Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಂಕಟದ ಸಮಯವು ಶೀಘ್ರದಲ್ಲಿಯೇ ಬರಲಿದೆ

    ಲೋಕದ ಮುಕ್ತಾಯದವರೆಗೂ ಹೆಚ್ಚಾಗುತ್ತಲೇ ಇರುವ ಸಂಕಟದ ಸಮಯವು ಅತಿ ಶೀಘ್ರದಲ್ಲಿಯೇ ಬರಲಿದೆ. ಜಗತ್ತಿನಲ್ಲಿ ಎಲ್ಲೆಲ್ಲಿಯೂ ಯುದ್ಧೋತ್ಸಾಹ ಕಂಡುಬರುತ್ತಿದೆ. ದಾನಿಯೇಲನು 11ನೇ ಅಧ್ಯಾಯದಲ್ಲಿ ತಿಳಿಸಿರುವ ಪ್ರವಾದನೆಗಳು ಹೆಚ್ಚುಕಡಿಮೆ ನೆರವೇರುವ ಸಮಯ ಬಂದಿದೆ (ರಿವ್ಯೂ ಅಂಡ್ ಹೆರಾಲ್ಡ್, ನವೆಂಬರ್ 24, 1904).ಕೊಕಾಘ 5.4

    ಜನಾಂಗಗಳು ಟಾದಂದಿನಿಂದ ಇಂದಿನವರೆಗೂ ಸಂಭವಿಸದಂತ ಸಂಕಟ ಸಮಯವು ಇನ್ನೇನು ಹತ್ತಿರದಲ್ಲಿದೆ, ಆದರೆ ನಾವು ಅದನ್ನು ಗಮನಿಸದೆ ನಿದ್ರಿಸುತ್ತಿದ್ದ ಹತ್ತು ಮಂದಿ ಕನೈಯರಂತಿದ್ದೇವೆ. ನಾವು ನಿದ್ರೆಯಿಂದ ಎಚ್ಚರಗೊಳ್ಳಬೇಕು. ಇಂತಹ ಸಂಕಟದ ಸಮಯದಲ್ಲಿ ನಿನ್ನ ರೆಕ್ಕೆಗಳು ಆಶ್ರಯದಲ್ಲಿ ನಮ್ಮನ್ನು ಹೊದಗಿಸಿಕೊಂಡು, ಇದರಿಂದ ನಮ್ಮನ್ನು ರಕ್ಷಿಸು ಎಂದು ಕರ್ತನಾದ ಯೇಸುವನ್ನು ಬೇಡಿಕೊಳ್ಳಬೇಕಾಗಿದೆ (1906). ಜಗತ್ತು ಹೆಚ್ಚೆಚ್ಚಾಗಿ ಕಾನೂನು ಕಟ್ಟಳೆಗಳನ್ನು ಮೀರುತ್ತಾ ಅರಾಜಕತೆಗೆ ಸಾಗುತ್ತಿದೆ. ದೇಶದೇಶಗಳ ನಡುವೆ ಶೀಘ್ರದಲ್ಲಿಯೇ ಮಹಾಸಂಘರ್ಷಗಳು ಆರಂಭವಾಗಲಿವೆ. ಈ ಸಂಘರ್ಷಗಳು ಕ್ರಿಸ್ತನು ಬರುವ ತನಕ ನಿಲ್ಲುವುದಿಲ್ಲ (ರಿವ್ಯೂ ಅಂಡ್ ಹೆರಾಲ್ಡ್ ಫೆಬ್ರವರಿ 11, 1904).ಕೊಕಾಘ 5.5

    ನಾವು ಸಂಕಟದ ಸಮಯದ ಹೊಸ್ತಿಲಲ್ಲಿದ್ದೇವೆ. ಕನಸಿನಲ್ಲಿಯೂ ನೆನಸದಂದ ಗೊಂದಲದ ಪರಿಸ್ಥಿತಿ ನಮ್ಮ ಮುಂದಿದೆ (ಟೆಸ್ಟಿಮೊನೀಸ್ ಸಂಪುಟ 9, ಪುಟ 43, 1909). ಯುಗದ ಅಂತ್ಯದಲ್ಲಿ ನಡೆಯುವ ಇಕ್ಕಟ್ಟಿನ ಸಮಯದ ಹೊಸ್ತಿಲಲ್ಲಿ ನಾವಿದ್ದೇವೆ. ಬೆಂಕಿ, ಕಾಡ್ಗಿಚ್ಚು, ಪ್ರವಾಹ, ಭೂಕಂಪ, ಯುದ್ಧಗಳು ಹಾಗೂ ರಕ್ತಪಾತ ಮೊದಲಾದ ದೇವರ ನ್ಯಾಯದಂಡನೆ ಒಂದಾದ_ ನಂತರ ಮತ್ತೊಂದು ಬೇಗನೆ ಉಂಟಾಗಲಿವೆ (ಪ್ರಾಫೆಟ್ಸ್ ಅಂಡ್ ಕಿಂಗ್ಸ್ (1914). ಅತ್ಯಂತ ಸಂಕಟದ ಸಮಯ ನಮ್ಮ ಮುಂದಿದೆ, ಆದರೆ ನಮ್ಮ ಬಾಯಿಂದ ಯಾವುದೇ ವಿಧವಾದ ನಿರಾಶೆ ಅಥವಾ ಅಪನಂಬಿಕೆಯ ಮಾತುಗಳು ಬರಬಾರದು. ಕೊಕಾಘ 6.1