Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಪ್ರಕಟನೆ 14ನೇ ಅಧ್ಯಾಯವು ದೇವ ಜನರಿಗೆ ಭದ್ರವಾದ ಆಧಾರ

    ಕೊನೆಯ ಕಾಲದಲ್ಲಿ ಜೀವಿಸುವ ನಾವು ಮೊದಲನೆ, ಎರಡನೆ ಹಾಗೂ ಮೂರನೇ ದೂತರ ವರ್ತಮಾನಗಳ ಸಂಪೂರ್ಣ ಅರ್ಥವನ್ನು ಖಚಿತವಾಗಿ ತಿಳುಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ನಮ್ಮೆಲ್ಲಾ ವ್ಯವಹಾರಗಳು, ಕಾರ್ಯಗಳು ದೇವರ ವಾಕ್ಯಕ್ಕೆ ಅನುಗುಣವಾಗಿರಬೇಕು. ಪ್ರಕಟನೆ 14:6-13ನೇ ವಚನಗಳಲ್ಲಿ ಮೂರು ದೂತರ ವರ್ತಮಾನವು ತಿಳಿಸಲ್ಪಟ್ಟಿದೆ.ಕೊಕಾಘ 40.1

    ಮೂರನೇ ದೂತನ ಸಂದೇಶವನ್ನು ಅಂಗೀಕರಿಸಿಕೊಂಡ ಅನೇಕರಲ್ಲಿ ಮೊದಲನೇ ಹಾಗೂ ಎರಡನೇ ದೂತರ ಸಂದೇಶಗಳ ಅನುಭವವು ಆಗಿರುವುದಿಲ್ಲ. ಸೈತಾನನು ಇದನ್ನು ಚೆನ್ನಾಗಿ ತಿಳಿದಿದ್ದಾನೆ, ಅವರ ನಂಬಿಕೆಯನ್ನು ಕುಂದಿಸಬೇಕೆಂಬ ಕೆಟ್ಟ ಆಲೋಚನೆ ಅವನಲ್ಲಿದೆ. ಆದರೆ ಮೂರನೇ ದೂತನು ಪರಲೋಕದ ದೇವದರ್ಶನ ಗುಡಾರದ ಮಹಾಪರಿಶುದ್ದ ಸಳಕ್ಕೆ ಅವರ ಗಮನವನ್ನು ಹರಿಸುವಂತೆ ಸೂಚಿಸುತ್ತಾನೆ ಹಾಗೂ ಮೊದಲೆರಡು ಸಂದೇಶಗಳನ್ನು ಅಂಗೀಕರಿಸಿ ಅನುಭವ ಹೊಂದಿದವರು ಅವರಿಗೆ ಪರಲೋಕದ ದೇವದರ್ಶನ ಗುಡಾರವನ್ನು ತೋರಿಸುತ್ತಾರೆ. ಈ ಮೂರುದೂರ ಸಂದೇಶಗಳಲ್ಲಿ ಪರಿಪೂರ್ಣವಾದ ಸತ್ಯವನ್ನು ತಿಳಿದುಕೊಂಡ ಅನೇಕರು ಸಂತೋಷದಿಂದ ಅದನ್ನು ಕ್ರಮಬದ್ಧವಾಗಿ ಅಂಗೀಕರಿಸಿ, ನಂಬಿಕೆಯಿಂದ ಪರಲೋಕದ ದೇವದರ್ಶನ ಗುಡಾರಕ್ಕೆ ಕ್ರಿಸ್ತನನ್ನು ಹಿಂಬಾಲಿಸಿ ಹೋಗುವರು, ಮೂರುದೂತರ ಈ ಸಂದೇಶಗಳು ದೇವಜನರಿಗೆ ಬಲವಾದ ಆಧಾರವಾಗಿದೆ ಎಂದು ದರ್ಶನದಲ್ಲಿ ಶ್ರೀಮತಿ ವೈಟಮ್ಮನವರಿಗೆ ತಿಳಿಸಲ್ಪಟ್ಟಿತು. ಇವುಗಳನ್ನು ಮನವರಿಕೆ ಮಾಡಿಕೊಂಡು ಅಂಗೀಕರಿಸುವವರು ಕೊನೆಯ ಕಾಲದಲ್ಲಿ ಸೈತಾನನ ಎಲ್ಲಾ ವಂಚನೆಗಳಿಗೆ ಒಳಗಾಗದಂತೆ ರಕ್ಷಿಸಲ್ಪಡುವರು (ಅರ್ಲಿ ರೈಟಿಂಗ್ಸ್, ಪುಟ 256, 1858).ಕೊಕಾಘ 40.2