Loading...
Larger font
Smaller font
Copy
Print
Contents
ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ 38. - ಭಕ್ತರ ಪ್ರತಿಫಲ

    ಅನಂತರ ವೈಭವಯುತವಾದ ಮುಕುಟಗಳ ಪಟ್ಟಣದಿಂದ ದೇವದೂತರು ಕಿರೀಟಗಳನ್ನು ತರುತ್ತಿದ್ದುದನ್ನು ನಾನು ಕಂಡೆನು. ಪ್ರತಿಯೊಬ್ಬ ಭಕ್ತನಿಗೂ ಅವನ ಹೆಸರು ಬರೆದಿದ್ದ ಒಂದು ಕಿರೀಟವನ್ನು ಯೇಸುವಿನ ಕೈಗೆ ಕೊಂಡಲು, ಪ್ರಿಯ ಯೇಸುವು ತನ್ನ ಬಲಗೈಯಿಂದ ಭಕ್ತರ ತಲೆಗೆ ತೊಡಿಸಿದನು. ಅದೇ ರೀತಿ ದೂತರು ತಂತಿವಾದ್ಯಗಳನ್ನು ಯೇಸುವಿಗೆ ಕೊಡಲು, ಯೇಸು ಅದನ್ನು ಭಕ್ತರಿಗೆ ಕೊಟ್ಟನು, ಮೊದಲ ಪ್ರಧಾನ ದೂತನ ಶೃತಿ ಮಿಟಿದನು, ಆನಂತರ ಪ್ರತಿಯಬ್ಬರೂ ಸುತ್ತಿಸ್ತೋತ್ರನಾದವನ್ನು ಧನ್ಯತೆಯೊಂದಿಗೆ ಹರ್ಷದಿಂದ ಆತನೊಡನೆ ಸೇರಿಸಿದರು, ಪ್ರತಿ ಕೈಗಳು ಕುಶಲತೆಯಿಂದ ತಂತಿಗಳನ್ನು ಮಿಟ್ಟುತಾ ಮಧುರವಾದ ಸಂಗೀತವನ್ನು ಪರಿಪೂರ್ಣ ಶೃತಿಲಯದೊಂದಿಗೆ ಝೇಂಕರಿಸಿದರು. ಆನಂತರ ಈ ವಿಮೋಚಿಸಲ್ಪಟ್ಟ ತಂಡವನ್ನು ಪರಿಶುದ್ಧ ಪಟ್ಟಣದ ಬಾಗಿಲಿನ ಕಂಡೆಗೆ ಯೇಸು ನಡೆಸಿಕೊಂಡು ಹೋಗುವುದನ್ನು ನಾನು ಕಂಡೆನು. ಆತನು ಕದವನ್ನು ಹಿಡಿದು ಹೊಳೆಯುವ ತಿರುಗಣೆಯನ್ನು ತಿರುಗಿಸಿ ಅಗಲವಾಗಿ ತೆರೆದು ಸತ್ಯವನ್ನು ಭದ್ರವಾಗಿ ಹಿಡಿದುದವರನ್ನು ಒಳಹೋಗಲು ಅನುಮತಿಸಿದನು. ಕಣ್ಣುಗಳಿಗೆ ಹಬ್ಬವಾಗುವ ಎಲ್ಲವೂ ಆ ಪಟ್ಟಣದಲ್ಲಿದ್ದವು ,ವೈಭವವು ಎಲ್ಲಾಕಡೆ ತುಳುಕಾಡುತ್ತಿತ್ತು . ವಿಮೋಚನಗೊಂಡ ಭಕ್ತರನ್ನು ಯೇಸು ನೋಡಲು ಅವರ ಮುಖವು ಪಳಪಳನೆ ಹೊಳೆಯುತ್ತಿದ್ದವು; ಆತನ ಪ್ರೀತಿ ಸೂಸುವ ಕಣ್ಣಗಳು ಅವರ ಮೇಲೆ ನೆಟ್ಟು, ತನ್ನ ಮಧುರ ಧ್ವನಿಯಿಂದ, “ನನ್ನ ಆತ್ಮವು ಅನುಭವಿಸಿದ ಶ್ರಮದ ಪಲಗಲನ್ನು ಕಂಡು ನನಗೆ ತೃಪ್ತಿಯಾಗಿದೆ. ಈ ಮಹಾ ವೈಭವವು ನಿಮ್ಮದೇ, ನೀವು ನಿರಂತರವಾಗಿ ಅನುಭವಿಸಿರಿ. ನಿಮ್ಮ ಸಂಕಟಬಾಧೆಗಳೆಲ್ಲಾ ತೀರಿತು, ಇನ್ನು ಮೇಲೆ ಮರಣವಾಗಲೀ, ಗೋಳಾಟ ಕಣ್ಣೀರಾಗಲೀ, ಯಾವ ನೋವಾಗಲೀ ಇರುವುದಿಲ್ಲ” ಎಂದನು ವಿಮೋಚನೆ ಹೊಂದಿದಗಣವು ತಲೆಬಾಗಿ ತಮ್ಮ ಹೊಳೆಯುವ ಕಿರೀಟಗಳನ್ನು ಆತನ ಪಾದದ ಬಳಿ ಇಡುವುದನ್ನು ನಾನು ಕಂಡೆನು. ಆನಂತರ ಅತನ ಪ್ರಿಯ ಕರಗಳು ಅವರನ್ನು ಎತ್ತಿಹಿಡಿಯಲು, ಅವರು ತಮ್ಮ ಚಿನ್ನದ ತಂತಿವಾಧ್ಯಗಳನ್ನು ನುಡಿಸಿದರು. ಅವರ ಕುರಿಮರಿಯ ಗಾಯನದ ನಾದವು ಅನುರಣಿಸುತ್ತಾ ಇಡೀ ಪರಲೋಕವೆಲ್ಲಾ ಪಸರಿಸಿತು.GCKn 284.1

