Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಮಧ್ಯವರ್ತಿಯಿರುವುದಿಲ್ಲ. ಆದರೆ ಕ್ರಿಸ್ತನೊಂದಿಗೆ ಸತತವಾದ ಸಂಪರ್ಕ

    ಕ್ರಿಸ್ತನು ತನ್ನ ಜನರಿಗಾಗಿ ದೋಷಪರಿಹಾರ ಮಾಡಿ ಅವರ ಪಾಪಗಳನ್ನು ಅಳಿಸಿ ಬಿಟ್ಟಿದ್ದಾನೆ. ಆತನ ರಾಜ್ಯಕ್ಕೆ ಸೇರುವವರು ಯಾರೆಂದು ನಿರ್ಧರಿಸಿಯಾಗಿದೆ...ಕೊಕಾಘ 155.6

    ಆತನು ಪರಲೋಕದ ದೇವದರ್ಶನದ ಗುಡಾರದಲ್ಲಿ ತನ್ನ ಸೇವೆ ಮುಗಿಸಿದಾಗ, ಲೋಕದ ಜನರ ಮೇಲೆ ಕತ್ತಲು ಕವಿದಿರುವುದು. ಅಂತಹ ದಿಗಿಲು ಹುಟ್ಟಿಸುವ ಸಮಯದಲ್ಲಿ ಪರಿಶುದ್ಧನಾದ ದೇವರ ಮುಂದೆ ನೀತಿವಂತರಿಗಾಗಿ ಪ್ರಾರ್ಥಿಸುವ ಯಾವುದೇ ಮಧ್ಯವರ್ತಿ ಇರುವುದಿಲ್ಲ (ಗ್ರೇಟ್ ಕಾಂಟ್ರೊವರ್ಸಿ 613, 614).ಕೊಕಾಘ 156.1

    ಇಂತಹ ಸಂಕಟದ ಸಮಯದಲ್ಲಿ ಕರ್ತನು ತನ್ನ ಜನರನ್ನು ಮರೆಯುವನೇ? ವೈರಿಗಳು ಅವರನ್ನು ಸೆರೆಮನೆಗೆ ಹಾಕಿಸಿದರೂ, ಅಲ್ಲಿನ ಗೋಡೆಗಳು ಕ್ರಿಸ್ತನೊಂದಿಗಿನ ಅವರ ಸಂಪರ್ಕವನ್ನು ಎಂದಿಗೂ ಕಡಿದು ಹಾಕಲು ಸಾಧ್ಯವಿಲ್ಲ. ಅವರ ಬಲಹೀನತೆ ಹಾಗೂ ಕಷ್ಟಸಂಕಟಗಳನ್ನು ಬಲ್ಲಾತನು ಲೋಕದ ಎಲ್ಲಾ ಅಧಿಕಾರಕ್ಕಿಂತ ಉನ್ನತನಾಗಿದ್ದಾನೆ. ದೇವದೂತರು ಭಕ್ತರು ಏಕಾಂತವಾಗಿರುವ ಸೆರೆಮನೆಗೆ ಬಂದು ಅವರಿಗೆ ಪರಲೋಕದ ಸಮಾಧಾನ ಹಾಗೂ ಆದರಣೆ ಕೊಡುವರು. ಆಗ ಭಕ್ತರಿಗೆ ಸೆರೆಮನೆಯು ಅರಮನೆಯಂತಿರುವುದು. ಪೌಲಸೀಲರು ಫಿಲಿಪ್ಪಿ ಪಟ್ಟಣದ ಸೆರಮನೆಯಲ್ಲಿ ಮಧ್ಯರಾತ್ರಿಯಲ್ಲಿ ಪ್ರಾರ್ಥಿಸುತ್ತಾ ದೇವರಿಗೆ ಸ್ತೋತ್ರ ಮಾಡುತ್ತಿದ್ದಂತೆ, ದೇವಜನರು ಸೆರೆಮನೆಯಲ್ಲಿರುವಾಗ ಪರಲೋಕದ ಬೆಳಕು ಅಲ್ಲಿ ಪ್ರಕಾಶಿಸುವುದು.ಕೊಕಾಘ 156.2

