Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಪುಸ್ತಕ ಪ್ರಕಟಣೆಗಳ ಅಗತ್ಯ

    ಪುಸ್ತಕಗಳನ್ನು ಸರಳವಾದ ಹಾಗೂ ಸಾಮಾನ್ಯವಾದ ಭಾಷೆಯಲ್ಲಿ ಬರೆದು ಪ್ರಕಟಿಸಬೇಕು. ಅವು ಪ್ರಮುಖವಾದ ಆಸಕ್ತಿಕರ ವಿಷಯಗಳನ್ನು ಒಳಗೊಂಡು ಈ ಲೋಕದ ಮೇಲೆ ಶೀಘ್ರವೇ ಬರಲಿರುವ ಘಟನೆಗಳನ್ನು ಜನರಿಗೆ ತಿಳಿಸುವಂತಿರಬೇಕು (ದಿ ಹೋಮ್ ಮಿಷನರಿ, ಫೆಬ್ರವರಿ 1, 1890).ಕೊಕಾಘ 52.2

    ಮೊದಲನೆ ಹಾಗೂ ಎರಡನೇ ದೇವದೂತರ ಸಂದೇಶಗಳನ್ನು ಕ್ರಮವಾಗಿ 1843 ಮತ್ತು 1844 ರಲ್ಲಿ ಸಾರಲಾಯಿತು. ಈಗ ನಾವು ಮೂರನೇ ದೂತನ ವರ್ತಮಾನವನ್ನು ಸಾರುವ ಕಾಲದಲ್ಲಿದ್ದೇವೆ. ಆದರೆ ಈ ಎಲ್ಲಾ ಮೂರು ದೂತರ ವರ್ತಮಾನಗಳನ್ನು ಇನ್ನೂ ಸಹ ಸಾರಬೇಕಾಗಿದೆ. ಹಿಂದೆ ನಡೆದ ಹಾಗೂ ಮುಂದೆ ನಡೆಯಲಿರುವ ಪ್ರವಾದನಾತ್ಮಕ ಚರಿತ್ರೆಯು ಕೂಲಂಕುಶವಾಗಿ ತಿಳಿಸುವಂತೆ ಪುಸ್ತಕಗಳು ಮತ್ತು ಭಾಷಣಗಳ ಮೂಲಕ ಈ ಸಂದೇಶಗಳನ್ನು ಜಗತ್ತಿಗೆ ಸಾರಬೇಕು (ಕೌನ್ಸೆಲ್ ಟು... ಅಂಡ್ ಏಡಿಟರ್ಸ್, ಪುಟಗಳು 26, 27, 1896), ಸತ್ಯವು ಆಪ್ರಿಯವಾಗಿದ್ದರೂ ಸಹ, ಅದನ್ನು ಕರಪತ್ರಗಳು ಶರತ್ಕಾಲ (ಅಂದರೆ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಎಲೆಗಳು ಉದುರಿಸುವ ಮಾಗಿಕಾಲ) ದಲ್ಲಿ ಎಲೆಗಳು ಉದುರುವಂತೆ ಎಲ್ಲಾ ಕಡೆಗೂ ಹಂಚಬೇಕು (ಟೆಸ್ಟಿಮೋನೀಸ್‌ ಸಂಪುಟ 9, ಪುಟ 230, 1897).ಕೊಕಾಘ 52.3

    ಶ್ರೀಮತಿ ವೈಟಮ್ಮನವರು ಬರೆದ ಪೇಟ್ರಿಯಾರ್ಕ್ ಅಂಡ್ ಪ್ರಾಫೆಟ್ಸ್, ದಿ ಗ್ರೇಟ್ ಕಾಂಟ್ರೊವರ್ಸಿ ಮತ್ತು ದಾನಿಯೇಲನು ಹಾಗೂ ಪಕಟನೆ ಪುಸ್ತಕಗಳ ಓದುವಿಕೆಯ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಈ ಪುಸ್ತಕಗಳಲ್ಲಿರುವ ಸತ್ಯಗಳು ಆತ್ಮಿಕವಾಗಿ ಕುರುಡರಾಗಿರುವ ಅನೇಕರ ಕಣ್ಣುಗಳನ್ನು ತೆರೆಸುತ್ತವೆ. ಆದುದರಿಂದ ಅವುಗಳನ್ನು ಹೆಚ್ಚಾಗಿ ಪ್ರಕಟಿಸಿ ಜನರಿಗೆ ಪ್ರಚುರ ಪಡಿಸಬೇಕು (ಕೊಲ್‌ಪೋರ್ಟರ್ ಮಿನಿಸ್ಟ್ರಿ ಪ್ರತಿ 123, 1905), ಕೃಪೆಯ ಕಾಲವು ಎಲ್ಲಿಯವರೆಗೆ ಮುಂದುವರಿಯುವುದೋ, ಅಲ್ಲಿಯ ತನಕ ಸಾಹಿತ್ಯ ಸುವಾರ್ತಾ ಸೇವಕರು (Lay evangelists) ತಮ್ಮ ಸೇವೆ ಮುಂದುವರಿಸುವ ಅವಕಾಶವಿದೆ (ಟೆಸ್ಟಿಮೊನೀಸ್, ಸಂಪುಟ 6, ಪುಟ 478, 1900)ಕೊಕಾಘ 52.4