Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಆತ್ಮೀಕ ಪುನರುಜ್ಜಿವನ ಇನ್ನೂ ಅಗತ್ಯವಾಗಿದೆ

    1901ನೇ ಇಸವಿಯಲ್ಲಿ ಜನರಲ್ ಕಾನ್ಫರೆನ್ಸ್ ಅಧಿವೇಶನ ನಡೆಯಿತು. ಆ ಸಮಯದಲ್ಲಿ ಅಧಿಕಾರಿಗಳಾಗಿದ್ದವರು ದೇವರ ಚಿತ್ತ ಹಾಗೂ ಮಾರ್ಗ ಅನುಸರಿಸಿದ್ದಲ್ಲಿ ಶ್ರೀಮತಿ ವೈಟಮ್ಮನವರು 1903 ಜನರಿ 5ನೇ ತಾರೀಕು ಬರೆದ ಕಾಗದದಲ್ಲಿ ತಿಳಿಸಿದಂತೆ ಒಂದು ಕಾರ್ಯವು ಎರಡು ವರ್ಷಗಳ ಹಿಂದೆಯೇ ಆಂದರೆ 1901 ರಲ್ಲಿಯೇ ಮುಗಿಯಬೇಕಾಗಿತ್ತು. ಮಹಾಬೆಳಕು ಹೊಂದಿದ್ದಂತ ಜನರು ಆ ಬೆಳಕಿನಂತೆ ನಡೆಯಲಿಲ್ಲ. ಅಧಿವೇಶನ ಮುಕ್ತಾಯವಾಯಿತು. ಅಧಿಕಾರಿಗಳು ತಮ್ಮನ್ನು ತಾವು ತಗ್ಗಿಸಿಕೊಳ್ಳಲಿಲ್ಲ ಮತ್ತು ಪವಿತ್ರಾತ್ಮನು ಕೊಡಲ್ಪಡಲಿಲ್ಲ. ಇಷ್ಟನ್ನು ಬರೆಯುತ್ತಿರುವಾಗ ಶ್ರೀಮತಿ ವೈಟಮ್ಮನವರು ಪ್ರಜ್ಞೆ ಕಳೆದುಕೊಂಡು ದರ್ಶನದಲ್ಲಿ ಬ್ಯಾಟಲ್‌ಕ್ರೀಕ್‌ನ ಒಂದು ದೃಶವು ಅವರ ಕಣ್ಣಿಗೆ ಕಂಡಿತು.ಕೊಕಾಘ 33.4

    ನಾವೆಲ್ಲರೂ ಒಂದು ಸಭಾಂಗಣದಲ್ಲಿ ಪ್ರಾರ್ಥಿಸುತ್ತಿದ್ದವು. ಪ್ರಾರ್ಥಿಸಿದ ನಂತರ ಹಾಡುಗಳನ್ನು ಹಾಡಲಾಯಿತು. ಅನಂತರ ತಿರುಗಿ ಪ್ರಾರ್ಥಿಸಲಾಯಿತು. ಅತ್ಯಂತ ಕಳಕಳಿಯಿಂದ ಕೂಡಿದ ಪ್ರಾಮಾಣಿಕವಾದ ಬೇಡಿಕೆಗಳನ್ನು ದೇವರ ಮುಂದೆ ಇಡಲಾಯಿತು. ಅಲ್ಲಿ ಪರಿಶುದ್ಧಾತ್ಮನ ಪ್ರಸನ್ನತೆ ಕಂಡುಬಂದಿತು.ಕೊಕಾಘ 33.5

