Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಪ್ರತಿದಿನವೂ ನಮ್ಮ ಜೀವನದ ಕೊನೆಯ ದಿನವೆಂದು ಎಣಿಸಬೇಕು

    ದೇವರು ಕೊಟ್ಟಿರುವ ಈ ದಿನವೇ ನಮ್ಮ ಜೀವನದ ಕೊನೆಯ ದಿನವಾಗಿದೆಯೋ ಏನೋ ಎಂಬಂತೆ ತಿಳಿದುಕೊಂಡು, ನಾವು ಎಚ್ಚರವಾಗಿದ್ದು ಕೆಲಸ ಮಾಡಬೇಕು ಹಾಗೂ ಪ್ರಾರ್ಥಿಸಬೇಕು (ಟೆಸ್ಟಿಮೊನೀಸ್, ಸಂಪುಟ 5, ಪುಟ 200, 1882) ಪ್ರತಿದಿನವೂ ನಮ್ಮ ಕೆಲಸಗಳನ್ನು ಅದು ಬಂದಂತೆಯೇ ಮಾಡುವುದು ನಮ್ಮ ಏಕೈಕ ಸುರಕ್ಷತೆಯಾಗಿದೆ. ಸತ್ತವನಾಗಿದ್ದು, ಪುನರುತ್ಥಾನಗೊಂಡು, ಯುಗಯುಗಾಂತರಗಳವರೆಗೂ ಜೀವಿಸುವಾತನ ಮೇಲೆ ಆತುಕೊಂಡು ಪ್ರತಿಕ್ಷಣವೂ ಕೆಲಸ ಮಾಡುತ್ತಾ, ಎಚ್ಚರಿಕೆಯಿಂದ ಕಾದುಕೊಂಡಿರಬೇಕು.ಕೊಕಾಘ 45.2

    ಪ್ರತಿದಿನ ಬೆಳಿಗ್ಗೆ ನಿಮ್ಮನ್ನು ಹಾಗೂ ನಿಮ್ಮ ಮಕ್ಕಳನ್ನು ಆ ದಿನಕ್ಕಾಗಿ ದೇವರಿಗೆ ಪ್ರತಿಷ್ಠಿಸಿಕೊಳ್ಳಬೇಕು. ಕೆಲವು ತಿಂಗಳು, ವರ್ಷಗಳ ನಂತರ ಅದು ಮಾಡುತ್ತೇನೆ, ಇದು ಮಾಡುತ್ತೇನೆಂದು ಲೆಕ್ಕಹಾಕಬೇಡಿ, ಯಾಕೆಂದರೆ ಅದು ನಿಮಗೆ ಸೇರಿದ್ದಲ್ಲಿ, ಒಂದು ಸಂಕ್ಷಿಪ್ತವಾದ ದಿನವು ನಿಮಗೆ ಕೊಡಲ್ಪಟ್ಟಿದೆ. ಆ ದಿನವೇ ನಿಮ್ಮ ಆಯುಷ್ಯದ ಕೊನೆಯ ದಿನವೆಂದು ತಿಳಿದುಕೊಂಡು, ಧಣಿಯಾದ ಕ್ರಿಸ್ತನಿಗಾಗಿ ಸೇವೆ ಮಾಡಬೇಕು. ನಮ್ಮೆಲ್ಲಾ ಯೋಜನೆಗಳನ್ನು ದೇವರ ಮುಂದೆ ಇಡಬೇಕು, ಆತನ ಚಿತ್ರಕ್ಕೆ ತಕ್ಕಂತೆ ಅದನ್ನು ಮಾಡುವುದು ಅಥವಾ ಬಿಡುವುದನ್ನು ನಡೆಸಬೇಕು (ಟೆಸ್ಟಿಮೊನೀಸ್, ಸಂಪುಟ 7, ಪುಟ 44, 1902).ಕೊಕಾಘ 45.3