Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-6
    ಸೆವೆಂತ್ ಡೇ ಅಡ್ವೆಂಟಿಸ್ಟರ ಜೀವನಶೈಲಿ ಮತ್ತು ಚಟುವಟಿಕೆಗಳು

    ಸೇವೆ ಹಾಗೂ ತ್ಯಾಗ ಮನೋಭಾವನೆ

    ತನ್ನ ಸಭೆಯಲ್ಲಿ ಸೇವಾ ಮನೋಭಾವನೆ ಇರಬೇಕೆಂದು ದೇವರು ದೀರ್ಘಕಾಲದಿಂದ ಕಾದುಕೊಂಡಿದ್ದನು. ಈ ಕಾರಣದಿಂದ ಪ್ರತಿಯೊಬ್ಬರೂ ಸಹ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದೇವರಿಗಾಗಿ ಕಾರ್ಯಮಾಡಬೇಕೆಂದು ಆತನ ಉದ್ದೇಶವಾಗಿತ್ತು. ಸುವಾರ್ತೆ ಸಾಗಬೇಕೆಂಬ ಆದೇಶದ ನೆರವೇರುವಿಕೆಗಾಗಿ ದೇವರ ಸಭೆಯ ಸದಸ್ಯರು ಅಗತ್ಯಕ್ಕೆ ತಕ್ಕಂತೆ ತಮ್ಮ ಪ್ರದೇಶ ಹಾಗೂ ವಿದೇಶಗಳಲ್ಲಿ ತಮಗೆ ನೇಮಿಸಲ್ಪಟ್ಟ ಕಾರ್ಯ ಮಾಡಬೇಕು. ಆಗ ಸಂಪೂರ್ಣ ಜಗತ್ತಿಗೆ ಎಚ್ಚರಿಕೆ ನೀಡಿದಂತಾಗಿ, ಕರ್ತನಾದ ಯೇಸುಕ್ರಿಸ್ತನು ಮಹಾಬಲದಿಂದಲೂ, ಮಹಿಮೆಯಿಂದಲೂ ಈ ಲೋಕಕ್ಕೆ ಬರುವನು (ಆಕ್ಟ್ಸ್ ಆಫ್ ದಿ ಅಫೋಸ್ಕಲ್, ಪುಟ 111, 1911).ಕೊಕಾಘ 44.1

    ವೈಯಕ್ತಿಕವಾಗಿ ಪ್ರಯತ್ನ ಮಾಡಬೇಕಾದ ಸ್ಥಳದಲ್ಲಿ ಅದಕ್ಕೆ ಬದಲಾಗಿ ಸಂಸ್ಥೆಗಳು ಕೆಲಸ ಮಾಡುವುದು ಎಲ್ಲೆಲ್ಲಿಯೂ ಒಂದು ಪ್ರವೃತ್ತಿ ಅಥವಾ ಒಲವಾಗಿ ಕಂಡುಬರುತ್ತಿದೆ. ಮಾನವ ಜ್ಞಾನವು ಎಲ್ಲಾ ಅಧಿಕಾರಗಳನ್ನು ತನ್ನೊಳಗೆ ಇಟ್ಟುಕೊಳ್ಳುವಂತೆ ಕೇಂದ್ರೀಕರಣ, ಬಲಹೆಚ್ಚಿಸಿಕೊಳ್ಳುವುದು, ದೊಡ್ಡ ಸಂಸ್ಥೆಗಳನ್ನು ಮತ್ತು ಸಭಾಕಟ್ಟಡಗಳನ್ನು ಕಟ್ಟುವ ದಿಕ್ಕಿನಲ್ಲಿ ಸಾಗುತ್ತಿದೆ. ಇತರರ ಬಗ್ಗೆ ಒಳ್ಳೆಯ ಚಿಂತನೆ, ಪರೋಪಕಾರ ಮಾಡುವ ಪ್ರವೃತ್ತಿಯನ್ನು ಜನರು ಸಂಸ್ಥೆಗಳಿಗೆ ಬಿಟ್ಟುಕೊಟ್ಟು, ತಾವು ಸಮಾಜ, ಸಮುದಾಯದ ಸಂಪರ್ಕದಿಂದ ದೂರವಾಗಿದ್ದಾರೆ. ಇದರಿಂದ ಅವರು ಉತ್ಸಾಹ ಕಳೆದುಕೊಂಡಿದ್ದಾರೆ. ಅವರು ತಮ್ಮದೇ ಚಿಂತೆಯಲ್ಲಿ ಮುಳುಗಿರುವುದರಿಂದ ದೇವರು ಮತ್ತು ಮನುಷ್ಯರ ಮೇಲಣ ಪ್ರೀತಿ ಅವರಲ್ಲಿ ಇಲ್ಲವಾಗಿದೆ.ಕೊಕಾಘ 44.2

    ಕ್ರಿಸ್ತನು ತನ್ನ ಅನುಯಾಯಿಗಳಿಗೆ ಒಂದು ವೈಯಕ್ತಿಕ ಕಾರ್ಯವನ್ನು ವಹಿಸಿಕೊಟ್ಟಿದ್ದಾನೆ. ಇದನ್ನು ಬೇರೆ ಯಾರೂ ಮಾಡಲಾಗದು. ಬಡವರಿಗೆ ರೋಗಿಗಳಿಗೆ ಸೇವೆ ಮಾಡುವುದು, ಸುವಾರ್ತೆ ಸಾರುವುದು ಮುಂತಾದ ಕಾರ್ಯಗಳನ್ನು ಸಂಸ್ಥೆಗಳಿಗಾಗಲಿ ಅಥವಾ ಸಭೆಗಳಿಗಾಗಲಿ ಇಲ್ಲವೆ ಸಮಿತಿಗಳಿಗಾಗಲಿ ಬಿಡಬಾರದು. ಸುವಾರ್ತಾ ಸೇವೆಗೆ ವೈಯಕ್ತಿಕ ಜವಾಬ್ದಾರಿ, ವೈಯಕ್ತಿಕ ಪ್ರಯತ್ನ ಮತ್ತು ವೈಯಕ್ತಿಕ ತ್ಯಾಗವು ಏಕೈಕೆ ಅರ್ಹತೆಯಾಗಿದೆ (ದಿ. ಮಿನಿಸ್ಟ್ರಿ ಆಫ್ ಹೀಲಿಂಗ್, ಪುಟ 147, 1905)ಕೊಕಾಘ 44.3