Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಮೂಲ ಆಹಾರ ಪದ್ಧತಿಗೆ ಹಿಂದಿರುಗಬೇಕು

    ದೇವರು ಹಂತಹಂತವಾಗಿ ಮನುಷ್ಯರನ್ನು ಆತನ ಮೂಲ ಆಹಾರ ಪದ್ಧತಿಗೆ ಹಿಂದಿರುಗಬೇಕೆಂದು ಪ್ರಯತ್ನಿಸುತ್ತಿದ್ದಾನೆ. ಭೂಮಿಯಲ್ಲಿ ದೊರೆಯುವ ನೈಸರ್ಗಿಕ ಪದಾರ್ಥಗಳನ್ನು ನಾವು ಸೇವಿಸಬೇಕೆಂಬುದು ಆತನ ಉದ್ದೇಶವಾಗಿದೆ. ಕ್ರಿಸ್ತನ ಬರೋಣಕ್ಕಾಗಿ ಕಾದುಕೊಂಡಿರುವವರು ಮಾಂಸಾಹಾರ ಸೇವನೆ ನಿಲ್ಲಿಸುವರು. ಇದನ್ನು ನಾವು ಯಾವಾಗಲೂ ಗಮನದಲ್ಲಿಟ್ಟುಕೊಂಡು, ಅದಕ್ಕಾಗಿ ಪ್ರಯತ್ನಿಸಬೇಕು (ಕೌನ್ಸೆಲ್ಸ್ ಆನ್ ಹೆಲ್ತ್, ಪುಟ 450, 1890).ಕೊಕಾಘ 48.1

    ಕ್ರಿಸ್ತನ ಶೀಘ್ರ ಬರೋಣಕ್ಕಾಗಿ ಕಾದುಕೊಂಡಿದ್ದೇವೆಂದು ಹೇಳಿಕೊಳ್ಳುವವರಲ್ಲಿ ಮಹಾಸುಧಾರಣೆ ಕಂಡುಬರುತ್ತದೆ. ಅಡ್ವೆಂಟಿಸ್ಟರು ಆರೋಗ್ಯಕರ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ಮಾಂಸಾಹಾರದಿಂದ ಉಂಟಾಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರಾಣಿಗಳ ಮಾಂಸವನ್ನು ಇನ್ನೂ ತಿನ್ನುತ್ತಿರುವವರು ತಮ್ಮ ಶಾರೀರಿಕ, ಮಾನಸಿಕ ಮತ್ತು ಆತ್ಮೀಕ ಆರೋಗ್ಯಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಮಾಂಸ ತಿನ್ನುವುದರ ವಿಷಯದಲ್ಲಿ ಸಂದೇಹ ವ್ಯಕ್ತಪಡಿಸುವ ಅನೇಕರು ದೇವರ ಮಕ್ಕಳಿಂದ ದೂರ ಹೋಗುತ್ತಾರೆ (ರಿವ್ಯೂ ಅಂಡ್ ಹೆರಾಲ್, ಮೇ 27, 1902).ಕೊಕಾಘ 48.2