಆದರ ಮೇಲೆ ಪಸರಿಸಿತ್ತು. ಯಹೋವನಿಂದ ಆಶೀರ್ವಾದಿಸಲ್ಪಟ್ಟ ಹತ್ತು ಆಜ್ಞೆಗಳನ್ನು ಅವರು ಉಲಂಘಿಸಿ ಅನ್ಯಜನರಿಂದಲೂ, ಪೋಪರಿಂದಲೂ ಕೊಡಲ್ಪಟ್ಟಿದ್ದ ದಿನವನ್ನು ಆಚರಿಸುತ್ತಿದ್ದುದನ್ನು ನೆನೆಪಿಸಿಕೊಳ್ಳುತ್ತಾ ಪೂರ್ವದ ತಮ್ಮ ಅತಿಕ್ರಣಕ್ಕಾಗಿ ಗೋಳಾಡುತ್ತಾ ದೇವರ ಮುಂದೆ ತಗ್ಗಿಸಿಕೊಂಡರು.GCKn 224.1

    ಯೇಸುವು ಇವರ ಅರಿಕೆಯನ್ನು, ಪ್ರಾರ್ಥನೆಯನ್ನೂ ತಂದೆಗೆ ಅರ್ಪಿಸುವಾಗ ದೂಪಾರತಿಯಿಂದ ದೂಪದ ಹೊಗೆ ಏಳುವುದನ್ನು ನಾನು ಕಂಡೆನು. ಆ ಹೊಗೆ ಮೇಲೇರುವಾಗ ಪ್ರಕಾಶಮಾನವಾದ ಬೆಳಕು ಯೇಸುವಿನ ಮತ್ತು ಕೃಪಾಸನದ ಮೇಲೆ ಆಜ್ಞೆಗಳನ್ನು, ಉಲಂಘಿದೆವಲ್ಲಾ ಎಂದು ನೊಂದು ಧೀನರಾಗಿ ಪ್ರಾರ್ಥಿಸಿದ್ದವರು ಹಾಗೂ ಆಶೀರ್ವದಿಸಲ್ಪಟ್ಟವರ ಮೇಲೆ ಬಿದ್ದು ಅವರೆಲ್ಲರ ಮುಖದಲ್ಲಿ ನಿರೀಕ್ಷೆ ಆನಂದವು ನೆಲೆಗೊಂಡವು. ಮೂರನೆಯ ದೂತನೊಂದಿಗೆ ಸೇರಿಕೊಂಡು ಎಚ್ಚರಿಕೆಯನ್ನು ಪ್ರಕಟಿಸಲು ದ್ವನಿಯನ್ನು ಉತ್ತುಂಗಕ್ಕೇರಿಸಿದರು. ಮೊದಮೊದಲು ಕೆಲವೇ ಜನರು ಸಂದೇಶವನ್ನು ಅಂಗೀಕರಿಸಿದರು. ಆನಂತರ ನಾನು ಕಂಡದೇನೆಂದರೆ ಬಹು ಜನರು ಸಂದೇಶವನ್ನು ಅಂಗೀಕರಿಸಿ ಅಲ್ಪಸಂಖ್ಯಾತರೊಂದಿಗೆ ಸೇರಿ ಪರಿಶುದ್ಧ ವಿಶ್ರಾಂತಿದಿನವನ್ನು ಆಚರಿಸುವುದರ ಮುಖಂತರ ದೇವರನ್ನು ಘನಪಡಿಸಿದರು.GCKn 225.1

    ಮೊರನೆಯ ಸಂದೇಶದ ಅನುಭವ ಪಡೆದವರಲ್ಲಿ ಬಹು ಜನರು ಮೊದಲ ಎರಡು ಸಂದೇಶದಲ್ಲಿ ಪಾಲ್ಗೊಂಡವರಾಗಿರಲಿಲ್ಲ. ಇದನ್ನು ಸೈತಾನನು ಅರ್ಥಮಾಡಿಕೊಂಡಿದ್ದನು. ಅವರನ್ನು ಬೀಳಿಸಲು ತನ್ನ ದುಷ್ಟ ದೃಷ್ಟಿಯನ್ನಿಟ್ಟನು. ಆದರೆ ಮೂರನೆಯ ದೂತನು ಮಹಾಪರಿಶುದ್ಧಸ್ಥಳದ ಕಡೆಗೆ ತೋರಿಸಿದಾಗ ಮೊದಲ ಎರಡು ಸಂದೇಶಗಳಿಗೆ ಸ್ಪಂದಿಸಿದವರು