Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ವಿಮೋಚಿಸಲ್ಪಟ್ಟವರ ಅನನ್ಯತೆ (ಗುರುತು) ಉಳಿದಿರುವುದು

    ಯೇಸುಕ್ರಿಸ್ತನ ಪುನರುತ್ಥಾನವು ಆತನಲ್ಲಿ ನಿದ್ರೆ ಹೋಗಿರುವವರೆಲ್ಲರೂ ಅಂತಿಮವಾಗಿ ಪುನರುತ್ಥಾನ ಹೊಂದುತ್ತಾರೆಂಬುದಕ್ಕೆ ಒಂದು ವೈಶಿಷ್ಟ್ಯ ಪೂರ್ಣ ಮಾದರಿಯಾಗಿದೆ. ಸಮಾಧಿಯಿಂದ ಎದ್ದುಬಂದ ಕ್ರಿಸ್ತನ ಮುಖ, ಆತನ ನಡವಳಿಕೆ ಹಾಗೂ ಮಾತುಗಳೆಲ್ಲವೂ ಶಿಷ್ಯರಿಗೆ ಬಹಳ ಪರಿಚಯವಾಗಿದ್ದವು. ಕ್ರಿಸ್ತನು ಸಮಾಧಿಯಿಂದ ಎದ್ದು ಬಂದಂತೆ, ಆತನಲ್ಲಿ ನಿದ್ದೆ ಹೋಗಿರುವವರೆಲ್ಲರೂ ತಿರುಗಿ ಪುನರುತ್ಥಾನ ಹೊಂದಬೇಕು. ಶಿಷ್ಯರು ಯೇಸುವನ್ನು ತಿಳಿದುಕೊಂಡಂತೆ, ಪುನರುತ್ಥಾನಗೊಂಡ ನಾವು ನಮ್ಮ ಸ್ನೇಹಿತರನ್ನು ಗುರುತು ಹಿಡಿಯುತ್ತೇವೆ. ಈ ಲೋಕದ ಜೀವನದಲ್ಲಿ ಅವರು ರೋಗಿಗಳಾಗಿರಬಹುದು, ಅಂಗವಿಕಲರಾಗಿರಬಹುದು, ಆದರೂ ಅವರು ಪರಿಪೂರ್ಣ ಆರೋಗ್ಯ ಹಾಗೂ ಸಾಮರಸ್ಯ ರೂಪದಿಂದ ಎದ್ದು ಬರುವರು. ಅಂತಹ ಮಹಿಮೆಯ ಶರೀರದಲ್ಲಿಯೂ ಅವರ ಗುರುತು ಸಂಪೂರ್ಣವಾಗಿ ಉಳಿದುಕೊಂಡಿರುವುದು (ದಿ ಡಿಸೈರ್ ಆಫ್ ಏಜಸ್, 804). ಕೊಕಾಘ 171.1

    ನೀತಿವಂತರು ಅದೇ ರೂಪ, ಆಕಾರದಿಂದ ಪುನರುತ್ಥಾನಗೊಳ್ಳುವರು. ಆದರೆ ಅವರಲ್ಲಿ ಯಾವುದೇ ರೋಗವಾಗಲಿ ಅಥವಾ ವೈಕಲ್ಯತೆಯಾಗಲಿ ಇರುವುದಿಲ್ಲ. ಸ್ನೇಹಿತರು ಅವರನ್ನು ಗುರುತಿಸಲಾಗುವಂತೆ, ಈ ಲೋಕದಲ್ಲಿದ್ದಾಗ ಇದ್ದ ವ್ಯಕ್ತಿತ್ವವನ್ನೇ ಹೊಂದಿರುವರು (ಬೈಬಲ್ ವ್ಯಾಖ್ಯಾನ, ಸಂಪುಟ 6, ಪುಟ 1093), ಪರಲೋಕದಲ್ಲಿ ನಾವು ಬೇರೆಯವರನ್ನು ತಿಳಿದಿರುವಂತೆ, ಅವರೂ ಸಹ ನಮ್ಮನ್ನು ತಿಳಿದಿರುವರು (ಎಜುಕೇಷನ್, ಪುಟ 306).ಕೊಕಾಘ 171.2