Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ನಿತ್ಯಯೌವನದ ಚೈತನ್ಯ

    ಪ್ರತಿಯೊಬ್ಬರೂ ಸಹ ತಾವು ಸಾಯುವಾಗ ಯಾವ ಎತ್ತರದಲ್ಲಿದರೋ, ಅದೇ ರೀತಿ ಸಮಾಧಿಯಿಂದ ಎದ್ದು ಬರುವರು. ಪುನರುತ್ಥಾನಗೊಂಡವರಲ್ಲಿ ಮುಂದಾಗಿ ನಿಂತುಕೊಳ್ಳುವ ಆದಾಮನು ಇತರಿಗಿಂತ ಹೆಚ್ಚು ಎತ್ತರವಾಗಿದ್ದು, ಘನ ಗಾಂಭೀರ್ಯ ರೂಪವಂತನಾಗಿದ್ದಾನೆ. ಆದರೆ ಎತ್ತರದಲ್ಲಿ ದೇವಕುಮಾರನಿಗಿಂತ ಸ್ವಲ್ಪ ಕಡಿಮೆ ಇದ್ದಾನೆ. ಪಾಪ ಮಾಡಿದ ನಂತರ ಕ್ರಿಸ್ತನ ಬರೋಣದವರೆಗೆ ಹುಟ್ಟಿದ ಸಂತತಿಯವರ ಎತ್ತರಕ್ಕೆ ಹೋಲಿಸಿದಾಗ, ಅವನು ಅವರಿಗೆ ತದ್ವಿರುದ್ದವಾಗಿದ್ದಾನೆ. ಈ ಒಂದು ವಿಷಯದಲ್ಲಿ ಪಾಪವು ಮನುಷ್ಯ ಸಂತಾನದಲ್ಲಿ ಮಾಡಿದ ಮಹಾ ಅವನತಿಯನ್ನು ಕಾಣಬಹುದು, ಆದರೆ ನೀತಿವಂತರೆಲ್ಲರೂ ಹೊಸ ಚೈತನ್ಯ ಹಾಗೂ ನಿತ್ಯ ಯೌವನದ ಉತ್ಸಾಹದಿಂದ ಪುನರುತ್ಥಾನಗೊಳ್ಳುತ್ತಾರೆ. ದೀರ್ಘಕಾಲದಿಂದ ಕಳೆದುಕೊಂಡಿರುವ ಏದೆನ್ ತೋಟದ ಜೀವವೃಕ್ಷದ ಹಣ್ಣನ್ನು ತಿನ್ನುವ ಅವರೆಲ್ಲರೂ ಜಗತ್ತಿನ ಆರಂಭದಲ್ಲಿನ ಮಹಿಮೆ ಹೊಂದಿ ಸಂಪೂರ್ಣ ಉನ್ನತ ಸ್ಥಿತಿಗೆ ಬೆಳೆಯುವರು (ಗ್ರೇಟ್ ಕಾಂಟ್ರೊವರ್ಸಿ, 644, 645).ಕೊಕಾಘ 170.1

    ಆದಾಮನು ಈಗಿರುವ ಮಾನದ ಸಂತತಿಯವರಿಗಿಂತ ಇಪ್ಪತ್ತುಪಟ್ಟು ಹೆಚ್ಚು ಚೈತನ್ಯಶಕ್ತಿಯನ್ನು ದೇವರು ಉಂಟುಮಾಡಿದಾಗ ಹೊಂದಿದನು. ಇಲ್ಲದಿದ್ದಲ್ಲಿ ಇಂದಿನ ಸಂತತಿಯವರು ದೇವರ ನೈಸರ್ಗಿಕ ನಿಯಮ ಉಲ್ಲಂಘಿಸಿ, ತಮ್ಮ ದುರಭ್ಯಾಸಗಳ ಜೀವನ ಶೈಲಿಯಿಂದ ಈ ಲೋಕದಿಂದ ಎಂದೋ ನಾಶವಾಗಿರುತ್ತಿದರು. (ಟೆಸ್ಟಿಮೊನೀಸ್‌ ಸಂಪುಟ 3, ಪುಟ 138).ಕೊಕಾಘ 170.2

    ಪರಲೋಕದಲ್ಲಿ ಯಾರಿಗೂ ಸಹ ಮಲಗುವ ಅಥವಾ ವಿಶ್ರಾಂತಿ ತೆಗೆದುಕೊಳ್ಳಬೇಕಾದ ಅಗತ್ಯವಿರುವುದಿಲ್ಲ ಹಾಗೂ ಬಯಸುವುದೂ ಇಲ್ಲ. ದೇವರಿಗೆ ಸ್ತೋತ್ರ ಸಲ್ಲಿಸುತ್ತಾ, ಆತನ ಚಿತ್ತ ನೆರವೇರಿಸುವಾಗ ಯಾವ ರೀತಿಯ ಆಯಾಸವೂ ಆಗುವುದಿಲ್ಲ. ನಾವು ಯಾವಾಗಲೂ ಬೆಳಗಿನಂತ ಚೈತನ್ಯ ಹೊಂದಿರುವೆವು ಹಾಗೂ ಅದು ನಿರಂತರಕ್ಕೂ ಇರುವುದು. ಜ್ಞಾನದ ಗಳಿಕೆಯಿಂದ ಮನಸ್ಸಿಗೆ ಯಾವುದೇ ಆಯಾಸವಾಗಲಿ ಅಥವಾ ಶಕ್ತಿ ಕುಂದಿಹೋಗುವುದಾಗಲಿ ಆಗುವುದಿಲ್ಲ (ಗ್ರೇಟ್ ಕಾಂಟ್ರೊವರ್ಸಿ 676, 677), ಪರಲೋಕದಲ್ಲಿ ಎಲ್ಲರೂ ಸಂಪೂರ್ಣ ಆರೋಗ್ಯ ಹೊಂದಿರುತ್ತಾರೆ (ಟೆಸ್ಟಿಮೊನೀಸ್‌ ಸಂಪುಟ 3, ಪುಟ 172).ಕೊಕಾಘ 170.3

    Larger font
    Smaller font
    Copy
    Print
    Contents