ಅವರಿಗೆ ಪರಲೋಕದ ಪರ್ಣಶಾಲೆಯ ಮಾರ್ಗ ತೋರಿಸಿದರು. ದೇವದೂತರ ಸಂದೇಶಗಳಿದ್ದ ಸತ್ಯದ ಸಂಪೂರ್ಣ ಸರಪಣಿಯನ್ನು ಕಂಡು ಆನಂದದಿಂದ ಅಂಗೀಕರಿಸಿ, ಒಂದು ಕ್ರಮದಲ್ಲಿ ಒಪ್ಪಿಕೊಂಡು ನಂಬಿಕೆಯಿಂದ ಪರ್ಣಶಾಲೆಗೆ ಯೇಸುವನ್ನು ಹಿಂಬಾಲಿಸಿದರು ಈ ಸಂದೇಶಗಳು ಶರೀರವನ್ನು ಹಿಡಿದಿರುವ ಲಂಗರಿನ ಹಾಗೆ ನನಗೆ ತೋರಿಸಲಾಯಿತು. ಜನರು ಸಂದೇಶವನ್ನು ಅರ್ಥಮಾಡಿಕೊಂಡು ಅಂಗೀಕರಿಸುತ್ತಿರುವಾಗ ಸೈತಾನನ ವಂಚನೆಗೆ ಬೀಳದ ಹಾಗೆ ಕಾಪಿಡಲ್ಪಟ್ಟರು.GCKn 226.1

    1844ರಲ್ಲಿ ನಿರಾಶೆಯ ನಂತರ ಸೈತಾನನೂ ಮತ್ತು ಅವನ ದೂತರ ನಂಬಿಕೆಯನ್ನು ಅಲುಗಾಡಿಸಲು ಬಲೆಹರಡುವುದಲ್ಲಿ ಗಡಿಬಿಡಿಯಿಂದ ಕಾರ್ಯೋನ್ಮುಖರಾದರು, ವೈಯಕ್ತಿಕ ಅನುಭವ ಹೊಂದಿದವರ ಮನಸ್ಸನ್ನು ಕೆಡಿಸಲರಾಂಭಿಸಿದರು ಬಹು ದೈನ್ಯಭಾವವನ್ನು ಪ್ರದರ್ಶಿಸುತ್ತಾ ಮೊದಲನೆ ಮತ್ತು ಎರಡನೆಯ ಸಂದೇಶವನ್ನು ಬದಲಾಯಿಸಿ ಅದು ಮುಂದೆ ನೆರವೇರಲಾಗುತ್ತದೆ ಎಂದು ಹೇಳಿದರು. ಅದೇ ವೇಳೆ ಕಲವರು ಈಗಾಗಲೇ ನೆರವೇರಿದೆ ಎಂದರು. ಅನುಭವಗಳ ಮನಸ್ಸನ್ನು ಸೆಳೆದು ನಂಬಿಕೆಯನ್ನು ಚಂಚಲಗೊಳ್ಳಿಸಿ ಗಲಿಬಿಲಿ ಉಂಟುಮಾಡಿದರು. ಕೆಲಜನರು ಸತ್ಯವೇದವನ್ನು ಹುಡುಕುತ್ತಾ ತಮ್ಮದೇ ನಂಬಿಕೆಯನ್ನು ಸ್ಥಿರಪಡಿಸಲು ಪ್ರಯತ್ನಿಸಿದರು ಇವೆಲ್ಲಾ ಸಂಗತಿಗಳು ಸೈತಾನನನ್ನು ಉಲ್ಲಾಸಗೊಳಿಸಿತು; ಏಕೆಂದರೆ ದೃಡವಾದ ಲಂಗರಿನಿಂದ ಯಾರೆಲ್ಲಾ ಸಡಿಲಗೊಳ್ಳುತ್ತಾರೋ ಅವರನ್ನು ತಪ್ಪಭಿಪ್ರಾಯ, ತತ್ವಗಳನ್ನು ಹುಟ್ಟುಹಾಕಿ ಅಲ್ಲಾಡಿಸಬಹುದು ಎಂದುಕೊಂಡನು. ಮೊದಲನೇ ಹಾಗೂ ಎರಡನೇ ಸಂದೇಶದಲ್ಲಿ ನಡೆಸಲ್ಪಟ್ಟವರು ಇವರನ್ನು ಅಲ್ಲಗಳೆಯಲು ಅವರಲ್ಲಿ ವಿಭಾಗಗಳುಂಟಾಗಿ ಚದುರಿಹೋಗಲು ಪ್ರಾರಂಭಿಸಿದರು. ಆನಂತರ ನಾನು ವಿಲಿಯಂ ಮಿಲ್ಲರ್ ನನ್ನು ಕಂಡೆನು ಈ ಜನರಿಗಾಗಿ ವಿಲಿಯಂ ದುಃಖ ನಿರಾಶೆಯಿಂದ ಬಾಗಿ ಗಲಿಬಿಲಿಗೊಂಡಂತಿದ್ದನು. 