Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ದೇವರ ಮುದ್ರೆಯು ನಮ್ಮ ಮೇಲೆ ಹಾಕಲ್ಪಡಬೇಕಲ್ಲವೇ!

    ಇನ್ನೇನು ಸ್ವಲ್ಪ ಸಮಯದಲ್ಲಿ ದೇವರ ಮಕ್ಕಳಾದ ಪ್ರತಿಯೊಬ್ಬರಿಗೂ ಆತನ ಮುದ್ರೆಯು ಒತ್ತಲ್ಪಡುವುದು. ಅದು ನಮ್ಮ ಮೇಲೆಯೂ ಒತ್ತಲ್ಪಟ್ಟರೆ ಎಷ್ಟೊಂದು ಸಂತೋಷವಲ್ಲವೇ? ದೇವದೂತನು ದೇವರ ಮಕ್ಕಳ ಹಣೆಯ ಮೇಲೆ ಆತನ ಮುದ್ರೆಯನ್ನು ಒತ್ತಲು ಹೋಗುವಾಗ, ನಮ್ಮನ್ನು ಬಿಟ್ಟು ಮುಂದಕ್ಕೆ ಹೋಗುವುದನ್ನು ಯಾರು ತಾನೇ ತಡೆದುಕೊಳ್ಳಬಲ್ಲರು? (ಬೈಬಲ್ ವ್ಯಾಖ್ಯಾನ ಸಂಪುಟ 7, ಪುಟಗಳು 969, 970, 1889).ಕೊಕಾಘ 129.6

    ಸತ್ಯದ ವಿಶ್ವಾಸಿಗಳು ಸಮಾಧಾನಕರವಾದ ಈ ದಿನಗಳಲ್ಲಿ ತಮ್ಮ ನಂಬಿಕೆಯನ್ನು ಗಳಿಸಿಕೊಳ್ಳಲಾಗದಿದ್ದಲ್ಲಿ, ಮೃಗದ ಗುರುತನ್ನು ಹೊಂದಿ ಅದರ ವಿಗ್ರಹಕ್ಕೆ ನಮಸ್ಕರಿಸದವರ ವಿರುದ್ಧವಾಗಿ ಆಚೆಯು ಹೊರಡಿಸಲ್ಪಟ್ಟು ಮಹಾಸಂಕಟದ ಸಮಯ ಬಂದಾಗ, ಅಂತವರು ಹೇಗೆ ತಮ್ಮ ನಂಬಿಕೆ ಕಾಪಾಡಿಕೊಳ್ಳಬಲ್ಲರು? ಈ ಗಂಭೀರ ಸಮಯವು ಅಷ್ಟೇನೂ ದೂರದಲ್ಲಿಲ್ಲ. ದೇವರ ಮಕ್ಕಳು ನಂಬಿಕೆಯಲ್ಲಿ ಬಲಹೀನರಾಗಿಯೂ ಮತ್ತು ಯಾವುದೇ ದೃಢನಿರ್ಧಾರಕ್ಕೆ ಬರಲು ಹಿಂಜರಿಯುವುದಕ್ಕೆ ಬದಲಾಗಿ, ಸಂಕಟದ ಸಮಯ ಎದುರಿಸಲು ಬೇಕಾದ ಧೈರ್ಯಸ್ಥೈರ್ಯಗಳನ್ನು ಬೆಳೆಸಿಕೊಳ್ಳಬೇಕು (ಟೆಸ್ಟಿಮೊನೀಸ್, ಸಂಪುಟ 4, ಪುಟ 251, 1876).ಕೊಕಾಘ 130.1

    Larger font
    Smaller font
    Copy
    Print
    Contents