Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಏಳನೇ ಉಪದ್ರವ

    ದೇವರ ಏಳನೇ ಉಪದ್ರವವೆಂಬ ರೌದ್ರವು ಲೋಕದ ಮೇಲೆ ಸುರಿಯುವುದನ್ನು ನಾವು ಅಧ್ಯಯನ ಮಾಡಬೇಕು (ಪ್ರಕಟನೆ 16:17-21). ದುಷ್ಟಶಕ್ತಿಗಳು ಹೋರಾಟ ಮಾಡದೆ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಹರ್ಮೆಗೆದ್ದೋನ್ ಯುದ್ದದಲ್ಲಿ ದೇವರು ತನ್ನ ಕಾರ್ಯ ಮಾಡುವನು. ಪ್ರಕಟನೆ 18ನೇ ಅಧ್ಯಾಯದಲ್ಲಿ ಒಬ್ಬ ದೇವದೂತನ ಪ್ರಭಾವದಿಂದ ಭೂಮಿಗೆ ಪಕಾಶವುಂಟಾಯಿತೆಂದು ಓದುತ್ತೇವೆ. ಆಗ ಒಳ್ಳೆಯ ಮತ್ತು ಕೆಟ್ಟ ಧಾರ್ಮಿಕ ಶಕ್ತಿಗಳು ನಿದ್ರೆಯಿಂದ ಎಚ್ಚರಗೊಳ್ಳುವವು. ಆಗ ಜೀವಸ್ವರೂಪನಾದ ದೇವರ ಸೈನ್ಯವು ಯುದ್ಧಭೂಮಿಗೆ ಬರುವುದು.ಕೊಕಾಘ 147.1

    ಲೋಕದ ಕೊನೆಯ ಯುದ್ಧವಾದ ಹರ್ಯೆಗೆದ್ದೋನ್ ಶೀಘ್ರದಲ್ಲಿಯೇ ನಡೆಯುವುದು. ರಾಜಾಧಿರಾಜನೂ, ಕರ್ತರಕರ್ತನೂ ಎಂಬ ಹೆಸರುಳ್ಳವನು ಶುಭ್ರವಾಗಿಯೂ ನಿರ್ಮಲವಾಗಿಯೂ ಇರುವ ನಾರುಮಡಿಯನ್ನು ಧರಿಸಿಕೊಂಡು ಬಿಳೀ ಕುದುರೆಗಳಲ್ಲಿ ಕುಳಿತಿರುವ ಪರಲೋಕದ ಸೈನ್ಯವನ್ನು ಯುದ್ಧಭೂಮಿಯಲ್ಲಿ ತಾನೇ ನಡೆಸುವನು (ಪ್ರಕಟನೆ 19:11-16; ಬೈಬಲ್ ವ್ಯಾಖ್ಯಾನ ಸಂಪುಟ 7, ಪುಟ 982).ಕೊಕಾಘ 147.2

    ಸಮಸ್ತ ಲೋಕವೇ ಸಮುದ್ರದ ಅಲೆಗಳಂತೆ ಅತ್ತಿಂದಿತ್ತ ಹೊಯ್ದಾಡುವುದು, ಅದರ ಬುಗ್ಗೆಗಳು ತೆರೆಯಲ್ಪಡುವವು. ಅದರ ಅರಿವಾರವು ಒಡೆಯಲ್ಪಡುವುದು, ಪರ್ವತ ಶ್ರೇಣಿಗಳು ಮುಳುಗುವವು, ಜನಭರಿತ ದ್ವೀಪಗಳು ಕಾಣದಾಗುವವು, ಸೊದೊಮ್‌ನಂತೆ ಅತಿದುಷ್ಟವಾಗಿರುವ ಸಮುದ್ರ ತೀರದಲ್ಲಿರುವ ಬಂದರು ಪಟ್ಟಣಗಳು ಸುನಾಮಿಯಂತ ಚಂಡ ಮಾರುತದಿಂದ ನಾಶವಾಗಿ ಮುಳುಗುವವು... ಜಗತ್ತಿನ ಹೆಮ್ಮೆಯ ನಗರಗಳು ಕೀರ್ತಿ, ಮಹಿಮೆಗಾಗಿ ಅಪಾರ ಹಣ ಖರ್ಚು ಮಾಡಿ ಕಟ್ಟಿಸಿಕೊಂಡಿರುವ ಅರಮನೆಯಂತ ಅದ್ಭುತ ಭವನಗಳು ಅವರ ಕಣ್ಣುಗಳ ಮುಂದೆಯೇ ನಾಶವಾಗುವವು. ಸೆರೆಮನೆಯ ಗೋಡೆಗಳು ಬಿದ್ದು ಹೋಗುವವು. ಕ್ರಿಸ್ತನ ಮೇಲಣ ತಮ್ಮ ನಂಬಿಕೆಗಾಗಿ ಸೆರೆಮನೆಗಳಲ್ಲಿದ್ದ ದೇವರ ಜನರು ಬಿಡುಗಡೆ ಹೊಂದುವರು (ಗ್ರೇಟ್ ಕಾಂಟ್ರೊವರ್ಸಿ, ಪುಟ 637).ಕೊಕಾಘ 147.3

    *****