Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ-15
    ದೇವರ ಮುದ್ರೆ ಮತ್ತು ಮೃಗದ ಗುರುತು

    ಕೊನೆಯ ಕಾಲದಲ್ಲಿ ಎರಡು ಗುಂಪಿನ ಜನರು ಮಾತ್ರ ಇರುತ್ತಾರೆ. ಪ್ರತಿಯೊಂದು ಗುಂಪಿನವರು ದೇವರ ಮುದ್ರೆ ಅಥವಾ ಮೃಗದ ಗುರುತು ಹಾಕಿಸಿಕೊಂಡು ವಿಶಿಷ್ಟವಾಗಿ ಗುರುತಿಸಲ್ಪಡುತ್ತಾರೆ (ರಿವ್ಯೂ ಅಂಡ್ ಹೆರಾಲ್ಡ್, ಜನರಿ 30, 1900).ಕೊಕಾಘ 125.1

    ನಂಬಿಕೆ ಮತ್ತು ಅಪನಂಬಿಕೆಗಳ ನಡುವಣ ಮಹಾಹೋರಾಟದಲ್ಲಿ ಎಲ್ಲಾ ಕ್ರೈಸ್ತದೇಶಗಳೂ ಒಳಗೊಂಡಿರುತ್ತವೆ. ಎಲ್ಲವೂ ಯಾವುದಾದರೂ ಒಂದು ಗುಂಪಿನಲ್ಲಿರುತ್ತವೆ. ಕೆಲವರು ಈ ಹೋರಾಟದಲ್ಲಿ ಸ್ಪಷ್ಟವಾಗಿ ಯಾವುದೇ ಗುಂಪಿಗೆ ಸೇರಿಲ್ಲದವರಂತೆ ಕಂಡುಬರುತ್ತಾರೆ. ಸತ್ಯಕ್ಕೆ ವಿರುದ್ಧವಾದ ಗುಂಪಿನಲ್ಲಿ ಅವರು ಸೇರಿದ್ದಾರೆಂದು ಕಾಣಬರದಿರಬಹುದು. ಆದರೆ ತಮ್ಮ ಆಸ್ತಿ ಕಳೆದುಕೊಳ್ಳಬಹುದು ಅಥವಾ ಹಿಂಸೆ ನಿಂದನೆ ಅನುಭವಿಸಬೇಕಾಗಬಹುದೆಂಬ ಭಯದಿಂದ ಅಂತವರು ಧೈರ್ಯವಾಗಿ ಕ್ರಿಸ್ತನ ಪರವಾಗಿ ನಿಲ್ಲುವುದಿಲ್ಲ. ಅಂತವರೆಲ್ಲರೂ ಕ್ರಿಸ್ತನ ಶತ್ರುಗಳೆಂದು ಎಣಿಸಲ್ಪಡುತ್ತಾರೆ (ರಿವ್ಯೂ ಅಂಡ್ ಹೆರಾಲ್ಡ್, ಫೆಬ್ರವರಿ 7, 1893).ಕೊಕಾಘ 125.2

    ಲೋಕದ ಅಂತ್ಯಕಾಲವು ಸಮೀಪಿಸುತ್ತಿರುವಾಗ, ದೇವರ ಮಕ್ಕಳು ಮತ್ತು ಸೈತಾನನ ಹಿಂಬಾಲಕರ ನಡುವಣ ವಿಂಗಡನೆಯು ಹೆಚ್ಚೆಚ್ಚಾಗಿ ನಿರ್ಧರಿಸಲ್ಪಟ್ಟಿರುತ್ತದೆ, ಅವರು ಹೆಚ್ಚಾಗಿ ಭಿನ್ನಾಭಿಪ್ರಾಯ ಹೊಂದಿರುತ್ತಾರೆ. ಈ ವ್ಯತ್ಯಾಸವು ಹೊಸದಾಗಿ ಹುಟ್ಟುವುದು. ಅಂದರೆ ಕ್ರಿಸ್ತನಲ್ಲಿ ನೂತನ ಸೃಷ್ಟಿ, ಲೋಕದ ಪಾಲಿಗೆ ಸಾಯುವುದು, ದೇವರಿಗಾಗಿ ಜೀವಿಸುವುದು ಎಂಬ ಕ್ರಿಸ್ತನ ಮಾತುಗಳಲ್ಲಿ ವ್ಯಕ್ತಪಡಿಸಲ್ಪಟ್ಟಿದೆ. ಇವು ಪರಲೋಕದವರನ್ನು ಮತ್ತು ಭೂಲೋಕದವರನ್ನು ವಿಭಜಿಸುವ ಪ್ರತ್ಯೇಕ ಗೋಡೆಗಳಾಗಿವೆ. ಇವು ಲೋಕಕ್ಕೆ ಸಂಬಂಧಪಟ್ಟವರು ಮತ್ತು ಅದರಿಂದ ಹೊರತೆಗೆಯಲ್ಪಟ್ಟು ದೇವರ ದೃಷ್ಟಿಯಲ್ಲಿ ಅಮೂಲ್ಯವಾದವರೆಂದು ಆರಿಸಲ್ಪಟ್ಟವರ ನಡುವಣ ವ್ಯತ್ಯಾಸವನ್ನು ವಿವರಿಸುತ್ತದೆ.ಕೊಕಾಘ 125.3

    Larger font
    Smaller font
    Copy
    Print
    Contents