Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕರ್ತನ ಮಹಾದಿನವು ನಮ್ಮ ಮನಸ್ಸಿನಲ್ಲಿರಬೇಕು

    ಇನ್ನೇನು ಶೀಘ್ರದಲ್ಲಿ ಬರಲಿರುವ ಮಹಾ ನ್ಯಾಯತೀರ್ಪಿನ ದೃಶ್ಯಗಳ ಬಗ್ಗೆ ನಾವು ಆಲೋಚಿಸುತ್ತ ಅದರ ಬಗ್ಗೆ ಹೆಚ್ಚು ಗಮನವಿಡಬೇಕು. ದೇವರ ಮಕಾಡಿನದ ದೃಶ್ಯಗಳು ನಮ್ಮ ಮುಂದಿರುವಾಗ, ಎಲ್ಲವೂ ಪ್ರಕಟಿಸಲ್ಪಡುವಾಗ, ನಿಮ್ಮ ಗುಣಸ್ವಭಾವದ ಮೇಲೆ ಇದು ಪರಿಣಾಮ ಬೀರುತ್ತದೆ. ಒಬ್ಬ ಸಹೋದರನು ಶ್ರೀಮತಿ ವೈಟಮ್ಮನವರನ್ನು ‘ಕರ್ತನು ಇನ್ನು ಹತ್ತು ವರ್ಷಗಳಲ್ಲಿ ಎರಡನೇ ಸಾರಿ ಬರುತ್ತಾನೆಯೇ? ಎಂದು ಪ್ರಶ್ನಿಸಿದನು. ಅದಕ್ಕುತ್ತರವಾಗಿ ಶ್ರೀಮತಿ ವೈಟಮ್ಮನವರು ಕರ್ತನು, ಎರಡು ವರ್ಷಗಳಲ್ಲೇ, ನಾಲ್ಕು ವರ್ಷಗಳಲ್ಲೇ ಅಥವಾ ಹತ್ತು ವರ್ಷಗಳಲ್ಲಿ ಬರಲಿ, ಅದರಿಂದ ನಿಮಗಾಗುವ ವ್ಯತ್ಯಾಸವೇನು? ಅಂದರು. ಅದಕ್ಕೆ ಆ ಸಹೋದರನು “ಇನ್ನು ಹತ್ತು ವರ್ಷಗಳಲ್ಲಿ ಕರ್ತನು ಬಂದಲ್ಲಿ, ಕೆಲವು ವಿಷಯಗಳಲ್ಲಿ ನಾನು ಬದಲಾವಣೆ ಮಾಡಿಕೊಳ್ಳುತ್ತೇನೆ. ನನ್ನ ಆಸ್ತಿಯನ್ನು ಮಾರಿ ದೇವರ ವಾಕ್ಯವನ್ನು ಅಧ್ಯಯನ ಮಾಡಿ, ಕ್ರಿಸ್ತನ ಬರೋಣಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕೆಂದು ಜನರನ್ನು ಎಚ್ಚರಿಸುತ್ತೇನೆ. ಅಲ್ಲದೆ ನಿನ್ನನ್ನು ಸಂಧಿಸುವಂತೆ ನನ್ನನ್ನು ಸಿದ್ದಪಡಿಸು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ” ಎಂದನು.ಕೊಕಾಘ 23.5

    ಅದಕ್ಕೆ ಶ್ರೀಮತಿ ವೈಟಮ್ಮನವರು “ಇಪ್ಪತ್ತು ವರ್ಷಗಳವರೆಗೆ ಕರ್ತನು ಬಾರದಿದ್ದಲ್ಲಿ, ನೀನು ಇದಕ್ಕಿಂತ ವ್ಯತ್ಯಾಸವಾಗಿ ಜೀವಿಸುವೆಯಾ?” ಎಂದು ಕೇಳಿದಾಗ, ಆ ಸಹೋದರನು ‘ಹೌದು’ ಎಂದುತ್ತರಿಸಿದನು. ಇನ್ನು ಹತ್ತು ವರ್ಷಗಳಲ್ಲಿ ಕರ್ತನು ಬಂದಲ್ಲಿ, ತನ್ನ ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳುವೆನೆಂದು ಹೇಳಿದ ಆ ಸಹೋದರನ ಮಾತುಗಳು ಎಷ್ಟೊಂದು ಸ್ವಾರ್ಥದಿಂದ ತುಂಬಿದೆಯಲ್ಲವೇ? ಹನೋಕನು ದೇವರೊಂದಿಗೆ 300 ವರ್ಷ ಅನ್ನೋನ್ಯತೆಯಿಂದ ನಡೆದನು. ನಾವು ಪ್ರತಿದಿನವೂ ದೇವರೊಂದಿಗೆ ಅನ್ನೋನ್ಯತೆಯಿಂದ ನಡೆದುಕೊಳ್ಳಬೇಕೆಂಬುದಕ್ಕೆ ಇದು ನಮಗೆ ಒಂದು ಪಾಠವಾಗಿದೆ. ನಾವು ಎಚ್ಚರಿಕೆಯಿಂದ ದೇವರ ಬರುವಿಕೆಗಾಗಿ ಕಾದುಕೊಂಡಿರದಿದ್ದಲ್ಲಿ ಆತನ ರಾಜ್ಯಕ್ಕೆ ಸೇರಲಾರೆವು.ಕೊಕಾಘ 24.1