Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆ ಸ್ಥಾಪನೆಯಾಗುವುದಕ್ಕೆ ಕಾರಣಗಳು

    ನಮ್ಮ ಸದಸ್ಯರ ಸಂಖ್ಯೆ ಹೆಚ್ಚಾದಾಗ, ಇದು ಒಂದು ಸಭೆಯಾಗಿ ರಚನೆಯಾಗದಿದ್ದಲ್ಲಿ ದೊಡ್ಡ ಗಲಿಬಿಲಿ ಉಂಟಾಗುವುದಲ್ಲದೆ, ದೇವರ ಸೇವೆಯು ಯಶಸ್ವಿಯಾಗಿ ಮುಂದುವರಿಯುವುದಿಲ್ಲವೆಂದು ತಿಳಿದುಬಂದಿತು. ಸುವಾರ್ತಾ ಸೇವೆಗೆ ಸಹಾಯ ಮಾಡಲು, ಹೊಸ ಸ್ಥಳಗಳಲ್ಲಿ ಸೇವೆ ಆರಂಭಿಸಲು, ಅಯೋಗ್ಯರಾದ ಸದಸ್ಯರಿಂದ ಸಭೆಗಳು ಮತ್ತು ಸೇವೆಯನ್ನು ರಕ್ಷಿಸಲು, ಸಭೆಯ ಆಸ್ತಿಪಾಸ್ತಿಗಳನ್ನು ಸಂರಕ್ಷಿಸಲು, ಪುಸ್ತಕಗಳ ಮುಖಾಂತರ ಸತ್ಯಸಂದೇಶ ಸಾರಲು ಹಾಗೂ ಇನ್ನೂ ಅನೇಕ ಉದ್ದೇಶಗಳಿಗಾಗಿ ಸಭೆಯನ್ನು ಸ್ಥಾಪಿಸುವುದು ಅನಿವಾರ್ಯವಾಯಿತು.ಕೊಕಾಘ 27.1

    ಸಭೆಯಲ್ಲಿ ಶಿಸ್ತು ಹಾಗೂ ಕ್ರಮಬದ್ಧವಾದ ವ್ಯವಸ್ಥೆ ಇರುವುದಕ್ಕೆ ಸಭೆಯು ಅತ್ಯವಶ್ಯಕವಾಗಿದೆ ಎಂದು ಶ್ರೀಮತಿ ವೈಟಮ್ಮನವರಿಗೆ ಪವಿತ್ರಾತ್ಮನು ದರ್ಶನ ನೀಡಿದನು. ಸಮಸ್ತ ವಿಶ್ವದಾದ್ಯಂತ ಇರುವ ದೇವರ ಎಲ್ಲಾ ಕಾರ್ಯಗಳಲ್ಲಿ ಶಿಸ್ತು ಹಾಗೂ ಕ್ರಮಬದ್ದ ವ್ಯವಸ್ಥೆ ಕಂಡುಬರುತ್ತದೆ. ಕ್ರಮಬದ್ದತೆಯು ಪರಲೋಕದಲ್ಲಿ ಕಟ್ಟಳೆಯಾಗಿದೆ ಮತ್ತು ಈ ಲೋಕದಲ್ಲಿ ಅದು ದೇವಜನರ ಕಟ್ಟಳೆಯಾಗಿಯೂ ಇರಬೇಕು (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, ಪುಟ 26 (1902).ಕೊಕಾಘ 27.2