Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕುಟುಂಬದ ಸದಸ್ಯರು ಬೇರ್ಪಡುತ್ತಾರೆ

    ಒಂದೇ ಕುಟುಂಬಕ್ಕೆ ಸೇರಿದವರು ಬೇರ್ಪಡುತ್ತಾರೆ. ನೀತಿವಂತರ ಮೇಲೆ ಒಂದು ಗುರುತು ಹಾಕಲ್ಪಡುವುದು. ‘ನಾನು ಕಾರ್ಯ ಸಾಧಿಸುವ ದಿನದಲ್ಲಿ ಅವರು ನನಗೆ ಸ್ವಕೀಯ ಜನರಾಗಿರುವರು; ಒಬ್ಬನು ತನ್ನನ್ನು ಸೇವಿಸುವ ಸ್ವಂತ ಮಗನನ್ನು ಕರುಣಿಸುವಂತೆ ನಾನು ಅವರನ್ನು ಕರುಣಿಸುವನು’ ಎಂದು ಸೇನಾಧೀಶ್ವರನಾದ ಯೆಹೋವನು ಹೇಳುತ್ತಾನೆ (ಮಲಾಕಿಯ 3:17). ದೇವರಾಜ್ಞೆಗಳಿಗೆ ವಿಧೇಯರಾದವರು ಬೆಳಕಿನಲ್ಲಿರುವ ದೇವ ಮಕ್ಕಳೊಂದಿಗೆ ಒಟ್ಟಾಗುವರು. ಅವರು ಬಾಗಿಲುಗಳ ಮೂಲಕ ಪಟ್ಟಣವನ್ನು ಪ್ರವೇಶಿಸುವರು. ಅವರಿಗೆ ಜೀವವೃಕ್ಷದ ಹಕ್ಕು ಇರುವುದು’ (ಪ್ರಕಟನೆ 22:14), ಒಬ್ಬನು ತೆಗೆದುಕೊಳ್ಳಲ್ಪಡುವನು, ಅವನ ಹೆಸರು ಜೀವಬಾಧ್ಯರ ಪಟ್ಟಿಯಲ್ಲಿರುವುದು ಆದರೆ ಅವನೊಂದಿಗಿದ್ದ ಇತರರು ದೇವರಿಂದ ನಿತ್ಯನಿತ್ಯಕ್ಕೂ ಬೇರ್ಪಡುವ ಗುರುತು ಹೊಂದಿರುವರು (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್ 234, 235, 1895).ಕೊಕಾಘ 125.4