    ಮನುಷ್ಯರು ಪರಲೋಕದ ಆತ್ಮೀಕ ದೃಷ್ಟಿಯಿಂದ ನೋಡಿದಲ್ಲಿ ಬಲಿಷ್ಠರಾದ ದೇವದೂತರು ಕ್ರಿಸ್ತನ ವಾಕ್ಯಗಳನ್ನು ಕೈಕೊಂಡು ನಡೆದವರ ಸುತ್ತಲೂ ಕಾವಲಾಗಿರುವುದನ್ನು ಕಾಣಬಹುದು. ಭಕ್ತರ ಕಷ್ಟಸಂಕಟದ ಪ್ರಾರ್ಥನೆಗಳನ್ನು ಅವರು ಅನುಕಂಪದಿಂದ ನೋಡುತ್ತಾರೆ. ಕಷ್ಟದಲ್ಲಿರುವ ಭಕ್ತರನ್ನು ಬಿಡುಗಡೆಗೊಳಿಸಲು ದೇವದೂತರು ತಮ್ಮ ದಂಡನಾಯಕನಾದ ಕ್ರಿಸ್ತನ ಆಜ್ಞೆಗಾಗಿ ಕಾದಿರುತ್ತಾರೆ. ನಮಗೆ ಅಗತ್ಯವಾದಾಗ, ಅಮೂಲ್ಯವಾದ ರಕ್ಷಕನು ಸಹಾಯ ಮಾಡುತ್ತಾನೆ (ಗ್ರೇಟ್ ಕಾಂಟ್ರೊವರ್ಸಿ, 630, 633).ಕೊಕಾಘ 156.3

    ಪರಲೋಕದ ಅದ್ಭುತವಾದ ಮಹಿಮೆ ಮತ್ತು ಮಧ್ಯಯುಗದಲ್ಲಿ ಕ್ರೈಸ್ತರಿಗೆ ಉಂಟಾದ ಹಿಂಸೆ - ಇವೆರಡೂ ಕಂಡು ಬರುವಂತ ಅಂತಿಮ ಕಾಲದಲ್ಲಿ ಜೀವಿಸಿರುವ ದೇವಜನರಿಗಾಗುವ ಅನುಭವವನ್ನು ತಿಳಿಸಲು ಅಸಾಧ್ಯವಾಗಿದೆ. ದೇವರ ಸಿಂಹಾಸನದಿಂದ ಹೊರಡುವ ಬೆಳಕಿನಲ್ಲಿ ಅವರು ನಡೆಯುವರು ಹಾಗೂ ದೇವದೂತರ ಮೂಲಕ ಪರಲೋಕದೊಂದಿಗೆ ಅವರು ನಿರಂತರ ಸಂಪರ್ಕ ಹೊಂದಿರುವರು. ಜನಾಂಗವು ಉಂಟಾದಂದಿನಿಂದ ಇಲ್ಲಿಯವರಿಗೆ ಸಂಭವಿಸದಂತ ಸಂಕಟದ ಸಮಯವು ಬಂದಾಗ, ದೇವರಾರಿಸಿಕೊಂಡವರು ದೃಢವಾಗಿ ನಿಲ್ಲುವರು. ಬಲಿಷ್ಠರಾದ ದೇವದೂತರು ಅವರನ್ನು ರಕ್ಷಿಸುವುದರಿಂದ ಸೈತಾನನು ಅಥವಾ ಅವನ ದೂತರು ಭಕ್ತಜನರನ್ನು ನಾಶಮಾಡಲಾಗುವುದಿಲ್ಲ (ಟೆಸ್ಟಿಮೊನೀಸ್, ಸಂಪುಟ 9, ಪುಟಗಳು 16, 17).ಕೊಕಾಘ 156.4