Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ನಮ್ಮ ಕಾಲದಲ್ಲಿ ಏನು ನಿರೀಕ್ಷೆ ಮಾಡಬೇಕೆಂದು ದೇವರು ನಮಗೆ ತಿಳಿಸಿದ್ದಾನೆ

    ತಾನು ಶಿಲುಬೆಗೇರುವುದಕ್ಕೆ ಮೊದಲೇ ರಕ್ಷಕನಾದ ಕ್ರಿಸ್ತನು ತನ್ನ ಶಿಷ್ಯರಿಗೆ ತಾನು ಮರಣ ಹೊಂದುವುದಾಗಿಯೂ ಹಾಗೂ ಮೂರನೇ ದಿನದಲ್ಲಿ ಸಮಾಧಿಯಿಂದ ಎದ್ದು_ಬರುವುದಾಗಿಯೂ ತಿಳಿಸಿದನು. ಸಮಾಧಿಯ ಬಳಿಯಲ್ಲಿ ದೇವದೂತರಿದ್ದು ಆತನ ಮಾತುಗಳನ್ನು ಶಿಷ್ಯರ ಹೃದಯ, ಮನಸ್ಸುಗಳು ಅಂಗೀಕರಿಸುವಂತೆ ಪ್ರಭಾವ ಬೀರಿದರು (ಮಾರ್ಕ 8:31, 32: 9:31: 10:32—34), ಆದರೆ ಶಿಷ್ಯರು ತಾತ್ಕಾಲಿಕವಾಗಿ ರೋಮ್ ಸಾಮ್ರಾಜ್ಯದ ದಾಸತ್ವವೆಂಬ ನೊಗದ ಭಾರದಿಂದ ಬಿಡುಗಡೆ ಹೊಂದುವುದನ್ನು ನಿರೀಕ್ಷಿಸಿದರು. ಅಲ್ಲದೆ ತಮ್ಮೆಲ್ಲರ ನಿರೀಕ್ಷೆಯ ಕೇಂದ್ರವಾಗಿದ್ದ ಕ್ರಿಸ್ತನು ಶಿಲುಬೆಯ ಮೇಲೆ ಅಪಮಾನಕರವಾದ ಮರಣ_ಹೊಂದುವುದನ್ನು ಶಿಷ್ಯರು ಸಹಿಸಿಕೊಳ್ಳಲಾಗಲಿಲ್ಲ. ನೆನಪಿನಲ್ಲಿಡಬೇಕಾಗಿದ್ದ ಕ್ರಿಸ್ತನ ಎಚ್ಚರಿಕೆಯ ಮಾತುಗಳು ಅವರ ಮನಸ್ಸಿಗೆ ನಾಟಿರಲಿಲ್ಲವಾದ್ದರಿಂದ, ಸಂಕಟದ ಸಮಯ ಬಂದಾಗ, ಅವರು ಅದಕ್ಕೆ ಸಿದ್ದರಾಗಿರಲಿಲ್ಲ. ಯೇಸುಕ್ರಿಸ್ತನು ಮುಂದಾಗಿಯೇ ಶಿಷ್ಯರಿಗೆ ಎಚ್ಚರಿಕೆ ಕೊಟ್ಟಿರಲಿಲ್ಲವೇನೋ ಎಂಬಂತೆ, ಆತನ ಮರಣವು ಅವರ ನಿರೀಕ್ಷೆಗಳೆಲ್ಲವನ್ನೂ ಸಂಪೂರ್ಣವಾಗಿ ನಾಶಮಾಡಿತು.ಕೊಕಾಘ 6.3

    ಅದೇ ರೀತಿಯಾಗಿ ನಮ್ಮ ಮುಂದೆಯೂ ಸಹ ಪ್ರವಾದನೆಗಳ ಮೂಲಕ ಭವಿಷ್ಯದ ಘಟನೆಗಳು ತಿಳಿಸಲ್ಪಟ್ಟಿವೆ. ಕ್ರಿಸ್ತನು ಬರುವುದಕ್ಕೆ ಮೊದಲೇ ಮುಕ್ತಾಯವಾಗುವ ಕೃಪೆಯ ಕಾಲಕ್ಕೆ ಸಂಬಂಧಪಟ್ಟ ಘಟನೆಗಳು ಹಾಗೂ ಸಂಕಟದ ಸಮಯಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾದ ಕಾರ್ಯವು ನಮಗೆ ಸ್ಪಷ್ಟವಾಗಿ ಸತ್ಯವೇದದಲ್ಲಿ ತಿಳಿಸಲ್ಪಟ್ಟಿವೆ. ಆದರೆ ಜನರು ತಮಗೆ ಈ ವಿಷಯಗಳು ತಿಳಿಸಲ್ಪಟ್ಟಿಲ್ಲವೇನೋ ಎಂಬಂತೆ, ಪ್ರಮುಖವಾದ ಈ ಸತ್ಯಗಳನ್ನು ತಿಳಿದುಕೊಳ್ಳುತ್ತಿಲ್ಲ (ದಿ ಗ್ರೇಟ್ ಕಾಂಟ್ರೊವರ್ಸಿ ಪುಟ 594, (1911)).ಕೊಕಾಘ 7.1