Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-19
    ಕ್ರಿಸ್ತನ ಎರಡನೇ ಬರೋಣ

    ಏಳನೇ ಉಪದ್ರವ ಹಾಗೂ ವಿಶೇಷ ಪುನರುತ್ಥಾನ

    “.... ಇದಲ್ಲದೆ ಮಹಾಭೂಕಂಪವಾಯಿತು, ಮನುಷ್ಯರು ಭೂಮಿಯ ಮೇಲೆ ಇದ್ದಂದಿನಿಂದ ಅಂಥ ದೊಡ್ಡ ಭೂಕಂಪವಾಗಲಿಲ್ಲ (ಪ್ರಕಟನೆ 16:17, 18). ಆಕಾಶವು ತೆರೆದಂತೆಯೂ ಹಾಗೂ ಮುಚ್ಚಿದಂತೆಯೂ ಕಂಡಿತು. ದೇವ ಸಿಂಹಾಸನದಿಂದ ಆತನ ಮಹಿಮೆ ಮತ್ತು ವೈಭವವು ಮಿಂಚಿನಂತೆ ಹೊಳೆಯಿತು. ಪರ್ವತಗಳು ಬಿರುಗಾಳಿಗೆ ಸಿಕ್ಕಿದ ಆಪು ಹುಲ್ಲಿನಂತೆ ಅದುರಿತು ಮತ್ತು ಬಂಡೆಗಳು ಅಡ್ಡಾದಿಡ್ಡಿಯಾಗಿ ಎಲ್ಲಾ ಕಡೆಗಳಲ್ಲಿಯೂ ಬಿದ್ದವು. ಸಮಸ್ಯಲೋಕವೇ ಕಡಲಿನ ಅಲೆಗಳಂತೆ ಹೊಯ್ದಾಡ ತೊಡಗಿತು. ಅದರ ಮೇಲೆ ಒಡೆದುಹೋಯಿತು. ಲೋಕದ ಅಸ್ತಿವಾರವು ನಾಶವಾದಂತೆ ಕಂಡುಬಂದಿತು. ಪರ್ವತಶ್ರೇಣಿಗಳು ಮುಳುಗುತ್ತಿದ್ದವು. ಜನವಸತಿಯಾಗಿದ್ದ ದ್ವೀಪಗಳು ಕಾಣದಾದವು, ಸೊದೊಮಿನಂತೆ ದುಷ್ಟತನಕ್ಕೆ ಹೆಸರುವಾಸಿಯಾಗಿದ್ದ ಸಮುದ್ರದ ಬಂದರು ಪಟ್ಟಣಗಳು ಸುನಾಮಿಯಂತ ಚಂಡಮಾರುತದಿಂದ ಮುಳುಗಿ ಹೋದವು... ದೊಡ್ಡ ಆನೇಕಲ್ಲಿನ ಮಳೆ ಸುರಿಯಿತು. ಒಂದೊಂದು ಹೆಚ್ಚುಕಡಿಮೆ ನಾಲ್ಕು ಮಣ ತೂಕವಾಗಿತ್ತು. ಇವುಗಳಿಂದ ಲೋಕವು ಹಾಳಾಯಿತು (ಪ್ರಕಟನೆ 16: 19, 20).ಕೊಕಾಘ 159.1

    ಸಮಾಧಿಗಳು ತೆರೆಯಲ್ಪಟ್ಟವು. ‘ದೂಳಿನ ನೆಲದೊಳಗೆ ದೀರ್ಘ ನಿದ್ದೆ ಮಾಡುವವರಲ್ಲಿ ಅನೇಕರು ಎಚ್ಚೆತ್ತು, ಕೆಲವರು ನಿತ್ಯಜೀವವನ್ನು ಕೆಲವರು ನಿಂದನೆ, ನಿತ್ಯತಿರಸ್ಕಾರಗಳನ್ನು ಅನುಭವಿಸುವರು’ (ದಾನಿಯೇಲನು 12:3). ಮೂರನೇ ದೂತನ ವರ್ತಮಾನದಲ್ಲಿ ನಂಬಿಕೆಯಿಟ್ಟು ಮರಣ ಹೊಂದಿದವರೆಲ್ಲರೂ, ಸಮಾಧಿಯಿಂದ ಎದ್ದು ಮಹಿಮೆಯುಳ್ಳ ಶರೀರ ಧರಿಸಿಕೊಂಡು, ದೇವರು ತನ್ನ ಆಜ್ಞೆಗಳನ್ನು ಕೈಕೊಂಡು ನಡೆದವರೊಂದಿಗೆ ಮಾಡಿಕೊಂಡ ಸಮಾಧಾನಕರ ಒಪ್ಪಂದವನ್ನು ಆತನ ಬಾಯಿಂದಲೇ ಕೇಳುವರು. ಆತನನ್ನು ಇರಿದವರೂ ಸಹ ಆತನನ್ನು ಕಾಣುವರು (ಪ್ರಕಟನೆ 1:7). ಕ್ರಿಸ್ತನು ಸಾಯುವಾಗ ಅನುಭವಿಸಿದ ವೇದನೆಯನ್ನು ಅಪಹಾಸ್ಯ ಮಾಡಿದವರು, ದೇವರ ಸತ್ಯ ಹಾಗೂ ಆತನ ಜನರನ್ನು ಬಹಳ ಕ್ರೂರವಾಗಿ ವಿರೋಧಿಸಿದವರು, ಕ್ರಿಸ್ತನ ಮಹಿಮೆ ನೋಡುವಂತೆ ಸ್ವಲ್ಪ ಕಾಲಕ್ಕೆ ಮಾತ್ರ ಪುನರುತ್ಥಾನ ಹೊಂದುವರು. ಅಲ್ಲದೆ ನಿಷ್ಠೆಯಿಂದ ವಿಧೇಯರಾದವರಿಗೆ ದೇವರು ಕೊಡುವ ಗೌರವವನ್ನು ನೋಡುವುದಕ್ಕಾಗಿ ಅವರನ್ನು ಆತನು ಎಬ್ಬಿಸುವನು (ಗ್ರೇಟ್ ಕಾಂಟ್ರೊವರ್ಸಿ 636, 637).ಕೊಕಾಘ 159.2