Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಪರಲೋಕದಲ್ಲಿ ನಮ್ಮ ಹರ್ಷವು ನಿರಂತರವಾಗಿ ಹೆಚ್ಚಾಗುತ್ತದೆ

    ವಿಮೋಚನೆಯ ಯೋಜನೆಯು ನಿಗೂಢವಾಗಿದೆ - ದೇವಕುಮಾರನು ಈ ಲೋಕದಲ್ಲಿ ಮಾನವನಾಗಿ ಹುಟ್ಟಿ ತನ್ನನ್ನು ಶಿಲುಬೆಯ ಮರಣವೇರುವ ಪರ್ಯಂತ ತಗ್ಗಿಸಿಕೊಂಡದ್ದು, ತನ್ನ ಒಬ್ಬನೇ ಮಗನನ್ನು ಈ ಲೋಕಕ್ಕೆ ಕಳುಹಿಸಿಕೊಟ್ಟ ತಂದೆಯಾದ ದೇವರು ಅದ್ಭುತವಾದ ಪ್ರೀತಿ ಹಾಗೂ ಅನುಗ್ರಹ — ಇವು ಮನುಷ್ಯರಾದ ನಮಗೆ ಮಾತ್ರವಲ್ಲ, ಪರಲೋಕದ ದೇವದೂತರಿಗೂ ನಿರಂತರವಾಗಿ ವಿಸ್ಮಯ ತರುವಂತ ವಿಷಯಗಳಾಗಿವೆ... ವಿಮೋಚಿಸಲ್ಪಟ್ಟ ಭಕ್ತರು ಯುಗಯುಗಾಂತರಗಳವರೆಗೆ ಇದನ್ನು ಕಲಿಯುತ್ತಲೇ ಇರುತ್ತಾರೆ. ಸೃಷ್ಟಿಯ ಕಾರ್ಯ ಹಾಗೂ ಮಾನವರ ಪಾಪ ವಿಮೋಚನಾ ಯೋಜನೆಯ ಬಗ್ಗೆ ರಕ್ಷಿಸಲ್ಪಟ್ಟವರು ಅಧ್ಯಯನ ಮಾಡುವಾಗ, ಅವರಿಗೆ ಅದ್ಭುತವಾದ ಹೊಸ ಹೂಸ ಸತ್ಯಗಳು ತಿಳಿದುಬರುತ್ತವೆ. ಅವರು ದೇವರ ವಿವೇಕ, ಪ್ರೀತಿ ಹಾಗೂ ಸರ್ವಶಕ್ತಿಯ ಬಗ್ಗೆ ಹೆಚ್ಚೆಚ್ಚಾಗಿ ಕಲಿಯುವಾಗ, ಅವರು ಮನಸ್ಸು ನಿರಂತರವಾಗಿ ವಿಶಾಲವಾಗುತ್ತಾ ಹೋಗುತ್ತದೆ ಹಾಗೂ ಅವರ ಹರ್ಷವು ಯಾವಾಗಲೂ ಹೆಚ್ಚುತ್ತಾ ಹೋಗುತ್ತದೆ (ಟೆಸ್ಟಿಮೊನೀಸ್‌ ಸಂಪುಟ 5, ಪುಟಗಳು 702, 703).ಕೊಕಾಘ 178.5

    ಯುಗಯುಗಾಂತರಗಳು ಉರುಳುತ್ತಿರುವಾಗ ರಕ್ಷಿಸಲ್ಪಟ್ಟ ಜನರು ದೇವರು ಹಾಗೂ ಕ್ರಿಸ್ತನ ಬಗ್ಗೆ ಅಧಿಕವಾದ ಮತ್ತು ಶ್ರೇಷ್ಟವಾದ ವಿಷಯಗಳನ್ನು ತಿಳಿದುಕೊಳ್ಳುತ್ತಲೇ ಇರುವರು, ಅವರ ಜ್ಞಾನವು ವಿಕಾಸಗೊಂಡಂತೆ, ದೇವರ ಮೇಲಣ ಅವರ ಪ್ರೀತಿ, ಗೌರವ ಭಾವನೆ ಮತ್ತು ಸಂತೋಷವು ಹೆಚ್ಚುತ್ತಾ ಬರುತ್ತದೆ. ದೇವರ ಬಗ್ಗೆ ಭಕ್ತರು ಹೆಚ್ಚಾಗಿ ತಿಳುಕೊಂಡಷ್ಟೂ, ಆತನ ಗುಣಸ್ವಭಾವದಲ್ಲಿ ಅವರ ಮೆಚ್ಚುಗೆ, ಬೆರಗು ಹಾಗೂ ಗೌರವ ಅಧಿಕವಾಗುತ್ತದೆ. ಯೇಸುವು ಮಾನವರ ರಕ್ಷಣಾ ಯೋಜನೆ ಹಾಗೂ ಸೈತಾನನೊಂದಿಗಿನ ಮಹಾಹೋರಾಟದ ಬೆರಗುಗೊಳಿಸುವ ಸಾಧನೆಗಳನ್ನು ವಿವೇಚಿಸಲ್ಪಟ್ಟವರಿಗೆ ವಿವರಿಸುವಾಗ ಅವರ ಹೃದಯಗಳು ಕೃತಜ್ಞತೆಯ ಭಕ್ತಿಭಾವದಿಂದ ತುಂಬಿ ಅತ್ಯಧಿಕವಾದ ಆನಂದದಿಂದ ಬಂಗಾರದ ಸ್ವರಮಂಡಲ ನುಡಿಸುತ್ತಾ ದೇವರನ್ನು ಕೊಂಡಾಡುವರು. ಆಗ ಲಕ್ಷೋಪಲಕ್ಷ, ಕೋಟ್ಯಾನುಕೋಟಿ ಸ್ವರಗಳು ಅವರೊಂದಿಗೆ ಸೇರಿ ಮಹಾಶಬ್ದದಿಂದ ದೇವರನ್ನು ಕೀರ್ತಿಸುವರು.ಕೊಕಾಘ 179.1