Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ನಮಗೆ ದೊರೆತ ಬೆಳಕಿನ ಪ್ರಕಾರ ನ್ಯಾಯತೀರ್ಪಿಗೊಳಗಾಗುವೆವು

    ನಮಗೆ ದೊರೆತ ಅವಕಾಶಗಳು ದೊರೆಯದಂತೆ ಅನೇಕರು ಕ್ರಿಸ್ತನ ಮಹಾಬೆಳಕು ಕೊಡಲ್ಪಟ್ಟು ಅದರಂತೆ ನಡೆಯದವರಿಗಿಂತ ಮೊದಲು ಪರಲೋಕಕ್ಕೆ ಹೋಗುವರು, ಅನೇಕರು ತಮಗೆ ದೊರೆತ ಬೆಳಕಿಗೆ ಅನುಗುಣವಾಗಿ ನಡೆದಿರುವರು. ಅದರ ಪ್ರಕಾರವಾಗಿ ಅವರಿಗೆ ನ್ಯಾಯತೀರ್ಪಾಗುವುದು. ಎಲ್ಲರೂ ಸಹ ಜಗತ್ತಿನ ಎಲ್ಲಾ ಭಾಗಗಳಿಗೆ ಎಚ್ಚರಿಕೆ ಕೊಡಲ್ಪಡುವ ತವಕ, ಪ್ರತಿಯೊಬ್ಬರಿಗೂ ಸಾಕಷ್ಟು ಬೆಳಕು ಹಾಗೂ ಸಾಕ್ಷಾಧಾರ ಕೊಡಲ್ಪಡುವ ನೇಮಿಸಲ್ಪಟ್ಟ ದಿನದವರೆಗೆ ಕಾದುಕೊಂಡಿರಬೇಕು. ಕೆಲವರಿಗೆ ಇತರರಿಗಿಂತ ಕಡಿಮೆ ಬೆಳಕು ಕೊಡಲ್ಪಟ್ಟಿರುವುದು. ಆದರೆ ನಾವೆಲ್ಲರೂ ಸಹ ನಮಗೆ ದೊರೆತ ಬೆಳಕಿನ ಪ್ರಕಾರ ನ್ಯಾಯತೀರ್ಪಿಗೊಳಗಾಗುವೆವು (ಮ್ಯಾನುಸ್ಕ್ರಿಪ್ಟ್ 77, 1899).ಕೊಕಾಘ 125.5

    ದೇವರಾಚೆಗಳಿಗೆ ಸಂಬಂಧಪಟ್ಟಂತೆ ಅಡ್ವೆಂಟಿಸ್ವರಾದ ನಮಗೆ ಮಹಾಬೆಳಕು ಕೊಡಲ್ಪಟ್ಟಿದೆ. ಈ ಆಜ್ಞೆಗಳು ಗುಣಸ್ವಭಾವದ ಮಾನದಂಡವಾಗಿದೆ ಅದರಿಂದ ಮನುಷ್ಯನು ಕೊನೆಯ ಮಹಾದಿನದಲ್ಲಿ ತೀರ್ಪಿಗೊಳಗಾಗುವನು. ಜನರು ತಮಗೆ ಕೊಡಲಟ್ಟ ಬೆಳಕಿಗೆ ಅನುಸಾರವಾಗಿ ವಿಚಾರಣೆಗೆ ಒಳಗಾಗುವರು (ರಿವ್ಯೂ ಅಂಡ್ ಹೆರಾಲ್ಡ್ ಜನವರಿ 1, 1901).ಕೊಕಾಘ 126.1

    ಮಹಾಬೆಳಕು ಕೊಡಲ್ಪಟ್ಟಿದ್ದರೂ, ಅದನ್ನು ಅಲಕ್ಷ್ಯ ಮಾಡಿದವರು, ಇಂತಹ ಅವಕಾಶಗಳು ಕೊಡಲ್ಪಡದವರಿಗಿಂತ ಕೆಟ್ಟ ಸ್ಥಿತಿಯಲ್ಲಿರುವರು. ಅವರು ತಮ್ಮನ್ನು ಉನ್ನತ ಸ್ಥಿತಿಗೆರಿಸಿಕೊಳ್ಳುತ್ತಾರೋ ಹೊರತು, ದೇವರನ್ನಲ್ಲ. ಪ್ರತಿಯೊಬ್ಬರಿಗೂ ಕೊಡಲ್ಪಟ್ಟ ಶಿಕ್ಷೆಯು, ಅವರು ದೇವರಿಗೆ ಅಗೌರವ ತಂದ ಅನುಪಾತಕ್ಕೆ ಅನುಗುಣವಾಗಿರುವುದು. ಪ್ರತಿಯೊಬ್ಬರೂ ಸಹ ತಮ್ಮ ನಿರ್ಧಾರವನ್ನು ಬುದ್ಧಿವಂತಿಕೆಯಿಂದ ಮಾಡಲು ಸಾಕಷ್ಟು ಬೆಳಕು ಹೊಂದಿರಬೇಕು (ಗ್ರೇಟ್ ಕಾಂಟ್ರೊವರ್ಸಿ, 605, 1911).ಕೊಕಾಘ 126.2