Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಮನಸ್ಸಾಕ್ಷಿಯಂತೆ ಸಬ್ಬತ್ತನ್ನು ಆಚರಿಸುವುದು

    ಸಬ್ಬತ್ ದಿನವನ್ನು ಪರಿಶುದ್ಧವಾಗಿ ಆಚರಿಸುವುದರ ಮೂಲಕ ಜನರು ತನ್ನ ಬಗ್ಗೆ ಜ್ಞಾನವನ್ನು ಕಾಪಾಡಿಕೊಂಡು ಬರಬೇಕೆಂದು ನಮ್ಮ ಪರಲೋಕದ ತಂದೆಯು ಬಯಸುತ್ತಾನೆ. ತಾನೊಬ್ಬನೇ ಸತ್ಯವಾದ ಹಾಗೂ ಜೀವಸ್ವರೂಪನಾದ ದೇವರೆಂದು ಮಾನವರಾದ ನಾವು ತಿಳಿದುಕೊಳ್ಳಬೇಕೆಂದು ದೇವರು ಇಚ್ಛಿಸುತ್ತಾನೆ. ಆತನನ್ನು ಅರಿತುಕೊಳ್ಳುವ ಮೂಲಕ ನಾವು ಜೀವ ಹಾಗೂ ಶಾಂತಿ ಪಡೆದುಕೊಳ್ಳಬಹುದು. (ಟೆಸ್ಟಿಮೊನೀಸ್, ಸಂಪುಟ 6, ಪುಟ 349, 1900), ವಾರದ ಎಲ್ಲಾ ದಿನಗಳಲ್ಲಿಯೂ ಸತ್ತು ನಮ್ಮ ಮನಸ್ಸಿನಲ್ಲಿರಬೇಕು ಹಾಗೂ ದೇವರಾಜ್ಞೆಯಂತೆ ಅದನ್ನು ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿರಬೇಕು. ಈ ದಿನವನ್ನು ಕೇವಲ ಕಾನೂನಿಗೆ ಅನುಗುಣವಾದ ರೀತಿಯಲ್ಲಿ ಆಚರಿಸಬಾರದು. ಸಬ್ಬತ್ ದಿನದಲ್ಲಿ ನಮ್ಮ ಜೀವನದ ಎಲ್ಲಾ ವ್ಯವಹಾರಗಳಲ್ಲಿ ಅದರ ಆತ್ಮೀಕ ಸಂಬಂಧವನ್ನು ಮನವರಿಕೆ ಮಾಡಿಕೊಳ್ಳಬೇಕು.ಕೊಕಾಘ 45.4

    ಸಬ್ಬತ್ ದಿನವನ್ನು ಈ ರೀತಿ ಕೈಕೊಂಡು ನಡೆದಾಗ ಶರೀರಭಾವದ ಆಸೆಗಳು ಪವಿತ್ರಾತ್ಮಭಾವದ ಅಭಿಲಾಷೆಗಳಿಂದ ನಮ್ಮನ್ನು ಎಂದೂ ಸಹ ದೂರ ಮಾಡುವುದಿಲ್ಲ. ಆರು ದಿನಗಳಲ್ಲಿ ಮಾಡಬೇಕಾದ ಯಾವ ಕೆಲಸವನ್ನೂ ಸಬ್ಬತ್ತು ದಿನಕ್ಕಾಗಿ ಉಳಿಸಿಕೊಳ್ಳಬಾರದು (ಟೆಸ್ಟಿಮೊನೀಸ್, ಸಂಪುಟ 6, ಪುಟಗಳು 353, 354, 1900).ಕೊಕಾಘ 45.5

    ಜೀವನದ ಎಲ್ಲಾ ಅಗತ್ಯಗಳ ಕಡೆಗೆ ಗಮನಹರಿಸಬೇಕು. ರೋಗಿಗಳ ಆರೈಕೆ ಮಾಡಬೇಕು ಮತ್ತು ಕೊರತೆಯಿರುವವರ ಅಗತ್ಯಗಳನ್ನು ಪೂರೈಸಬೇಕು, ಸಬ್ಬತ್ ದಿನದಲ್ಲಿ ಕಷ್ಟ ಸಂಕಟದಲ್ಲಿರುವವರಿಗೆ ಸಹಾಯ ಮಾಡುವುದನ್ನು ಅಲಕ್ಷಿಸಿದವರನ್ನು ದೇವರು ದೋಷಿಯೆಂದು ಎಣಿಸುವನು. ದೇವರ ಪರಿಶುದ್ದ ಸಬ್ಬತ್ ದಿನವು ಮಾನವರಿಗಾಗಿ ಉಂಟುಮಾಡಲ್ಲಟ್ಟಿತು ಹಾಗೂ ಆ ದಿನದಲ್ಲಿ ಮಾಡುವ ಕರುಣೆಯ ಕಾರ್ಯವು ಅದರ ಉದ್ದೇಶದೊಂದಿಗೆ ಪರಿಪೂರ್ಣವಾಗಿ ಸಾಮರಸ್ಯ ಹೊಂದಿದೆ. ಸಬ್ಬತ್ತು ಅಥವಾ ಬೇರೆ ದಿನಗಳಲ್ಲಿ ಪರಿಹಾರವಾಗುವಂತ ವೇದನೆಯಿಂದ ತನ್ನ ಮಕ್ಕಳು ಒಂದು ಕ್ಷಣವಾಗದರೂ ನರಳಬೇಕೆಂಬುದು ದೇವರು ಎಂದಿಗೂ ಬಯಸುವುದಿಲ್ಲ (ದಿ ಡಿಸೈರ್ ಆಫ್ ವಿಜಸ್, ಪುಟ 207, 1898).ಕೊಕಾಘ 46.1