Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಉತ್ತಮ ಗುಣಸ್ವಭಾವದ ಬೆಳವಣಿಗೆ ಹಳ್ಳಿಗಳಲ್ಲಿ ಸುಲಭವಾಗಿದೆ

    ಹಳ್ಳಿಗಳಲ್ಲಿ ಜೀವನೋಪಾಯಕ್ಕಿಂತ ಪಟ್ಟಣಗಳಲ್ಲಿ ಜೀವನೋಪಾಯವು ಸುಲಭವೆಂದು ತಿಳಿದುಕೊಂಡು ತಂದೆ ತಾಯಿಯರು ತಮ್ಮ ಕುಟುಂಬಗಳೊಡನೆ ನಗರಗಳಿಗೆ ಬರುತ್ತಾರೆ. ಶಾಲಾಕಾಲೇಜು ಓದುವ ಮಕ್ಕಳು, ರಜೆಯಲ್ಲಿ ಹಾಗೂ ವಿದ್ಯಾಭ್ಯಾಸ ಮಾಡದಿರುವ ಮಕ್ಕಳು ಹಾದಿಬೀದಿಯಲ್ಲಿ ಪೋಲಿ ಮಕ್ಕಳೊಂದಿಗೆ ಸೇರಿ ಅವರ ನಡತೆ ಅನುಸರಿಸುತ್ತಾರೆ. ಅಲ್ಲದೆ ಅವರ ಜೊತೆ ಸೇರಿ ಕೆಟ್ಟ ಅಭ್ಯಾಸಗಳನ್ನು ಕಲಿತುಕೊಳ್ಳುತ್ತಾರೆ (ಟೆಸ್ಟಿಮೊನೀಸ್, ಸಂಪುಟ 5, ಪುಟ 232, 1882).ಕೊಕಾಘ 58.2

    ನಗರಗಳಲ್ಲಿ ಶಿಕ್ಷಣ ಪಡೆಯುವ ಮಕ್ಕಳಿಗೆ ಅವರನ್ನು ಆಕರ್ಷಿಸುವ ಮತ್ತು ನೈತಿಕ ಸೈರ್ಯ ಕುಂದಿಸುವ ಎಲ್ಲಾ ರೀತಿಯ ಶೋಧನೆಗಳು ಎದುರಾಗುತ್ತವೆ. ಅಂತಹ ಮಕ್ಕಳಲ್ಲಿ ಉತ್ತಮ ಗುಣಸ್ವಭಾವ ಬೆಳೆಸಿಕೊಳ್ಳುವಂತೆ ಮಾಡುವುದು ತಂದೆತಾಯಿಯರಿಗೆ ಹತ್ತು ಪಟ್ಟು ಕಷ್ಟವಾಗಿರುತ್ತದೆ. (ಫಂಡಮೆಂಟಲ್ಸ್ ಆಫ್ ಕ್ರಿಶ್ಚಿಯನ್ ಎಜುಕೇಷನ್, ಪುಟ 326, 1894), ನಗರಗಳು ಎಲ್ಲರನ್ನೂ ಆಕರ್ಷಿಸುವಂತ ಶೋಧನೆಗಳಿಂದ ತುಂಬಿವೆ. ಇಂತಹ ಶೋಧನೆಗಳಿಂದ ನಮ್ಮ ಮಕ್ಕಳು ಕಲುಷಿತಗೊಳ್ಳದ ರೀತಿಯಲ್ಲಿ ನಮ್ಮ ಕೆಲಸವನ್ನು ನಿಯೋಜಿಸಿಕೊಳ್ಳಬೇಕು (ಅಡ್ವೆಂಟಿಸ್ಟ್ ಹೋಮ್, ಪುಟ 136, 1902).ಕೊಕಾಘ 58.3

    ನಗರಗಳಲ್ಲಿ ಯುವಕರು ಮಾತ್ರವಲ್ಲ, ದೊಡ್ಡವರೂ ಸಹ ಸೈತಾನನೆಂಬ ಶತ್ರುವಿನ ಬಲೆಗೆ ಬೀಳುವ ಸಾಧ್ಯತೆಯಿದೆ. ಆದುದರಿಂದ ನಮ್ಮ ಜನರು ತಮ್ಮ ಕುಟುಂಬಗಳೊಡನೆ ಹೆಚ್ಚು ಜನವಸತಿಯಿರದ ಹಳ್ಳಿಗಾಡುಗಳಲ್ಲಿ ವಾಸಿಸುವ ಸಮಯ ಬಂದಿದೆ (ಟೆಸ್ಟಿಮೊನೀಸ್, ಸಂಪುಟ 8, ಪುಟ 101, 1904).ಕೊಕಾಘ 58.4

    ನಗರಗಳಲ್ಲಿ ವಾಸಿಸುವ ನೂರು ಕುಟುಂಬಗಳಲ್ಲಿ ಶಾರೀರಿಕ, ಆತ್ಮೀಕ ಅಥವಾ ಮಾನಸಿಕವಾಗಿ ಬೆಳವಣಿಗೆ ಹೊಂದುವ ಒಂದು ಕುಟುಂಬವೂ ಇರುವುದಿಲ್ಲ. ಹೊಲ ಗದ್ದೆಗಳು, ಮರಗಿಡಗಳು ಇರುವ ಏಕಾಂತ ಸ್ಥಳಗಳಲ್ಲಿ ನಂಬಿಕೆ, ನಿರೀಕ್ಷೆ, ಪ್ರೀತಿ, ಸಂತೋಷ ಮುಂತಾದ ಗುಣಗಳನ್ನು ಉತ್ತಮವಾಗಿ ಬೆಳೆಸಿಕೊಳ್ಳಬಹುದು. ನಿಮ್ಮ ಮಕ್ಕಳನ್ನು ನಗರದ ವಾಹನಗಳ ದಿಗಿಲು ಬೀಳಿಸುವ, ಸದ್ದುಗದ್ದಲಗಳಿಂದ ದೂರ ತೆಗೆದುಕೊಂಡು ಹೋಗಿರಿ, ಅಲ್ಲಿ ಅವರ ಮನಸ್ಸು ಹೆಚ್ಚು ಆರೋಗ್ಯಕರವಾಗುವುದು. ದೇವರ ವಾಕ್ಯದ ಸತ್ಯವನ್ನು ಅವರ ಹೃದಯಗಳಲ್ಲಿ ನಾಟುವಂತೆ ಹೇಳುವುದು ಬಹಳ ಸುಲಭವಾಗಿರುತ್ತದೆ (ಅಡ್ವೆಂಟಿಸ್ಟ್ ಹೋಮ್, ಪುಟ 137, 1905).ಕೊಕಾಘ 58.5