1844ರಲ್ಲಿ ಕ್ರಾಂತಿಯಲ್ಲಿ ಪ್ರೀತಿಯಿಂದ ಒಗ್ಗಟ್ಟಾಗಿದ್ದವರು ತಮ್ಮಲ್ಲೆ ವಿರೋದ ಹೊಂದಿ ಪ್ರೀತಿಯನ್ನು ಕಳಕೊಂಡ ಗುಂಪನು ಕಂಡೆನು. ಯಾತನೆ ಅವನ ಬಲವನ್ನು ಕುಗ್ಗಿಸಿತ್ತು ಕೆಲವು ನಾಯಕರು ವಿಲಿಯಂ ಮಿಲ್ಲರನನ್ನು ಭಯದಿಂದ ದೃಷ್ಟಿಸುತ್ತಾ ಎಲ್ಲಿ ಈತನು ಮೊರನೆಯ ದೂತನಸಂದೇಶವನ್ನು ಮತ್ತು ಅಜ್ಞೆಗಳನ್ನು ಅಂಗೀಕರಿಸುವನೋ ಎಂದು ಕೊಂಡದ್ದನ್ನು ನಾನು ಕಂಡೆನು. ಹಾಗೊಂದುವೇಳೆ ಪರಲೋಕದ ಬೆಳಕನ್ನು ಅಂಗೀಕರಿಸಿ ಆತುಕೊಂಡರೆ ಆತನ ಮನಸ್ಸನ್ನು ಸೆಳೆದುಕೊಳ್ಳಲು ಯೋಜನೆ ಹಾಕುತ್ತಿದ್ದರು. ಇವನ ಮನಸ್ಸನ್ನು ಅಂಧಕಾರದಲ್ಲಿಟ್ಟು ತಮ್ಮ ಪ್ರಭಾವವನ್ನು ಉಳಿಸಿಕೊಳ್ಳಲು ಮಾನವ ಶಕ್ತಿಯ ಒತ್ತಡ ಹೇರಲ್ಪಟ್ಟಿದ್ದನ್ನೂ ನಾನು ಕಂಡೆನು. ಬಹಳ ಕಾಲದ ವರೆಗೂ ವಿಲಿಯಂ ಮಿಲ್ಲರ್ ಪರಲೋಕದ ಬೆಳಕಿಗೆ ವಿರೋಧವಾಗಿ ತನ್ನ ಧ್ವನಿಯನ್ನು ಎತ್ತಿದನು. ಅವನ ನಿರಾಶೆಗೆ ಪರಿಪೂರ್ಣವಿವರಣೆ ಕೊಡುವ, ಪೂರ್ವಪ್ರಭಾವದ ಮೇಲೆ ಬೆಳಕು ಹರಿಸುವ, ಆತನ ನಿಸ್ಸಾರ ಶಕ್ತಿಯನ್ನು ಪುನಃಶ್ಚೇತನಗೊಳಿಸುವ, ನಿರೀಕ್ಷೆಯನ್ನು ಬೆಳಗಿಸುವ ಹಾಗೂ ದೇವರನ್ನು ಘನಪಡಿಸುವಂತೆ ಮಾಡುವ ಸಂದೇಶವನ್ನು ಅಂಗೀಕರಿಸುವುದರಲ್ಲಿ ಸೋತನು. ದೇವರ ವಿವೇಕದ ಮೇಲೆ ಆತುಕೊಳ್ಳುವ ಬದಲು ಮಾನವ ಜ್ಞಾನದ ಮೇಲೆ ಆತುಕೊಂಡನು.