    ನಂತರ ಯೇಸುವು ಭಕ್ತರನ್ನು ಜೀವವೃಕ್ಷದ ಬಳಿಗೆ ನಡೆಸುವುದನ್ನು ನಾನು ಕಂಡೆನು. ಇದುವರೆಗೂ ಮರ್ತ್ಯ ಕಿವಿಗಳು ಕೇಳಿಸಿಕೊಂಡಿರದ ಉನ್ನತೋನ್ನತ ಮಂಜುಳನಾದವು ಕೇಳಿಬಂದು, ಈ ಮರದ ಎಲೆಗಳು ಜನಾಂಗದವರನ್ನು ವಾಸಿಮಾಡುವುದಕ್ಕೆ ಯೋಗ್ಯವಾಗಿದೆ ಇದೆನ್ನೆಲ್ಲಾ ತಿನ್ನಿರಿ ಎಂದು ಹೇಳಿತು, ಜೀವವೃಕ್ಷದಲ್ಲಿ ಸುಂದರವಾದ ಫಲಗಳಿದ್ದವು ಭಕ್ತರೆಲ್ಲಾ ತೆಗೆದು ತಿನ್ನಬಹುದು. ಆ ಪಟ್ಟಣದಲ್ಲಿ ಮಹಿಮಾಸಿಂಹಾಸನವಿರುವುದು. ಆದರ ಕೆಳಗಿಂದ ಶುದ್ಧ ಸ್ಪಟಿಕದಂತಿರುವ ಜೀವಜಲದ ನದಿ ಬರುತ್ತಿತ್ತು. ಆ ನದಿಯ ಉಭಯ ಪಾರ್ಶ್ವಗಳಲ್ಲಿ ಜೀವವೃಕ್ಷಗಳಿದ್ದುವು. ಪರಲೋಕದ ಸೌಂದರ್ಯ ವೈಭವವನ್ನು ವರ್ಣಿಸಲು ಭಾಷೆಯು ಕೈಗೆಟುಕದೆ ಸೊರಗುತ್ತದೆ. ಈ ದೃಶ್ಯವು ನನ್ನ ಕಣ್ಣುಮುಂದೆ ಬರಲು ಬೆರಗುಗೊಂಡು ಸ್ತಬ್ದಳಾದೆನು; ಉಜ್ವಲ ಪ್ರಕಾಶದಲ್ಲಿ ತಲ್ಲೀನಳಾಗಿ ನನ್ನ ಲೇಖನಿಯನ್ನು ಕೆಳಗಿಟ್ಟು, ಓ ಎಂಥಾ ಪ್ರೀತಿ! ಎಂಥಾ ಅಧ್ಬುತ ಪ್ರೀತಿ! ಎಂದು ಉದ್ವಾರ ಮಾಡಿದೆನು. ಪ್ರಲೋಕ ವೈಭವ, ರಕ್ಷಕನ ಅನುಪಮ ಪ್ರೀತಿಯನ್ನು ಯಾವ ಉನ್ನತಬಾಷೆಯಿಂದಲೂ ವರ್ಣಿಸಲಸಾಧ್ಯವಾಗಿದೆ,GCKn 285.1

    ಓದಿ: ಯೆಶಾಯ 53:11 ; ಪ್ರಕಟನೆ 21:4, 22: 1-2GCKn 286.1

    Larger font
    Smaller font
    Copy
    Print
    Contents