Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದಾನಿಯೇಲನು ಹಾಗೂ ಪ್ರಕಟನೆ ಪುಸ್ತಕಗಳನ್ನು ವಿಶೇಷವಾಗಿ ಅಧ್ಯಯನ ಮಾಡಬೇಕು

    ದೇವರ ವಾಕ್ಯವಾದ ಸತ್ಯವೇದವನ್ನು, ಅದರಲ್ಲಿಯೂ ವಿಶೇಷವಾಗಿ ದಾನಿಯೇಲನು ಹಾಗೂ ಪ್ರಕಟನೆ ಪುಸ್ತಕಗಳ ಬಗ್ಗೆ ಹಿಂದೆಂದಿಗಿಂತಲೂ ಹೆಚ್ಚಾಗಿ ಗಮನ ನೀಡಿ ಅಧ್ಯಯನ ಮಾಡಬೇಕು. ದೇವರಿಂದ ದಾನಿಯೇಲನು ಪಡೆದುಕೊಂಡ ಪ್ರವಾದನೆಯ ಬೆಳಕು ವಿಶೇಷವಾಗಿ ಕೊನೆಯ ಕಾಲಕ್ಕಾಗಿ ಕೊಡಲ್ಪಟ್ಟಿದೆ (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, ಪುಟ 112, 13 (1896}}, ದಾನಿಯೇಲನು 12ನೇ ಅಧ್ಯಾಯವನ್ನು ಎಚ್ಚರಿಕೆಯಿಂದ ಓದಿ ಮನದಟ್ಟು ಮಾಡಿಕೊಳ್ಳಬೇಕು. ಕೊನೆಯ ಕಾಲಕ್ಕೆ ಮೊದಲು ನಾವೆಲ್ಲರೂ ಅಗತ್ಯವಾಗಿ ತಿಳಿದುಕೊಳ್ಳಬೇಕಾದ ಎಚ್ಚರಿಕೆಯು ಇದಾಗಿದೆ (1903), ಪ್ರಕಟನೆ ಗ್ರಂಥವೂ ಸಹ ಸಂಪೂರ್ಣವಾದ ಸತ್ಯದಿಂದ ಕೂಡಿದ್ದು, ಅದನ್ನು ತಿಳಿಯಬೇಕಾಗಿದೆ (ಕ್ರೈಸ್ಟ್ ಆಬ್ಜೆಕ್ಟ್ ಲೆಸನ್ಸ್, ಪುಟ 33 (1900).ಕೊಕಾಘ 7.5

    ಪ್ರಕಟನೆ ಪುಸ್ತಕದಲ್ಲಿ ತಿಳಿಸಿರುವ ಇನ್ನೂ ನೆರವೇರದಿರುವ ಪ್ರವಾದನೆಗಳು ಶೀಘ್ರದಲ್ಲಿಯೇ ನೆರವೇರಲಿದೆ. ದೇವರ ಮಕ್ಕಳು ಈ ಪ್ರವಾದನೆಯನ್ನು ಈಗ ಅತ್ಯಂತ ಶ್ರದ್ಧೆಯಿಂದ ಅಧ್ಯಯನ ಮಾಡಿ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಇದರಲ್ಲಿ ಯಾವುದೇ ಸತ್ಯವು ಮರೆಮಾಚಲ್ಪಟ್ಟಿಲ್ಲ. ಭವಿಷ್ಯದಲ್ಲಿ ನಡೆಯುವುದನ್ನು ಇದು ಸ್ಪಷ್ಟವಾಗಿ ಮುನ್ನೆಚ್ಚರಿಕೆಯಾಗಿ ತಿಳಿಸಿದೆ (1903). ಪ್ರಕಟನೆಯಲ್ಲಿ ಕ್ರಮಬದ್ಧವಾಗಿ ಕೊಡಲ್ಪಟ್ಟಿರುವ ಗಂಭೀರವಾದ ಸಂದೇಶಗಳು ದೇವರ ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರಬೇಕು (ಟೆಸ್ಟಿಮೊನೀಸ್, ಸಂಪುಟ 8, ಪುಟ 302, (1904).ಕೊಕಾಘ 8.1