Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಹಳ್ಳಿಗಾಡಿನಲ್ಲಿದ್ದುಕೊಂಡು ನಗರಗಳಲ್ಲಿ ಸೇವೆ ಮಾಡಬೇಕು

    ದೇವರಾಜ್ಞೆ ಕೈಕೊಂಡು ನಡೆಯುವ ಅಡ್ವೆಂಟಿಸ್ಟ್ ಕ್ರೈಸ್ತರಾದ ನಾವು ನಗರಗಳನ್ನು ಬಿಟ್ಟು ಹೋಗಬೇಕು. ಹನೋಕನಂತೆ ನಾವು ನಗರಗಳಲ್ಲಿ ಸುವಾರ್ತಾ ಸೇವೆ ಮಾಡಬೇಕು. ಆದರೆ ಅಲ್ಲಿ ವಾಸಿಸಬಾರದು. (ಎವಾಂಜಲಿಸಮ್, ಪುಟಗಳು 77, 78, 1899), ಹಳ್ಳಿಗಳಲ್ಲಿದ್ದುಕೊಂಡು ನಗರಗಳಲ್ಲಿ ಸೇವೆ ಮಾಡಬೇಕು. ನಗರಗಳಿಗೆ ಕ್ರಿಸ್ತನ ಬರೋಣದ ಬಗ್ಗೆ ಎಚ್ಚರಿಕೆ ಕೊಡಬಾರದೇ? ಕೊಡಬೇಕು, ಆದರೆ ದೇವಜನರು ಅಲ್ಲಿ ವಾಸವಾಗಿರಬಾರದು, ಬದಲಾಗಿ ಲೋಕಕ್ಕೆ ಮುಂದೆ ಸಂಭವಿಸಲಿರುವ ಘಟನೆಗಳ ಬಗ್ಗೆ ಅಲ್ಲಿಗೆ ಭೇಟಿ ಮಾಡಿ ಎಚ್ಚರಿಸಬೇಕು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 2, ಪುಟ 358, 1902).ಕೊಕಾಘ 57.4

    ನಮ್ಮ ಸುವಾರ್ತಾ ಸೇವೆಯನ್ನು ನಗರಗಳಲ್ಲಿ ಕೇಂದ್ರೀಕರಿಸಬಾರದೆಂದು ದೇವರು ಶ್ರೀಮತಿ ವೈಟಮ್ಮನವರಿಗೆ ವಿಶೇಷದರ್ಶನ ನೀಡಿದನು. ನಗರಗಳಲ್ಲಿರುವ ಗಲಭೆಗಳು, ಅಸ್ತವ್ಯಸ್ತತೆಗಳು, ಕಾರ್ಮಿಕ ಸಂಘಟನೆಗಳಿಂದ ಉಂಟಾಗುವ ಮುಷ್ಕರಗಳು ನಮ್ಮ ಸೇವೆಗೆ ದೊಡ್ಡ ಅಡ್ಡಿಯಾಗಿವೆ (ಟೆಸ್ಟಿಮೊನೀಸ್‌ ಸಂಪುಟ 7, ಪುಟ 84, 1902).ಕೊಕಾಘ 57.5

    ದೇಶದಲ್ಲಿ ಅಪರಾಧ, ದುಷ್ಟತನ, ನೀಚತನ, ಅನ್ಯಾಯಗಳು ಹೆಚ್ಚಾದಾಗ, ಸೊಡೋಮ್ ಪಟ್ಟಣಕ್ಕೆ ಲೋಟನು ಎಚ್ಚರಿಕೆ ನೀಡಿದಂತೆ, ಕೆಲವರು ದೇಶದಲ್ಲಿ ಎಚ್ಚರಿಕೆ ಹಾಗೂ ಬುದ್ದಿವಾದ ನೀಡುವರು. ಆದರೂ ಲೋಟನು ಅತಿದುಷ್ಟವಾದ ಆ ಪಟ್ಟಣದಲ್ಲಿ ವಾಸವಾಗಿರದಿದ್ದಲ್ಲಿ, ತನ್ನ ಕುಟುಂಬವನ್ನು ಅನೇಕ ಕೆಟ್ಟತನಗಳಿಂದ ರಕ್ಷಿಸಬಹುದಾಗಿತ್ತು (ಎವಾಂಜಲಿಸಮ್, ಪುಟ 78, 1903).ಕೊಕಾಘ 57.6

    ಈಗ ದೊಡ್ಡನಗರದಲ್ಲಿ ಸೇವೆ ಮಾಡಲು ಕೆಲವರು ಸಿದ್ದರಾಗಿರಬಹುದು. ಆದರೆ ಅವರು ಗ್ರಾಮಾಂತರ ಪ್ರದೇಶದಲ್ಲಿ ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕು. ದೇವರು ತನ್ನ ಸೇವೆ ಮಾಡುವವರು ಸರಳವಾದ ಹಾಗೂ ಹೆಚ್ಚು ಖರ್ಚುವೆಚ್ಚಗಳಿಲ್ಲದ ಸ್ಥಳಗಳಲ್ಲಿ ತಮ್ಮ ಕೆಲಸದ ಕಾರ್ಯಸ್ಥಾನ ಮಾಡಿಕೊಳ್ಳಬೇಕೆಂದು ಅಪೇಕ್ಷಿಸುತ್ತಾನೆ. ಸಮಯವು ಕಳೆಯುತ್ತಿದ್ದಂತೆ ಅವರ ಗಮನಕ್ಕೆ ದೊಡ್ಡ ಸ್ಥಳಗಳು ಬರುತ್ತವೆ ಹಾಗೂ ಅವುಗಳನ್ನು ಆಶ್ಚರ್ಯವೆನಿಸುವಷ್ಟು ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳಲು ಸಾಧ್ಯವಾಗುತ್ತದೆ (ಎವಾಂಜಲಿಸಮ್ ಪುಟ 402, 1906).ಕೊಕಾಘ 57.7