Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ತನ್ನತನದ (Self) ವಿರುದ್ಧವಾದ ಹೋರಾಟ ಮುಂದುವರಿಯಲಿದೆ

    ಎಲ್ಲಿಯವರೆಗೆ ಸೈತಾನನು ನಮ್ಮ ಮೇಲೆ ಆಳ್ವಿಕೆ ನಡೆಸುವನೋ, ಅಲ್ಲಿಯವರೆಗೆ ನಾವು ನಮ್ಮತನದ ವಿರುದ್ಧ ಹೋರಾಡಬೇಕಾಗಿದೆ ಹಾಗೂ ಪಾಪದ ಮೇಲೆ ಜಯ ಹೊಂದಬೇಕಾಗಿದೆ. ನಾವು ಜೀವಿಸಿರುವವರೆಗೆ ಈ ಹೋರಾಟ ಮುಂದುವರಿಯಲಿದೆ. ಪವಿತ್ರೀಕರಣವು (Santification) ಜೀವಮಾನದಾದ್ಯಂತ ವಿಧೇಯರಾಗುವುದರಿಂದ ಬರುವ ಫಲಿತಾಂಶವಾಗಿದೆ (ಆಕ್ಟ್ಸ್ ಆಫ್ ದಿ ಅಪೊಸ್ತಲ್ 560).ಕೊಕಾಘ 156.5

    ಶಾರೀರಿಕ ಬಯಕೆಯ ವಿರುದ್ಧವಾಗಿ ನಾವು ಸತತವಾಗಿ ಹೋರಾಟ ಮಾಡಬೇಕು. ನಾವು ಕ್ರಿಸ್ತನ ಪರಿಶುದ್ಧ ಕೃಪೆಯಲ್ಲಿ ನೆಲೆಗೊಂಡಿದ್ದಲ್ಲಿ ಅದು ನಮ್ಮ ಮನಸ್ಸನ್ನು ನಿರ್ಮಲವಾದ ಹಾಗೂ ಪರಿಶುದ್ಧವಾದ ವಿಷಯಗಳ ಬಗ್ಗೆ ಧ್ಯಾನಿಸುವಂತೆ ಮಾಡುವುದು (ಟೆಸ್ಟಿಮೊನೀಸ್, ಸಂಪುಟ 2, ಪುಟ 479).ಕೊಕಾಘ 156.6

    ಮನುಷ್ಯರು ದೇವದೂತರ ಶರೀರ ಪಡೆದುಕೊಂಡಾಗ, ಅವರು ಈ ಲೋಕದಲ್ಲಿರುವುದಿಲ್ಲ, ಬದಲಾಗಿ ಪರಲೋಕಕ್ಕೆ ತೆಗೆದುಕೊಳ್ಳಲ್ಪಡುವರು. ಈ ಜೀವನದಲ್ಲಿ ಪಾಪವು ಕ್ಷಮಿಸಲ್ಪಟ್ಟಿದ್ದರೂ, ಅದರ ಪರಿಣಾಮವು ಈಗ ಸಂಪೂರ್ಣವಾಗಿ ತೆಗೆದು ಹಾಕಲಟ್ಟಿಲ್ಲ. ಕ್ರಿಸ್ತನ ಬರೋಣದಲ್ಲಿ ಆತನು ನಮ್ಮ ಕೆಟ್ಟ ದೇಹವನ್ನು ತನ್ನ ಮಹಿಮೆಯ ಶರೀರದಂತೆ ಮಾರ್ಪಡಿಸುವನು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 2, ಪುಟ 33).ಕೊಕಾಘ 156.7