Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-17
    ಕೊನೆಯ ಏಳು ಉಪದ್ರವಗಳು ಹಾಗೂ ದುಷ್ಟರ ಮಹಾಸಂಕಟದ ಸಮಯ - ಭಾಗ 1

    ದೇವರ ಉಗ್ರಕೋಪವೆಂಬ ಉಪದ್ರವಗಳು ಸುರಿಸಲ್ಪಡುವವು

    ಗಂಭೀರವಾದ ಘಟನೆಗಳು ಇನ್ನೇನು ನಮ್ಮ ಮುಂದೆ ಕಂಡುಬರಲಿವೆ. ತುತ್ತೂರಿ ಊದಿದ ನಂತರ ತಿರುಗಿ ತುತ್ತೂರಿ ಊದಲ್ಪಡುವುದು. ಆಗ ಈ ಲೋಕದಲ್ಲಿರುವ ಜನರ ಮೇಲೆ ಉಪದ್ರವದ ಮೇಲೆ ಉಪದ್ರವವು ಒಂದಾದ ನಂತರ ಇನ್ನೊಂದು ಸುರಿಯಲ್ಪಡುವುದು (ಸೆಲೆಕ್ಟಡ್ ಮೆಸೇಜಸ್, ಸಂಪುಟ 3, ಪುಟ 426).ಕೊಕಾಘ 139.1

    ಕರುಣೆಯ ದೂತನು ಶೀಘ್ರದಲ್ಲಿಯೇ ಈ ಲೋಕವನ್ನು ಬಿಟ್ಟು ಹೋಗುವನು. ಆಗ ಕೊನೆಯ ಏಳು ಉಪದ್ರವಗಳು ಸುರಿಸಲ್ಪಡುವವು... ದೇವರ ಉಗ್ರಕೋಪವು ಬೇಗನೆ ಈ ಲೋಕದ ಮೇಲೆ ಕಂಡುಬರುವುದು, ಆತನು ತನ್ನ ಆಜ್ಞೆಗಳನ್ನು ಮೀರಿದ ಕೆಟ್ಟವರನ್ನು ದಂಡಿಸಲು ಆರಂಭಿಸಿದಾಗ, ಅದು ಮುಗಿಯುವ ತನಕ ಅವರಿಗೆ ವಿಶ್ರಾಂತಿ ದೊರೆಯುವುದಿಲ್ಲ (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, ಪುಟ 182).ಕೊಕಾಘ 139.2