Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ತಂದೆ ಹಾಗೂ ಮಗನನ್ನು ಮುಖಾಮುಖಿಯಾಗಿ ನೋಡುವುದು

    ದೇವರ ಮಕ್ಕಳು ತಂದೆಯಾದ ದೇವರು ಹಾಗೂ ಮಗನಾದ ದೇವರೊಂದಿಗೆ ಮುಕ್ತವಾಗಿ ಸ್ನೇಹಭಾವ ಹೊಂದಿ ಮಾತಾಡುವರು. ನಾವು ತಂದೆಯಾದ ದೇವರನ್ನು ಯಾವುದೇ ಮರೆಯಿಲ್ಲದೆ ನೇರವಾಗಿ ನೋಡುವೆವು (ಗ್ರೇಟ್ ಕಾಂಟ್ರೊವರ್ಸಿ 676). ನಾವು ಸದಾಕಾಲವೂ ದೇವರೊಂದಿಗೆ ವಾಸವಾಗಿರುವೆವು ಹಾಗೂ ಆತನ ಅಮೂಲ್ಯ ಮುಖಭಾವದ ಬೆಳಕನ್ನು ನೋಡಿ ಸಂತೋಷಿಸುವೆವು. ಇಂತಹ ಹರ್ಷದಾಯಕ ವಾಗ್ದಾನವು ನೆರವೇರುತ್ತದೆಂಬ ನಿರೀಕ್ಷೆಯಿಂದ ನನ್ನ ಹೃದಯವು ಕುಣಿದಾಡುತ್ತದೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ (ಇನ್ ಹೆವೆನ್ಸಿ ಪ್ಲೇಸಸ್‌, 352).ಕೊಕಾಘ 174.6

    ಕ್ರಿಸ್ತನು ಎಲ್ಲಿರುವನೋ, ಅದೇ ನಮಗೆ ಪರಲೋಕ, ಕ್ರಿಸ್ತನು ಪರಲೋಕದಲ್ಲಿಲ್ಲದಿದ್ದರೆ, ಆತನನ್ನು ಪ್ರೀತಿಸುವವರಿಗೆ ಅದು ಪರಲೋಕವಾಗಿರುವುದಿಲ್ಲ. ಪುನರುತ್ಥಾನಗೊಂಡ ಭಕ್ತರಿಗೂ ಹಾಗೂ ದೇವರಿಗೂ ಅತ್ಯಂತ ನಿಕಟವಾದ ಮತ್ತು ಆತ್ಮೀಯ ಸಂಬಂಧವಿರುವುದು (ದಿ ಡಿಸೈರ್ ಆಫ್ ಏಜಸ್, 606).ಕೊಕಾಘ 174.7

    ನಮ್ಮ ತಲೆಗಳ ಮೇಲೆ ವಿಮೋಚಕನು ಸ್ವತಃ ಹಾಕುವ ಕಿರೀಟಗಳನ್ನು ಆತನ ಪಾದಗಳಲ್ಲಿಟ್ಟು, ಬಂಗಾರದ ಕಿನ್ನರಿ ಸ್ವರ ಮಂಡಲಗಳನ್ನು ಬಾರಿಸುತ್ತಾ ಸಿಂಹಾಸನದಲ್ಲಿ ಆಸೀನನಾಗಿರುವಾತನಿಗೆ ನಾವು ಸ್ತುತಿಸ್ತೋತ್ರ ಸಲ್ಲಿಸುವಾಗ, ಸಮಸ್ತ ಪರಲೋಕವೇ ಮಹಿಮೆಯಿಂದ ತುಂಬಿರುತ್ತದೆ (ಟೆಸ್ಟಿಮೊನೀಸ್, ಸಂಪುಟ 8, ಪುಟ 254), ಈ ಲೋಕದಲ್ಲಿ ಜೀವಿಸುವಾಗ ನಾವು ದೇವರಿಗೆ ನಿಷ್ಠರಾಗಿದ್ದಲ್ಲಿ, ಕೊನೆಯಲ್ಲಿ ನಮಗೆ ಆತನ ಮುಖದರ್ಶನವಾಗುವುದು; ಅವರ ಹಣೆಗಳ ಮೇಲೆ ಆತನ ಹೆಸರು ಇರುವುದು (ಪ್ರಕಟನೆ 22:4). ಪರಲೋಕದಲ್ಲಿ ದೇವರನ್ನು ನೋಡುವುದರ ಹೊರತು ಬೇರೆ ಯಾವ ಸಂತೋಷ ಅಲ್ಲಿದೆ? ಕ್ರಿಸ್ತನ ಕೃಪೆಯಿಂದ ರಕ್ಷಿಸಲ್ಪಟ್ಟ ಪಾಪಿಗೆ ತಂದೆಯಾದ ದೇವರನ್ನು ಮುಖಾಮುಖಿಯಾಗಿ ನೋಡಿ ಆತನನ್ನು ನಮ್ಮ ತಂದೆಯಂದು ತಿಳಿದುಕೊಳ್ಳುವುದಕ್ಕಿಂತ ಹೆಚ್ಚಿನ ಹರ್ಷ ಬೇರೆ ಏನಿದೆ? (ಟೆಸ್ಟಿಮೊನೀಸ್‌ ಸಂಪುಟ 8, ಪುಟ 268).ಕೊಕಾಘ 174.8