Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಉದ್ದೇಶಪೂರ್ವಕ ನಿರ್ಲಕ್ಷ್ಯಕ್ಕೆ ಕ್ಷಮೆಯಿಲ್ಲ

    ಯಾರಿಗೆ ದೇವರಜ್ಞಾನ ಹಾಗೂ ಬೆಳಕು ದೊರೆಯಲಿಲ್ಲವೋ, ಅದರ ವಿಷಯದಲ್ಲಿ ದೇವರು ಅವರನ್ನು ಅಪರಾಧಿಗಳೆಂದು ಎಣಿಸುವುದಿಲ್ಲ. ಆದರೆ ಅನೇಕರು ಲೋಕದ ಆಶಾಪಾಶಕ್ಕೆ ಸಿಲುಕಿ, ಕ್ರಿಸ್ತನ ರಾಯಭಾರಿಗಳು ಸಾರುವ ಸತ್ಯಕ್ಕೆ ವಿಧೇಯತೆ ತೋರಲು ನಿರಾಕರಿಸುತ್ತಾರೆ. ಅಂತವರು ಗ್ರಹಿಸಿಕೊಂಡ ಸತ್ಯ ಹಾಗೂ ಅವರ ಹೃದಯದಲ್ಲಿ ತೋರಿ ಬಂದ ವಾಕ್ಯದ ಬೆಳಕು. ನ್ಯಾಯವಿಚಾರಣೆಯ ಸಮಯದಲ್ಲಿ ಅವರನ್ನು ಅಪರಾಧಿಗಳೆಂದು ನಿರ್ಣಯಿಸುತ್ತದೆ (ಬೈಬಲ್ ವ್ಯಾಖ್ಯಾನ, ಸಂಪುಟ 5, ಪುಟ 1145).ಕೊಕಾಘ 126.3

    ಕೆಲವರಿಗೆ ಸತ್ಯವನ್ನು ಕೇಳುವ ಅವಕಾಶ ದೊರೆಯುತ್ತದೆ. ಆದರೆ ಅವರು ಅದನ್ನು ಕೇಳದಿದ್ದಲ್ಲಿ, ತಾವು ಅದಕ್ಕೆ ಲೆಕ್ಕ ಕೊಡುವ ಅಗತ್ಯವಿಲ್ಲವೆಂದು ತಿಳಿದುಕೊಂಡು, ಅದನ್ನು ಮನವರಿಕೆ ಮಾಡಿಕೊಳ್ಳಲು ನಿರ್ಲಕ್ಷ್ಯ, ತೋರುತ್ತಾರೆ. ಅಂತವರು ಕ್ರಿಸ್ತನ ವಾಕ್ಯವನ್ನು ಕೇಳಿ ಅದನ್ನು ತಿರಸ್ಕರಿಸಿದವರೆಂದು ದೇವರು ನಿರ್ಣಯಿಸಿ ಅವರನ್ನು ಅಪರಾಧಿಗಳೆಂದು ನಿರ್ಧರಿಸುತ್ತಾನೆ. ಸತ್ಯವನ್ನು ಅರ್ಥಮಾಡಿಕೊಳ್ಳಬಹುದಾಗಿದ್ದರೂ, ಉದ್ದೇಶಪೂರ್ವಕವಾಗಿ ಅದನ್ನು ನಿರ್ಲಕ್ಷಿಸಿ, ಅಸತ್ಯವನ್ನು ಆರಿಸಿಕೊಂಡವರಿಗೆ ಕ್ಷಮೆಯಿಲ್ಲ. ಯೇಸುಸ್ವಾಮಿಯು ತನ್ನ ಶ್ರಮೆ, ಸಂಕಟ ಹಾಗೂ ಮರಣದ ಮೂಲಕ ಅಜ್ಞಾನದಿಂದ ಮಾಡಿದ ಎಲ್ಲಾ ಪಾಪಗಳಿಗೆ ದೋಷಪರಿಹಾರ ಮಾಡಿದ್ದಾನೆ. ಆದರೆ ಬೇಕೆಂದೇ ತೋರಿಸಿದ ನಿರ್ಲಕ್ಷ ಕ್ಕೆ ಯಾವುದೇ ಮುನ್ನೇರ್ಪಾಡಿನ ಅವಕಾಶವಿಲ್ಲ.ಕೊಕಾಘ 126.4

    ನಮ್ಮ ಮನಸ್ಸಿನ ಗ್ರಹಿಕೆಗೆ ಬಾರದಂತ ಬೆಳಕಿಗೆ ನಾವು ಹೊಣೆಗಾರರೆಂದು ಎಣಿಸಲ್ಪಡುವುದಿಲ್ಲ, ಆದರೆ ಯಾವ ಬೆಳಕನ್ನು ಬೇಡವೆಂದು ಎದುರಿಸಿ ತಿರಸ್ಕರಿಸಿದ್ದೇವೆಯೋ, ಅದಕ್ಕೆ ನಾವು ಜವಾಬ್ದಾರರಾಗಿದ್ದೇವೆ. ಸತ್ಯವನ್ನು ಎಂದೂ ಕೇಳದಿರುವವನು ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದುದರಿಂದ ಅವನಿಗೆ ಕೊಡಲ್ಪಡದಿರುವಂತ ಬೆಳಕಿಗೆ ಅವನನ್ನು ದೇವರು ಅಪರಾಧಿಯೆಂದು ನಿರ್ಣಯಿಸುವುದಿಲ್ಲ (ಬೈಬಲ್ ವ್ಯಾಖ್ಯಾನ, ಸಂಪುಟ 5, ಪುಟ 1145).ಕೊಕಾಘ 126.5