ತನ ಯಾಜಮಾನನ ನಿಮಿತ್ತ ಪ್ರಯಾಸಕರು ಶ್ರಮದಿಂದ ಹತಾಶನಾಗಿ ವಯಸ್ಸಾದಂತೆ ಇವನನ್ನು ಸತ್ಯದಿಂದ ಹೊರಗೆಳೆದರು. ಅವರೇ ಈತನ ಪಾಪಕ್ಕೆ ಹೊಣೆಗಾರರಾದಷ್ಟು ವಿಲಿಯಂ ಹೊಣೆಯಾಗಲಿಲ್ಲ. ಒಂದುವೇಳೆ ವಿಲಿಯಂ ಮೂರನೇ ದೂತನ ಸಂದೇಶದ ಬೆಳಕನ್ನು ಕಂಡಿದ್ದರೆ ಅವನಿಗೆ ರಹಸ್ಯವಾಗಿಯು ,ಕತ್ತಲಾಗಿಯೂ ಕಂಡ ಸಂದೇಶಗಳು ವಿಷದವಾಗಿ ವಿವರಿಸಲ್ಪಡುತ್ತಿದ್ದವು. ಸಹೋದರು ಇವನೆಡೆಗೆ ತೋರಿದ ಆಳವಾದ ಪ್ರೀತಿ, ಆಸಕ್ತಿಯನ್ನು ಕಂಡು ಬೇರ್ಪಡಿಸಲು ಅಸಾದ್ಯವಾಯಿತು; ಅವನ ಹೃದಯವಾದರೋ ಸತ್ಯಾನ್ವೇಕ್ಷಣೆಗೆ ವಾಲುತ್ತಿತ್ತು; ಯೇಸುವಿನ ಬರುವಣದ ಪ್ರಕಟಣೆಯಲ್ಲಿ ತನ್ನೊಂದಿಗೆ ಭಾಗಿಗಳಾಗಿ ಭುಜಕೊಟ್ಟವರನ್ನು ಅಗಲಿ ಹೋಗುವುದು ಹೇಗೆ? ಅವರು ನಿಜವಾಗಿ ದಾರಿ ತಪ್ಪುವುದಿಲ್ಲ ಎಂದು ದೃಡವಾಗಿ ನಂಬಿದನು.GCKn 226.2

    ದೇವರು, ಅವನನ್ನು ಸೈತಾನನಿಗೆ ಒಪ್ಪಿಸಿ, ಮರಣವು ಜಯಸಾಧಿಸಲು ಅನುಮತಿಸಿದನು ಸತ್ಯವನ್ನು ವಿರೋಧಿಸಿ ಈತನನ್ನು ಸತತವಾಗಿ ತನ್ನಿಂದ ಬೇರ್ಪಡಿಸುತ್ತಿದ್ದವರಿಂದ ದೂರವಾಗಿ ವಿಲಿಯಂನನ್ನು ಸಮಾಧಿಯಲ್ಲಿ ಬಚ್ಚಿಟ್ಟನು ವಾಗಾತ್ತದೇಶಕ್ಕೆ ಹತ್ತಿರವಾಗುತ್ತಿದ್ದಾಗೆ ಮೋಶೆ ತಪ್ಪುಮಾಡಿದನು, ಹಾಗೆಯೆ ಸತ್ಯಕ್ಕೆ ವಿರುದ್ದವಾಗಿ ಪ್ರಭಾವಕ್ಕೆ ಒಳಪಡುವುದರಲ್ಲಿ ಪರಲೋಕ ಕಾನಾನಿಗೆ ಪ್ರವೇಶಿಸಲಾಗದಂತೆ ವಿಲಿಯಂ ತಪ್ಪುಮಾಡಿದುದನ್ನು ನಾನು ಕಂಡೆನು. ಇತರರು ಈತನನ್ನು ತಪ್ಪುದಾರಿಗೆಳೆದರಾದ್ದರಿಂದ ಅವರೇ ಇದಕ್ಕೆ ಹೊಣೆಗಾರರಾಗುವರು ದೇವದೂತರು ದೇವತದಾಸನ ಅಮೂಲ್ಯವಾದ ದೂಳನ್ನು ಗಮನಿಸುತ್ತಿದ್ದಾರೆ ಕೊನೆಯ ತುತ್ತೂರಿಯು ಧ್ವನಿಸಿದಾಗ ವಿಲಿಯಂ ಎದ್ದುಬರುವನು.GCKn 229.1

    ಓದಿ: ವಿಮೋಚನಕಾಂಡ 20:1-17, 31:18,; 1 ಥೆಸಲೋನಿಕ 4:16; ಪ್ರಕಟನೆ 14:9-12GCKn 229.2

    Larger font
    Smaller font
    Copy
    Print
    Contents