Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಇನ್ನೊಂದು ಕೃಪಾಕಾಲವೂ ಸಹ ದುಷ್ಟರಲ್ಲಿ ಬದಲಾವಣೆ ತರುವುದಿಲ್ಲ

    ಈ ಜೀವನದಲ್ಲಿ ನಮಗೆ ದೊರೆತ ಅವಕಾಶಗಳನ್ನು ನಾವು ಅತ್ಯುತ್ತಮವಾಗಿ ಉಪಯೋಗಿಸಿಕೊಳ್ಳಬೇಕು. ಪರಲೋಕಕ್ಕೆ ಸಿದ್ಧತೆ ಮಾಡಿಕೊಳ್ಳಲು ನಮಗೆ ಮತ್ತೊಂದು ಕೃಪಾಕಾಲ ಕೊಡಲ್ಪಡುವುದಿಲ್ಲ. ದೇವರು ತನ್ನ ಆಜ್ಞೆಗಳಿಗೆ ವಿಧೇಯರಾದವರಿಗಾಗಿ ಸಿದ್ಧತೆ ಮಾಡಿರುವ ಪರಲೋಕಕ್ಕೆ ನಾವು ಅರ್ಹತೆ ಪಡೆದುಕೊಳ್ಳುವಂತೆ ನಮ್ಮ ಗುಣಸ್ವಭಾವಗಳನ್ನು ರೂಪಿಸಿಕೊಳ್ಳಲು ಈ ಜೀವನವು ನಮಗೆ ಕೊಡಲ್ಪಟ್ಟಿರುವ ಏಕೈಕ ಹಾಗೂ ಕೊನೆಯ ಅವಕಾಶವಾಗಿದೆ (ಪತ್ರ 20, 1899).ಕೊಕಾಘ 137.4

    ಕರ್ತನಾದ ಕ್ರಿಸ್ತನು ಎರಡನೇಸಾರಿ ಬಂದನಂತರ, ಬೇರೆ ಯಾವುದೇ ಕೃಪಾಕಾಲವಿರುವುದಿಲ್ಲ, ಎರಡನೇ ಅವಕಾಶವಿದೆ ಎಂದು ಹೇಳುವವರು ಮೋಸ ಹೋಗಿದ್ದಾರೆ ಹಾಗೂ ದಾರಿ ತಪ್ಪಿಹೋಗಿದ್ದಾರೆ. ಕ್ರಿಸ್ತನು ಎರಡನೇಸಾರಿ ಬರುವುದಕ್ಕೆ ಮೊದಲು ನೋಹನ ಕಾಲದಲ್ಲಿ ಜಲಪ್ರಳಯಕ್ಕೆ ಮೊದಲು ಇದ್ದಂತ ಪರಿಸ್ಥಿತಿಯಿರುವುದು. ರಕ್ಷಕನು ಮೇಘಗಳಲ್ಲಿ ಪ್ರತ್ಯಕ್ಷನಾದಾಗ, ಯಾರಿಗೂ ಸಹ ರಕ್ಷಣೆ ಹೊಂದಿಕೊಳ್ಳಲು ಮತ್ತೊಂದು ಅವಕಾಶ ಕೊಡಲ್ಪಡುವುದಿಲ್ಲ. ಎಲ್ಲರೂ ಸಹ ತಮ್ಮ ನಿರ್ಧಾರ ಮಾಡಿದ್ದಾಗಿದೆ (ಪತ್ರ 41, 1891).ಕೊಕಾಘ 138.1

    ಎಲ್ಲರೂ ಸಹ ತಮಗೆ ದೊರೆತ ಆತ್ಮೀಕವಾದ ಸತ್ಯದ ಬೆಳಕಿಗೆ ತಕ್ಕಂತೆ ಪರೀಕ್ಷೆ ಮಾಡಲ್ಪಟ್ಟಿದ್ದಾರೆ. ಸತ್ಯವನ್ನು ಬಿಟ್ಟು ಆಧಾರವಿಲ್ಲದ ಕಟ್ಟುಕತೆಗಳನ್ನು ನಂಬಿದವರು ಎರಡನೇ ಕೃಪಾಕಾಲ ನಿರೀಕ್ಷಿಸಲಾಗದು. ಈ ಲೋಕದಲ್ಲಿ ಕ್ರಿಸ್ತನ ಸಾವಿರ ವರ್ಷಗಳ ಆಳ್ವಿಕ ಇರುವುದಿಲ್ಲ. ಒಬ್ಬರ ಹೃದಯಗಳಿಗೆ ಪವಿತ್ರಾತ್ಮನು ಸತ್ಯದ ಮನವರಿಕೆ ಮಾಡಿದ ನಂತರ, ಅವರು ಅದನ್ನು ತಿರಸ್ಕರಿಸಿ, ಇತರರೂ ಸಹ ಅದನ್ನು ಸ್ವೀಕರಿಸದಂತೆ ತಮ್ಮ ಪ್ರಭಾವ ಉಪಯೋಗಿಸಿ ಅಡ್ಡಿ ಮಾಡಿದವರಿಗೆ ಎಂದೆಂದಿಗೂ ತಿರುಗಿ ಸತ್ಯದ ಮನವರಿಕೆ ಉಂಟಾಗುವುದು ಸಾಧ್ಯವಿಲ್ಲ. ತಮಗೆ ಕೊಟ್ಟ ಕೃಪಾಕಾಲದಲ್ಲಿ ಅವರು ತಮ್ಮ ಗುಣಸ್ವಭಾವ ಬದಲಾಯಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಆದುದರಿಂದ ಕ್ರಿಸ್ತನು ಅವರಿಗೆ ಮತ್ತೊಂದು ಅವಕಾಶ ಕೊಡುವುದಿಲ್ಲ. ಕೃಪಾಕಾಲದಲ್ಲಿ ಅವರು ಮಾಡಿದ ನಿರ್ಧಾರವು ಅಂತಿಮವಾಗಿದೆ (ಪತ್ರ 25, 1900).ಕೊಕಾಘ 138.2

    *****