Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಮುದ್ರೆ ಒತ್ತುವುದು ಮುಗಿದಾಗ, ಕೃಪಾಕಾಲವು ಮುಕ್ತಾಯವಾಗುವುದು

    ಸಂಕಟದ ಸಮಯ ಬರುವುದಕ್ಕೆ ಸ್ವಲ್ಪ ಸಮಯ ಮೊದಲು ನಾವೆಲ್ಲರೂ ಅಂದರೆ ದೇವರ ಮಕ್ಕಳು ಆತನ ಮುದ್ರೆಯನ್ನು ಹೊಂದಿರುತ್ತಾರೆ. ಅನಂತರ ನಾಲ್ಕು ದಿಕ್ಕಿನ ಗಾಳಿಗಳನ್ನು ಹಿಡಿದುಕೊಂಡಿದ್ದ ದೇವದೂತರು ಅದನ್ನು ಬಿಟ್ಟರು. ಆಗ ಬರಗಾಲ, ರೋಗರುಜಿನ ಉಂಟಾಗುವುದಲ್ಲದೆ, ಸಮಸ್ತ ಲೋಕವೇ ಗಲಿಬಿಲಿ ಗೊಂದಲದಲ್ಲಿರುತ್ತದೆ (ಬೈಬಲ್ ವ್ಯಾಖ್ಯಾನ ಸಂಪುಟ 7, ಪುಟ 279, 1858).ಕೊಕಾಘ 133.2

    ಪರಲೋಕದಲ್ಲಿ ದೇವದೂತರು ಅತ್ತಿಂದಿತ್ತ ವೇಗವಾಗಿ ಹೋಗುತ್ತಿರುವುದನ್ನು ಶ್ರೀಮತಿ ವೈಟಮ್ಮನವರು ದರ್ಶನದಲ್ಲಿ ಕಂಡರು. ಭೂಲೋಕದಿಂದ ಬಂದ ಒಬ್ಬ ದೇವದೂತನು ಕ್ರಿಸ್ತನಿಗೆ ತಾನು ಭೂಲೋಕದಲ್ಲಿ ದೇವರ ಮಕ್ಕಳನ್ನು ಎಣಿಸಿ ಅವರಿಗೆ ಮುದ್ರೆ ಹಾಕುವ ಕಾರ್ಯ ಮುಗಿಸಿದ್ದೇನೆಂದು ಹೇಳಿದನು. ಆಗ ಹತ್ತು ಅಜ್ಞೆಗಳನ್ನು ಒಳಗೊಂಡಿರುವ ಮಂಜೂಷದ ಮುಂದೆ ಸೇವೆ ಮಾಡುತ್ತಿದ್ದ ಯೇಸುವು ಧೂಪಾರತಿಯನ್ನು ಭೂಮಿಗೆ ಬಿಸಾಡಿದನು. ಅನಂತರ ತನ್ನ ಕೈಗಳನ್ನು ಮೇಲೆತ್ತಿ ಮಹಾಶಬ್ದದಿಂದ ‘ಮುಕ್ತಾಯವಾಯಿತು’ ಹೇಳಿದನು (ಎವಾಂಜಲಿಸಮ್, 279, 1858).ಕೊಕಾಘ 133.3

    ಸಮಯ ಸ್ವಲ್ಪ ಮಾತ್ರ ಉಳಿದಿರುತ್ತದೆ. ಆದರೆ ಈಗಾಗಲೇ ಜನಾಂಗಕ್ಕೆ ವಿರುದ್ಧವಾಗಿ ಜನಾಂಗವೂ, ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವು ಹೋರಾಟ ಮಾಡುತ್ತಿರುವುದರಿಂದ, ಈಗ ಸಾಮಾನ್ಯವಾದ ಯಾವುದೇ ಕದನವಿರುವುದಿಲ್ಲ. ದೇವರ ದಾಸರ ಹಣೆಯ ಮೇಲೆ ಮುದ್ರೆ ಒತ್ತುವ ತನಕ ದೇವದೂತರು ನಾಲ್ಕು ದಿಕ್ಕಿನ ಗಾಳಿಗಳನ್ನು ಹಿಡಿದುಕೊಂಡಿರುವರು. ಅನಂತರ ಈ ಲೋಕದ ಶಕ್ತಿಗಳು ಕೊನೆಯ ಮಹಾಯುದ್ಧಕ್ಕಾಗಿ ತಮ್ಮೆಲ್ಲಾ ಸೈನ್ಯಗಳನ್ನು ವ್ಯವಸ್ಥೆಗೊಳಿಸುವವು (ಟೆಸ್ಟಿಮೊನೀಸ್, ಸಂಪುಟ 6, ಪುಟ 14, 1900).ಕೊಕಾಘ 133.4

    ಭೂಲೋಕದಿಂದ ಹಿಂದಿರುಗಿದ ಒಬ್ಬ ದೇವದೂತನು ತನ್ನ ಕಾರ್ಯವು ತೀರಿತೆಂದು ಹೇಳುವನು ಹಾಗೂ ಲೋಕದ ಮೇಲೆ ಕೊನೆಯ ಪರೀಕ್ಷೆಯು ಬಂದಿತು. ದೇವರಾಜ್ಞೆಗಳಿಗೆ ನಿಷ್ಠೆಯಿಂದ ವಿಧೇಯತೆ ತೋರಿದವರು ‘ಜೀವಸ್ವರೂಪನಾದ ದೇವರ ಮುದ್ರೆ’ ಯನ್ನು ಒತ್ತಿಸಿಕೊಂಡರು. ಆಗ ಯೇಸುಸ್ವಾಮಿಯು ಪರಲೋಕದ ದೇವದರ್ಶನ ಗುಡಾರದಲ್ಲಿ ತನ್ನ ಯಾಜಕ ಸೇವೆಯನ್ನು ಮುಕ್ತಾಯಗೊಳಿಸಿ ತನ್ನ ಕೈಗಳನ್ನು ಮೇಲಕ್ಕೆತ್ತಿ ಮಹಾಶಬ್ದದಿಂದ ‘ತೀರಿತು’ ಎಂದು ಹೇಳುವನು (ಗೇಟ್ ಕಾಂಟ್ರೊವರ್ಸಿ, ಪುಟ 613, 1911).ಕೊಕಾಘ 133.5