Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವಜನರಿಗೆ ವಿರುದ್ಧವಾಗಿ ಉಪಯೋಗಿಸಿದ ವಾದಗಳು

    ಯೇಸುಸ್ವಾಮಿಯು ಪರಲೋಕದ ದೇವದರ್ಶನದ ಗುಡಾರದಲ್ಲಿ ತನ್ನ ಸೇವೆ ಮುಗಿಸುವ ತನಕ ನಾಲ್ಕು ಮಂದಿ ದೇವದೂತರು ನಾಲ್ಕುದಿಕ್ಕುಗಳ ಗಾಳಿಯನ್ನು ಹಿಡಿದುಕೊಂಡಿರುವರು. ಅನಂತರ ಕೊನೆಯ ಏಳು ಉಪದ್ರವಗಳು ಲೋಕದಲ್ಲಿ ಉಂಟಾಗುವವು, ಈ ಉಪದ್ರವಗಳಿಂದ ಬಾಧೆಗೊಳಗಾದ ದುಷ್ಟರು ನೀತಿವಂತರ * ವಿರುದ್ಧವಾಗಿ ಕೋಪಗೊಳ್ಳುವರು, ಈ ದಂಡನೆ ಬರುವುದಕ್ಕೆ ನೀತಿವಂತರೇ ಕಾರಣವೆಂದೂ ಇವರನ್ನು ಲೋಕದಿಂದ ನಾಶಮಾಡಿದಲ್ಲಿ, ಈ ಉಪದ್ರವಗಳು ನಿಲ್ಲುತ್ತವೆಂದು ದುಷ್ಟರು ತಿಳಿಯುತ್ತಾರೆ (ಅರ್ಲಿ ರೈಟಿಂಗ್ಸ್, 36).ಕೊಕಾಘ 150.3

    ನಾಲ್ಕುಮಂದಿ ದೇವದೂತರು ಹಿಡಿದುಕೊಂಡಿರುವ ಗಾಳಿಯನ್ನು ಬಿಟ್ಟಾಗ ಸೈತಾನನು ದೀರ್ಘಕಾಲದಿಂದ ಮಾಡಬೇಕೆಂದು ಆಶಿಸಿರುವ ಕೆಟ್ಟ ಕಾರ್ಯಗಳನ್ನು ಮಾಡುವನು. ಸುನಾಮಿಯಂತ ಚಂಡಮಾರುತ,ಗುಡುಗು, ಮಿಂಚು, ಧಾರಾಕಾರವಾಗಿ ಸುರಿಯುವ ಮಳೆ ತರುವ ಬಿರುಗಾಳಿ, ಯುದ್ಧ, ರಕ್ತಪಾತ — ಇವುಗಳು ಸೈತಾನನಿಗೆ ಸಂತೋಷ ತರುತ್ತವೆ. ದುಷ್ಟರಾದ ಜನರು ಅವನ ವಂಚನೆಗೆ ಎಷ್ಟೊಂದು ಮರುಳಾಗಿದ್ದಾರೆಂದರೆ, ವಾರದ ಮೊದಲನೆ ದಿನವಾದ ಭಾನುವಾರವನ್ನು ಅಪವಿತ್ರ ಮಾಡಿದೇ ಇಂತಹ ನೈಸರ್ಗಿಕ ವಿಕೋಪಗಳಿಗೆ ಹಾಗೂ ವಿಪತ್ತುಗಳಿಗೆ ಕಾರಣವೆಂದು ಅವರು ಹೇಳುತ್ತಾರೆ. ಭಾನುವಾರಕ್ಕೆ ಕೊಡಬೇಕಾದ ಗೌರವ ಕೊಡದಿರುವುದೇ ಲೋಕಕ್ಕೆ ಇಂತಹ ದಂಡನೆ ಬರುವುದಕ್ಕೆ ಕಾರಣವೆಂದು ಜನಪ್ರಿಯವಾಗಿರುವ ಕ್ರೈಸ್ತ ಸಭೆಗಳಲ್ಲಿ ಬೋಧಕರು, ಸಭಾಪಾಲಕರು ಚರ್ಚಿನ ವೇದಿಕೆಯಿಂದ ಸಾರುತ್ತಾರೆ (ರಿವ್ಯೂ ಅಂಡ್ ಹೆರಾಲ್ಡ್, ಸೆಪ್ಟೆಂಬರ್ 17, 1901).ಕೊಕಾಘ 150.4

    ಸಭೆಗೂ ಮತ್ತು ದೇಶದ ಕಾನೂನಿಗೂ ವಿರುದ್ಧವಾಗಿ ನಿಂತಿರುವ ಸಬ್ಬತ್ತು ಕೈಕೊಳ್ಳುವವರನ್ನು ಇನ್ನೆಂದಿಗೂ ಸಹಿಸಿಕೊಳ್ಳಬಾರದು; ಸಂಪೂರ್ಣ ಲೋಕವೇ ಅರಾಜಕತೆ ಮತ್ತು ಗಲಿಬಿಲಿಯಿಂದ ನಾಶವಾಗುವುದಕ್ಕೆ ಬದಲಾಗಿ, ದೇವರಾಜ್ಞೆ ಕೈಕೊಳ್ಳುತ್ತಿರುವ ಈ ಚಿಕ್ಕ ಗುಂಪಿನವರು ನಾಶವಾಗುವುದು ಉತ್ತಮ. ಇದೇ ರೀತಿಯಾದ ವಾಕ್ಯವನ್ನು ಎರಡು ಸಾವಿರ ವರ್ಷಗಳ ಹಿಂದೆ ಕ್ರಿಸ್ತನ ವಿರುದ್ಧವಾಗಿ ಮಹಾಯಾಜಕನಾದ ಕಾಯಫನು ಹೇಳಿದ್ದನು. ಇದೇ ವಾದವನ್ನು ಕೊನೆಯ ಕಾಲದಲ್ಲಿ ನೀತಿವಂತರ ಬಗ್ಗೆಯೂ ಹೇಳುವರು (ಗ್ರೇಟ್ ಕಾಂಟ್ರೊವರ್ಸಿ, 615).ಕೊಕಾಘ 150.5