Loading...
Larger font
Smaller font
Copy
Print
Contents
ಕೊನೆಯ ಕಾಲದ ಘಟನೆಗಳು - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕೊರನ್ ಬಾಂಗ್, ನ್ಯೂ ಸೌತ್ ವೇಲ್ಸ್ (ಆಸ್ಟ್ರೇಲಿಯಾ)

    ಆಸ್ಟ್ರೇಲಿಯಾ ದೇಶದಲ್ಲಿ ಬೈಬಲ್ ಶಾಲೆಯನ್ನು ಎಲ್ಲಿ ಸ್ಥಾಪಿಸುವುದು? .. ಶಾಲಾ ಕಾಲೇಜುಗಳು ನಗರಗಳಲ್ಲಿರಬೇಕೋ ಅಥವಾ ನಗರಗಳಿಂದ ಕೆಲವು ಮೈಲುಗಳ ದೂರದಲ್ಲಿರಬೇಕೋ? ನಗರಗಳಿಂದ ಸ್ವಲ್ಪ ದೂರದಲ್ಲಿ ಅವುಗಳನ್ನು ಸ್ಥಾಪಿಸಬೇಕು. ಅದೇ ಸಮಯದಲ್ಲಿ ಅವುಗಳೊಂದಿಗೆ ಸಂಪರ್ಕವಿರದಷ್ಟು ದೂರದಲ್ಲಿಯೂ ಇರಬಾರದು. ಯಾಕೆಂದರೆ ನಿಮ್ಮ ಶಾಲಾ ಕಾಲೇಜುಗಳು ನೈತಿಕವಾಗಿ ಕತ್ತಲೆಯಲ್ಲಿರುವ ನಗರಗಳಿಗೆ ಸುವಾರ್ತೆಯ ಬೆಳಕನ್ನು ಪ್ರಕಾಶಿಸಬೇಕು (ಫಂಡಮೆಂಟಲ್ಸ್ ಆಫ್ ಕ್ರಿಶ್ಚಿಯನ್ ಎಜುಕೇಷನ್, ಪುಟಗಳು 310, 313, 1894),ಕೊಕಾಘ 59.6

    ಆಸ್ಟ್ರೇಲಿಯಾ ದೇಶದ ನ್ಯೂ ಸೌತ್ ವೇಲ್ಸ್ ರಾಜ್ಯದ ಕರನ್‌ಬಾಂಗ್‌ನಲ್ಲಿ ಖರೀದಿಸಿದ ಸ್ಥಳವು ಶ್ರೀಮತಿ ವೈಟಮ್ಮನವರಿಗೆ ಇಷ್ಟವಾಯಿತು. ಆದರೆ ಅದು ನಗರದಿಂದ ಬಹಳ ದೂರದಲ್ಲಿದೆ. ದೊಡ್ಡ ನಗರಗಳನ್ನು ಆವರಿಸಿಕೊಂಡಿರುವ ನೈತಿಕ ಕತ್ತಲೆಯ ನಡುವೆ ಸುವಾರ್ತೆ ಎಂಬ ಬೆಳಕು ಪ್ರಕಾಶಿಸುವುದಕ್ಕೆ ಇದರಿಂದಾಗಿ ಅವಕಾಶವಾಗಿದೆ. ಇದೊಂದು ಮಾತ್ರ ಆ ಸ್ಥಳ ಖರೀದಿ ಮಾಡುವುದಕ್ಕೆ ಇರುವ ತೊಂದರೆಯಾಗಿದೆ. ಆದರೆ ದೊಡ್ಡ ನಗರಗಳಲ್ಲಿ ನಮ್ಮ ಶಾಲೆಗಳನ್ನು ಸ್ಥಾಪಿಸಸಬಾರದು (ಮ್ಯಾನುಸ್ಕ್ರಿಪ್ಟ್ ರಿಲೀಸ್, ಸಂಪುಟ 8, ಪುಟ 137, 1894), ಕೂರನ್ ಬಾಂಗ್‌ನಲ್ಲಿ ಖರೀದಿಸಿರುವ ಸ್ಥಳವು ಶಾಲೆಗೆ ಅತ್ಯಂತ ಪ್ರಶಸ್ತವಾದ ಸ್ಥಳವಾಗಿದೆ ಎಂದು ಶ್ರೀಮತಿ ವೈಟಮ್ಮನವರು ಹೇಳಿದ್ದಾರೆ (ಪುಟ 360, 1894).ಕೊಕಾಘ 60.1