Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-4
    ಕೊನೆಯ ಕಾಲದ ದೇವರ ಸಭೆ

    ದೇವರ ಮಕ್ಕಳು ಆತನ ಆಜ್ಞೆಗಳನ್ನು ಕೈಕೊಳ್ಳುತ್ತಾರೆ

    ಈ ಲೋಕದಲ್ಲಿ ಕೊನೆಯ ಕಾಲದಲ್ಲಿ ದೇವರಿಗೆ ತನ್ನದೇ ಆದ ಸಭೆಯಿದೆ. ಈ ಸಭೆಯು ಜನರಿಂದ ತುಳಿತಕ್ಕೆ ಒಳಗಾದ ಆತನ ಹತ್ತು ಆಜ್ಞೆಗಳನ್ನು ಉನ್ನತ ಸ್ಥಾನಕ್ಕೇರಿಸುತ್ತದೆ. ಅಲ್ಲದೆ ಲೋಕದ ಪಾಪವನ್ನು ನಿವಾರಿಸುವ ದೇವರ ಯಜ್ಞದ ಕುರಿಯನ್ನು ಜಗತ್ತಿಗೆ ಪರಿಚಯಿಸುತ್ತದೆ. ಪ್ರಸಕ್ತ ಸಮಯದಲ್ಲಿ ಹಾಳುಬಿದ್ದ ಸ್ಥಳಗಳನ್ನು ಹಾಗೂ ಹೆಳ್ಳಕೊಳ್ಳಗಳನ್ನು ಸರಿಪಡಿಸಿ ಹಾದಿಗಳನ್ನು ಸಿದ್ಧಪಡಿಸುವ ಒಂದು ಸಭೆ ಮಾತ್ರ ಈ ಜಗತ್ತಿನಲ್ಲಿದೆ. ಕೊಕಾಘ 25.1

    ದೇವರಾಜ್ಞೆಗಳನ್ನು ಕೈಕೊಂಡು, ಯೇಸುವಿನ ಮೇಲೆ ನಂಬಿಕೆಯಿಟ್ಟಿರುವವರು ಮಾತ್ರ ದೇವರ ಜನರೆಂಬ, ನಿರ್ದಿಷ್ಟವಾದ ಅಂಶಗಳನ್ನು ನೆರವೇರಿಸಿದ್ದಾರೆ. ಇವರ ವಿರುದ್ದವಾಗಿ ನಾವು ಕೂಗಾಡಿ ಪ್ರತಿಭಟಿಸಬಾರದು. ಇದರ ವಿಷಯದಲ್ಲಿ ನಾವೆಲ್ಲರೂ ಎಚ್ಚರಿಕೆಯಾಗಿರಬೇಕು. ದೇವರಿಗೆ ತನ್ನದೇ ಆದ ವಿಶಿಷ್ಟ ಜನರಿದ್ದಾರೆ, ಯಾರಿಗೂ ಯಾವುದರಲ್ಲಿಯೂ ಕಡಿಮೆಯಿಲ್ಲದಂತ, ಆದರೆ ಸತ್ಯವನ್ನು ಬೋಧಿಸುವ ಹಾಗೂ ದೇವರಾಜ್ಞೆಗಳನ್ನು ಬಲವಾಗಿ ಸಮರ್ಥಿಸಿ ಎತ್ತಿಹಿಡಿಯುವ ಒಂದು ಸಭೆ ಈ ಲೋಕದಲ್ಲಿದೆ. ಸಹೋದರರೇ, ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯು ಬಾಬೆಲೆಂದು ನೀವು ಬೋಧಿಸುತ್ತಿದ್ದರೆ, ನೀವು ತಪ್ಪು ಮಾಡುತ್ತಿದ್ದೀರಿ (ಟೆಸ್ಟಿಮೊನೀಸ್ ಟು ಮಿನಿಸ್ಟರ್ಸ್ ಪುಟಗಳು 50, 58, 59), ಪ್ರಕಟನೆ ಪುಸ್ತಕದಲ್ಲಿ ದೇವಜನರ ಎರಡು ಗುಂಪುಗಳ ಬಗ್ಗೆ ತಿಳಿಸಲಾಗಿದೆ. ಮೊದಲನೆಯ ಗುಂಪು ಕಣ್ಣಿಗೆ ಕಾಣುವಂತ ಉಳಿದ ಸಭೆ (ಪ್ರಕಟನೆ 12:17) ಹಾಗೂ ಬಾಬೆಲಿನಲ್ಲಿರುವ ‘ನನ್ನ ಜನರು’ (18:4), ಈ ಅಧ್ಯಾಯದಲ್ಲಿ ನಾವು ದೇವರ ಉಳಿದ ಸಭೆಯ ಬಗ್ಗೆ ತಿಳಿಯೋಣ ಹಾಗೂ ಪ್ರಕಟನೆ 14ನೇ ಅಧ್ಯಾಯದ ಗಟ್ಟಿಯಾಗಿ ಕೇಳಿಸುವಂತ ಕೂಗು’ “ನನ್ನ ಜನರು’ ಎಂದು ದೇವರು ತಿಳಿಸಿದವರ ಬಗ್ಗೆ ಕಲಿಯೋಣ.ಕೊಕಾಘ 25.2