Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ರಂಗಮಂದಿರ

    ರಂಗಮಂದಿರ ಅಥವಾ ನಾಟಕಶಾಲೆಯು ಭೋಗಾಸಕ್ತಿ ಜೀವನದ ಅತ್ಯಂತ ಅಪಾಯಕಾರಿ ವಿಧಾನಗಳಲ್ಲಿ ಒಂದಾಗಿದೆ. ನಾಟಕವು ನೈತಿಕತೆ ಹಾಗೂ ಉತ್ತಮಶೀಲಸ್ತಭಾವದ ಬೆಳವಣಿಗೆಗೆ ಪೂರಕವಾಗುವುದಕ್ಕೆ ಬದಲಾಗಿ, ಅನೈತಿಕತೆಯು ಬೆಳೆಯುವ ಹದವಾದ ಸ್ಥಳವಾಗಿದೆ. ಇಂತಹ ಮನರಂಜನೆಯಿಂದ ಅನೈತಿಕ ದುರಭ್ಯಾಸಗಳು ಮತ್ತು ಪಾಪಕ್ಕೆಳೆಯುವ ಪ್ರವೃತ್ತಿ ಹೆಚ್ಚಾಗಿ ಬಲಗೊಳ್ಳುತ್ತದೆ. ಕೀಳುಮಟ್ಟದ ದ್ವಂದ್ವಾರ್ಥ ಕೊಡುವ ಹಾಡುಗಳು, ಅಶ್ಲೀಲ ವರ್ತನೆ ವ್ಯಕ್ತವಾಗುವುದು ಹಾಗೂ ಭಾವನೆಗಳು ಜನರ ಪರಿಕಲ್ಪನೆಯನ್ನು ಕೆಟ್ಟ ಮಾರ್ಗಕ್ಕೆಳೆದು ಅವರ ನೈತಿಕತೆಯು ಕೀಳುಮಟ್ಟಕ್ಕೆ ಇಳಿಯುತ್ತದೆ.ಕೊಕಾಘ 51.1

    ಇಂತಹ ಮನರಂಜನೆ ನೀಡುವ ನಾಟಕಗಳಿಗೆ ಹೋಗುವ ಪ್ರತಿ ಯೌವನಸ್ತನ ತತ್ವ ಸಿದ್ದಾಂತಗಳು ಮಲಿನಗೊಳ್ಳುತ್ತವೆ. ಇಂತಹ ಅಶ್ಲೀಲ ದೃಶ್ಯಗಳ ಮೇಲಿನ ಪ್ರೀತಿ ಹೆಚ್ಚಾದಂತೆ, ಮದ್ಯಪಾನ ಮಾಡುವ ಬಯಕೆಯೂ ಹೆಚ್ಚಾಗುತ್ತದೆ. ನಾಟಕದ ಮೂಲಕ ದೊರೆಯುವ ಮನರಂಜನೆಗಿಂತ ಧಾರ್ಮಿಕ ಭಾವನೆ ನಾಶಮಾಡುವ ಪರಿಣಾಮಕಾರಿಯಾದ ಬಲವಾದ ಬೇರೆ ವಿಷಪೂರಿತ ಚಟುವಟಿಕೆ ಮತ್ತೊಂದಿಲ್ಲ (ಟೆಸ್ಟಿಮೊನೀಸ್, ಸಂಪುಟ 4, ಪುಟಗಳು 652, 653, 1881), (ಇದರೊಂದಿಗೆ ಈಗ ಸಿನಿಮಾ ಮತ್ತು ಟಿ.ವಿ.ಯನ್ನು ಸೇರಿಸಬಹುದು)ಕೊಕಾಘ 51.2

    ನಾಟಕಮಂದಿರ ಹಾಗೂ ನಾಟ್ಯಮಂದಿರಗಳಲ್ಲಿ ಕಳೆಯುವ ಸಮಯದಲ್ಲಿ ದೇವರ ಆಶೀರ್ವಾದಕ್ಕಾಗಿ ಬೇಡಿಕೊಳ್ಳಬಾರದು. ಅಂತಹ ಸ್ಥಳದಲ್ಲಿ ಸಾಯುವುದಕ್ಕೆ ಯಾವ ಕ್ರೈಸ್ತನು ಬಯಸಬಾರದು. ಕ್ರಿಸ್ತನು ಎರಡನೇಸಾರಿ ಬರುವಾಗ ಯಾರೂ ಸಹ ಅಲ್ಲಿರಲು ಬಯಸಬಾರದು (ಮೆಸೇಜಸ್ ಟು ಯಂಗ್ ಓಪಲ್, ಪುಟ 398, 1882), ಗಂಭೀರವಾದ ಧಾರ್ಮಿಕ ಆಲೋಚನೆಗಳನ್ನು ಮನಸ್ಸಿನಿಂದ ಹೊರಹಾಕದಂತಹ ಮನರಂಜನೆಗಳು ಸುರಕ್ಷಿತವಾಗಿವೆ. ಕ್ರಿಸ್ತನನ್ನು ನಮ್ಮೊಂದಿಗೆ ಕರೆದೊಯ್ಯುವಂತದ್ದೇ, ಸುರಕ್ಷತೆ ನೀಡುವ ಏಕೈಕ ಸ್ಥಳವಾಗಿದೆ (ಅವರ್ ಹೈಕಾಲಿಂಗ್, ಪುಟ 284, 1883).ಕೊಕಾಘ 51.3