    ಇದರಲ್ಲಿ ಅಧಿಕಾರಿಗಳು ಭಾಗವಹಿಸಿದ್ದರು. ಈಗ ಅವರು ತಮ್ಮನ್ನು ತಗ್ಗಿಸಿಕೊಂಡು ತಮ್ಮ ಪಾಪಗಳನ್ನು ಒಪ್ಪಿಕೊಂಡು ದೇವರಿಗೆ ಅರಿಕೆ ಮಾಡಿಕೊಂಡರು. ಈ ದೇವಾಲಯದಲ್ಲಿ ಹಿಂದೆಂದೂ ಕಂಡಿರದಂತ ಸಂತೋಷ ಉಂಟಾಯಿತು.ಕೊಕಾಘ 33.6

    ಅನಂತರ ಶ್ರೀಮತಿ ವೈಟಮ್ಮನವರಿಗೆ ಪ್ರಜ್ಞೆ ಬಂತು, ಸ್ವಲ್ಪ ಸಮಯ ತಾವೆಲ್ಲಿದ್ದೇವೆಂದು ಅವರಿಗೆ ತಿಳಿಯಲಿಲ್ಲ. ಅವರ ಪೆನ್ನು ಕೈಯಲ್ಲಿಯೇ ಇತ್ತು. ಆಗ ಕರ್ತನು ಅವರೊಂದಿಗೆ ಮಾತಾಡಿದನು ‘ದೇವರು ತನ್ನ ಜನರಿಗೆ ಇದನ್ನೆಲ್ಲಾ ಮಾಡಲು ಕಾದುಕೊಂಡಿದ್ದನು, ಕೃಪೆ ತೋರಿಸಲು ಸಮಸ್ತ ಪರಲೋಕವು ಕಾದುಕೊಂಡಿತ್ತು’ ಎಂದು ಅವರು ಹೇಳಿದರು. 1901 ರಲ್ಲಿ ನಡೆದ ಜನರಲ್ ಕಾನ್ಫರೆನ್ಸ್ ಅಧಿವೇಶನದಲ್ಲಿ ಸಂಪೂರ್ಣ ಕಾರ್ಯವು ನಡೆದಿದ್ದಲ್ಲಿ, ಈಗ ನಾವು ಎಲ್ಲಿರಬಹುದಿತ್ತು’ ಎಂಬ ಭಾವನೆ ಶ್ರೀಮತಿ ವೈಟಮ್ಮನವರಲ್ಲಿ ಉಂಟಾಯಿತು (ಟೆಸ್ಟಿಮೋನೀಸ್‌ ಸಂಪುಟ 8, ಪುಟಗಳು 104, 106, 1913).ಕೊಕಾಘ 34.1

    1913ನೇ ಇಸವಿಯಲ್ಲಿ ನಡೆದ ಜನರಲ್ ಕಾನ್ಫರೆನ್ಸ್ ಸಮಾವೇಶದಲ್ಲಿ ಶ್ರೀಮತಿ ವೈಟಮ್ಮನವರು ಮೊದಲನೆ ದಿನ ರಾತ್ರಿ ಒಂದು ಸಂದೇಶ ನೀಡಿದರು. ಅದರಲ್ಲಿ ಆ ದಿನ ರಾತ್ರಿ ನನ್ನ ಮನಸ್ಸಿಗೆ ತೋರಿಬಂದ ದೃಶ್ಯಗಳು ನನ್ನಲ್ಲಿ ಬಹಳ ಪರಿಣಾಮವುಂಟು ಮಾಡಿದವು. ಅನೇಕ ಸ್ಥಳಗಳಲ್ಲಿ ಧಾರ್ಮಿಕ ಪುನರುಜ್ಜಿವನದ ಒಂದು ಮಹಾಚಳುವಳಿ ನಡೆಯುತ್ತಿತ್ತು. ನಮ್ಮ ಅಡ್ವೆಂಟಿಸ್ಟರು ದೇವರ ಕರೆಗೂ ಓಗೊಟ್ಟು ಅದರಲ್ಲಿ ಭಾಗವಹಿಸಿದ್ದರು ಎಂದು ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, ಪುಟ 515, 1918 ರಲ್ಲಿ ತಿಳಿಸಿದ್ದಾರೆ.ಕೊಕಾಘ 34.2