Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಎಚ್ಚರಿಕೆಯ ಸಂದೇಶಕ್ಕೆ ಜನರು ಉತ್ತರಿಸುವರು

    ಎಲ್ಲಾ ಧಾರ್ಮಿಕ ಸಭೆಗಳಲ್ಲಿ ಚದರಿಹೋಗಿರುವ ಜನರು ಮೂರನೇ ದೂತನ ಸಂದೇಶಕ್ಕೆ ಕಿವಿಗೊಡುವರು. ಸೂದೋಮ್ ಪಟ್ಟಣವು ನಾಶವಾಗುವುದಕ್ಕೆ ಮೊದಲು ಲೋಟನು ಅಲ್ಲಿಂದ ಹೇಗೆ ಓಡಿಹೋದನೋ, ಅದರಂತೆಯೇ ದೇವರ ದೃಷ್ಟಿಯಲ್ಲಿ ಅಮೂಲ್ಯರಾದ ಈ ಜನರು ದಂಡನೆಯ ತೀರ್ಪಿಗೆ ಗುರಿಯಾಗಲಿರುವ ತಮ್ಮ ಸಭೆಗಳನ್ನು ಬಿಟ್ಟು ತ್ವರೆಯಿಂದ ಹೊರಗೆ ಬರುವರು (ಅಲ್ಲಿ ರೈಟಿಂಗ್ಸ್, 279, 1858).ಕೊಕಾಘ 122.3

    ಜಗತ್ತಿಗೆ ಬರಲಿರುವ ಕಠಿಣವಾದ ಹಿಂಸೆಯ ಪರೀಕ್ಷೆ ಎದುರಿಸಲು ಸೈನಿಕರಂತೆ ದೃಢವಾಗಿ ನಿಲ್ಲುವ ವಿಶ್ವಾಸಿಗಳು ಸಿದ್ಧರಾಗಿರುವರು (ಸೆಲೆಕ್ಟೆಡ್ ಮೆಸೇಜಸ್ ಸಂಪುಟ 3, ಪುಟ 390, 1888). ಜಗತ್ತಿನ ಅನೇಕ ಕಡೆಗಳಿಂದ, ರೋಮನ್ ಕಥೋಲಿಕ್ ಸಭೆಯನ್ನೂ ಒಳಗೊಂಡಂತೆ, ಇತರ ಸಭೆಗಳಿಂದ ಅನೇಕರು ಹೊರಬಂದು ಸತ್ಯಸಭೆ ಸೇರುವರು. ಇದುವರೆಗೂ ಸತ್ಯಸಂದೇಶ ನೀಡಿರುವವರಿಗಿಂತಲೂ ಹೆಚ್ಚಿನ ಉತ್ಸಾಹದಿಂದ ಇವರು ಮೂರನೇ ದೂತನ ಸಂದೇಶದ ಎಚ್ಚರಿಕೆಯನ್ನು ಜನರಿಗೆ ಕೊಡುವರು (ಪುಟಗಳು 386, 387). ಜನರು ಅಧಿಕ ಸಂಖ್ಯೆಯಲ್ಲಿ ಈ ಸಂದೇಶವನ್ನು ನಂಬಿಕೆಯಿಂದ ಸ್ವೀಕರಿಸಿ ಕರ್ತನ ಜನರೊಂದಿಗೆ ಸೇರುವರು. (ಎವಾಂಜಲಿಸಮ್, 700, 1895). ಕುರಿಯ ಮಂದೆಯಿಂದ ಚದರಿ ಹೋಗಿರುವ ಅನೇಕರು ಹಿರೀ ಕುರುಬನಾದ ಕ್ರಿಸ್ತನನ್ನು ಹಿಂಬಾಲಿಸಲು ತಿರುಗಿ ಕುರಿಹಟ್ಟಿಗೆ ಬರುವರು (ಟೆಸ್ಟಿಮೊನೀಸ್, ಸಂಪುಟ 6, ಪುಟ 401, 1900).ಕೊಕಾಘ 122.4

    ಆಫ್ರಿಕಾ ಖಂಡದಲ್ಲಿ, ಯೂರೋಪ್ ಮತ್ತು ದಕ್ಷಿಣ ಅಮೇರಿಕಾ ಖಂಡದ ರೋಮನ್ ಕಥೋಲಿಕ್ ದೇಶಗಳಲ್ಲಿ ಚೀನಾ, ಭಾರತ, ಸಮುದ್ರದ ನಡುವಿರುವ ದ್ವೀಪ ರಾಷ್ಟ್ರಗಳು ಮತ್ತು ಲೋಕದ ಮೂಲೆ ಮೂಲೆಗಳಲ್ಲಿ ಆತ್ಮೀಕ ಅಂಧಕಾರವೆಂಬ ಬಾಂದಳದಲ್ಲಿ ಇನ್ನೂ ಮಿನುಗಬೇಕಾಗಿರುವ ದೇವರಿಂದ ಆರಿಸಲ್ಪಟ್ಟ ನಕ್ಷತ್ರಗಳಿವೆ. ಇವರು ಧರ್ಮಭ್ರಷ್ಟತೆ ಹೊಂದಿರುವ ಜಗತ್ತಿಗೆ ದೇವರಾಜ್ಞೆಗಳಿಗೆ ವಿಧೇಯತೆ ತೋರಿದಾಗ, ಉಂಟಾಗುವ ಅದ್ಭುತವಾದ ಬದಲಾವಣೆ ಶಕ್ತಿಯನ್ನು ಸಷ್ಟವಾಗಿ ತೋರಿಸುವರು, ಈಗಲೂ ಸಹ ಅವರು ಪ್ರತಿಯೊಂದು ದೇಶ ಜನಾಂಗ, ಕುಲಭಾಷೆಗಳಲ್ಲಿದ್ದಾರೆ. ಜಗತ್ತು ಅತ್ಯಂತ ಧರ್ಮಭ್ರಷ್ಟತೆಯ ಕಾಲದಲ್ಲಿರುವಾಗ, ಸೈತಾನನು ದೊಡ್ಡವರು, ಚಿಕ್ಕವರು, ಐಶ್ವರ್ಯವಂತರು ಬಡವರು, ಸ್ವತಂತ್ರರು ದಾಸರು - ಇವರೆಲ್ಲರೂ ಸುಳ್ಳು ವಿಶ್ರಾಂತಿ ದಿನವಾದ ಭಾನುವಾರಕ್ಕೆ ಮರಣದಂಡನೆಯ ಭಯದಿಂದ ನಿಷ್ಠೆ ತೋರಿಸಬೇಕೆಂದು ತನ್ನೆಲ್ಲಾ ಪ್ರಯತ್ನಗಳನ್ನು ಮಾಡುವನು. ಅಂತಹ ಸಮಯದಲ್ಲಿ ನಂಬಿಗಸ್ತರಾದ ದೇವರ ಮಕ್ಕಳಾದ ಇವರು ನಿಷ್ಕಳಂಕರಾಗಿ ಜಗತ್ತಿನಲ್ಲಿ ಬೆಳಕಿನಂತೆ ಹೊಳೆಯುವರು. ಪೇಟಿಯಾರ್ಕ್ ಅಂಡ್ ಕಿಂಗ್ಸ್, 188, 1914.ಕೊಕಾಘ 122.5